Home
Gadgets

ಭಾರತದಲ್ಲಿ Skullcandy Icon ANC ಬಿಡುಗಡೆ: ನೋಡಬೇಕು ಇದರ ಫೀಚರ್ಸ್!

ಜನಪ್ರಿಯ ಟೆಕ್ ಬ್ರ್ಯಾಂಡ್ Skullcandy ತನ್ನ ಇತ್ತೀಚಿನ ANC-ಬೆಂಬಲಿತ ಹೆಡ್‌ಫೋನ್‌ Skullcandy Icon ANC ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸುಮಾರು 20 ವರ್ಷಗಳ ಹಿಂದೆ ಪರಿಚಯಿಸಲಾದ ಮೂಲ Icon ಸರಣಿಯ ಯಶಸ್ಸನ್ನು ಮುಂದುವರೆಸುವ ಗುರಿಯನ್ನು ಈ ಹೊಸ ಹೆಡ್‌ಫೋನ್‌ಗಳು ಹೊಂದಿದ್ದು, ನವೀಕರಿಸಿದ ವಿನ್ಯಾಸ ಮತ್ತು ಸುಧಾರಿತ ಕಾರ್ಯಕ್ಷಮತೆಯೊಂದಿಗೆ, ಈ ಸಾಧನವು ಇಂದಿನ ಬಳಕೆದಾರರ ಬೇಡಿಕೆಗಳನ್ನು ಪೂರೈಸುತ್ತದೆ ಎಂದು ಕಂಪೆನಿಯು ತಿಳಿಸಿದೆ. ಹಾಗಾದರೆ, ಹೊಸ Skullcandy Icon ANC ಹೆಡ್‌ಫೋನ್‌ ಸಾಧನ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

Skullcandy Icon ANC: ಪ್ರಮುಖ ವೈಶಿಷ್ಟ್ಯಗಳು

ನೂತನ Skullcandy Icon ANC ಹೆಡ್‌ಫೋನ್‌ಗಳು ಮಡಚುವ, ಓವರ್-ಇಯರ್ ವಿನ್ಯಾಸವನ್ನು ಹೊಂದಿದ್ದು, ಸುಲಭವಾಗಿ ಒಯ್ಯಲು ಮತ್ತು ಸಂಗ್ರಹಿಸಲು ಅನುಕೂಲಕರವಾಗಿದೆ. 40mm ಡ್ರೈವರ್‌ಗಳನ್ನು ಹೊಂದಿರುವ ಈ ಹೆಡ್‌ಫೋನ್‌ಗಳು ಉತ್ತಮ ಗುಣಮಟ್ಟದ ಆಡಿಯೋ ಅನುಭವವನ್ನು ನೀಡುತ್ತವೆ. ಸಕ್ರಿಯ ಶಬ್ದ ರದ್ದತಿ (ANC) ತಂತ್ರಜ್ಞಾನವು ಹೊರಗಿನ ಶಬ್ದವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಇದರಲ್ಲಿರುವ ಹೊಂದಾಣಿಕೆ ಮಾಡಬಹುದಾದ ಸ್ಟೇ-ಅವೇರ್ ಮೋಡ್ ಸುತ್ತಮುತ್ತಲಿನ ಶಬ್ದಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ತಿಳಿಸಿದೆ.

IPX4-ರೇಟೆಡ್ ಬೆವರು ಮತ್ತು ನೀರಿನ ಪ್ರತಿರೋಧ ರೇಟಿಂಗ್ ಹೊಂದಿರುವ ಈ ಸಾಧನವನ್ನು ವ್ಯಾಯಾಮ ಮಾಡುವಾಗ ಅಥವಾ ಹಗುರವಾದ ಮಳೆಯಲ್ಲಿಯೂ ಬಳಸಬಹುದು. ಈ ಹೆಡ್‌ಫೋನ್‌ಗಳು ಮ್ಯೂಸಿಕ್, ಬಾಸ್ ಬೂಸ್ಟ್, ಮತ್ತು ಪಾಡ್‌ಕಾಸ್ಟ್ ಮೋಡ್‌ಗಳನ್ನು ಒಳಗೊಂಡಂತೆ ಮೂರು ಈಕ್ವಲೈಜರ್ (EQ) ಪೂರ್ವನಿಗದಿಗಳೊಂದಿಗೆ ಬರುತ್ತವೆ. Skullcandy ಅಪ್ಲಿಕೇಶನ್ ಮೂಲಕ ಬಳಕೆದಾರರು ಐದು-ಬ್ಯಾಂಡ್ ಈಕ್ವಲೈಜರ್ ಅನ್ನು ತಮ್ಮ ಆದ್ಯತೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು, ಇದು ಆಡಿಯೋ ಅನುಭವವನ್ನು ವೈಯಕ್ತೀಕರಿಸಲು ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ.

ಬ್ಯಾಟರಿ ವಿಭಾಗದಲ್ಲಿ, ಈ Skullcandy Icon ANC ಸಾಧನವು ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ ಎಂದು ಹೇಳಬಹುದು. ANC ಇಲ್ಲದೆ ಒಂದೇ ಚಾರ್ಜ್‌ನಲ್ಲಿ 60 ಗಂಟೆಗಳವರೆಗೆ ಮತ್ತು ANC ಸಕ್ರಿಯಗೊಳಿಸಿದಾಗಲೂ 50 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ದೀರ್ಘ ಪ್ರಯಾಣ ಅಥವಾ ನಿರಂತರ ಬಳಕೆಗೆ ಸೂಕ್ತವಾಗಿದೆ. ಕೇವಲ 10 ನಿಮಿಷಗಳ ತ್ವರಿತ ಚಾರ್ಜ್ ಮೂಲಕ 4 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಪಡೆಯಬಹುದು.

ಭಾರತದಲ್ಲಿ Skullcandy Icon ANC ಬಿಡುಗಡೆ: ನೋಡಬೇಕು ಇದರ ಫೀಚರ್ಸ್!

ಸಂಪರ್ಕದ ವಿಷಯದಲ್ಲಿ, Icon ANC ಸಾಧನವು ಬ್ಲೂಟೂತ್ 5.3 ಅನ್ನು ಬೆಂಬಲಿಸುತ್ತದೆ, ಇದು ಸ್ಥಿರ ಮತ್ತು ವೇಗದ ವೈರ್‌ಲೆಸ್ ಸಂಪರ್ಕವನ್ನು ಖಚಿತಪಡಿಸುತ್ತದೆ. ಮಲ್ಟಿಪಾಯಿಂಟ್ ಸಂಪರ್ಕದ ವೈಶಿಷ್ಟ್ಯವು ಒಂದೇ ಸಮಯದಲ್ಲಿ ಎರಡು ಸಾಧನಗಳಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ, ಇದು ಬಳಕೆದಾರರಿಗೆ ಸುಲಭವಾಗಿ ಸಾಧನಗಳ ನಡುವೆ ಬದಲಾಯಿಸಲು ಅನುಕೂಲವಾಗುತ್ತದೆ. ಹೆಡ್‌ಫೋನ್‌ಗಳು ಸ್ಪಾಟಿಫೈ ಟ್ಯಾಪ್ ಮತ್ತು Google Fast Pair ವೈಶಿಷ್ಟ್ಯಗಳೊಂದಿಗೆ ಬರುತ್ತವೆ, ಇದು Android ಬಳಕೆದಾರರಿಗೆ ತ್ವರಿತ ಜೋಡಣೆಗೆ ಸಹಾಯ ಮಾಡುತ್ತದೆ.

ಕರೆಗಳಿಗಾಗಿ, ಈ ಸಾಧನವು ನ್ಯಾಚುರಲ್ ವಾಯ್ಸ್ ಸೈಡ್‌ಟೋನ್ ವೈಶಿಷ್ಟ್ಯವು ಸ್ಪಷ್ಟ ಸಂಭಾಷಣೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೆ, ಕಡಿಮೆ-ಲೇಟೆನ್ಸಿ ಮೋಡ್ ಗೇಮಿಂಗ್ ಮತ್ತು ವಿಡಿಯೋ ವೀಕ್ಷಣೆಗೆ ಸೂಕ್ತವಾಗಿದೆ. ಹೆಡ್‌ಫೋನ್‌ಗಳು ತೆಗೆಯಬಹುದಾದ AUX ಸಂಪರ್ಕ ಮತ್ತು USB Type-C ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತವೆ, ಇದು ವಿಭಿನ್ನ ಬಳಕೆಯ ಸಂದರ್ಭಗಳಿಗೆ ಹೊಂದಿಕೊಳ್ಳುತ್ತದೆ. ಈ ಹೆಡ್‌ಫೋನ್‌ಗಳ ತೂಕ ಕೇವಲ 225 ಗ್ರಾಂ ಆಗಿದ್ದು, ದೀರ್ಘಕಾಲದ ಬಳಕೆಗೆ ಆರಾಮದಾಯಕವಾಗಿದೆ ಎಂದು ಕಂಪೆನಿಯು ತಿಳಿಸಿದೆ.

Skullcandy Icon ANC: ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ Skullcandy Icon ANC ಸಾಧನದ ವಿಶೇಷ ಬಿಡುಗಡೆ ಬೆಲೆ 8,999 ರೂ. ಆಗಿದೆ ಮತ್ತು ಈ ಹೆಡ್‌ಫೋನ್‌ಗಳು Skullcandy ಇಂಡಿಯಾ ವೆಬ್‌ಸೈಟ್ ಮತ್ತು ಆಯ್ದ ಚಿಲ್ಲರೆ ವ್ಯಾಪಾರಿಗಳ ಮೂಲಕ, ಕಪ್ಪು ಮತ್ತು ಬೋನ್ (Bone) ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪೆನಿಯು ತಿಳಿಸಿದೆ.

Best Mobiles in India

English summary
Skullcandy Icon ANC headphones are now on sale in India, featuring a special introductory price of Rs. 8,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+