Home
Gadgets

ಶಿಯೋಮಿಯ ಮೊದಲ ರೆಡ್‌ಮಿ ಬ್ರ್ಯಾಂಡ್ ಲ್ಯಾಪ್‌ಟಾಪ್ ಮಾರುಕಟ್ಟೆಗೆ!

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಚೀನಾದ ಮೊಬೈಲ್ ಕಂಪೆನಿ ಶಿಯೋಮಿ ಮತ್ತೊಂದು ಭರ್ಜರಿ ಸುದ್ದಿ ನೀಡಿದೆ. ಮೊಬೈಲ್ ಲೋಕದಲ್ಲಿ ಹೆಸರಾಗುತ್ತಿರುವ ಕಂಪೆನಿ ಇದೇ ಮೊದಲ ಬಾರಿಗೆ ಮೊಟ್ಟ ಮೊದಲ ರೆಡ್‌ಮಿ ಬ್ರ್ಯಾಂಡ್ ಲ್ಯಾಪ್‌ಟಾಪ್ ಒಂದನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್ ಜೂನ್ 11 ರಿಂದ ಚೀನಾದಲ್ಲಿ ಖರೀದಿಗೆ ಲಭ್ಯವಿದೆ ಎಂದು ತಿಳಿಸಿದೆ.

ಹೌದು, ಇದೇ ಮೊದಲ ಬಾರಿಗೆ ರೆಡ್‌ಮಿ ಬ್ರ್ಯಾಂಡ್ ಅಡಿಯಲ್ಲಿ ಲ್ಯಾಪ್‌ಟಾಪ್ ಒಂದನ್ನು ಪರಿಚಯಿಸುವ ಮೂಲಕ ಶಿಯೋಮಿ ಮತ್ತೊಮ್ಮೆ ಸದ್ದು ಮಾಡಿದ್ದು, ಚೀನಾದ ಬೀಜಿಂಗ್‌ನಲ್ಲಿ ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ 20 ಪ್ರೊಗಳ ಜೊತೆಗೆ 14 ಇಂಚಿನ 'ರೆಡ್ಮಿಬುಕ್ 14' ಎಂಬ ಹೊಸ ಲ್ಯಾಪ್‌ಟಾಪ್ ಕೂಡ ಪರಿಚಿತವಾಗಿದೆ. ಈ ಲ್ಯಾಪ್‌ಟಾಪ್ ಬೆಲೆ ಕೂಡ ಗ್ರಾಹಕರ ಕೈಗೆಟುಕುವಂತಿದೆ.

ಶಿಯೋಮಿಯ ಮೊದಲ ರೆಡ್‌ಮಿ ಬ್ರ್ಯಾಂಡ್ ಲ್ಯಾಪ್‌ಟಾಪ್ ಮಾರುಕಟ್ಟೆಗೆ!

8GB RAM ಮತ್ತು ಇಂಟೆಲ್ ಕೋರ್ i7 ಪ್ರೊಸೆಸರ್, Nvidia GeForce MX250 ಗ್ರಾಫಿಕ್ಸ್ ಕಾರ್ಡ್ ಹೊಂದಿರುವ ಈ 'ರೆಡ್ಮಿಬುಕ್ 14' ಆಪಲ್ ಮ್ಯಾಕ್‌ಬುಕ್ ಸರಣಿಯ ಲ್ಯಾಪ್‌ಟಾಪ್‌ಗಳಿಗೆ ಸ್ಪರ್ಧೆ ಒಡ್ಡುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗಾದರೆ, ಮೊದಲ ರೆಡ್‌ಮಿ ಬ್ರ್ಯಾಂಡ್ ಲ್ಯಾಪ್‌ಟಾಪ್ 'ರೆಡ್ಮಿಬುಕ್ 14' ಹೇಗಿದೆ? ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ 'ರೆಡ್ಮಿಬುಕ್ 14'?

ಹೇಗಿದೆ 'ರೆಡ್ಮಿಬುಕ್ 14'?

ಮೊಟ್ಟ ಮೊದಲ ರೆಡ್‌ಮಿ ಬ್ರ್ಯಾಂಡ್ ಲ್ಯಾಪ್‌ಟಾಪ್ 'ರೆಡ್ಮಿಬುಕ್ 14' 14 ಇಂಚಿನ ಡಿಸ್ಪ್ಲೇ ಪ್ಯಾನಲ್ ಅನ್ನು ಹೊಂದಿದೆ. ಡಿಟಿಎಸ್ ಆಡಿಯೊ , ಹೊಸ ಕೂಲಿಂಗ್ ವ್ಯವಸ್ಥೆ ಮತ್ತು ಇಂಟೆಲಿಜೆಂಟ್ ಅನ್‌ಲಾಕ್ ವ್ಯವಸ್ಥೆ 2.0 ಸಹಿತ ಹಲವು ಆಕರ್ಷಕ ವೈಶಿಷ್ಟ್ಯವನ್ನು ಒಳಗೊಂಡಿರುವ ಈ ಲ್ಯಾಪ್‌ಟಾಪ್ ನೋಡಲು ಆಪಲ್ ಮ್ಯಾಕ್‌ಬುಕ್‌ ವಿನ್ಯಾಸ ಹೊಂದಿರುವುದನ್ನು ನೋಡಬಹುದು.

'ರೆಡ್ಮಿಬುಕ್ 14' ಪ್ರೊಸೆಸರ್

'ರೆಡ್ಮಿಬುಕ್ 14' ಪ್ರೊಸೆಸರ್

'ರೆಡ್ಮಿಬುಕ್ 14'ನಲ್ಲಿ‌ ಎಂಟನೇ-ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಎನ್ವಿಡಿಯಾ ಜೀಫೋರ್ಸ್ ಎಂಎಕ್ಸ್ 250 ಗ್ರಾಫಿಕ್ಸ್ ಮತ್ತು 8 ಜಿಬಿ RAM ಅನ್ನು ಹೊಂದಿದೆ. 512 ಜಿಬಿ ವರೆಗೂ ಎಸ್ಎಸ್‌ಡಿ ಸ್ಟೋರೇಜ್ ಅನ್ನು ಹೊಂದಿರುವ ಈ ಲ್ಯಾಪ್‌ಟಾಪ್ ಹೊಸ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದಲ್ಲದೆ 2530 ಮಿಮೀಯಷ್ಟು ತೆಳುವಾಗಿದೆ.

'ರೆಡ್ಮಿಬುಕ್ 14'  ಬ್ಯಾಟರಿ

'ರೆಡ್ಮಿಬುಕ್ 14' ಬ್ಯಾಟರಿ

'ರೆಡ್ಮಿಬುಕ್ 14' ಲ್ಯಾಪ್‌ಟಾಪ್ ಒಂದೇ ಚಾರ್ಜ್‌ನಲ್ಲಿ 10 ಗಂಟೆಗಳಷ್ಟು ಬಾಳಿಕೆ ಬರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಶಿಯೋಮಿ ತಿಳಿಸಿದೆ. ಹೆಚ್ಚುವರಿಯಾಗಿ, 'ರೆಡ್ಮಿಬುಕ್ 14'ನಲ್ಲಿ ಒಂದು ಡಿಟಿಎಸ್ ಆಡಿಯೋ ಡಿವೈಸ್ ಕೂಡ ಬರುತ್ತದೆ. ಆದರೂ. ಬ್ಯಾಟರಿ ಬಾಳಿಕೆ ಹೆಚ್ಚಿದೆ ಎಂದು ಶಿಯೋಮಿ ಹೇಳಿಕೊಂಡಿದೆ. ಆದರೆ, ಬ್ಯಾಟರಿ ಸಾಮರ್ಥ್ಯ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ.

'ರೆಡ್ಮಿಬುಕ್ 14' ಇತರೆ ಫೀಚರ್ಸ್

'ರೆಡ್ಮಿಬುಕ್ 14' ಇತರೆ ಫೀಚರ್ಸ್

ರೆಡ್ಮಿಬುಕ್ 14 ಪೂರ್ಣ ಗಾತ್ರದ ಕೀಬೋರ್ಡ್ ಹೊಂದಿದ್ದು,ಎಂಎಂ ಮತ್ತು 19 ಎಂಎಂ ವಿಶಾಲ ಕೀಗಳ ದೂರವಿದೆ. ಮಲ್ಟಿಟಚ್ ಗೆಸ್ಚರ್-ಬೆಂಬಲಿತ ಟಚ್‌ಪ್ಯಾಡ್ ಕೂಡ ಇದೆ. ವಿಂಡೋಸ್ 10 ನಲ್ಲಿ ಕಾರ್ಯನಿರ್ವಹಣೆ ನೀಡುವ ಈ ಲ್ಯಾಪ್‌ಟಾಪ್, ಇಂಟೆಲಿಜೆಂಟ್ ಅನ್ಲಾಕ್ 2.0 , ಮೈಕ್ರೋಸಾಫ್ಟ್ ಆಫೀಸ್ ಹೋಮ್ ಮತ್ತು ಸ್ಟೂಡೆಂಟ್ ಎಡಿಶನ್ ನೊಂದಿಗೆ ಮೊದಲೇ ಲೋಡ್ ಆಗಿದೆ.

'ರೆಡ್ಮಿಬುಕ್ 14' ಬೆಲೆ ಎಷ್ಟು?

'ರೆಡ್ಮಿಬುಕ್ 14' ಬೆಲೆ ಎಷ್ಟು?

ಚೀನಾದಲ್ಲಿ ರೆಡ್ಮಿಬುಕ್ 14 ಎರಡು ಮಾದರಿಗಳಲ್ಲಿ ಲಬ್ಉವಿದೆ. ಇಂಟೆಲ್ ಕೋರ್ ಐ 5 ಪ್ರೊಸೆಸರ್ ಮತ್ತು 256 ಜಿಬಿ ಎಸ್ಎಸ್‌ಡಿ ಸಾಮರ್ಥ್ಯದೊಂದಿಗೆ ಪ್ರಾರಂಭವಾಗುವು ಡಿವೈಸ್ ಬೆಲೆ 3,999 ಸಿಎನ್ವೈ ಗಳಿಂದ ಆರಂಭವಾಗಿದೆ (ಸುಮಾರು ರೂ 40,300). ಇನ್ನು 512 ಜಿಬಿ ಎಸ್ಎಸ್‌ಡಿ ಮಾದರಿ ಸಿಎನ್ವೈ 4,299 (ಸರಿಸುಮಾರು ರೂ 43,300)ಗಳಿಗೆ ಲಭ್ಯವಿರಲಿದೆ.

Best Mobiles in India

English summary
RedmiBook 14 has been unveiled alongside the Redmi K20 and Redmi K20 Pro in Beijing, China. The new notebook by Xiaomi is its first Redmi-branded laptop. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+