Home
Gadgets

ಭಾರತದಲ್ಲಿ ಹೊಸ Galaxy Buds3 FE ಇಯರ್‌ಬಡ್ಸ್ ಬಿಡುಗಡೆ: ಏನಿದೆ ವಿಶೇಷ?

ಟೆಕ್ ದೈತ್ಯ ಸ್ಯಾಮ್ಸಂಗ್ ತನ್ನ ಹೊಸ ವೈರ್‌ಲೆಸ್ ಇಯರ್‌ಬಡ್ಸ್ Galaxy Buds3 FE ಸಾಧನವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ಬ್ಲೇಡ್ ವಿನ್ಯಾಸ, ಗ್ಯಾಲಕ್ಸಿ AI ಸಾಮರ್ಥ್ಯ ಮತ್ತು ಸುಧಾರಿತ ಆಕ್ಟಿವ್ ನ್ವಾಯ್ಸ್ ಕಾನ್ಸೆಲೇಶನ್ (ANC) ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಇಯರ್‌ಬಡ್ಸ್ ಸಾಧನವು ದೇಶದಲ್ಲಿ ಮುಂದಿನ ವಾರದಿಂದ ಮಾರಾಟಕ್ಕೆ ಲಭ್ಯವಾಗಲಿವೆ ಎಂದು ಕಂಪೆನಿಯು ಖಚಿತಪಡಿಸಿದೆ ಹಾಗಾದರೆ, ಹೊಸ Galaxy Buds3 FE ಇಯರ್‌ಬಡ್ಸ್ ಸಾಧನ ಹೇಗಿದೆ?, ಬೆಲೆ ಎಷ್ಟು ಹಾಗೂ ಕೊಡುಗೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Galaxy Buds3 FE ಇಯರ್‌ಬಡ್ಸ್: ಏನಿದೆ ವಿಶೇಷ?
Galaxy Buds3 FE ವೈರ್‌ಲೆಸ್ ಇಯರ್‌ಬಡ್ಸ ಹೊಸ ಬ್ಲೇಡ್ ವಿನ್ಯಾಸದ ಗುರುತಿನ ಮೂಲಕ ಗಮನಸೆಳೆದಿದೆ. ಇದರ ಮ್ಯಾಟ್ ಡ್ಯೂಯಲ್-ಟೋನ್ ಫಿನಿಷ್ ಹಾಗೂ ಸೆಮಿ-ಟ್ರಾನ್ಸ್‌ಪರಂಟ್ ಅಂಚುಗಳು ಇದಕ್ಕೆ ಆಕರ್ಷಕ ಲುಕ್ ನೀಡುತ್ತವೆ. ಸಾಮ್ಸಂಗ್ ಅಧಿಕೃತವಾಗಿ, ಈ ವಿನ್ಯಾಸವು ಗ್ಯಾಲಕ್ಸಿ ಸರಣಿಯ ಸರಳತೆ ಮತ್ತು ಆಧುನಿಕತೆಯನ್ನು ಒಂದೇ ವೇಳೆ ತೋರಿಸುತ್ತದೆ ಎಂದು ಹೇಳಿಕೊಂಡದೆ. ಒಟ್ಟಾರೆಯಾಗಿ, ಈ ಹೊಸ ಬ್ಲೇಡ್ ವಿನ್ಯಾಸವು ಈ Galaxy Buds3 FE ಬಡ್ಸ್‌ಗಳಿಗೆ ವಿಭಿನ್ನ ಗುರುತನ್ನು ನೀಡಿದೆ.

ಈ Galaxy Buds3 FE ವೈರ್‌ಲೆಸ್ ಇಯರ್‌ಬಡ್ಸ ಸಾಧನವು ಸುಧಾರಿತ ANC ತಂತ್ರಜ್ಞಾನ ಹಿನ್ನೆಲೆಯ ಶಬ್ದವನ್ನು ಕಡಿಮೆ ಮಾಡುತ್ತದೆ. ಜೊತೆಗೆ, AI ಆಧಾರಿತ ಕ್ರಿಸ್ಟಲ್ ಕ್ಲಿಯರ್ ಕಾಲ್ ತಂತ್ರಜ್ಞಾನ ಗದ್ದಲದ ಸ್ಥಳದಲ್ಲಿಯೂ ಸ್ಪಷ್ಟ ಧ್ವನಿ ಅನುಭವ ನೀಡುತ್ತದೆ. ಬ್ಲೇಡ್ ಕಂಟ್ರೋಲ್ ಮೂಲಕ ಬಳಕೆದಾರರು ಪಿಂಚ್ ಮಾಡಿ ಆಯ್ಕೆ ಮಾಡಬಹುದು ಮತ್ತು ಸ್ವೈಪ್ ಮೂಲಕ ಧ್ವನಿ ಮಟ್ಟವನ್ನು ನಿಯಂತ್ರಿಸಬಹುದು. ಆಟೋ ಸ್ವಿಚ್ ವೈಶಿಷ್ಟ್ಯವು ಗ್ಯಾಲಕ್ಸಿ ಸಾಧನಗಳ ನಡುವೆ ನಿರಂತರ ಸಂಪರ್ಕವನ್ನು ಖಚಿತಪಡಿಸುತ್ತದೆ.

ಭಾರತದಲ್ಲಿ ಹೊಸ Galaxy Buds3 FE ಇಯರ್‌ಬಡ್ಸ್ ಬಿಡುಗಡೆ: ಏನಿದೆ ವಿಶೇಷ?

AI ವೈಶಿಷ್ಟ್ಯಗಳು ಈ ಬಡ್ಸ್‌ಗಳ ಪ್ರಮುಖ ಹೈಲೈಟ್ ಆಗಿವೆ. Galaxy AI Interpreter ಮೂಲಕ ನೇರ ಭಾಷಾಂತರ ಸೌಲಭ್ಯ ಲಭ್ಯವಿದೆ. "Hey Google" ಆಜ್ಞೆಯ ಮೂಲಕ ಇಮೇಲ್ ಪರಿಶೀಲನೆ, ಸಂಗೀತ ಪ್ಲೇ ಅಥವಾ ಬೇರೆ ಕಾರ್ಯಗಳನ್ನು ಕೈಮುಕ್ತವಾಗಿ ಮಾಡಬಹುದು. ಲೈವ್ ಟ್ರಾನ್ಸ್ಲೇಶನ್ ಮತ್ತು ಪ್ಲೇಲಿಸ್ಟ್ ನಿಯಂತ್ರಣದಂತಹ ಸೇವೆಗಳು ಕೂಡ ಸುಲಭವಾಗಿ ಲಭ್ಯವಾಗುತ್ತವೆ. ಸೌಂಡ್ ಗುಣಮಟ್ಟದ ವಿಷಯದಲ್ಲಿ Buds3 FE ದೊಡ್ಡ ಸ್ಪೀಕರ್‌ನ್ನು ಹೊಂದಿದೆ. ಇದು ಗಾಢವಾದ ಬೇಸ್ ಹಾಗೂ ಸ್ಪಷ್ಟ ಟ್ರೆಬಲ್ ಒದಗಿಸುತ್ತದೆ.

ತಾಂತ್ರಿಕ ವಿವರಗಳಲ್ಲಿ, Galaxy Buds3 FE ಯಲ್ಲಿ ಒನ್-ವೇ ಡೈನಾಮಿಕ್ ಡ್ರೈವರ್ ಸ್ಪೀಕರ್, ಮೂರು ಮೈಕ್ರೋಫೋನ್ ವ್ಯವಸ್ಥೆ, ANC ಮತ್ತು ಅ್ಯಾಂಬಿಯಂಟ್ ಸೌಂಡ್ ಮೋಡ್ ಅಳವಡಿಸಲಾಗಿದೆ. ಬ್ಯಾಟರಿ ಸಾಮರ್ಥ್ಯವು 53mAh (ಇಯರ್‌ಬಡ್ಸ್) ಮತ್ತು 515mAh (ಕೇಸ್) ಆಗಿದೆ. Bluetooth 5.4, SSC, AAC ಮತ್ತು SBC ಕೋಡೆಕ್ ಬೆಂಬಲವಿದೆ. ಪ್ರಾಕ್ಸಿಮಿಟಿ, ಹಾಲ್, ಟಚ್ ಹಾಗೂ ಪ್ರೆಶರ್ ಸೆನ್ಸರ್‌ಗಳನ್ನು ಹೊಂದಿರುವ ಈ ಬಡ್ಸ್‌ಗಳು IP54 ಪ್ರಮಾಣಿತ ಧೂಳು-ನೀರು ಪ್ರತಿರೋಧ ಹೊಂದಿವೆ.

Galaxy Buds3 FE ಇಯರ್‌ಬಡ್ಸ್: ಬೆಲೆ ಎಷ್ಟು?
ಭಾರತದಲ್ಲಿ Galaxy Buds3 FE ಇಯರ್‌ಬಡ್ಸ್ ಸಾಧನದ ಬೆಲೆಯನ್ನು ₹12,999 ಎಂದು ನಿಗದಿ ಮಾಡಲಾಗಿದೆ. ಬ್ಲಾಕ್ ಮತ್ತು ವೈಟ್ ಬಣ್ಣಗಳಲ್ಲಿ Buds3 FE ಮುಂದಿನ ವಾರದಿಂದ ಖರೀದಿಗೆ ಲಭ್ಯವಾಗಲಿದೆ. ಇನ್ನು ಪ್ರಾರಂಭಿಕ ಆಫರ್‌ಗಳೂ ಕೂಡ ಗ್ರಾಹಕರನ್ನು ಸೆಳೆಯುವಂತಿವೆ. ಆಯ್ದ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳೊಂದಿಗೆ Buds3 FE ಖರೀದಿಸಿದರೆ ₹4,000 ಮೌಲ್ಯದ ಲಾಭ ದೊರೆಯಲಿದೆ. ಜೊತೆಗೆ, ₹3,000 ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ಅಪ್‌ಗ್ರೇಡ್ ಬೋನಸ್ ಸೌಲಭ್ಯವನ್ನು ಕಂಪನಿ ಘೋಷಿಸಿದೆ. ಹೆಚ್ಚುವರಿಯಾಗಿ, 12 ತಿಂಗಳವರೆಗೆ ಬಡ್ಡಿ ರಹಿತ EMI ಆಯ್ಕೆಯೂ ಲಭ್ಯವಾಗಲಿದೆ.

Best Mobiles in India

English summary
Samsung introduces its latest wireless earbuds Galaxy Buds3 FE in India with competitive pricing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+