Home
Gadgets

Samsung; ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹುಟ್ಟಿಸಿದ ಗ್ಯಾಲಕ್ಸಿ ವಾಚ್ FE !; ಏನಿರಲಿವೆ ಫೀಚರ್ಸ್ ?

ವಿಭಿನ್ನ ಫೀಚರ್ಸ್‌ ಹಾಗೂ ಜನರ ವಿಶ್ವಾಸಾರ್ಹತೆ ಗಳಿಸಿರುವ ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ಹೊಸ ಹೊಸ ಗ್ಯಾಡ್ಜೆಟ್‌ಗಳನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ, ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌ಗಳು, ರಿಂಗ್, ಇಯರ್‌ಬಡ್ಸ್‌ ಸೇರಿದಂತೆ ಅನೇಕ ಹೊಸ ಹೊಸ ಬಗೆಯ ಡಿವೈಸ್‌ಗಳನ್ನು ವಿಭಿನ್ನ ಫೀಚರ್ಸ್‌ಗಳ ಜೊತೆಗೆ ವಿಭಿನ್ನ ವಿನ್ಯಾಸದ ಡಿವೈಸ್‌ಗಳನ್ನು ಸ್ಯಾಮ್‌ಸಂಗ್ ಸಂಸ್ಥೆ ಬಿಡುಗಡೆಗೊಳಿಸುತ್ತಾ ಬಂದಿದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅಲ್ಟ್ರಾ ವಾಚ್ 7 ಸಿರೀಸ್‌ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿFE ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಜುಲೈ 10 ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ಅನ್‌ಪ್ಯಾಕ್ಡ್‌ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ಹಲವಾರು ಹೊಸ ಹೊಸ ವೇರಬಲ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿರುವಂತೆ ತೋರುತ್ತಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಗ್ಯಾಲಕ್ಸಿ ವಾಚ್ 7 ಅಲ್ಟ್ರಾ (Galaxy Watch 7 ) ಅನಾವರಣಗೊಳಿಸಲು ಯೋಜಿಸುತ್ತಿದೆ ಎಂದು ವದಂತಿಗಳ ಮೂಲಕ ತಿಳಿದು ಬರುತ್ತಿದೆ. ಸ್ಯಾಮ್‌ಸಂಗ್ ಯುಕೆ ಮತ್ತು ಲ್ಯಾಟಿನ್ ಅಮೇರಿಕಾದ ಕೆಲವು ವೆಬ್‌ಸೈಟ್‌ಗಳಲ್ಲಿ ಈ ಹೊಸ ಕೈಗುಟುಕು ದರದಲ್ಲಿ ಲಭ್ಯವಾಗಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy Watch) ವಾಚ್‌ ಬಿಡುಗಡೆಗೊಳಿಸುವ ಕುರಿತು ಸುಳಿವು ನೀಡುತ್ತಿವೆ.

ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹುಟ್ಟಿಸಿದ ಗ್ಯಾಲಕ್ಸಿ ವಾಚ್ FE

ಸಪೋರ್ಟ್‌ ಪೇಜ್ ಪ್ರಕಾರ ಮುಂಬರುವ ಗ್ಯಾಲಕ್ಸಿ ವಾಚ್ 'SM-R861' ಮಾದರಿಯನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ, ಆದರೆ ಈ ನೂತನ ವಾಚ್‌ ಕುರಿತು ಯಾವುದೇ ವಿಶೇಷಣಗಳಾಗಲಿ, ಫೀಚರ್ಸ್‌ ಕುರಿತಾದ ಮಾಹಿತಿಯಾಗಲಿ ಇನ್ನೂ ಬಹಿರಂಗಪಡಿಸಿಲ್ಲ. ಈ ಹಿಂದಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4 ಇದು (Samsung Galaxy Watch 4) SM-R860 ಮಾದರಿ ಸಂಖ್ಯೆಯನ್ನು ಹೊಂದಿದೆ.

ವರದಿಗಳ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ FE ಬಿಡುಗಡೆಗೊಳಿಸುವ ಸಾಧ್ಯತೆಗಳು ಕೂಡ ಇದ್ದು, ಇದು ಗ್ಯಾಲಕ್ಸಿ ವಾಚ್ 4 ಮಾದರಿಲ್ಲಿರಲ್ಲಿರಲಿದೆ ಎಂದು ಊಹಿಸಲಾಗಿದೆ. ಈ ಗ್ಯಾಲಕ್ಸಿ ವಾಚ್‌ 4 5W ವೈರ್‌ಲೆಸ್ ಚಾರ್ಜಿಂಗ್‌ ಬಲ ಹೊಂದಿದೆ. ಈ ಹಿಂದೆ ಎಫ್‌ಸಿಸಿ ಪಟ್ಟಿ ಗುರುತಿಸಿರುವ ಪ್ರಕಾರ ಇದನ್ನು 'ಗ್ಯಾಲಕ್ಸಿ ವಾಚ್ ಎಫ್‌ಇ' ಎಂದು ಹೆಸರಿಸಬಹುದು ಎಂಬ ಕುರಿತು ಊಹಾಪೋಹಗಳು ಹರಿದಾಡಿದ್ದವು.

ಇದೀಗ ಸಿದ್ದವಾಗುತ್ತಿರುವ ವಾಚ್‌ಗೆ ಗ್ಯಾಲಕ್ಸಿ ವಾಚ್ 4 (2024) ಅಥವಾ ಗ್ಯಾಲಕ್ಸಿ ವಾಚ್ ಎಫ್‌ಇ ಎಂದು ಕರೆಯಬಹುದೇ ಎಂಬುದರ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಆದರೆ ಇದು ಗ್ಯಾಲಕ್ಸಿ ವಾಚ್ 4 ರೀತಿಯ ಫೀಚರ್ಸ್‌ ಮತ್ತು ವಿಶೇ‍ತೆಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

ಗ್ಯಾಲಕ್ಸಿ ವಾಚ್ 4 ಕುರಿತು ನೋಡುವುದಾದರೆ ಇದು Exynos W920 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ, 1.4-ಇಂಚಿನ ಅಮೋಲ್ಡ್‌ ಸ್ಕ್ರೀನ್, 2GB RAM ಮತ್ತು 16GB ಸ್ಟೋರೆಜ್ ಸಾಮರ್ಥ್ಯ ಹೊಂದಿದೆ ಜೊತೆಗೆ ಇದರ ಬೆಲೆ ಅಮೇಜಾನ್‌ನಲ್ಲಿ 10,999 ರೂ. ಗಳಾಗಿವೆ.

ಗ್ಯಾಲಕ್ಸಿ ವಾಚ್ ಎಫ್‌ಇ ಜೊತೆಗೆ ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ ವಾಚ್ 7 ಅಲ್ಟ್ರಾ ಬಿಡುಗಡೆ ಕುರಿತು ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ, ಇದು ಹೆಚ್ಚುವರಿ ಮೂರನೇ ಬಟನ್‌ ಹೊಂದಿರಬಹುದು ಎನ್ನಲಾಗುತ್ತಿದ್ದು, ಈ ಹಿಂದಿನ ವೃತ್ತಾಕಾರದ ವಿನ್ಯಾಸದ ಬದಲಿಗೆ ಸ್ಕ್ವಾರಿಶ್ ಬೆಜೆಲ್ ಶೇಪ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ FE (Samsung Galaxy Watch FE) ಮುಂದಿನ ತಿಂಗಳು ಗ್ಯಾಲಕ್ಸಿ ವಾಚ್‌ 7 (Galaxy Watch 7) ಸರಣಿಯ ಜೊತೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ದಿನಾಂಕವನ್ನು ಇನ್ನೂ ಘೋಷಿಸಿಲ್ಲ ಆದರೆ ಹಿಂದಿನ ವರದಿಗಳು ಸ್ಯಾಮ್‌ಸಂಗ್ ಈ ವರ್ಷದ ಎರಡನೇ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ ಅನ್ನು ಜುಲೈ 10ರಂದು ನಡೆಸಬಹುದು ಎಂದು ಸೂಚಿಸುತ್ತವೆ. ಈ ವೇಳೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z Fold 6 ಮತ್ತು ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್‌ಗಳನ್ನು ಸಹ ಈ ಸಮಾರಂಭದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

Best Mobiles in India

English summary
According to reports, there are also chances of Samsung launching the Galaxy Watch FE, which is speculated to be among the Galaxy Watch 4 models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+