8,499ಕ್ಕಿಂತ ಅಗ್ಗ! ಅತಿ ಕಡಿಮೆ ಬೆಲೆಗೆ Smart TVs ಲಭ್ಯ.. ಜೊತೆಗೆ ಬಂಪರ್ ಆಫರ್‌ಗಳು.. ಅಮೆಜಾನ್‌ನಲ್ಲಿ ಮಾತ್ರ!
ಗೃಹೋಪಯೋಗಿ ವಸ್ತುಗಳಲ್ಲಿ ಟಿವಿ ತುಂಬಾ ಮುಖ್ಯವಾಗಿದೆ. ಇದು ಮನರಂಜನೆಯನ್ನು ನೀಡುವುದರ ಜೊತೆಗೆ, ಕುಟುಂಬದ ಎಲ್ಲ ಸದಸ್ಯರನ್ನು ಒಟ್ಟುಗೂಡಿಸುತ್ತದೆ. ಆಧುನಿಕ ತಂತ್ರಜ್ಞಾನದೊಂದಿಗೆ ಪ್ರಸ್ತುತ, ಹಲವು ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ಟಿವಿಗಳು (Smart TV) ಖರೀದಿಗೆ ಲಭ್ಯವಿದೆ. ಟೆಕ್ನಾಲಜಿ ಮುಂದುವರೆದಂತೆ ಕಲರ್ ಟಿವಿ ವ್ಯಾಮೋಹದಲ್ಲಿದ್ದ ಜನ ಇದೀಗ ಸ್ಮಾರ್ಟ್ ಟಿವಿಗಳಿಗೆ ಮಾರುಹೋಗಿದ್ದಾರೆ. ಅಮೆಜಾನ್‌ನಲ್ಲಿ ಎಲ್‌ಜಿ, ಸ್ಯಾಮ್‌ಸಂಗ್, ಶಿಯೋಮಿ, ಏಸರ್ ಮತ್ತು ಟಿಸಿಎಲ್ ನಂತಹ ಕಂಪನಿಗಳ ಟಿವಿಗಳು ಅಮೆಜಾನ್‌ನಲ್ಲಿ 15,000 ರೂ. ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಇವುಗಳ ಬೆಲೆ, ಆಫರ್ ಮತ್ತು ವಿಶೇಷತೆಗಳ ಬಗ್ಗೆ ಇಲ್ಲದೆ ಹೆಚ್ಚಿನ ಮಾಹಿತಿ.
ಪ್ರಸ್ತುತ, ಹೊಸ ಮಾದರಿಯ ವಿಭಿನ್ನ ರೆಸಲ್ಯೂಶನ್ ಸಾಮರ್ಥ್ಯದ ಸ್ಮಾರ್ಟ್ ಟಿವಿಗಳಿಗೆ (Smart TVs) ಭರವಿಲ್ಲ. ಪ್ರತಿ ತಿಂಗಳಿಗೆ ಒಂದು ಅಥವಾ ಎರಡರಂತೆ ದೇಶೀಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಸ್ಮಾರ್ಟ್ ಟಿವಿಗಳು ಬಿಡುಗಡೆ ಆಗುತ್ತಿವೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿ ಕ್ಷೇತ್ರ ಮತ್ತಷ್ಟು ವಿಭಿನ್ನವಾಗಿ ಬೆಳೆದಿದೆ. ಇವುಗಳು ತಮ್ಮ ಚಿತ್ರದ ಗುಣಮಟ್ಟ, ಸಂಪರ್ಕ ವೈಶಿಷ್ಟ್ಯಗಳು ಮತ್ತು ಇತರೆ ಹಲವು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಗಮನ ಸೆಳೆಯುತ್ತಿವೆ. ನಾವು ಈ ಲೇಖನದಲ್ಲಿ ಕೆಲವು ಸ್ಮಾರ್ಟ್ ಟಿವಿಗಳನ್ನು ಪಟ್ಟಿ ಮಾಡಿದ್ದೇವೆ. ಅವು ಈ ಕೆಳಗಿನಂತಿವೆ.

ಏಸರ್ ಅಡ್ವಾನ್ಸ್ಡ್ N ಸೀರೀಸ್ ಸ್ಟ್ಯಾಂಡರ್ಡ್ LED ಟಿವಿ
ಏಸರ್ ಅಡ್ವಾನ್ಸ್ಡ್ N ಸೀರೀಸ್ ಸ್ಟ್ಯಾಂಡರ್ಡ್ LED ಟಿವಿ (Acer Advanced N Series Standard LED TV) ಅಮೆಜಾನ್‌ನಲ್ಲಿ ಕೇವಲ 8,499 ರೂ.ಗೆ ಲಭ್ಯವಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ, ಈ ಟಿವಿ ಏಸರ್ ಎಲ್ಇಡಿ ಟಿವಿ ಸುಂದರವಾದ ಫ್ರೇಮ್‌ಲೆಸ್ ವಿನ್ಯಾಸ ಹೊಂದಿದೆ. ಇದರೊಂದಿಗೆ ಹೆಚ್‌ಡಿ ರೆಡಿ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ನೀವು ಉತ್ತಮ ವೀಕ್ಷಣೆಯ ಅನುಭವವನ್ನು ಪಡೆಯಬಹುದು. 178 ಡಿಗ್ರಿ ವೀಕ್ಷಣಾ ಕೋನದೊಂದಿಗೆ ಸ್ಪಷ್ಟ ದೃಶ್ಯಗಳು ಯಾವುದೇ ಕೋನದಿಂದ ಸ್ಪಷ್ಟವಾಗಿ ಗೋಚರಿಸುತ್ತವೆ. A+ ದರ್ಜೆಯ VA ಪ್ಯಾನೆಲ್, ಡೈನಾಮಿಕ್ ಕಾಂಟ್ರಾಸ್ಟ್, ಮೂರು HDMI ಪೋರ್ಟ್‌ಗಳು ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿದೆ. ಈ ಟಿವಿಯನ್ನು ವೈಯಕ್ತಿಕ ಕಂಪ್ಯೂಟರ್‌ಗಳು, ಗೇಮಿಂಗ್ ಕನ್ಸೋಲ್‌ಗಳು ಮತ್ತು ಸೆಟ್ ಟಾಪ್ ಬಾಕ್ಸ್‌ಗಳಿಗೆ ಸುಲಭವಾಗಿ ಸಂಪರ್ಕಿಸಬಹುದು. ಇದು 24W ಹೈ ಫಿಡೆಲಿಟಿ ಸ್ಪೀಕರ್‌ಗಳಿಂದ ವರ್ಚುವಲ್ ಸರೌಂಡ್ ಸೌಂಡ್‌ನೊಂದಿಗೆ ಉತ್ತಮ ಆಡಿಯೊವನ್ನು ನೀಡುತ್ತದೆ.
ಎಲ್‌ಜಿ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿ
ಎಲ್‌ಜಿ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿಯನ್ನು (LG 32 inches HD Ready Smart LED TV) ಅಮೆಜಾನ್‌ನಲ್ಲಿ 13,990 ರೂ.ಗೆ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ, ಈ ಸ್ಮಾರ್ಟ್ ಎಲ್‌ಇಡಿ ಟಿವಿಯು ಅದ್ಭುತವಾಗಿ ಕೆಲಸ ನಿರ್ವಹಿಸುತ್ತದೆ. ಆಕ್ಟಿವ್ HDR ಜೊತೆಗೆ HD ರೆಡಿ ಡಿಸ್ಪ್ಲೇ ಇರುವುದರಿಂದ ದೃಶ್ಯಗಳು ತುಂಬಾ ಸ್ಪಷ್ಟವಾಗಿ ಗೋಚರಿಸುತ್ತವೆ. ನೀವು WebOS ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದು. ವೈ-ಫೈ ಸಂಪರ್ಕದೊಂದಿಗೆ ಅಡೆತಡೆಯಿಲ್ಲದ ಮನರಂಜನೆಯನ್ನು ಆನಂದಿಸಬಹುದು. 2 HDMI ಪೋರ್ಟ್‌ಗಳು ಮತ್ತು ಒಂದು ಯುಎಸ್‌ಬಿ ಪೋರ್ಟ್ ಮೂಲಕ ಸುಲಭವಾಗಿ ಗೇಮಿಂಗ್ ಕನ್ಸೋಲ್‌ಗಳು ಮತ್ತು ಬಾಹ್ಯ ಸಾಧನಗಳನ್ನು ಸಂಪರ್ಕಿಸಬಹುದು. ಇದು ಕಾರ್ಯಕ್ಷಮತೆಗಾಗಿ ಎಲ್‌ಜಿ ಗ್ರಾಫಿಕ್ ಪ್ರೊಸೆಸರ್ ಹೊಂದಿದೆ. ಇದು ಆಧುನಿಕ ಫ್ಲಾಟ್ ಸ್ಕ್ರೀನ್ ಲುಕ್ ಒಳಗೊಂಡಿದೆ.
32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಗೂಗಲ್ ಎಲ್‌ಇಡಿ ಟಿವಿ
32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಗೂಗಲ್ ಎಲ್‌ಇಡಿ ಟಿವಿ (32 inches HD Ready Smart LED Google TV) ಅಮೆಜಾನ್‌ನಲ್ಲಿ 13,499 ರೂ.ಗೆ ಮಾರಾಟವಾಗುತ್ತಿದೆ. ಈ ಟಿವಿಯು ಸ್ಮಾರ್ಟ್ ತಂತ್ರಜ್ಞಾನದಿಂದ ಗ್ರಾಹಕರ ಗಮನ ಸೆಳೆದಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ, ಇದು ಉತ್ತಮ ರಿಫ್ರೆಶ್ ದರದೊಂದಿಗೆ ದೃಶ್ಯಗಳು ತುಂಬಾ ಸ್ಪಷ್ಟವಾಗಿವೆ. ಇದು ಡಾಲ್ಬಿ ಆಡಿಯೋ, ಡಿಟಿಎಸ್ ವರ್ಚುವಲ್ ಎಕ್ಸ್ ಮತ್ತು ಸ್ಫಟಿಕ ಸ್ಪಷ್ಟ ಧ್ವನಿಗಾಗಿ 20W ಔಟ್‌ಪುಟ್ ಒಳಗೊಂಡಿದೆ. ಇದರಲ್ಲಿ ಡ್ಯುಯಲ್ ಬ್ರಾಂಡ್ ವೈ-ಫೈ, ಬ್ಲೂಟೂತ್ 5.0, ಎರಡು ಹೆಚ್‌ಡಿಎಂಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು ಲಭ್ಯವಿದೆ. ಈ ನಯವಾದ ವಿನ್ಯಾಸ ಹೊಂದಿರುವ ಸ್ಮಾರ್ಟ್ ಟಿವಿಯನ್ನು ಗೋಡೆ ಅಥವಾ ಮೇಜಿನ ಮೇಲೆ ಇಡಬಹುದು.

ಸ್ಯಾಮ್‌ಸಂಗ್ 32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿ
ಸ್ಯಾಮ್‌ಸಂಗ್ 32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿಯನ್ನು (Samsung 32 Inches HD Ready LED Smart TV) ಅಮೆಜಾನ್‌ನಲ್ಲಿ ರಿಯಾಯಿತಿ ದರದೊಂದಿಗೆ 14,990 ರೂ.ಗೆ ಕೊಳ್ಳಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ, ಇದು ಸ್ಟ್ರೀಮಿಂಗ್ ಹಾಗೂ ಗೇಮಿಂಗ್‌ಗೆ ತುಂಬಾ ಉಪಯುಕ್ತವಾಗಿದೆ. ಈ ಟಿವಿಯೊಂದಿಗೆ ಎಲ್ಲಾ ಕಾರ್ಯಕ್ರಮಗಳನ್ನು ಅದ್ಭುತವಾಗಿ ವೀಕ್ಷಿಸಬಹುದು. ಬಣ್ಣ ಮತ್ತು ಮೆಗಾ ಕಾಂಟ್ರಾಸ್ಟ್ ಎರಡರಲ್ಲೂ ಚಿತ್ರದ ಗುಣಮಟ್ಟ ಸಾಕಷ್ಟು ಉತ್ತಮವಾಗಿದೆ. ಈ ಟಿವಿ ಸ್ಕ್ರೀನ್ ಶೇರ್, ಮ್ಯೂಸಿಕ್ ಸಿಸ್ಟಮ್, ಕಂಟೆಂಟ್ ಗೈಡ್ ಮತ್ತು ನೆಟ್‌ಫ್ಲಿಕ್ಸ್, ಯೂಟ್ಯೂಬ್, ಪ್ರೈಮ್ ವಿಡಿಯೋ ಮುಂತಾದ ಅಪ್ಲಿಕೇಶನ್‌ಗಳಿಗೆ ಪ್ರವೇಶ ಹೊಂದಿದೆ. ಹಾಗೆಯೇ 20W ಡಾಲ್ಬಿ ಡಿಜಿಟಲ್ ಪ್ಲಸ್ ಸ್ಪೀಕರ್‌ಗಳಿಂದ ಆಡಿಯೋ ತುಂಬಾ ಸ್ಪಷ್ಟವಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಟಿವಿಯಯು 2 HDMI, ಒಂದು ಯುಎಸ್‌ಬಿ ಪೋರ್ಟ್, ವೈ-ಫೈ, ಈಥರ್ನೆಟ್ ಇತ್ಯಾದಿಗಳನ್ನು ಹೊಂದಿದೆ.
ಟಿಎಲ್‌ಸಿ ಬೆಜೆಲ್-ಲೆಸ್ S ಸರಣಿ ಪೂರ್ಣ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಗೂಗಲ್ ಟಿವಿ
ಅಮೆಜಾನ್‌ನಲ್ಲಿ ಟಿಎಲ್‌ಸಿ ಬೆಜೆಲ್-ಲೆಸ್ S ಸರಣಿ ಪೂರ್ಣ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಗೂಗಲ್ ಟಿವಿಯ (TCL Bezel-Less S Series Full HD Smart LED Google TV) ಬೆಲೆ 13,990 ಆಗಿದೆ. ಈ ಟಿವಿ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿದೆ. ಇದರ ವಿಶೇಷತೆಗಳೆಂದರೆ, HDR10, AIPQ ಎಂಜಿನ್, ಸುಪೀರಿಯರ್ ಕಾಂಟ್ರಾಸ್ಟ್ ಮತ್ತು ಮೈಕ್ರೋ ಡಿಮ್ಮಿಂಗ್ ಹೊಂದಿದೆ. ಇದರಿಂದ ದೃಶ್ಯಗಳು ತುಂಬಾ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಟಿವಿಯಲ್ಲಿ 1.5GB RAM, 16GB ಸ್ಟೋರೇಜ್ ಮತ್ತು 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಲಭ್ಯವಿದೆ. ಇದು ಬಿಲ್ಟ್ ಇನ್ ವೈ-ಫೈ, ಬ್ಲೂಟೂತ್, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಡಾಲ್ಬಿ ಆಡಿಯೊ ಸಿಸ್ಟಮ್, 178 ಡಿಗ್ರಿ ಅಗಲದ ವೀಕ್ಷಣಾ ಕೋನ ಮುಂತಾದ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








