Home
Gadgets

ಭಲೇ ಇದೆ ಈ ಜಪಿಎಸ್ ಟ್ರಾಕಿಂಗ್ ಸ್ಮಾರ್ಟ್‌ವಾಚ್!!

Smartwatch, Riversong Jelly, Jelly Kids, gadgets, ಸ್ಮಾರ್ಚ್‌ವಾಚ್, ರಿವರ್‌ಸಾಂಗ್, news

By Bhaskar N J

ಎಲ್ಲಾ ಪೋಷಕರೂ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ. ಹಲವು ಪೋಷಕರಿಗೆ ತಮ್ಮ ಮಕ್ಕಳ ಮೇಲೆ ನಿರಂತರವಾಗಿ ನಿಗಾ ಇಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕೊರಗು ಅವರಲ್ಲಿ ಇದ್ದೇ ಇರುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸ್ಮಾರ್ಚ್‌ವಾಚ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ.

ರಿವರ್‌ಸಾಂಗ್ ಸಂಸ್ಥೆ ಈ ಸ್ಮಾರ್ಟ್‌ವಾಚ್ ಅಭಿವೃದ್ಧಿಪಡಿಸಿದ್ದು, ನೂತನವಾಗಿ ಮಾರುಕಟ್ಟೆಗೆ ಕಾಲಿಟ್ಟಿರುವ ಈ ಸ್ಮಾರ್ಟ್‌ಫೋನ್ ಜೊತೆ ಸಂಪರ್ಕಿಸಿದರೆ ಸಾಕು ಮಗು ಎಲ್ಲಿದ್ದರೂ, ಯಾವ ಚಟುವಟಿಕೆಯಲ್ಲಿ ತೊಡಗಿದ್ದರೂ ಗೊತ್ತಾಗುತ್ತದೆ. ಇದರ ಸಹಾಯದಿಂದ ಅಗತ್ಯವೆನಿಸಿದಾಗ ಮಗುವಿನೊಂದಿಗೆ ಮಾತನಾಡಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದಾಗಿದೆ.

ಭಲೇ ಇದೆ ಈ ಜಪಿಎಸ್ ಟ್ರಾಕಿಂಗ್ ಸ್ಮಾರ್ಟ್‌ವಾಚ್!!

ಸ್ಮಾರ್ಚ್‌ವಾಚ್‌ನಲ್ಲಿ ವಾಯಿಸ್ ಕಾಲ್ ಮತ್ತು ಮೆಸೇಜ್‌ ಎರಡೂ ಸೌಲಭ್ಯವೂ ಇರುವುದರಿಂದ ಮಗುವಿನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಬಹುದು. 'ಆಟೊ ಕಾಲ್‌' ಆಯ್ಕೆ ಇರುವುದರಿಂದ ಮಗು ಇರುವ ಸುತ್ತಮುತ್ತಲಿನ ಪರಿಸರದಲ್ಲಾಗುವ ಘಟನೆಗಳ ಬಗ್ಗೆ ಮಗುವಿಗೆ ಗೊತ್ತಾಗದಂತೆ ಕೇಳಿಸಿಕೊಳ್ಳಬಹುದಾದ ಫೀಚರ್ ಅನ್ನು ಈ ಸ್ಮಾರ್ಟ್‌ವಾಚ್ ಹೊಂದಿದೆ.

ಸಿಮ್ ಹಾಕಬಹುದಾದ ಈ ವಾಚ್‌ನಲ್ಲಿ ಟ್ರಿಪಲ್ ಟ್ರ್ಯಾಕಿಂಗ್ ಮೆಕ್ಯಾನಿಸಂ ಸೌಲಭ್ಯ ಜಿಪಿಎಸ್, ಎಲ್‌ಪಿಎಸ್‌ ಮತ್ತು ವೈಫೈ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಸ್ಥಳ ಪತ್ತೆ, ಮಗು ತಿರುಗಾಡಿದ ಪ್ರದೇಶವನ್ನು ತಿಳಿದುಕೊಳ್ಳುವ ಮತ್ತು ಎಸ್‌ಒಎಸ್ ಅಲಾರಂ ಸೌಲಭ್ಯವೂ ಇದೆ. ಐಒಎಸ್ ಮತ್ತು ಆಂಡ್ರಾಯ್ಡ್-ಜೆಲ್ಲಿ ತಂತ್ರಾಂಶಗಳ ಮಾದರಿಗಳಲ್ಲಿ ಇದನ್ನು ಬಳಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಮತ್ತು ಶಾಲೆಯ ಹೊರಗೆ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಂತಹ ಸ್ಮಾರ್ಟ್‌ವಾಚ್ ಅಗತ್ಯತೆ ಕೂಡ ಹೆಚ್ಚಾಗಿದೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಬಹುಬೇಗ ದೊರೆಯುವ ಈ ಸ್ಮಾರ್ಟ್‌ವಾಚ್ ಬೆಲೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ 2,500 ರೂಪಾಯಿಗಳಾಗಿವೆ.

ಓದಿರಿ: 21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

Best Mobiles in India

English summary
Buy Riversong Jelly Kids Blue Smartwatch for Rs.2499 online. Riversong Jelly Kids BlueSmartwatch at best prices with FREE shipping & cash on delivery. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+