Samsung: ಲಾಸ್ಟ್ ಮೋಡ್ ಜೊತೆ ಮಾರುಕಟ್ಟಗೆ ಲಗ್ಗೆ ಇಡಲು ಸಿದ್ಧವಾಗುತ್ತಿದೆ ಗ್ಯಾಲಕ್ಸಿ ರಿಂಗ್; ಏನದು ಲಾಸ್ಟ್ ಮೋಡ್ ?
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ರಿಂಗ್ (Smart Ring) ಖರೀದಿಸುವುದು ಅವುಗಳನ್ನು ಧರಿಸುವುದು ಟ್ರೆಂಡ್ ಆಗಿದೆ, ಆರಂಭದಲ್ಲಿ ಸ್ಮಾರ್ಟ್ ವಾಚ್‌ಗಳ ಹಿಂದೆ ಬೀಳುತ್ತಿದ್ದವರು ಇದೀಗ ಸ್ಮಾರ್ಟ್ ರಿಂಗ್ ಖರೀದಿಸಲು ಮುಗಿ ಬೀಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy) ನೂತನ ರಿಂಗ್ (Ring) ಒಂದನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು, ಹಲವು ವಿಭಿನ್ನ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹಾಗಿದ್ರೆ ಬನ್ನಿ ಸ್ಯಾಮ್‌ಸಂಗ್ ತರಲು ಹೊರಟಿರುವ ಈ ರಿಂಗ್ ನ ವಿಶೇಷತೆಗಳೇನು ಅದು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಅಂಶಗಳನ್ನು ತಿಳಿದುಕೊಳ್ಳೋಣ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ತನ್ನ ಮುಂದಿನ ಗ್ಯಾಲಕ್ಸಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಮುಂದಿನ ಜೆನರೇಷನ್‌ನ ಫೋಲ್ಡಿಂಗ್ ಫೋನ್‌ಗಳ ಬಿಡುಗಡೆ ಜೊತೆಗೆ ಈ ರಿಂಗ್ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಿದೆ. ಈ ರಿಂಗ್‌ನಿಂದ ಹಲವಾರು ಆರೋಗ್ಯ ಮತ್ತು ನಿದ್ರೆಯ ಟ್ರ್ಯಾಕಿಂಗ್ ಕುರಿತಾದ ಮಾನಿಟರ್‌ಗಳನ್ನು ಹೊಂದಿರುವ ಕುರಿತು ಪ್ರಚಾರ ಮಾಡಲಾಗುತ್ತಿದೆ. ಅದರ ಜೊತೆಗೆ ರಿಂಗ್ ಕಾರ್ಯನಿರ್ವಹಣೆ ಕುರಿತು ವದಂತಿಗಳು ವೆಬ್ ಪೇಜ್‌ನಲ್ಲಿ ಈಗಾಗಲೆ ಈ ಕುರಿತು ಮಾಹಿತಿ ಹರಿದಾಡುತ್ತಿವೆ.

ಗ್ಯಾಲಕ್ಸಿ ರಿಂಗ್‌ನ ಗ್ರಾಹಕರು ತಾವು ಧರಿಸಬಹುದಾದ ರಿಂಗ್ ಅನ್ನು ತ್ವರಿತವಾಗಿ ಪತ್ತೆ ಹಚ್ಚುವ ಫೀಚರ್ಸ್ ಅಳವಡಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಎಪಿಕೆ ಟಿಯರ್‌ಡೌನ್ ಸ್ಯಾಮ್‌ಸಂಗ್ ಫೈಂಡ್ ಅಪ್ಲಿಕೇಶನ್ ಮೂಲಕ ಕಳೆದುಕೊಂಡ ಗ್ಯಾಲಕ್ಸಿ ರಿಂಗ್ ನಲ್ಲಿ ಅಳವಡಿಸಿರುವ ಹೊಸ ಮೋಡ್ ಕಳೆದುಕೊಂಡ ರಿಂಗ್ ಹುಡುಕಲು ಸಹಕರಿಸಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ (Samsung Galaxy Ring) ಲಾಸ್ಟ್ ಮೋಡ್ ಕಾರ್ಯವೈಖರಿ:
ಫೈಂಡ್ ಅಪ್ಲಿಕೇಶನ್ ಗ್ಯಾಲಕ್ಸಿ ರಿಂಗ್‌ನಲ್ಲಿ ಆಂಡ್ರಾಯ್ಡ್ ಪೊಲೀಸ್ ಎಪಿಕೆ ಟಿಯರ್‌ಡೌನ್ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಕೋಡ್‌ನಲ್ಲಿರುವ ಸ್ಟ್ರಿಂಗ್ ಮೂಲಕ 'ನಿಮ್ಮ ರಿಂಗ್‌ನಲ್ಲಿ ಲೈಟ್ ಮಿಟುಕಿಸಲು ಟ್ಯಾಪ್ ಮಾಡಬೇಕು' ಮತ್ತು 'ರಿಂಗ್ ಲೈಟ್ ಮಿಟುಕಿಸುತ್ತಿದೆ' ಎಂದು ಬರುತ್ತದೆ ಬಳಿಕ 'ಲಾಸ್ಟ್ ಮೋಡ್ ಅಪ್ಲಿಕೇಷನ್' ಲೈಟ್ ಬರುತ್ತಿದೆ ಎಂದು ಸೂಚಿಸುತ್ತದೆ. ಫೈಂಡ್ ಅಪ್ಲಿಕೇಶನ್‌ನಲ್ಲಿ ಲಾಸ್ಟ್ ಮೋಡ್ ಅನ್ನು ಸಕ್ರಿಯಗೊಳಿಸಿದ ನಂತರ ಗ್ಯಾಲಕ್ಸಿ ರಿಂಗ್‌ನಲ್ಲಿ ಎಂಬೆಡ್ ಮಾಡಲಾದ ಲೈಟ್‌ಗಳು ನಿರಂತರವಾಗಿ ಮಿಟುಕಿಸುತ್ತವೆ ಎಂದು ವರದಿ ತಿಳಿಸಿದೆ. ಕೋಣೆಯಲ್ಲಿ ಇತರ ಲೈಟ್‌ಗಳನ್ನು ಆಫ್ ಮಾಡುವ ಮೂಲಕ ರಿಂಗ್ ಇರುವ ಸ್ಥಳವನ್ನು ಸುಲಭವಾಗಿ ಕಂಡುಹಿಡಿಯಬಹುದು ಎಂದು ಕೂಡ ವರದಿಯಾಗಿದೆ.
ಸ್ಯಾಮ್‌ಸಂಗ್ ಫೈಂಡ್ ಅಪ್ಲಿಕೇಶನ್ ಲೈಟ್ ಮಿಟುಕಿಸುತ್ತಿದ್ದರೆ ಅಥವಾ ಮಿಟುಕಿಸುವಿಕೆಯನ್ನು ಪ್ರಚೋದಿಸಲು ರಿಂಗ್ ಜೊತೆಗೆ ಸಂಪರ್ಕಿಸಲು ಸಾಧ್ಯವಾಗದಿದ್ದರೆ ಬಳಕೆದಾರರಿಗೆ ತಿಳಿಸುತ್ತದೆ ಎಂದು ವರದಿಯಾಗಿದೆ. ಬಳಕೆದಾರರ ರಿಂಗ್ ಡೇಟಾವನ್ನು ರಕ್ಷಿಸಲು ಬಳಕೆದಾರರು ತಮ್ಮ ಸ್ಯಾಮ್‌ಸಂಗ್ ಖಾತೆಗಳನ್ನು ಅಪ್ಲಿಕೇಶನ್‌ನಿಂದ ಲಾಕ್ ಮಾಡಲು ಸಹ ಇದು ಸಹಕಾರಿಯಾಗಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಲಾಂಚ್ (Samsung Galaxy Ring) ಬಿಡುಗಡೆ ಯಾವಾಗ:
ಗ್ಯಾಲಕ್ಸಿ S24 ಸರಣಿ ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ ಗ್ಯಾಲಕ್ಸಿ ರಿಂಗ್ ಬಿಡುಗಡೆ ಮಾಡುವುದಾಗಿ ಸಂಸ್ಥೆ ತಿಳಿಸಿತ್ತು. ಫೆಬ್ರವರಿಯಲ್ಲಿ MWC ಸಮಯದಲ್ಲಿ ಕಾಣಿಸಿಕೊಂಡಿತ್ತು. ಇದು ಗ್ಯಾಲಕ್ಸಿ Z ಫ್ಲಿಪ್ 6 ಮತ್ತು ಗ್ಯಾಲಕ್ಸಿ Zಫೋಲ್ಡ್ 6 ಜೊತೆಗೆ ಮುಂದಿನ ಅನ್‌ಬಾಕ್ಸ್ ಈವೆಂಟ್ ಅಂದರೆ ಜುಲೈ 10ರಂದು ಅಧಿಕೃತವಾಗಿ ಬಿಡುಗಡೆಯಾಗಬಹುದು ಎಂದು ನಿರೀಕ್ಷೆಯಿದೆ. ಇನ್ನೂ ಈ ರಿಂಗ್‌ನ ಬೆಲೆ ಭಾರತದಲ್ಲಿ 35,000 ರೂ. ಇರಬಹುದು ಎಂದು ಊಹಿಸಲಾಗಿದೆ.
ಗ್ಯಾಲಕ್ಸಿ ರಿಂಗ್ ಸ್ಯಾಮ್‌ಸಂಗ್‌ನ ಹೆಲ್ತ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ದೃಢಪಡಿಸಲಾಗಿದೆ, ಬಹುಶಃ ಕಪ್ಪು, ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರಬಹುದು ಹಾಗೂ ಇದು ಹೃದಯದ ಬಡಿತ ಟ್ರ್ಯಾಕಿಂಗ್ ಮತ್ತು SpO2 (ರಕ್ತ ಆಮ್ಲಜನಕ) ಮಾನಿಟರಿಂಗ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications








