ಎಂದೂ ಒಡೆಯದ ಹಾಗೂ ಒಡೆದರೂ ಸ್ವತಃ ಗುಣಪಡಿಸಿಕೊಳ್ಳುವ ಮೊಬೈಲ್ ಡಿಸ್‌ಪ್ಲೇ!!

ಕೊರಿಯಾದ ಸ್ಯಾಮ್ಸಂಗ್ ಸಂಸ್ಥೆಯು ಮುಂಬರುವ ವರ್ಷಗಳಲ್ಲಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದು, 2019 ರಲ್ಲಿ ಈ ಡಿಸ್‌ಪ್ಲೇಗಳನ್ನು ಅಳವಡಿಸಲು ಪ್ರಾರಂಭಿಸಬಹುದು.!!

|

ಎಂದೂ ಒಡೆಯದ ಹಾಗೂ ಒಡೆದರೂ ಸ್ವತಃ ಗುಣಪಡಿಸಿಕೊಳ್ಳುವ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಬಗ್ಗೆ ನೀವು ಕೇಳಿದ್ದೀರಾ?! ನೀವು ನಂಬಿದರೂ ನಂಬಿ ಬಿಟ್ಟರೆ ಬಿಡಿ ವಿಜ್ಞಾನಿಗಳ ಗುಂಪೊಂದು ಗಾಜಿನ ಪುನರುಜ್ಜೀವನದ ಗುಣಲಕ್ಷಣಗಳ ಪಾಲಿಮರ್ ಅನ್ನು ಕಂಡುಹಿಡಿದಿದ್ದು, ಭವಿಷ್ಯದಲ್ಲಿ ಮೊಬೈಲ್ ಡಿಸ್‌ಪ್ಲೇ ಒಡೆಯದಂತೆ ಡಿಸ್‌ಪ್ಲೇ ರೂಪಿಸಲು ಮುಂದಾಗಿದ್ದಾರೆ.!!

ಇನ್ನು ಕೆಲವೇ ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಪ್ರಪಂಚ ಎಷ್ಟು ಬದಲಾಗಲಿದೆ ಎಂದರೆ, ಇಂದು ಸ್ಮಾರ್ಟ್‌ಫೋನ್‌ಗಳು ಎದುರುಸುತ್ತಿರುವ ಡಿಸ್‌ಪ್ಲೇ ಬ್ರೇಕ್ ಸಮಸ್ಯೆಗೆ ಖಂಡಿತ ಪರಿಹಾರ ಸಿಗಲಿದೆ.! ಸ್ಯಾಮ್‌ಸಂಗ್ ಸೇರಿ ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳ ಆಶೆಗೆ ವಿಜ್ಞಾನಿಗಳು ಕೈಜೋಡಿಸಿದ್ದಾರೆ.!!

ಎಂದೂ ಒಡೆಯದ ಹಾಗೂ ಒಡೆದರೂ ಸ್ವತಃ ಗುಣಪಡಿಸಿಕೊಳ್ಳುವ ಮೊಬೈಲ್ ಡಿಸ್‌ಪ್ಲೇ!!

ಇನ್ನು ಈ ತಂತ್ರಜ್ಞಾನದಲ್ಲಿ ಸಂಶೋಧಕರು ಸ್ವತಃ ಸಂಪೂರ್ಣವಾಗಿ ದುರಸ್ಥಿಯಾಗುವ ವಿಶಿಷ್ಟ ಗ್ಲಾಸ್ ಅನ್ನು ಅಭಿವೃದ್ಧಿಪಡಿಸಿದ್ದು, ಹಾಗಾದರೆ, ಭವಿಷ್ಯದಲ್ಲಿ ಈ ತಂತ್ರಜ್ಞಾನ ಹೇಗಿರಲಿದೆ? ಈ ತಂತ್ರಜ್ಞಾನ ಸ್ಮಾರ್ಟ್‌ಫೋನ್ ಪ್ರಪಂಚಕ್ಕೆ ಹೇಗೆ ಸೂಕ್ತ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಭವಿಷ್ಯದ ಎಲೆಕ್ಟ್ರಾನಿಕ್ ಪ್ರಪಂಚ!!

ಭವಿಷ್ಯದ ಎಲೆಕ್ಟ್ರಾನಿಕ್ ಪ್ರಪಂಚ!!

ಇಂದು ಸ್ಮಾರ್ಟ್‌ಫೋನ್‌ಗಳು ಎದುರುಸುತ್ತಿರುವ ಡಿಸ್‌ಪ್ಲೇ ಬ್ರೇಕ್ ಸಮಸ್ಯೆಗೆ ಪರಿಹಾರ ಸಿಗದೆ ಮೊಬೈಲ್ ಕಂಪೆನಿಗಳು ಒದ್ದಾಡುತ್ತಿವೆ. 10 ಜನರ ಸ್ಮಾರ್ಟ್‌ಫೋನ್‌ಗಳ ಪೈಕಿ 7 ಜನರ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವರ್ಷದ ಒಳಗೆ ಒಡೆಯುತ್ತಿದ್ದರೆ, ಸ್ಕ್ರಾಚ್ ಆಗದಂತಹ ಡಿಸ್‌ಪ್ಲೇ ಅಭಿವೃದ್ದಿ ಇನ್ನೂ ಪೂರ್ಣಗೊಂಡಿಲ್ಲ.!! ಹಾಗಾಗಿ, ಎಂದೂ ಒಡೆಯದ ಹಾಗೂ ಒಡೆದರೂ ಸ್ವತಃ ಗುಣಪಡಿಸಿಕೊಳ್ಳುವ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ತಯಾರಿಕಗೆ ವಿಜ್ಞಾನಿಗಳು ಮುಂದಾಗಿದ್ದರು.!!

ಏನಿದು ನೂತನ ತಂತ್ರಜ್ಞಾನ?

ಏನಿದು ನೂತನ ತಂತ್ರಜ್ಞಾನ?

ಸ್ವತಃ ಸಂಪೂರ್ಣವಾಗಿ ದುರಸ್ಥಿಯಾಗುವ ವಿಶಿಷ್ಟ ಗ್ಲಾಸ್ ಅನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಗ್ಲಾಸ್ ವಿದ್ಯುಚ್ಛಕ್ತಿಯನ್ನು ತನ್ನೊಳಗೆ ಹರಿಬಿಡುವುದರಿಂದ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆಗೆ ಸೂಕ್ತವಾಗಿದೆ.ಆದ್ದರಿಂದ ಇದು ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆಗೆ ಸೂಕ್ತವಾಗಿದೆ ಎನ್ನಲಾಗಿದೆ.!!

ತಾನೆ ದುರಸ್ಥಿಯಾಗುವ ತಂತ್ರಜ್ಞಾನ!!

ತಾನೆ ದುರಸ್ಥಿಯಾಗುವ ತಂತ್ರಜ್ಞಾನ!!

ವಿಜ್ಞಾನ ಮತ್ತು ತಂತ್ರಜ್ಞಾನವು ನಿರಂತರವಾಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಈಗ ಅಭಿವೃದ್ದಿಯಾಗಿರುವ ಈ ತಂತ್ರಜ್ಞಾನದಲ್ಲಿ ಗಾಜಿನೊಂದಿಗೆ ಸೇರಿಕೊಂಡು ಅವುಗಳಿಗೆ ಪುನರುತ್ಪಾದಕ ಗುಣಲಕ್ಷಣಗಳನ್ನು ಗುಣಪಡಿಸುವ ಒಂದು ಮ್ಯಾಕ್ರೋಮೋಲ್ಕುಲ್ ಅನ್ನು ಕಂಡುಹಿಡಿಯಲಾಗಿದೆ. ಇದರಿಂದ ಡಿಸ್‌ಪ್ಲೇ ತಾನೆ ದುರಸ್ಥಿಯಾಗುವ ತಂತ್ರಜ್ಞಾನ ಶೀಘ್ರವೇ ಬಳಕೆಗೆ ಬರಲಿದೆ.!!

ಜಪಾನ್‌ನಲ್ಲೂ ಅಭಿವೃದ್ದಿಯಾಗುತ್ತಿದೆ.!!

ಜಪಾನ್‌ನಲ್ಲೂ ಅಭಿವೃದ್ದಿಯಾಗುತ್ತಿದೆ.!!

ತಂತ್ರಜ್ಞಾನ ಪ್ರಪಂಚದಲ್ಲಿ ಪ್ರಚಂಡ ಶಕ್ತಿ ಹೊಂದಿರುವ ಜಪಾನಿನ ಸಂಶೋಧಕರು ಕೂಡ ಪಾಲಿಮರ್ ಅನ್ನು ಗಾಜಿನ ಪುನರುಜ್ಜೀವನದ ಗುಣಲಕ್ಷಣಗಳನ್ನು ಕಂಡುಕೊಂಡಿದ್ದಾರೆ, ನಿಮ್ಮ ಸ್ಮಾರ್ಟ್ಫೋನ್ ಗ್ಲಾಸ್ ಅನ್ನು ಮುರಿದರೆ ಅದು ಹಾನಿಗೊಳಗಾಗದಂತೆ ಟೋಕಿಯೊ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿ ಯಾನಗಿವಾ ಅವರು ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.!!

2019 ರಲ್ಲಿ ಮಾರುಕಟ್ಟೆಗೆ?

2019 ರಲ್ಲಿ ಮಾರುಕಟ್ಟೆಗೆ?

ತಾನೇ ದುರಸ್ಥಿಯಾಗುವ ಪರದೆಯ ಅಭಿವೃದ್ಧಿಯಲ್ಲಿ ಹೆಚ್ಚಿನದನ್ನು ಅಭಿವೃದ್ಧಿಪಡಿಸಿದ ಕಂಪನಿಗಳಲ್ಲಿ ಸ್ಯಾಮ್ಸಂಗ್ ಮುಂದಿದೆ. ಕೊರಿಯಾದ ಈ ಸಂಸ್ಥೆಯು ಮುಂಬರುವ ವರ್ಷಗಳಲ್ಲಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದು, 2019 ರಲ್ಲಿ ಈ ಡಿಸ್‌ಪ್ಲೇಗಳನ್ನು ಅಳವಡಿಸಲು ಪ್ರಾರಂಭಿಸಬಹುದು.!!

''ಕೆಪ್ಲರ್ 90 ಸೌರಮಂಡಲ'' ಪತ್ತೆಯಾಗಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯಾಗಿದ್ದು ಹೀಗೆ!!''ಕೆಪ್ಲರ್ 90 ಸೌರಮಂಡಲ'' ಪತ್ತೆಯಾಗಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯಾಗಿದ್ದು ಹೀಗೆ!!

Best Mobiles in India

English summary
In the coming years, the manufacture of smartphones will undergo major changes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X