Samsung Galaxy Watch 8 ಮತ್ತು Watch 8 Classic ಸಾಧನಗಳು ಬಿಡುಗಡೆ!
ಜುಲೈ 9 ರಂದು ಬುಧವಾರ ನಡೆದ Samsung Unpacked 2025 ಈವೆಂಟ್‌ನಲ್ಲಿ Galaxy Z Fold 7, Galaxy Z Flip 7 ಮತ್ತು Galaxy Z Flip 7 FE ಮೂರು ಫೋಲ್ಡಬಲ್ ಫೋನ್‌ಗಳ ಜೊತೆಗೆ, ಧರಿಬಹುದಾದ Galaxy Watch 8 ಮತ್ತು Galaxy Watch 8 Classic ವಾಚ್ ಫೋನ್‌ಗಳು ಸಹ ಸ್ಕ್ವಿರ್ಕಲ್ ವಿನ್ಯಾಸದೊಂದಿಗೆ ಪರಿಚಯಗೊಂಡವು. ಈ ಎರಡೂ ಸಾಧನಗಳು Exynos W1000 ಚಿಪ್‌ನೊಂದಿಗೆ ಸಜ್ಜುಗೊಂಡಿದ್ದು, ಬ್ಲೂಟೂತ್ ಮತ್ತು LTE ಆಯ್ಕೆಗಳಲ್ಲಿ ಕೂಡ ಲಭ್ಯವಾಗಲಿವೆ. ಹಾಗಾದರೆ, ಹೊಸ Galaxy Watch 8 ವಾಚ್ ಫೋನ್‌ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.
Samsung Galaxy Watch 8, Watch 8 Classic: ಪ್ರಮುಖ ವೈಶಿಷ್ಟ್ಯಗಳು
Samsung Galaxy Watch 8 ಮತ್ತು Watch 8 Classic ಎರಡೂ ಸಾಧನಗಳು One UI 8.0 Watch (Wear OS 6) ನಲ್ಲಿ ಕಾರ್ಯನಿರ್ವಹಿಸುತ್ತದೆ. Galaxy Watch 8 ಸಾಧನವು 40mm ಮತ್ತು 44mm ಎರಡು ಆಯ್ಕೆಗಳಲ್ಲಿ ಬರುತ್ತದೆ. ಆದರೆ, Watch 8 Classic ಒಂದೇ 46mm ಗಾತ್ರದ ಆಯ್ಕೆಯಲ್ಲಿ ಲಭ್ಯವಿದೆ. ಕ್ಲಾಸಿಕ್ ರೂಪಾಂತರವು Sapphire ಗಾಜಿನ ಲೇಪನದೊಂದಿಗೆ ಸ್ಟೇನ್‌ಲೆಸ್ ಸ್ಟೀಲ್ ಕೇಸಿಂಗ್ ಅನ್ನು ಹೊಂದಿದ್ದರೆ, Galaxy Watch 8 ಗಾಜಿನ ಲೇಪನದೊಂದಿಗೆ ಅಲ್ಯೂಮಿನಿಯಂ ನಿರ್ಮಾಣವನ್ನು ಹೊಂದಿದೆ.
ಈ Galaxy Watch 8 ಶ್ರೇಣಿಯು 327ppi ಸಾಂದ್ರತೆ ಮತ್ತು 3,000 nits ಗರಿಷ್ಠ ಹೊಳಪಿನೊಂದಿಗೆ ಸೂಪರ್ AMOLED ಡಿಸ್ಪ್ಲೇಗಳನ್ನು ಹೊಂದಿದೆ. ಇವುಗಳಲ್ಲಿ, Watch 8 Classic 438x438 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.34-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಆದರೆ, Galaxy Watch 8 ಸಾಧನದ 40mm ರೂಪಾಂತರವು 438x438 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.34-ಇಂಚಿನ ಪರದೆಯನ್ನು ಹೊಂದಿದ್ದರೆ, ಇದರ 44mm ಮಾದರಿಯು 480×480 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.47-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.
Samsung ತನ್ನ Galaxy Watch 8 ಶ್ರೇಣಿಯನ್ನು ತನ್ನ Exynos W1000 ಚಿಪ್‌ನೊಂದಿಗೆ ಸಜ್ಜುಗೊಳಿಸಿದೆ. ಇವುಗಳಲ್ಲಿ Galaxy Watch 8 Classic ಸಾಧನವು 64GB ಸಂಗ್ರಹಣೆ ಮತ್ತು 2GB ಸಂಗ್ರಹಣೆಯನ್ನು ಹೊಂದಿದೆ. ಆದರೆ, Galaxy Watch 8 ಮಾದರಿಗಳು 32GB ಸಂಗ್ರಹಣೆ ಮತ್ತು 2GB RAM ಅನ್ನು ಹೊಂದಿವೆ. ಕ್ಲಾಸಿಕ್ ಮಾದರಿಯು ಕ್ವಿಕ್ ಬಟನ್ ಅನ್ನು ಹೊಂದಿದ್ದು, ಅದು ಬಳಕೆದಾರರಿಗೆ ಕೆಲವು ಕ್ಲಿಕ್‌ಗಳಲ್ಲಿ ವೈಶಿಷ್ಟ್ಯಗಳನ್ನು ಪ್ರವೇಶಿಸಲುಅನುವು ಮಾಡಿಕೊಡುತ್ತದೆ. ಇದು ತಿರುಗುವ ಬೆಜೆಲ್ ಅನ್ನು ಹೊಂದಿದೆ, ಇದು ಬಳಕೆದಾರರಿಗೆ UI ಮೂಲಕ ನ್ಯಾವಿಗೇಟ್ ಮಾಡಲು ಅನುವು ಮಾಡಿಕೊಡುತ್ತದೆ.
Galaxy Watch 8 ಸರಣಿಯು ಕಂಪನಿಯ ಬಯೋಆಕ್ಟಿವ್ ಸೆನ್ಸರ್ ಅನ್ನು ಹೊಂದಿದ್ದು ಅದು ಆಪ್ಟಿಕಲ್ ಬಯೋ-ಸಿಗ್ನಲ್ ಸೆನ್ಸರ್, ಎಲೆಕ್ಟ್ರಿಕಲ್ ಹಾರ್ಟ್ ಸಿಗ್ನಲ್ ಮತ್ತು ಬಯೋಎಲೆಕ್ಟ್ರಿಕಲ್ ಇಂಪೆಡೆನ್ಸ್ ಅನಾಲಿಸಿಸ್ ಸೆನ್ಸರ್ ಅನ್ನು ಸಂಯೋಜಿಸುತ್ತದೆ. ಆನ್‌ಬೋರ್ಡ್‌ನಲ್ಲಿರುವ ಇತರ ಸೆನ್ಸರ್‌ಗಳಲ್ಲಿ ಅಕ್ಸೆಲೆರೊಮೀಟರ್, ಬಾರೋಮೀಟರ್, ಗೈರೊ ಸೆನ್ಸರ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಲೈಟ್ ಸೆನ್ಸರ್ ಮತ್ತು ತಾಪಮಾನ ಸೆನ್ಸರ್ ಸೇರಿವೆ. ಕ್ಲಾಸಿಕ್ ರೂಪಾಂತರವು 3D ಹಾಲ್ ಸೆನ್ಸರ್ ಅನ್ನು ಹೊಂದಿದೆ.

ಕಾರ್ಯನಿರ್ವಹಣೆ ವಿಭಾಗದಲ್ಲಿ, Galaxy Watch 8 ಸರಣಿಯು ಹೃದಯ ಬಡಿತ ಮೇಲ್ವಿಚಾರಣೆ, ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಟ್ರ್ಯಾಕಿಂಗ್, ನಿದ್ರೆ ವಿಶ್ಲೇಷಣೆ, ಒತ್ತಡ ಮೇಲ್ವಿಚಾರಣೆ ಮತ್ತು AGES ಸೂಚ್ಯಂಕ ಮೇಲ್ವಿಚಾರಣೆಯಂತಹ ಫಿಟ್‌ನೆಸ್ ಮತ್ತು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳ ಶ್ರೇಣಿಯನ್ನು ನೀಡುತ್ತವೆ. ಇದಲ್ಲದೆ, ಸ್ಮಾರ್ಟ್‌ವಾಚ್‌ಗಳು ಪತನ ಪತ್ತೆ, ದೇಹದ ಸಂಯೋಜನೆ ಟ್ರ್ಯಾಕಿಂಗ್ ಮತ್ತು ರಕ್ತದೊತ್ತಡ ಮೇಲ್ವಿಚಾರಣೆಯಂತಹ ವೈಶಿಷ್ಟ್ಯಗಳನ್ನು ಹೊಂದಿವೆ.
ಬ್ಯಾಟರಿ ವಿಭಾಗದಲ್ಲಿ, Galaxy Watch 8 Classic ಸಾಧನವು 445mAh ಬ್ಯಾಟರಿಯನ್ನು ಹೊಂದಿದ್ದರೆ, Galaxy Watch 8 ಸಾಧನದ 40mm ಮತ್ತು 44mm ಮಾದರಿಗಳು ಕ್ರಮವಾಗಿ 325mAh, 435mAh ಬ್ಯಾಟರಿ ಘಟಕಗಳನ್ನು ಹೊಂದಿವೆ. ಈ ಎಲ್ಲಾ ಮೂರು ಮಾದರಿಗಳು ಮಿಲಿಟರಿ ದರ್ಜೆಯ ಬಾಳಿಕೆ (MIL-STD-810H) ಮತ್ತು IP68 ರೇಟಿಂಗ್ ಹೊಂದಿರುವ ಬಿಲ್ಡ್ ಹೊಂದಿವೆ.ಅಳತೆಗಳಲ್ಲಿ, Galaxy Watch 8 40mm ಮಾದರಿಯು 40.4 x 42.7 x 8.6mm ಅಳತೆ ಮತ್ತು 30 ಗ್ರಾಂ ತೂಕವಿರುತ್ತದೆ. 44mm ಮಾದರಿಯು 43.7 x 46 x 8.6mm ಅಳತೆ ಮತ್ತು 34 ಗ್ರಾಂ ತೂಗುತ್ತದೆ. ಗ್ಯಾಲಕ್ಸಿ ವಾಚ್ 8 ಕ್ಲಾಸಿಕ್ 46.7 x 46 x 10.6 ಮಿಮೀ ಅಳತೆ ಮತ್ತು 63.5 ಗ್ರಾಂ ತೂಗುತ್ತದೆ.
Galaxy Watch 8 ಮತ್ತು Galaxy Watch 8 Classic: ಬೆಲೆಗಳು
40mm ನಲ್ಲಿ ಪರಿಚಯಗೊಂಡಿರುವ ಹೊಸ Galaxy Watch 8 ಬ್ಲೂಟೂತ್ ರೂಪಾಂತರದ ಬೆಲೆ 32,999 ರೂ. ಆಗಿದ್ದರೆ, ಇದರ 44mm ಸಾಧನದ ಬೆಲೆ 35,999 ರೂ. ಆಗಿದೆ. ಹಾಗೆಯೇ, LTE ಹೊಂದಿರುವ 40mm Galaxy Watch 8 ಸಾಧನದ ಬೆಲೆ 36,999 ರೂ. ಆಗಿದ್ದರೆ, ಇದರ 44mm ವಾಚ್ 8 ಬೆಲೆ 39,999 ರೂ. ಆಗಿದೆ. ಸ್ವಲ್ಪ ಶಕ್ತಿಶಾಲಿಯಾಗಿರುವ 46mm Galaxy Watch 8 Classic ಬ್ಲೂಟೂತ್ ಮಾದರಿಯ ಬೆಲೆ 46,999 ರೂ. ಆಗಿದ್ದರೆ, ಇದರ LTE ರೂಪಾಂತರವು ರೂ. 50,999 ರೂ. ಆಗಿದೆ.


Click it and Unblock the Notifications








