ಮುಂದಿನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಒಳಗೆ ಬರಲಿದೆ Samsung Galaxy Watch FE ! ಬೆಲೆ, ಫೀಚರ್ಸ್ ತಿಳಿಯಿರಿ
ಟೆಕ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶೇಷ ಬೇಡಿಕೆಯನ್ನು ಹೊಂದಿದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಎಫ್‌ಇ (Samsung Galaxy Watch FE) ಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿವೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದು ಸ್ಯಾಮ್‌ಸಂಗ್‌ನ ಮೊದಲ ಫ್ಯಾನ್ ಆವೃತ್ತಿಯ ವಾಚ್ ಕೂಡ ಆಗಿರಲಿದೆ. ವದಂತಿಗಳು ಮತ್ತು ವರದಿಗಳ ಪ್ರಕಾರ ಮುಂಬರುವ ಗ್ಯಾಲಕ್ಸಿ ವಾಚ್‌ನಿಂದ ಏನನ್ನು ನಿರೀಕ್ಷಿಸಬಹುದು ಎಂಬ ಕಲ್ಪನೆಯನ್ನು ಈಗಾಗಲೇ ನಮಗೆ ನೀಡಿವೆ. ಹಾಗಾದ್ರೆ ಈಗ ಲಭ್ಯವಿರು ಮಾಹಿತಿ ಪ್ರಕಾರ ಈ ವಾಚ್ ಕುರಿತಾದ ಹೆಚ್ಚುವರಿ ಮಾಹಿತಿ ತಿಳಿಯೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಎಫ್‌ಇ ಬಿಡುಗಡೆ ಕುರಿತು ಹಲವಾರು ದಿನಗಳಿಂದ ಚರ್ಚೆಗಳು ನಡೆಯುತ್ತಲೇ ಬಂದಿದ್ದು, ಇದು ಸ್ಯಾಮ್‌ಸಂಗ್‌ನ ಮೊದಲ ಫ್ಯಾನ್ ಆವೃತ್ತಿ ವಾಚ್ ಆಗಿರಲಿದೆ. ಮುಂಬರುವ ಗ್ಯಾಲಕ್ಸಿ ವಾಚ್‌ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ವದಂತಿಗಳು ಮತ್ತು ವರದಿಗಳು ನಮಗೆ ಒಂದು ಕಲ್ಪನೆಯನ್ನು ನೀಡಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಎಫ್‌ಇ ವಾಚ್ ಇತ್ತೀಚೆಗೆ ಅಮೆಜಾನ್ ಇಟಲಿಯ ವೆಬ್‌ಸೈಟ್‌ನಲ್ಲಿ ಅದರ ಬೆಲೆಯನ್ನು ತಿಳಿಸಿತ್ತು. ಇದೀಗ ಬಂದಿರುವ ವರದಿಯು ಈ ವಾಚ್‌ನ ಬಿಡುಗಡೆಯ ದಿನಾಂವನ್ನು ಬಹಿರಂಗಪಡಿಸಿದೆ. ಟಿಪ್‌ಸ್ಟರ್‌ನ ಮಿಸ್ಟರಿ ಲುಪಿನ್ ಪ್ರಕಾರ, Samsung Galaxy Watch FE ಜೂನ್ 24 ರಂದು ಬಿಡುಗಡೆಯಾಗಲಿದೆ. ಇದು ಸ್ಯಾಮ್‌ಸಂಗ್‌ನ ಮುಂದಿನ ಗ್ಯಾಲಕ್ಸಿ ಅನ್‌ಪ್ಯಾಕಡ್ ಈವೆಂಟ್‌ಗಿಂತ ಕೆಲವು ವಾರಗಳ ಮೊದಲೇ ಬಿಡುಗಡೆಯಾಗಲಿದೆ ಎಂದು ಸೂಚಿಸಿದೆ.
Samsung Galaxy Watch FE ನಿರೀಕ್ಷಿತ ಬೆಲೆ ಮತ್ತು ಫೀಚರ್ಸ್:
ಅಮೇಜಾನ್ ಪಟ್ಟಿಯ ಪ್ರಕಾರ, ಈ ವಾಚ್ ಸುಮಾರು 17,862 ರೂ. ಗಳು ಇರಲಿದ ಎಂದು ತಲೀಸಿದೆ. ಈ ವಾಚ್ ಕಪ್ಪು, ಸಿಲ್ವರ್ ಮತ್ತು ಗೋಲ್ಡ್ ರೋಸ್ ಬಣ್ಣದ ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಫೀಚರ್ಸ್‌ಗಳ ವಿಷಯದಲ್ಲಿ ಇದು 396 x 396 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 1.2 ಇಂಚಿನ ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆಯಿದೆ.
ಇದು 1.5GB RAM ಮತ್ತು 16GB ಸ್ಟೋರೇಜ್ ಸಂಗ್ರಹಣೆ ಸಾಮರ್ಥ್ಯದೊಂದಿದೆ ಜೋಡಿಸಲಾದ ಇನ್ ಹೌಸ್ Exynos W920 ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಸಾಫ್ಟ್‌ವೇರ್ ಮುಂಭಾಗದಲ್ಲಿ, ವಾಚ್ ವೇರ್ ಓಎಸ್ ಆಧಾರಿತ ಒನ್ ಯುಐ 5.0 ವಾಚ್‌ನೊಂದಿಗೆ ರವಾನಿಸಬಹುದು. ಗ್ಯಾಲಕ್ಸಿ ವಾಚ್ FE 247 mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಇದು ಸುಮಾರು 30 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುದ ಸಾಧ್ಯತೆಗಳಿವೆ. ಗ್ಯಾಲಕ್ಸಿ ವಾಚ್ FE ಅಕ್ಸೆಲೆರೊಮೀಟರ್, ಬಾರೋಮೀಟರ್, ಬಯೋ ಇಂಪೆಡೆನ್ಸ್ ವಿಶ್ಲೇಷಣೆ, ECG ಸೆನ್ಸಾರ್, ಗೈರೊಸ್ಕೋಪ್, ಬ್ರೈಟ್‌ನೆಸ್ ಸೆನ್ಸಾರ್, ಹೃದಯ ಬಡಿತ ಮಾನಿಟರಿಂಗ್ ಸೆನ್ಸಾರ್ ಮತ್ತು ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸುವ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ, ಬ್ರ್ಯಾಂಡ್ ತನ್ನ ಮುಂದಿನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಅನ್ನು ಜುಲೈ 10 ರಂದು ಹೋಸ್ಟ್ ಮಾಡುವ ನಿರೀಕ್ಷೆಯಿ. ಅಲ್ಲಿ ಅದು ಹೊಸ ತಲೆಮಾರಿನ ಫೋಲ್ಡಬಲ್ ಫೋನ್‌ಗಳು, ಗ್ಯಾಲಕ್ಸಿ ವಾಚ್ 7, ವಾಚ್ 7 ಅಲ್ಟ್ರಾ ಮತ್ತು ಇನ್ನೂ ಹೆಚ್ಚಿನದನ್ನು ಘೋಷಿಸಬಹುದು. Galaxy Unpacked ಈವೆಂಟ್‌ನಲ್ಲಿ Galaxy Watch FE ಅನ್ನು ಪ್ರಾರಂಭಿಸಲಾಗುವುದು ಎಂದು ಆಲ್ವಿನ್ ಎಂಬ ಟಿಪ್‌ಸ್ಟರ್ ಹೇಳಿದ್ದಾರೆ ಎಂಬುದನ್ನು ಗಮನಿಸಬಹುದಾಗಿದೆ. ಆದರೆ ಸ್ಯಾಮ್‌ಸಂಗ್ ಈ ವಾಚ್ ಬಿಡುಗಡೆ ಕುರಿತು ಅಧಿಕೃತವಾಗಿ ಇನ್ನೂ ಯಾವುದೇ ಮಾಹಿತಿಯನ್ನೂ ಬಿಡುಗಡೆ ಮಾಡಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.


Click it and Unblock the Notifications








