Home
Gadgets

ಹೊಸ ಟಿವಿ ಮತ್ತು ಎಸಿ ಬೇಕಾ? ಹಾಗಿದ್ರೆ ಸ್ಯಾಮ್ ಸಂಗ್ ನಿಂದ ಸ್ಟೇ ಹೋಮ್ ಸ್ಟೇ ಸೇಫ್ ಆಫರ್ ಲಭ್ಯ

By Gizbot Bureau

ಭಾರತದಾದ್ಯಂತ ಮೇ 17 ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಖರೀದಿದಾರರಿಗೆ ಅಗತ್ಯ ವಸ್ತುಗಳು ಮಾತ್ರವೇ ಖರೀದಿಸಲು ಅವಕಾಶವಿದೆ ಮತ್ತು ಅಗತ್ಯವಿರದ ಕೆಲವು ವಸ್ತುಗಳಿಗೆ ತಾತ್ಕಾಲಿಕೆ ತಡೆ ಒಡ್ಡಲಾಗಿದೆ. ಸದ್ಯ ಯಾವುದಾದರೂ ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕು ಎಂದು ಬಯಸುತ್ತಿದ್ದರೆ ಅವರಿಗೆ ಯಾವುದೇ ಅವಕಾಶಗಳು ಇಲ್ಲದಾಗಿದೆ.

ಸ್ಯಾಮ್ ಸಂಗ್

ಈ ಸಂದರ್ಬದಲ್ಲಿ ಸ್ಯಾಮ್ ಸಂಗ್ 'ಸ್ಟೇ ಹೋಮ್ ಸ್ಟೇ ಹ್ಯಾಪಿ' ಕ್ಯಾಷ್ ಬ್ಯಾಕ್ ಆಫರ್ ನ್ನು ಭಾರತೀಯ ಗ್ರಾಹಕರಿಗೆ ನೀಡುತ್ತಿದೆ. ಅಂದರೆ ಮನೆಯಲ್ಲೇ ಇರಿ, ಸಂತೋಷವಾಗಿರಿ ಎಂಬ ಆಫರ್ ಇದಾಗಿದೆ.

ಪ್ರೊಡಕ್ಟ್

ಆಸಕ್ತ ಗ್ರಾಹಕರು ಪ್ರೊಡಕ್ಟ್ ಗಳನ್ನು ಸ್ಯಾಮ್ ಸಂಗ್ ಶಾಪ್ ನ ಆನ್ ಲೈನ್ ನಲ್ಲಿ ಬುಕ್ ಮಾಡುವುದಕ್ಕೆ ಅವಕಾಶವಿದೆ ಮತ್ತು ಹತ್ತಿರದ ಸ್ಯಾಮ್ ಸಂಗ್ ನ ಅಧಿಕೃತ ರಿಟೈಲರ್ ಮೂಲಕ ನಿಮಗೆ ಡೆಲಿವರಿಯನ್ನು ನೀಡಲಾಗುತ್ತದೆ.

ಡೆಲಿವರಿಯು ನಿಮ್ಮ ಸ್ಥಳೀಯ ಜಾಗದಿಂದಲೇ ನಡೆಯುತ್ತದೆ. ಟಿವಿ, ಡಿಜಿಟಲ್ ಅಪ್ಲಯನ್ಸಸ್ ಗಳನ್ನು ಲಾಕ್ ಡೌನ್ ನಲ್ಲಿ ಖರೀದಿಸುವುದಕ್ಕೆ ಇಚ್ಛಿಸುತ್ತಿರುವ ಮತ್ತು ಅದನ್ನು ಡೆಲಿವರಿ ಮಾಡಿಕೊಳ್ಳುವುದಕ್ಕೆ ಕಷ್ಟ ಪಡುತ್ತಿರುವ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಾಗಿದೆ. ಮನೆಯಿಂದ ಹೊರಗಡೆ ಹೋಗದೆ ವಸ್ತುಗಳನ್ನು ಬುಕ್ ಮಾಡುವುದಕ್ಕೆ ಇದು ಗ್ರಾಹಕರಿಗೆ ನೆರವಾಗುತ್ತದೆ.

ಟಿವಿ,ಎಸಿ,ವಾಷಿಂಗ್ ಮಷೀನ್, ರೆಫ್ರಿಜರೇಟರ್ ಮತ್ತು ಸ್ಮಾರ್ಟ್ ಓವನ್ ಗಳನ್ನು ಸ್ಟೇ ಹೋಮ್ ಸ್ಟೇ ಹ್ಯಾಪಿ ಆಫರ್ ನಲ್ಲಿ ಖರೀದಿಸುವ ಗ್ರಾಹಕರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ.

ಮೇ 8,2020 ವರಗೆ ಗ್ರಾಹಕರು ಈ ಆಫರ್ ನ ಅಡಿಯಲ್ಲಿ ಸ್ಯಾಮ್ ಸಂಗ್ ಶಾಪ್ ನಲ್ಲಿ ಪ್ರೀಬುಕ್ ಮಾಡುವುದಕ್ಕೆ ಅವಕಾಶವಿರುತ್ತದೆ. 15% ಕ್ಯಾಷ್ ಬ್ಯಾಕ್ ಆಫರ್ ಕೂಡ ಇದರಲ್ಲಿ ಲಭ್ಯವಿದೆ. ಎಕ್ಸ್ ಪ್ರೆಸ್ ಡೆಲಿವರಿಯ ಜೊತೆಗೆ ನೋ ಕಾಸ್ಟ್ ಇಎಂಐ ಪೇಮೆಂಟ್ 18 ತಿಂಗಳವರೆಗಿನ ಅವಧಿಗೆ ಸಿಗುತ್ತದೆ

ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗೆ ರಿಯಾಯಿತಿ

ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗೆ ರಿಯಾಯಿತಿ

ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗಳು ಸ್ಟೇ ಹೋಮ್ ಸ್ಟೇ ಸೇಫ್ ನಲ್ಲಿ ರಿಯಾಯಿತಿ ದರದಲ್ಲಿ ಸಿಗುತ್ತದೆ. ಈ ಸೇಲ್ ನ ಅವಧಿಯಲ್ಲಿ ಗ್ರಾಹಕರಿಗೆ 15% ಕ್ಯಾಷ್ ಬ್ಯಾಕ್, ನೋ ಕಾಸ್ಟ್ ಇಎಂಐ ಮತ್ತು 1+1 ಪೆನಲ್ ಗೆ ವಾರೆಂಟಿ ಇದೆ. 30 ದಿನಗಳ ಉಚಿತ ಟ್ರಯಲ್ ZEE5 ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಪ್ಯಾಕ್ ಲಭ್ಯವಿದೆ.

ಸ್ಯಾಮ್ ಸಂಗ್ ರೆಫ್ರಿಜರೇಟರ್ ಗೆ ರಿಯಾಯಿತಿ

ಸ್ಯಾಮ್ ಸಂಗ್ ರೆಫ್ರಿಜರೇಟರ್ ಗೆ ರಿಯಾಯಿತಿ

15% ದವರೆಗೆ ಹೆಚ್ಚುವರಿ ಕ್ಯಾಷ್ ಬ್ಯಾಕ್ ಮತ್ತು ನೋ ಕಾಸ್ಟ್ ಇಎಂಐ ಪೇಮೆಂಟ್ ಆಯ್ಕೆಗಳು ಮತ್ತು ರೆಫ್ರಿಜರೇಟರ್ ಗಳ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಗೆ 10 ವರ್ಷದ ವಾರೆಂಟಿ ಇರುತ್ತದೆ.

ಸ್ಯಾಮ್ ಸಂಗ್ ವಾಷಿಂಗ್ ಮಷೀನ್ ಗೆ ರಿಯಾಯಿತಿ

ಸ್ಯಾಮ್ ಸಂಗ್ ವಾಷಿಂಗ್ ಮಷೀನ್ ಗೆ ರಿಯಾಯಿತಿ

ಸ್ಟೇ ಹೋಮ್ ಸ್ಟೇ ಸೇಫ್ ಆಫರ್ ನ ಅಡಿಯಲ್ಲಿ ಸ್ಯಾಮ್ ಸಂಗ್ ವಾಷಿಂಗ್ ಮಷೀನ್ ಗಳು ಲಭ್ಯವಿದೆ. ಇದಕ್ಕೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಇದೆ ಮತ್ತು 15% ಕ್ಯಾಷ್ ಬ್ಯಾಕ್ ಇದೆ. 10 ರಿಂದ 12 ವರ್ಷದ ಮೋಟರ್ ವಾರೆಂಟಿ ಇದೆ.

ಸ್ಯಾಮ್ ಸಂಗ್ ಎಸಿ ಗೆ ರಿಯಾಯಿತಿ

ಸ್ಯಾಮ್ ಸಂಗ್ ಎಸಿ ಗೆ ರಿಯಾಯಿತಿ

ಸ್ಯಾಮ್ ಸಂಗ್ ಏರ್ ಕಂಡೀಷನ ರ್ ಗೂ ಕೂಡ ಮೇಲಿನ ರೀತಿಯ ಆಫರ್ ಗಳೇ ಲಭ್ಯವಿದ್ದು ನೋ ಕಾಸ್ಟ್ ಇಎಂಐ ಮತ್ತು ಕ್ಯಾಷ್ ಬ್ಯಾಕ್ ಗಳು ಲಭ್ಯವಿದೆ.ಎಸಿಗೆ ಕಂಪೆನಿ ಕಡೆಯಿಂದ ಉಚಿತ ಇನ್ಸ್ಟಾಲೇಷನ್ ಇರುತ್ತದೆ. 5-ವರ್ಷ PCB ಕಂಟ್ರೋಲರ್ ವಾರೆಂಟಿ, , 5-ವರ್ಷಧ ಕಂಡೆನ್ಸರ್ ವಾರೆಂಟಿ ಮತ್ತು ಉಚಿತ ಎಸಿ ಗ್ಯಾಸ್ ರೀಚಾರ್ಜ್ ಆಫರ್ ಇರುತ್ತದೆ.

Best Mobiles in India

English summary
What’s interesting is that consumers who make use of the ‘Stay Home, Stay Happy’ offer will get offers on purchases consumer electronics products such as TVs, ACs, washing machines, refrigerators, and smart ovens. Buyers can prebook these products from the Samsung Shop until May 8, 2020 and avail up to 15% cashback.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+