Home
Gadgets

ಆಗಸ್ಟ್‌ನಲ್ಲಿ ಲಾಂಚ್ ಆಗುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಹೇಗಿರುತ್ತೆ ಗೊತ್ತಾ?

By Gizbot Bureau

ಒಂದು ಹೊಸ ಫೋನ್ ಹೆಚ್ಚು ನಿರೀಕ್ಷೆ ಹುಟ್ಟಿಸುತ್ತಿದ್ದರೆ ಅದರ ಬಗ್ಗೆ ಹಲವಾರು ಸುದ್ದಿಗಳು ಬಿಡುಗಡೆಗೂ ಮುನ್ನ ಹಬ್ಬುತ್ತಲೇ ಇರುತ್ತದೆ. ಅದ್ಯಾವುದೋ ಒಂದು ಸಣ್ಣ ಮೂಲ ಆ ಮಾಹಿತಿಗಳನ್ನು ಹೊರ ಹಾಕುತ್ತಿರುತ್ತೆ. ಈಗಲೂ ಹಾಗೆಯೇ ಆಗಿದೆ. ಗ್ಯಾಲಕ್ಸಿ ಟ್ಯಾಬ್ ಎಸ್ 4 ಬಗ್ಗೆ ಹಲವಾರು ರೀತಿಯ ವದಂತಿಗಳು ಈಗಾಗಲೇ ಶುರುವಾಗಿ ಬಿಟ್ಟಿದೆ. ಹೌದು ಸೌತ್ ಕೊರಿಯನ್ ಸ್ಯಾಮ್ ಸಂಗ್ ತನ್ನ ಮುಂದಿನ ಟ್ಯಾಬ್ ಸಿರೀಸ್ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ. ಈಗ ಹೊಸದಾಗಿ ಈ ಫೋನ್ ಬಗ್ಗೆ ಕೇಳಿ ಬರುತ್ತಿರುವ ವದಂತಿ ಏನೆಂದರೆ ಈ ಫೋನಿನ ಆಕಾರ ಹೇಗಿರಲಿದೆ ಎಂಬುದಾಗಿದೆ.

ಆಗಸ್ಟ್‌ನಲ್ಲಿ ಲಾಂಚ್ ಆಗುವ  ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಹೇಗಿರುತ್ತೆ!?

ಆಂಡ್ರಾಯ್ಡ್ ಹೆಡ್ ಲೈನ್ ನ ಮೂಲವೊಂದು ಹೇಳುತ್ತಿರುವಂತೆ, ಟ್ಯಾಬ್ ಎಸ್ 4 ನಲ್ಲಿ ಸಾನ್ಸ್ ಹೋಮ್ ಬಟನ್ ಇರುತ್ತದೆ ಮತ್ತು ಅತೀ ದೊಡ್ಡ ಅಂದರೆ 10.5 ಇಂಚಿನ ಡಿಸ್ಪ್ಲೇ ಸ್ಕ್ರೀನ್ ಹೊಂದಿರಲಿದಯಂತೆ ಮತ್ತು ಅದರ ಅನುಪಾತ 4:3ಆಗಿರಲಿದೆ. ಹೋಮ್ ಬಟನ್ ನ ಕೊರತೆಯು ಡಿಸ್ಪ್ಲೇಗೆ ಹೆಚ್ಚು ಜಾಗವನ್ನು ಮಾಡುತ್ತದೆಯಂತೆ. ಆದರೆ, ಹೋಮ್ ಬಟನ್ನೇ ಇಲ್ಲ ಎಂದರೆ ಫಿಂಗರ್ ಪ್ರಿಂಟ್ ಸೆನ್ಸರ್ ಕೂಡ ಇಲ್ಲ. ಆದರೆ ಖಂಡಿತ ಡಿವೈಸ್ ಕಣ್ಣಿನ ಸ್ಕ್ಯಾನರ್ ನ್ನು ಹೊಂದಿರುತ್ತದೆ. ಡಿಸ್ಪ್ಲೇಯಲ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಸ್ಯಾಮ್ ಸಂಗ್ ಅಳವಡಿಸುವ ಸಾಧ್ಯತೆ ಇದೆ.

ಸ್ಯಾಮ್ ಸಂಗ್ ನ ಎಲ್ಲಾ ಡಿವೈಸ್ ನ ವೈಶಿಷ್ಟ್ಯಗಳಲ್ಲಿ ಹಿಂಭಾಗದ ಪೆನಲ್ ನಲ್ಲಿ "Tuned by AKG" ಬ್ರ್ಯಾಂಡಿಂಗ್ ಇರುವಂತೆ ಗ್ಯಾಲಕ್ಸಿ ಟ್ಯಾಬ್ ಎಸ್ 3ಯಲ್ಲೂ ಇರಲಿದೆ ಮತ್ತು ಇದು ಕ್ವಾಲಿಟಿ ಆಡಿಯೋ ಔಟ್ ಪುಟ್ ನೀಡಲು ಸಹಕಾರಿಯಾಗಿರುತ್ತದೆ , ನಾಲ್ಕು ಸ್ಟೀರಿಯೋ ಸ್ಪೀಕರ್ ಇರಲಿದೆ.

ಹಿಂದಿನ ವರದಿ ಮತ್ತು ವದಂತಿ ತಿಳಿಸಿರುವಂತೆ, ಗ್ಯಾಲಕ್ಸಿ ಟ್ಯಾಬ್ ಎಸ್ 4 13ಎಂಪಿ ಹಿಂಭಾಗದ ಕ್ಯಾಮರಾ ಮತ್ತು 8ಎಂಪಿ ಸೆಲ್ಫೀ ಕ್ಯಾಮರಾ ಹೊಂದಿರಲಿದೆ ಎಂದು ಹೇಳಲಾಗಿತ್ತು. ಈ ಡಿವೈಸ್ ಸ್ನ್ಯಾಪ್ ಡ್ರ್ಯಾಗನ್ 835 ಸಾಕೆಟ್ ಹೊಂದಿರಲಿದ್ದು, 4ಜಿಬಿ RAM ಮತ್ತು 64ಜಿಬಿ ಸ್ಟೋರೇಜ್ ಅವಕಾಶವನ್ನು ಹೊಂದಿರಲಿದೆ.

ಬರೋಬ್ಬರಿ 7,300mAh ಬ್ಯಾಟರಿ ಒಳಗೊಂಡಿರಲಿದೆ ಎಂದು ಕೂಡ ವದಂತಿ ಹೇಳುತ್ತಿದೆ.ಆಂಡ್ರಾಯ್ಡ್ 8.1 ಓರಿಯೋ ನಲ್ಲಿ ಇದು ರನ್ ಆಗುತ್ತದೆ. ಸದ್ಯಕ್ಕೆ ಡಿವೈಸ್ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಿಲ್ಲದಿದ್ದರೂ ಕೂಡ ವದಂತಿಗಳಿಗೆ ಪುಷ್ಟಿ ಸಿಗಬೇಕು ಎಂದರೆ ಅಧಿಕೃತ ಮಾಹಿತಿ ಹೊರ ಬೀಳುವವರೆಗೂ ಕಾಯಲೇಬೇಕು.

ಆಗಸ್ಟ್‌ನಲ್ಲಿ ಲಾಂಚ್ ಆಗುವ  ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಹೇಗಿರುತ್ತೆ!?

ಗ್ಯಾಲಕ್ಸಿ ಎಸ್ 10 ನಲ್ಲೂ ಕೂಡ ಸ್ಯಾಮ್ ಸಂಗ್ ದೊಡ್ಡ ಸ್ಕ್ರೀನ್ ತಯಾರಿಸಲು ಯೋಜನೆ ಮಾಡಿದಂತಿದೆ. ದೊಡ್ಡದು ಎಂದರೆ ಗ್ಯಾಲಕ್ಸಿ ನೋಟ್ 9 ನ 6.38 ಇಂಚಿನ ಡಿಸ್ಪ್ಲೇಗಿಂತಲೂ ದೊಡ್ಡದಿರಲೇಬೇಕು. ಒಟ್ಟಿನಲ್ಲಿ ಗ್ಯಾಲಕ್ಸಿ ಎಸ್ 10 ಆಶ್ಚರ್ಯಕರವಾಗಿ ಹೊರಬರುವುದಂತೂ ನಿಜ.

ಬೆಲ್ ತಿಳಿಸುವಂತೆ, ಸ್ಯಾಮ್ ಸಂಗ್ ಮುಂದಿನ ಫ್ಲಾಗ್ ಶಿಪ್ ಗೆ ಬಿಡಿಭಾಗಗಳನ್ನು ಹೊಂದಿಕೊಳ್ಳುವಂತೆ ಸಪ್ಲೈ ಮಾಡಲು ಸ್ಯಾಮ್ ಸಂಗ್ ತಿಳಿಸಿದೆ. ಅದರಲ್ಲಿ ಪ್ರಮುಖವಾಗಿರುವುದು ಡಿಸ್ಪ್ಲೇ ಸೈಡ್.. 6.3 ಇಂಚಿನ ಡಿಸ್ಪ್ಲೇಯ ಬದಲಾಗಿ 6.44 ಇಂಚಿನ ಡಿಸ್ಪ್ಲೇಯನ್ನು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಹೊಂದಿರುವ ನೀರೀಕ್ಷಎ ಇದೆ. ಮೂರು ವೇರಿಯಂಟ್ ನಲ್ಲಿ ಈ ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಯಾವುದಕ್ಕೂ ಕುತೂಹಲಗಳಿಗೆ ತೆರೆ ಬೀಳಬೇಕು ಎಂದರೆ ಮಾರುಕಟ್ಟೆಯಲ್ಲಿ ಫೋನ್ ಕೈಗೆಟುಕಿದರೆ ಮಾತ್ರ ಸಾಧ್ಯ.

Best Mobiles in India

English summary
Samsung Galaxy Tab S4 leaked renders shows how the device would shape up. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+