ಶಿಯೋಮಿಗೆ ಸೆಡ್ಡು: ಸ್ಯಾಮ್‌ಸಂಗ್‌ನಿಂದ ಏರ್‌ಪ್ಯೂರಿಫೈರ್ ಲಾಂಚ್
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಮೂಲಕ ಸದ್ದು ಮಾಡುತ್ತಿರುವ ಚೀನಾದ ಶಿಯೀಮಿ ಕಂಪನಿಯೂ ಏರ್‌ಪ್ಯೂರಿಫೈರ್ ಬಿಡುಗಡೆ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಇದಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಸ್ಯಾಮ್‌ಸಂಗ್‌ನಿಂದ ಏರ್‌ಪ್ಯೂರಿಫೈರ್ ಲಾಂಚ್ ಮಾಡಿದೆ ಎನ್ನಲಾಗಿದೆ.

ಓದಿರಿ: ಒಲಾದಿಂದ ಕೇವಲ ರೂ. 5ಕ್ಕೆ ಹೊಸ ಸೇವೆ...!
ಆದರೆ ಶಿಯೋಮಿ ಅತೀ ಕಡಿಮೆ ಬೆಲೆಗೆ ಏರ್‌ಪ್ಯೂರಿಫೈರ್ ಲಾಂಚ್ ಮಾಡಿದೆ. ಸ್ಯಾಮ್ ಸಂಗ್ ಇದಕ್ಕೆ ವಿರುದ್ಧವಾಗಿ ದುಬಾರಿ ಬೆಲೆಗೆ ಪ್ರೀಮಿಯಮ್ ಏರ್‌ಪ್ಯೂರಿಫೈರ್ ಮತ್ತೊಂದು ಬಜೆಟ್ ಬೆಲೆಯಲ್ಲಿ ಲಾಂಚ್ ಮಾಡಿದೆ. ಒಟ್ಟು ಎರಡು ಮಾದರಿಯ ಏರ್‌ಪ್ಯೂರಿಫೈರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

AX7000 ಮತ್ತು AX3000 ಏರ್‌ಪ್ಯೂರಿಫೈರ್:
ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದು, ಇದಕ್ಕೇ ಹೊಸ ಸೇರ್ಪಡೆ ಏರ್‌ಪ್ಯೂರಿಫೈರ್. ಒಟ್ಟು ಎರಡು ಮಾದರಿಯಲ್ಲಿ ಏರ್‌ಪ್ಯೂರಿಫೈರ್‌ಗಳನ್ನು ಬಿಡುಗಡೆ ಮಾಡಿದೆ. ಒಂದು ಬಜೆಟ್ ಬೆಲೆಯಲ್ಲಿ AX3000 ಏರ್‌ಪ್ಯೂರಿಫೈರ್. ಹಾಗಾಗೇ ಪ್ರೀಮಿಮಯ್ ಬೆಲೆಯಲ್ಲಿ AX7000 ಏರ್‌ಪ್ಯೂರಿಫೈರ್ ಲಾಂಚ್ ಮಾಡಿದೆ.

ವಿಶೇಷೆತೆಗಳು:
ವಾತಾವರಣದಲ್ಲಿ ಇರುವ ಕ್ರಿಮಿಗಳನ್ನು ಹಾಗೂ ಹಾನಿಕಾರಕ ಅನಿಲಗನ್ನು ಹಿರಿಕೊಂಡು ಉತ್ತಮವಾದ ವಾಯುವನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ಕಾರ್ಯವನ್ನು ಮಾಡಲಿದೆ. AX7000 ಏರ್‌ಪ್ಯೂರಿಫೈರ್ ಡೊಡ್ಡ ಗಾತ್ರದಲ್ಲಿದೆ ಇದೆ ಮಾದರಿಯಲ್ಲಿ AX3000 ಏರ್‌ಪ್ಯೂರಿಫೈರ್ ಚಿಕ್ಕ ಗಾತ್ರದಲ್ಲಿದೆ ಎನ್ನಲಾಗಿದೆ.

ಬೆಲೆಗಳು:
AX3000 ಏರ್‌ಪ್ಯೂರಿಫೈರ್ ರೂ. 15,490ಕ್ಕೆ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ AX7000 ಏರ್‌ಪ್ಯೂರಿಫೈರ್ ರೂ.41,990ಕ್ಕೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಎರಡು ಏರ್‌ಪ್ಯೂರಿಫೈರ್‌ಗಳು ಲಬ್ಯವಿದೆ ಎನ್ನಲಾಗಿದೆ.


Click it and Unblock the Notifications








