ನಾಯಿಗಳು ಈ ತಂತ್ರಜ್ಞಾನದ ಸಹಾಯದಿಂದ ಮಾತನಾಡಬಹುದು...!
ತಂತ್ರಜ್ಞಾನ ಎನ್ನುವುದು ಇಂದು ತೀರಾ ಮುಂದುವರೆದಿದ್ದು, ಹೊಸ ಹೊಸ ಆವಿಷ್ಕಾರಗಳು ಜನರ ನಿತ್ಯ ಜೀವನವನ್ನು ಸುಗಮಗೊಳಿಸುತ್ತಿದೆ. ಇದೇ ಮಾದರಿಯಲ್ಲಿ ಅಮೆರಿಕಾದ ವಿಜ್ಞಾನಿಗಳು ಹೊಸದೊಂದು ಆವಿಷ್ಕಾರಕ್ಕೆ ಮುಂದಾಗಿದ್ದು, ಇದು ನಾಯಿ ಪ್ರಿಯರಿಗೆ ಸಂತಸದ ವಿಚಾರವಾಗಿದೆ ಎನ್ನಲಾಗಿದೆ. ಸದ್ಯ ವಿಜ್ಞಾನಿಗಳು ಕೃತಕ ಬುದ್ದಿ ಮತ್ತೆಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಇದು ನಿಮ್ಮ ನೆಚ್ಚಿನ ನಾಯಿ ಬೊಗಳುವುದನ್ನು ಕೇಳಿಸಿಕೊಂಡು ಸಾಮಾನ್ಯ ಮನುಷ್ಯರು ಮಾತನಾಡು ರೀತಿಯಲ್ಲಿ ಪರಿವರ್ತಿಸಲಿದೆ ಎನ್ನಲಾಗಿದೆ.

ನಾಯಿಗಳು ಸಹ ತಮ್ಮ ಬೋಗಳುವಿಕೆಯಲ್ಲಿಯೇ ಹಲವರು ಭಾವನೆಗಳನ್ನು, ಮಾತುಗಳುಗಳನ್ನು ಹೊರಡಿಸುತ್ತವೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಗಮನಿಸಿ ಅದನ್ನು ನಮ್ಮ ಭಾಷೆಗೆ ವರ್ಗಾಹಿಸುವ ಕಾರ್ಯವನ್ನು ಮಾಡುವಂತಹ ಕೃತಕ ಬುದ್ಧಿ ಮತ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನಲಾಗಿದೆ.
ಇದಕ್ಕಾಗಿಯೇ ಪ್ರಾಣಿಗಳ ಹಾವಭಾವಗಳನ್ನು ಸುಮಾರು 30 ವರ್ಷಗಳಿಂದ ಸಂಗ್ರಹಿಸುತ್ತಿದ್ದು, ಇದರ ಆಧಾರದ ಮೇಲೆ ಕೃತಕ ಬುದ್ಧಿ ಮತ್ತೆಯನ್ನು ವಿನ್ಯಾಸ ಮಾಡಲಾಗುತ್ತಿದೆ. ಹೇಗೆ ನಾಯಿಗಳು ವಿವಿಧ ಭಾವಗಳಿಂದ ಸಂವಾಹನ ನಡೆಸಲು ಮುಂದಾಗುತ್ತವೆ ಎನ್ನುವುದನ್ನು ಈ ಕೃತಕ ಬುದ್ಧಿ ಮತ್ತೆಯೂ ತಿಳಿದುಕೊಂಡು ಅದನ್ನು ನಮಗೆ ಅರ್ಥವಾಗುವಂತಹ ಸಿಂಪಲ್ ಇಂಗ್ಲಿಷ್ ನಲ್ಲಿ ತಿಳಿಸಲಿದೆ.
ಈಗಾಗಲೇ ತುಂಬ ಮಂದಿ ತಮ್ಮ ಸಾಕು ನಾಯಿಗಳನ್ನು ತಮ್ಮ ಕುಟುಂಬಸ್ಥರಿಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಂಡಿರುತ್ತಾರೆ. ಅವರಿಗೆ ಈ ಸೌಲಭ್ಯವು ತಮ್ಮ ನಾಯಿಗಳ ಮಾತನ್ನು ಕೇಳುವಂತೆ ಮಾಡಲಿದೆ. ಹೊಸ ಮಾದರಿಯ ಕೃತಕ ಬುದ್ಧಿ ಮತ್ತೆಯಿಂದ ಸಾಕಷ್ಟು ನೆರವಾಗಲಿದೆ.
ಮಾಲೀಕರ ರಕ್ಷಣೆ ಇರುವ ನಾಯಿಗಳು ಮತ್ತು ಸೆಕ್ಯೂರಿಗೆ ಇರುವ ಪೊಲೀಸ್ ನಾಯಿಗಳು ಸಹ ಏನು ಹೇಳುತ್ತವೆ ಎನ್ನುವುದನ್ನು ಕೇಳಿಸಿಕೊಳ್ಳಲು ಈ ಕೃತಕ ಬುದ್ಧಿ ಮತ್ತೆಯೂ ಸಹಾಯವನ್ನು ಮಾಡಲಿದೆ. ಇದಲ್ಲದೇ ಇದೇ ಮಾದರಿಯಲ್ಲಿ ಬೆಕ್ಕುಗಳು ಏನು ಹೇಳುತ್ತಿವೆ ಎನ್ನುವುದನ್ನು ಕೇಳಿಸಿಕೊಂಡು ಟ್ರಾನ್ಸ್ ಲೇಟ್ ಮಾಡುವ ಕೃತಕ ಬುದ್ಧಿ ಮತ್ತೆಯೂ ಶೀಘ್ರವೇ ಮಾರುಕಟ್ಟೆಗೆ ಬರಲಿದೆ.


Click it and Unblock the Notifications








