ಪ್ರೇಮಿಗಳ ದಿನಕ್ಕೆ ನಿಮ್ಮ ಪ್ರೇಮಿಗೆ ಈ ಉಡುಗೊರೆಗಳನ್ನು ನೀಡಬಹುದು
ವ್ಯಾಲೆಂಟೈನ್ ಡೇ ಹತ್ತಿರ ಬಂತು. ಈ ಸುಂದರ ಸಂದರ್ಬದಲ್ಲಿ ಪ್ರೇಮಿಗಳು ಪಕ್ಷಿಗಳಂತೆ ಪ್ರಣಯಿಸೋ ಸಮಯ. ಗಿಫ್ಟ್ ಗಳಿಗೆ ಈ ಸಮಯದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿರುತ್ತದೆ. ಈಗಿನ ಜಮಾನದಲ್ಲಿ ಗಿಫ್ಟ್ ಅಂದರೆ ಗೆಡ್ಜೆಟ್ ಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಯಾವ ಗಿಫ್ಟ್ ಕೊಟ್ಟು ನಿಮ್ಮ ಹುಡುಗಿಯನ್ನು ಅಥವಾ ಹುಡುಗನನ್ನು ಇಂಪ್ರೆಸ್ ಮಾಡಬಹುದು ಎಂದು ನೀವು ಆಲೋಚಿಸುತ್ತಿದ್ದರೆ ನಿಮ್ಮ ಬಜೆಟ್ ಗೆ ಹೊಂದಿಕೆಯಾಗುವ ಕೆಲವು ಅಧ್ಬುತ ಗೆಡ್ಜೆಟ್ ಗಳನ್ನು ನಾವಿಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ.
ಖಂಡಿತ 6000 ರುಪಾಯಿ ಒಳಗೆ ಖರೀದಿಸಬಹುದಾಗಿರುವ ಈ ಗೆಡ್ಜೆಟ್ ಗಳು ನಿಮ್ಮ ಸಂಗಾತಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ಯಾವುದು ಆ ಗೆಡ್ಜೆಟ್ ಗಳು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಉತ್ತರ ಮುಂದೆ ಇದೆ.

ಆಲ್-ನ್ಯೂ ಇಕೋ ಡಾಟ್
ನಿಮ್ಮ ಪ್ರೀತಿ ಪಾತ್ರರಿಗೆ ವಾಯ್ಸ್ ಕಮಾಂಡ್ ಗಳ ಮೂಲ ಉತ್ತರಿಸಬಹುದಾಗಿರುವು ಅಧ್ಬುತ ಗಿಫ್ಟ್ ವೊಂದನ್ನು ನೀವು ನೀಡುವುದಕ್ಕೆ ಸಾಧ್ಯವಿದೆ. ಆಲ್-ನ್ಯೂ ಇಕೋ ಡಾಟ್ ಮ್ಯೂಸಿಕ್ ಪ್ಲೇ ಮಾಡುವುದಕ್ಕೆ, ಪ್ರಶ್ನೆ ಕೇಳುವುದಕ್ಕೆ, ಸುದ್ದಿಗಳನ್ನು ಕೇಳಿಸಿಕೊಳ್ಳುವುದಕ್ಕೆ, ಹವಾಮಾನ ವರದಿ ತಿಳಿಯಲು, ಅಲಾರಾಂ ಸೆಟ್ ಮಾಡುವುದಕ್ಕೆ, ಮನೆಯ ಕೆಲವು ಕೆಲಸಗಳನ್ನು ನಿರ್ವಹಿಸುವುದಕ್ಕೆ, ಸ್ಮಾರ್ಟ್ ಹೋಮ್ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಮತ್ತು ಇತ್ಯಾದಿ ಹಲವು ಕೆಲಸಗಳಿಗೆ ಬಳಕೆಯಾಗುವ ಅಧ್ಬುತ ಡಿವೈಸ್ ಇದು.
ಖಂಡಿತ ನಿಮ್ಮ ಸಂಗಾತಿ ಅಮೇಜಾನ್ ಪ್ರೈಮ್ ಮ್ಯೂಸಿಕ್, ಟ್ಯೂನ್ ಇನ್, ಸಾವನ್, ಹಂಗಾಮ ಮತ್ತು ಇತ್ಯಾದಿಗಳಲ್ಲಿ ಹಾಡನ್ನು ಕೇಳುವುದಕ್ಕೆ ಬಹಳ ಇಷ್ಟಪಡುತ್ತಾರೆ. ಕೇವಲ 4,499 ರುಪಾಯಿಗೆ ನಿಮಗೆ ಅಮೇಜಾನ್.ಇನ್ ನಲ್ಲಿ ಈ ಡಿವೈಸ್ ಲಭ್ಯವಾಗುತ್ತದೆ. ಖಂಡಿತ ಇದು ನಿಮ್ಮ ಸಂಗಾತಿಗೆ ಅಚ್ಚುಮೆಚ್ಚಿನ ಡಿವೈಸ್ ಆಗುವುದರಲ್ಲಿ ಯಾವುದೇ ಅನುಮಾನ ಬೇಡ.

ಕಿಂಡಲ್ ಇ-ರೀಡರ್
ನಿಮ್ಮ ಅರ್ಧಾಂಗಿ ಆಗುವವರು ಯಾವಾಗಲೂ ಪುಸ್ತಕ ಓದುವವರಾಗಿದ್ದರೆ ಖಂಡಿತ ಕಿಂಡಲ್-ಇ ರೀಡರ್ ನ್ನು ಕೊಡುವುದರಲ್ಲಿ ಅರ್ಥವಿರುತ್ತದೆ.ಅತ್ಯಂತ ತೆಳುವಾಗಿರುವ ಮತ್ತು ತೂಕ ಕಡಿಮೆ ಇರುವ ಕಪ್ಪುಮತ್ತು ಬಿಳಿ ವರ್ಣದಲ್ಲಿ ಲಭ್ಯವಿರುವ ಲಾಂಗ್ ಲಾಸ್ಟಿಂಗ್ ಬ್ಯಾಟರಿ ಸೌಲಭ್ಯವಿರುವ ಈ ಡಿವೈಸ್ ಓದುಗಾರರಿಗೆ ಬಹಳ ಉಪಯುಕ್ತವಾಗಿರುತ್ತದೆ. ರಿಫ್ಲೆಕ್ಟೀವ್ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಸ್ಕ್ರೀನ್ ಗಿಂತ ಹೆಚ್ಚು ಕಾಂಟ್ರಾಸ್ಟ್ ಟಚ್ ಸ್ಕ್ರೀನ್ ಡಿಸ್ಪ್ಲೇ ಇರುವ ಇದು ನೇರವಾಗಿ ಸೂರ್ಯನ ಕಿರಣಗಳು ಬೀಳುವ ಪ್ರದೇಶದಲ್ಲಿದ್ದಾಗಲೂ ಕೂಡ ಅಧ್ಬುತ ಓದುಗಾರಿಕೆಗೆ ನೆರವು ನೀಡುತ್ತದೆ. 5,999 ರುಪಾಯಿಗೆ ಈ ಡಿವೈಸ್ ನಿಮಗೆ ಲಭ್ಯವಾಗುತ್ತದೆ.

ಫೈಯರ್ ಟಿವಿ ಸ್ಟಿಕ್ ಜೊತೆಗೆ ಹೊಸ ಅಲೆಕ್ಸಾ ವಾಯ್ಸ್ ರಿಮೋಟ್
ಮನೆಯಲ್ಲಿ ಆರಾಮಾದಾಯಕವಾಗಿರುವಂತೆ ಮಾಡುವ ಸಾಧನವನ್ನು ಉಡುಗೊರೆ ನೀಡುವುದರಲ್ಲಿರುವ ಸಂತೋಷ ಮತ್ತ್ಯಾವ ವಸ್ತುವಿನಲ್ಲಿ ಸಿಗಲು ಸಾಧ್ಯವಿದೆ ಅಲ್ಲವೇ? HDTV ಯಲ್ಲಿ ಅಮೇಜಾನ್ ಫೈಯರ್ ಟಿವಿ ಸ್ಟಿಕ್ ನ್ನು ಪ್ಲಗ್ ಮಾಡಿ ಮತ್ತು ಪವರ್ ಕೇಬಲ್ ನ್ನು ಅಟ್ಯಾಚ್ ಮಾಡಿ ಮತ್ತು ವೈ-ಫೈ ಕನೆಕ್ಟ್ ಮಾಡಿ ಮತ್ತು ಒಂದೇ ನಿಮಿಷದಲ್ಲಿ ಸ್ಟ್ರೀಮಿಂಗ್ ಆರಂಭಿಸಿ! ಕೇವಲ 3,999 ರುಪಾಯಿ ಬೆಲೆಗೆ ಇದು ಲಭ್ಯವಾಗುತ್ತದೆ. ಸರಳವಾಗಿ ಮತ್ತು ಸುಲಭವಾಗಿ ಇದನ್ನು ಬಳಕೆ ಮಾಡಬಹುದು. ಇದು ನಿಮ್ಮ ಟಿವಿಯನ್ನು ಸ್ಮಾರ್ಟ್ ಗೊಳಿಸುತ್ತದೆ. ನೀವು ಇದರಲ್ಲಿ ಸಾವಿರಗಟ್ಟಲೆ ಚಲನಚಿತ್ರಗಳನ್ನು ಸ್ಟ್ರೀಮ್ ಮಾಡಬಹುದು, ಆಪ್ಸ್, ಗೇಮ್ಸ್, ಮಕ್ಕಳ ಕಟೆಂಟ್ ಗಳು, ಸ್ಪೋರ್ಟ್ಸ್, ಹಾಟ್ ಸ್ಟಾರ್ ನಲ್ಲಿ ಸುದ್ದಿಗಳು, ನೆಟ್ ಫ್ಲಿಕ್ಸ್, ಯುಟ್ಯೂಬ್ ಮತ್ತು ಯೂರೋಸ್ ನೌ, ವೂಟ್, ಏರ್ ಟೆಲ್ ಮೂವೀಸ್, ಮತ್ತು ಇತ್ಯಾದಿಗಳನ್ನು ಸ್ಟ್ರೀಮ್ ಮಾಡಬಹುದು.

ಫುಜಿಫಿಲ್ಮ್ ಇನ್ಸ್ಟಾ ಮಿನಿ 8 ಇನ್ಸೆಂಟ್ ಫಿಲ್ಮ್ ಕ್ಯಾಮರಾ
ಈಗಿನ ಜಮಾನದಲ್ಲಿ ನಮ್ಮ ಹೆಚ್ಚಿನ ಚಿತ್ರಪಟಗಳು ನಮ್ಮ ಸ್ಮಾರ್ಟ್ ಫೋನ್ ನಲ್ಲೇ ಇರುತ್ತದೆ. ಫುಜಿಫಿಲ್ಮ್ ಇನ್ಸ್ಟಾಕ್ಸ್ ಮಿನಿ 8 ಇನ್ಸೆಂಟ್ ಫಿಲ್ಮ್ ಕ್ಯಾಮರಾವು ನಿಮ್ಮ ಪ್ರತಿದಿನ ಫೋಟೋವನ್ನು ಇನ್ನಷ್ಟು ಅಟ್ರ್ಯಾಕ್ಟೀವ್ ಆಗಿ ತೆಗೆಯುವುದಕ್ಕೆ ಸಹಕಾರಿಯಾಗಿರುತ್ತದೆ. ಸ್ವಯಂಚಾಲಿತವಾಗಿ ಉತ್ತಮ ಬ್ರೈಟ್ ನೆಸ್ ನ್ನು ಗುರುತಿಸುತ್ತದೆ ಮತ್ತು ನಿಮ್ಮ ಪೋಟೋ ಬಹಳ ಸುಂದರವಾಗಿ ಬರುವಂತೆ ನೋಡಿಕೊಳ್ಳುತ್ತದೆ. ಹೈ-ಕೀ ಮೋಡ್ ನಲ್ಲಿ ಫೋಟೋ ಕ್ಲಿಕ್ಕಿಸುವುದಕ್ಕೆ ಇದು ನೆರವಾಗುತ್ತದೆ. 3628 ರುಪಾಯಿಗೆ ಇದನ್ನು ಖರೀದಿಸಬಹುದು ಮತ್ತು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಬಹುದು.

ಮಿವಿ ಸಕ್ಸೋ ವಯರ್ ಲೆಸ್ ಬ್ಲೂಟೂತ್ ಇಯರ್ ಫೋನ್
ವಯರ್ ಲೆಸ್ ಹೆಡ್ ಫೋನ್ ಗಳು ಇತ್ತೀಚೆಗೆ ಲಕ್ಸುರಿಯಲ್ಲ ಬದಲಾಗಿ ನಿತ್ಯದ ಅಗತ್ಯತೆಯಾಗಿ ಪರಿವರ್ತಿತವಾಗಿದೆ. ನಿಮ್ಮ ಸಂಗಾತಿ ಮ್ಯೂಸಿಕ್ ಲವ್ವರ್ ಆಗಿದ್ದು ಯಾವಾಗಲೂ ಹಾಡುಗಳನ್ನು ಕೇಳಲು ಇಚ್ಛಿಸುತ್ತಾರಾದರೆ ಖಂಡಿತ ಈ ಹೆಡ್ ಫೋನ್ ಅವರಿಗೆ ಅಚ್ಚುಮೆಚ್ಚಾಗುತ್ತದೆ. ಈ ವ್ಯಾಲೆಂಟೈನ್ ಡೇಯನ್ನು ನೀವು ಮತ್ತಷ್ಟು ರಂಗಾಗಿಸಲು ನೀಡಬಹುದಾದ ಬೆಸ್ಟ್ ಗಿಫ್ಟ್ ಗಳಲ್ಲಿ ಇದೂ ಕೂಡ ಒಂದು. ಅಲ್ಟ್ರಾ ಸಾಫ್ಟ್ ಇಯರ್ ಕಪ್ಸ್ ಹೊಂದಿರುವ ಇದು ಅತ್ಯಂತ ಆಹ್ಲಾದಕಾರಿ ಅನುಭವವನ್ನು ಧರಿಸಿದಾಗ ನೀಡುತ್ತದೆ. ಘಂಟೆಗಟ್ಟಲೆ ಹಾಡುಕೇಳುವವರಿಗೆ ಖಂಡಿತ ಇದು ಅಚ್ಚುಮೆಚ್ಚಾಗುತ್ತದೆ. 17 ಘಂಟೆಗಳ ಬ್ಯಾಟರಿ ಲೈಫ್ ಇರುವ ಇದು ಮಡಚುವ ಡಿಸೈನ್ ಹೊಂದಿದೆ ಮತ್ತು ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವುದಕ್ಕೂ ಕೂಡ ಸುಲಭವಾಗಿದೆ. ಕೇವಲ 2,999 ರುಪಾಯಿ ಬೆಲೆಗೆ ನೀವಿದನ್ನು ಖರೀದಿಸಬಹುದು.

ಓಕ್ಟರ್ ಬೇಸಿಕ್ ಸ್ಮಾರ್ಟ್ ಹೋಮ್ ಕಿಟ್
ನಿಮ್ಮ ಸಂಗಾತಿ ಟೆಕ್ ಪ್ರೇಮಿಯಾಗಿದ್ದರೆ ಖಂಡಿತ ಇದು ಬೆಸ್ಟ್ ಉಡುಗೊರೆಯಾಗಿರುತ್ತದೆ. ಆಕ್ಟರ್ ಸ್ಮಾರ್ಟ್ ಹೋಮ್ ಕಿಟ್ ನಿಮ್ಮ ಮನೆಯ ಗೀಸರ್, ಮೋಟರ್, ಏರ್ ಕಂಡೀಷನರ್ ಸೇರಿದಂತೆ ಹಲವು ವಸ್ತುಗಳನ್ನು ಕಂಟ್ರೋಲ್ ಮಾಡಬಹುದು.ಈ ಕಿಟ್ ನಲ್ಲಿ ಒಂದು ಮನೆಯನ್ನು ಸ್ಮಾರ್ಟ್ ಹಬ್ ಆಗಿ ನಿಯಂತ್ರಿಸುವ ಸಾಮರ್ಥ್ಯವಿರುತ್ತದೆ. 5823 ರುಪಾಯಿಗೆ ನೀವಿದನ್ನು ಖರೀದಿಸಿ ಉಡುಗೊರೆಯಾಗಿ ನೀಡಬಹುದು.


Click it and Unblock the Notifications








