Home
Gadgets

ಮೊಬೈಲ್ ಫೋಟೊಗ್ರಫಿಗೆ ಹೊಸ ಸಾಧ್ಯತೆ ಈ "ಮಾಡ್ಯುಲರ್ ಗ್ರಿಪ್ ಎಚ್1"!!..ಏಕೆ ಗೊತ್ತಾ?

ಸ್ಮಾರ್ಟ್‌ಫೋನ್‌ ಕ್ಯಾಮೆರಾ ತಂತ್ರಜ್ಞಾನವು ಇಂತಹ ನೂತನ ಹೆಜ್ಜೆಗಳಿಗೆ ದಾರಿಯಾಗುತ್ತಿದ್ದು, ಭವಿಷ್ಯದ ಫೋಟೊಗ್ರಫಿ ಸ್ಮಾರ್ಟ್‌ಫೋನ್‌ಗಳಲ್ಲಿದೆ ಎನ್ನಬಹುದು.!!

By Bhaskar N J

ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾ ತಂತ್ರಜ್ಞಾನ ನಮ್ಮ ಕಲ್ಪನೆಗೂ ಮೀರಿ ಬೆಳೆಯುತ್ತಿದ್ದು, ಫೋಟೊಗ್ರಫಿ ಉಪಕರಣಗಳಲ್ಲಿ ಕೂಡ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ.! ಸ್ಮಾರ್ಟ್‌ಫೋನ್‌ ಕ್ಯಾಮೆರಾ ತಂತ್ರಜ್ಞಾನವು ಇಂತಹ ನೂತನ ಹೆಜ್ಜೆಗಳಿಗೆ ದಾರಿಯಾಗುತ್ತಿದ್ದು, ಭವಿಷ್ಯದ ಫೋಟೊಗ್ರಫಿ ಸ್ಮಾರ್ಟ್‌ಫೋನ್‌ಗಳಲ್ಲಿದೆ ಎನ್ನಬಹುದು.!!

ಹೌದು, ಫೋನ್‌ಗಳಲ್ಲಿ ಕ್ಯಾಮೆರಾ ತಂತ್ರಜ್ಞಾನ ಅಗಾದವಾಗಿ ಬೆಳೆದ ನಂತರ ಬಾರ್ಸಿಲೋನಾದ 'ಶೋಲ್ಡರ್ ಪಾಡ್' ಎಂಬ ಕಂಪೆನಿಯೊಂದು ಮೊಬೈಲ್ ಮೂಲಕ ಫೋಟೊಗ್ರಫಿ ಮಾಡುವವರಿಗೆ ಅನುಕೂಲವಾಗಲೆಂದು ಉಪಕರಣಗಳನ್ನು ವಿನ್ಯಾಸ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿದೆ.!!

ಮೊಬೈಲ್ ಫೋಟೊಗ್ರಫಿ ಮಾಡುವವರೂ ವೃತ್ತಿಪರ ಕ್ಯಾಮೆರಾಗಳಲ್ಲಿರುವ ಗುಣಮಟ್ಟ ಪಡೆಯಬೇಕೆಂಬ ಉದ್ದೇಶ ಹೊಂದಿರುವ ಈ ಸಂಸ್ಥೆ ಇತ್ತಿಚೀನ ವರ್ಷಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದು, ಈ ಪ್ರಯೋಗದ 'ಮಾಡ್ಯುಲರ್ ಸ್ಮಾರ್ಟ್‌ಫೋನ್ ಗ್ರಿಪ್ ಎಚ್ 1' ಎಂಬ ಉಪಕರಣ ಬಗ್ಗೆ ನೀವು ತಿಳಿಯಲೇಬೇಕಿದೆ.!!

ಏನಿದು ಮಾಡ್ಯುಲರ್ ಸ್ಮಾರ್ಟ್‌ಫೋನ್ ಗ್ರಿಪ್ ಎಚ್ 1?

ಏನಿದು ಮಾಡ್ಯುಲರ್ ಸ್ಮಾರ್ಟ್‌ಫೋನ್ ಗ್ರಿಪ್ ಎಚ್ 1?

ಸ್ಮಾರ್ಟ್‌ಫೋನ್ ಮೂಲಕ ಫೋಟೊಗ್ರಫಿ ಮಾಡುವಾಗ ಮೊಬೈಲ್ ಮೇಲಿನ ಹಿಡಿತ ತಪ್ಪದಿರಲು ಈ ಮಾಡ್ಯುಲರ್ ಗ್ರಿಪ್ ಅನ್ನು ಬಳಸಲಾಗುತ್ತದೆ. ಏನನ್ನಾದರೂ ಚಿತ್ರೀಕರಿಸುವಾಗ ಸೆರೆಹಿಡಿಯುವ ದೃಶ್ಯದ ಗುಣಮಟ್ಟ ಕೈ ಚಲನೆಯಿಂದ ಹಾಳಾಗದಂತೆ ರಕ್ಷಿಸುವ ಕೆಲಸವನ್ನು ಈ ಉಪಕರಣ ಮಾಡುತ್ತದೆ.!!

ಸಿನಿಮಾ ಚಿತ್ರೀಕರಿಸಬಹುದು!!

ಸಿನಿಮಾ ಚಿತ್ರೀಕರಿಸಬಹುದು!!

‘ಮಾಡ್ಯುಲರ್ ಸ್ಮಾರ್ಟ್‌ಫೋನ್ ಗ್ರಿಪ್ ಎಚ್ 1' ಒಂದು ಅತ್ಯುತ್ತಮ ಉಪಕರಣವಾಗಿದ್ದು, ಮೊಬೈಲ್ ಮೂಲಕ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸುವಾಗ ಅನೇಕ ಉಪಕರಣಗಳ ಅವಶ್ಯಕತೆಯಿರುತ್ತದೆ. ಅಂತಹ ಭಿನ್ನ ಉಪಕರಣಗಳನ್ನು ಒಂದೆಡೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಈ ಮಾಡ್ಯುಲರ್ ಅನ್ನು ವಿನ್ಯಾಸಗೊಳಿಸಲಾಗಿದೆ.!!

ಫ್ಲ್ಯಾಶ್ ಲೈಟ್ ಬಳಸಬಹುದು!!

ಫ್ಲ್ಯಾಶ್ ಲೈಟ್ ಬಳಸಬಹುದು!!

ಮೊಬೈಲ್ ಮೂಲಕ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸುವಾಗ ಶಬ್ದವನ್ನು ಸೆರೆಹಿಡಿಯಲು ಬಳಕೆಯಾಗುವ ಮೈಕ್ರೊಫೋನ್ ಹಾಗೂ ಬೆಳಕನ್ನು ಹೆಚ್ಚಿಸಲು ಫ್ಲ್ಯಾಶ್ ಲೈಟ್‌ಗಳನ್ನು ಹ್ಯಾಂಡಲ್‌ಗಳ ಮೂಲಕ ಅಡ್ಜೆಸ್ ಮಾಡಿಕೊಳ್ಳುವಂತೆ ಸ್ಮಾರ್ಟ್‌ಫೋನ್ ಗ್ರಿಪ್ ಎಚ್ 1 ಅನ್ನು ವಿನ್ಯಾಸ ಮಾಡಲಾಗಿದೆ.

ಕಿಟ್ ಸಹ ಲಭ್ಯವಿದೆ.!!

ಕಿಟ್ ಸಹ ಲಭ್ಯವಿದೆ.!!

ಸ್ಮಾರ್ಟ್‌ಫೋನ್‌ಗಳನ್ನು ಸುರಕ್ಷಿತವಾಗಿ ಹ್ಯಾಂಡಲ್‌ಗಳಿಗೆ ಅಳವಡಿಸಿ ಹಿಡಿತ ಸಾಧಿಸಲು ‘ಡಬ್ಲ್ಯು 1 ರಿಸ್ಟ್ ಸ್ಟ್ರ್ಯಾಪ್' ಎಂಬ ಚಿಕ್ಕ ಬೆಲ್ಟ್ ಅನ್ನು ಈ ಕಿಟ್‌ನಲ್ಲಿ ನೀಡಲಾಗಿದೆ. ಇವುಗಳೆಲ್ಲವನ್ನೂ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ‘ಜೆಡ್ 1 ಕೊಲ್ಡ್ ಶೂ' ಎಂಬ ಅಳವಡಿಕೆಯು ಇದರಲ್ಲಿದ್ದು, ಸ್ಮಾರ್ಟ್‌ಫೋನ್ ಮತ್ತು ಗ್ರಿಪ್ ಎಚ್ 1 ಸುರಕ್ಷತೆ ಬಗ್ಗೆ ಚಿಂತಿಸಬೇಕಿಲ್ಲ.!!

ಕಡಿಮೆ ಬೆಲೆಯಲ್ಲಿ ಎಲ್ಲವೂ ನಡೆಯುತ್ತದೆ!!

ಕಡಿಮೆ ಬೆಲೆಯಲ್ಲಿ ಎಲ್ಲವೂ ನಡೆಯುತ್ತದೆ!!

ಮೊದಲೆಲ್ಲಾ ಒಂದು ಸಿನಿಮಾ ಚಿತ್ರೀಕರಿಸಲು ಬೇಕಾಗಿದ್ದ ಕ್ಯಾಮೆರಾ ಬೆಲೆಯೇ ಕೋಟಿ ರೂಗಳಿಷ್ಟು. ಆದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲರೂ ಫೋಟೊಗ್ರಫಿಗೆ ಕಾಲಿಡಲು ಈ ಸಾಧನ ಪ್ರೇರಕವಾಗಿದೆ. ಈಗಾಗಲೇ ಹಲವು ಮಾಧ್ಯಮಗಳು ಈ ಮಾಡ್ಯುಲರ್ ಅನ್ನು ಬಳಸಲು ಆರಂಭಿಸಿವೆ.!!

Best Mobiles in India

English summary
Shoulderpod makes it easy to add accessories to smartphone shooting in custom configured ways.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+