Samsung: ಎರಡು ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ: ಬೆಲೆ ತಿಳಿದ್ರೆ, ನೀವು ಹುಬ್ಬೇರಿಸ್ತೀರಾ! ಜು.24ಕ್ಕೆ ಸೇಲ್
ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್-2024 ರಲ್ಲಿ ರಿಂಗ್ ಇನ್ ಸ್ಮಾರ್ಟ್‌ಫೋನ್ ಜೊತೆಗೆ ಎರಡು ಹೊಸ ಸ್ಮಾರ್ಟ್ ವಾಚ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಈ ವಾಚ್‌ಗಳಿಗಾಗಿ ಗ್ರಾಹಕರು ಕಳೆದ ಹಲವು ತಿಂಗಳಿನಿಂದ ಕಾಯುತ್ತಿದ್ದರು. ಈ ಇತ್ತೀಚಿನ ವಾಚ್‌ಗಳನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ (Samsung Galaxy Watch Ultra) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 (Samsung Galaxy Watch 7) ಹೆಸರಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ಸ್ಮಾರ್ಟ್‌ವಾಚ್‌ಗಳನ್ನು Galaxy AIನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಟೆಕ್ ದೈತ್ಯ ಗ್ಯಾಲಕ್ಸಿ ವಾಚ್ ಸರಣಿಯಲ್ಲಿ ಮೊದಲ ಬಾರಿಗೆ ಅಲ್ಟ್ರಾ ಮಾದರಿಯನ್ನು ಪರಿಚಯಿಸಿದೆ. ಇದು ಹಿಂದಿನ ವರ್ಷದ ಮಾಡೆಲ್‌ಗಳಿಂದ ಕ್ಲಾಸಿಕ್ ರೂಪಾಂತರವನ್ನು ಕೈಬಿಟ್ಟಿದೆ. ಈ ಗಡಿಯಾರದಲ್ಲಿ ಬೇಸ್ ಗ್ಯಾಲಕ್ಸಿ ವಾಚ್ 7 40 ಮಿಮೀ ಮತ್ತು 44 ಮಿಮೀ ಡಯಲ್‌ಗಳಲ್ಲಿ ಲಭ್ಯವಿದೆ. ವಾಚ್ ಅಲ್ಟ್ರಾ 47 ಮಿಮೀ ಡಯಲ್‌ನಲ್ಲಿ ಲಭ್ಯವಿದೆ. Galaxy Watch 7 100ಕ್ಕೂ ಹೆಚ್ಚು ವ್ಯಾಯಾಮಗಳನ್ನು ಟ್ರ್ಯಾಕ್ ಮಾಡುತ್ತದೆ. ಈ ಎರಡೂ ಸ್ಮಾರ್ಟ್‌ವಾಚ್‌ಗಳು LTE ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಬೆಂಬಲಿಸುತ್ತವೆ.

Galaxy Watch 7, Galaxy Watch Ultra ಬೆಲೆ ಎಷ್ಟು?
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7ನ ಬೆಲೆ ಸುಮಾರು 25,000 ರೂ.ನಿಂದ ($299) ಪ್ರಾರಂಭವಾಗುತ್ತದೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ ಸುಮಾರು 54,200 ರೂ. ($649) ಬೆಲೆಯಲ್ಲಿ ಲಭ್ಯವಾಗಲಿದೆ. ಎರಡೂ ಸ್ಮಾರ್ಟ್‌ವಾಚ್‌ಗಳು ಜುಲೈ 10ರಿಂದ ಆಯ್ದ ಮಾರುಕಟ್ಟೆಗಳಲ್ಲಿ ಮುಂಗಡ ಬುಕ್ಕಿಂಗ್‌ಗೆ ಲಭ್ಯವಿರುತ್ತವೆ. ಜುಲೈ 24 ರಿಂದ ಅಧಿಕೃತವಾಗಿ ಮಾರಾಟವಾಗಲಿದೆ.
40 ಮಿಮೀ ಗ್ಯಾಲಕ್ಸಿ ವಾಚ್ 7 ಕ್ರೀಮ್ ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಆದರೆ, 44 ಮಿಮೀ ಮಾದರಿಯನ್ನು ಹಸಿರು ಬಣ್ಣದಲ್ಲಿ ಖರೀದಿಸಬಹುದು. ಮತ್ತು ಬೆಳ್ಳಿಯ ಬಣ್ಣದ ಆಯ್ಕೆಯೂ ಇದೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ, 47 ಮಿಮೀ ಡಯಲ್‌ನಲ್ಲಿ ಲಭ್ಯವಿದೆ. ಟೈಟಾನಿಯಂ ಗ್ರೇ, ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ವೈಟ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
Samsung Galaxy Watch 7 ವಿಶೇಷತೆಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 ಎರಡು ಡಯಲ್ ಗಾತ್ರಗಳಲ್ಲಿ ಲಭ್ಯವಿದೆ. 40ಮಿಮೀ ಡಯಲ್ 40.4x40.4x9.7ಮಿಮೀ ಅಳತೆಯೊಂದಿಗೆ ಬರುತ್ತದೆ. ಮತ್ತು 28.8 ಗ್ರಾಂ ತೂಕವಿದೆ. 44ಮಿಮೀ ಡಯಲ್ 44.4x44.4x9.7ಮಿಮೀ ಅಳತೆ ಮತ್ತು 33.8 ಗ್ರಾಂ ತೂಕವಿದೆ. ಚಿಕ್ಕ ಡಯಲ್ 1.3 ಇಂಚಿನ (432x432 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿದೆ. ದೊಡ್ಡ ಡಯಲ್ 1.5 ಇಂಚಿನ (480x480 ಪಿಕ್ಸೆಲ್‌ಗಳು) ಡಿಸ್ಲ್ಪೇಯನ್ನು ಹೊಂದಿದೆ. ಈ ಎರಡೂ ಸೂಪರ್ AMOLED ಡಿಸ್ಪ್ಲೇಗಳು ಯಾವಾಗಲೂ ಆನ್ ಆಗಿರುತ್ತವೆ.
ಈ ಸ್ಮಾರ್ಟ್‌ವಾಚ್ 3nm Exynos W1000 ಪ್ರೊಸೆಸರ್, 2GB RAM ಮತ್ತು 32GB ಸ್ಟೋರೇಜ್ ಹೊಂದಿದೆ. ಇದೇ ಮೊದಲು ಗ್ಯಾಲಕ್ಸಿ ವಾಚ್ ಶ್ರೇಣಿಯಲ್ಲಿ ಸ್ಯಾಮ್‌ಸಂಗ್ 3nm ಪ್ರೊಸೆಸರ್‌ಗಳನ್ನು ಬಳಸುತ್ತಿದೆ. ಇದು Googleನ Wear OS ಆಧಾರಿತ One UI 6 ವಾಚ್ ಅನ್ನು ರನ್ ಮಾಡುತ್ತವೆ. 40ಮೀಮೀ ರೂಪಾಂತರವು 300mAh ಬ್ಯಾಟರಿಯನ್ನು ಹೊಂದಿದೆ. 44ಮೀಮಿ ಮಾದರಿಯು 425mAh ಬ್ಯಾಟರಿಯನ್ನು ಪಡೆದಿದೆ. ಈ ಎರಡೂ WPC ಆಧಾರಿತ ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.
Samsung Galaxy Watch Ultra ವಿಶೇಷತೆಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ 47ಮೀಮೀ ಡಯಲ್‌ನಲ್ಲಿ ಲಭ್ಯವಿದೆ.ಇಅದು 47.1x47.4x12.1ಮೀಮೀ ಅಳತೆ ಮತ್ತು 60.5 ಗ್ರಾಂ ತೂಕ ಹೊಂದಿದೆ. ಇದು ಟೈಟಾನಿಯಂ ದರ್ಜೆಯ ಫ್ರೇಮ್‌ನೊಂದಿಗೆ ಬರುತ್ತದೆ. 1.5 ಇಂಚಿನ (480x480 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್‌ಪ್ಲೇ, 3000 ನಿಟ್‌ಗಳ ಬ್ರೈಟ್‌ನೆಸ್ ಹೊಂದಿದೆ.
ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್ 7ನಂತೆಯೇ ಅದೇ ಪ್ರೊಸೆಸರ್, ಸ್ಟೋರೇಜ್ ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದು 10ATM ನೀರು ನಿರೋಧಕವಾಗಿದೆ. ಈ ವಾಚ್ 590mAh ಬ್ಯಾಟರಿಯೊಂದಿಗೆ WPC ಆಧಾರಿತ ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಬ್ಯಾಟರಿಯು ವಿದ್ಯುತ್ ಉಳಿಸುವ ಮೋಡ್‌ನಲ್ಲಿ 100 ಗಂಟೆಗಳವರೆಗೆ ಮತ್ತು ವ್ಯಾಯಾಮದ ವಿದ್ಯುತ್ ಉಳಿತಾಯ ಮೋಡ್‌ನಲ್ಲಿ 48 ಗಂಟೆಗಳವರೆಗೆ ಬಾಳಿಕೆ ಬರಲಿದೆ.
ಆರೋಗ್ಯ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್
Galaxy Watch 7 ಮತ್ತು Galaxy Watch Ultra ಎರಡನ್ನೂ ಆರೋಗ್ಯ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್ ಅನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಎರಡೂ ಮಾದರಿಗಳಲ್ಲಿ ಹೈ ಬಯೋಆಕ್ಟಿವ್ ಸಂವೇದಕವನ್ನು ಒದಗಿಸಲಾಗಿದೆ. ಇದು ಹೃದಯ ಬಡಿತ, ರಕ್ತದ ಆಮ್ಲಜನಕ ಮತ್ತು ನಿದ್ರೆಯಂತಹ ನಿರ್ದಿಷ್ಟ ಆರೋಗ್ಯ ಮೆಟ್ರಿಕ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಹೆಚ್ಚುವರಿಯಾಗಿ, ಗ್ಯಾಲಕ್ಸಿ ವಾಚ್ ಅಲ್ಟ್ರಾ ಹೊಸ ಮಲ್ಟಿ ಸ್ಪೋರ್ಟ್ಸ್ ಟೈಲ್‌ನೊಂದಿಗೆ ಬರುತ್ತದೆ.


Click it and Unblock the Notifications








