ಅತ್ಯಾಧುನಿಕ ವಿಡಿಯೊ ಕನ್ನಡಕ ತಯಾರಿಸಿ ಬೆಲೆತೆತ್ತ ಸ್ನ್ಯಾಪ್‌ಚಾಟ್!!..ಏಕೆ ಗೊತ್ತಾ?
ಕನ್ನಡಕದಲ್ಲಿಯೇ ವಿಡಿಯೊ ಮಾಡಿ ಮೊಬೈಲ್‌ಗೆ ಕಳುಹಿಸಬಹುದಾದ ಈ ವಿಶೇಷ ಕನ್ನಡಕ ಪ್ರಾರಂಭದಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆದರೂ, ನಂತರ ಆ ಯಶಸ್ಸನ್ನು ಉಳಿಸಿಕೊಳ್ಳಲಾಗಿಲ್ಲ.!
ಹೊಸ ಹೊಸ ಫೀಚರ್‌ಗಳಿಂದ ವಾಟ್ಸ್‌ಆಪ್‌ಗೆ ಸೆಡ್ಡುಹೊಡೆದು ಬಳಕೆದಾರರಿಗೆ ಅತಿಪ್ರಿಯವಾಗಿದ್ದ "ಸ್ನ್ಯಾಪ್‌ಚಾಟ್" ಆಪ್ 'ಸ್ನ್ಯಾಪ್‌ಚಾಟ್ ಕನ್ನಡಕ'ವನ್ನು ಬಿಡುಗಡೆ ಮಾಡಿದ್ದು ನಿಮಗೆಲ್ಲಾ ಗೊತ್ತಿರಬಹುದು.! ವಿಶ್ವದಲ್ಲಿ ಕುತೋಹಲ ಕೆರಳಿಸಿದ್ದ ಈ ವಿಶೇಷ ಕನ್ನಡಕ ಸ್ನ್ಯಾಪ್‌ಚಾಟ್ ಸಂಸ್ಥೆಗೆ ಭಾರೀ ನಷ್ಟವನ್ನು ತಂದೊಡ್ಡಿದೆ.!!
ಹೌದು, ಕನ್ನಡಕದಲ್ಲಿಯೇ ವಿಡಿಯೊ ಮಾಡಿ ಮೊಬೈಲ್‌ಗೆ ಕಳುಹಿಸಬಹುದಾದ ಈ ವಿಶೇಷ ಕನ್ನಡಕ ಪ್ರಾರಂಭದಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆದರೂ, ನಂತರ ಆ ಯಶಸ್ಸನ್ನು ಉಳಿಸಿಕೊಳ್ಳಲಾಗಿಲ್ಲ.! ಇದರಿಂದಾಗಿ, ಸ್ನ್ಯಾಪ್‌ಚಾಟ್ ಸಂಸ್ಥೆಗೆ ಭಾರಿ ನಷ್ಟವಾಗಿದ್ದು, ಹಾಗಾದರೆ, ಸ್ನ್ಯಾಪ್‌ಚಾಟ್ ಕನ್ನಡಕದ ಫೀಚರ್ಸ್ ಏನು? ಬೆಲೆ ಎಷ್ಟು? ಲಾಸ್ ಆಗಿದ್ದು ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಸ್ನ್ಯಾಪ್‌ಚಾಟ್ ಕನ್ನಡಕ?
ಮೊಬೈಲ್‌ಗಳಲ್ಲಿ ಸೇವೆ ನೀಡಿ ನಂತರ ಉತ್ಪನ್ನ ಬಿಡುಗಡೆ ಮಾಡುವ ಕಂಪೆನಿಗಳಲ್ಲಿ ಸ್ನ್ಯಾಪ್‌ಚಾಟ್ ಕೂಡ ಒಂದು. ಹಾಗಾಗಿ, ವಿಡಿಯೋ ಮತ್ತು ಬ್ಯಾಟರಿ ತಂತ್ರಜ್ಞಾನವನ್ನು ಹೊತ್ತಿರುವ ಕನ್ನಡಕವನ್ನು ಸ್ನ್ಯಾಪ್‌ಚಾಟ್ ಬಿಡುಗಡೆ ಮಾಡಿತ್ತು. ಈ ಕನ್ನಡಕದಲ್ಲಿ ವಿಡಿಯೊ ಕ್ಯಾಮೆರಾ ಮತ್ತು ಚಾರ್ಜ್ ಮಾಡಬಹುದಾದ ಬ್ಯಾಟರಿಯನ್ನು ಅಳವಡಿಸಲಾಗಿತ್ತು.!!

ಎಚ್‌ಡಿ ವಿಡಿಯೋ ಮತ್ತು ಸೆಂಡ್ ಆಯ್ಕೆ!!
ಸ್ನ್ಯಾಪ್‌ಚಾಟ್ ಬಿಡುಗಡೆ ಮಾಡಿರುವ ಈ ಕನ್ನಡಕದಲ್ಲಿ ಎಚ್‌ಡಿ ಗುಣಮಟ್ಟದ ವಿಡಿಯೊ ಮಾಡಬಹುದಾಗಿತ್ತು. 10 ರಿಂದ 30 ಸೆಕೆಂಡ್‌ವರೆಗೆ ವಿಡಿಯೊ ಮಾಡುವ ಅವಕಾಶ ಈ ಕನ್ನಡಕದಲ್ಲಿದ್ದು, ರೆಕಾರ್ಡ್ ಆದ ವಿಡಿಯೊವನ್ನು ಬ್ಲೂಟೂತ್ ಮುಖಾಂತರ ಮೊಬೈಲ್‌ನಲ್ಲಿರುವ ಸ್ನ್ಯಾಪ್‌ಚಾಟ್ ಆಪ್‌ಗೆ ಸೆಂಡ್ ಮಾಡುವ ಆಯ್ಕೆಯನ್ನು ಈ ಕನ್ನಡಕ ಹೊಂದಿತ್ತು.!!

ಕುತೂಹಲ ಕಡಿಮೆಯಾಯಿತು
ಹೆಚ್ಚಿನ ಸಮಯದ ವಿಡಿಯೊ ಮಾಡುವ ಆಯ್ಕೆ ಇಲ್ಲದ ಹಾಗೂ ಪ್ರತಿ 30 ಸೆಕೆಂಡ್‌ಗೆ ಒಮ್ಮೆ ವಿಡಿಯೊ ಮಾಡುವ ಬಟನ್ ಅನ್ನು ಒತ್ತುತ್ತಲೇ ಇರಬೇಕಾದ ಕಿರಿಕಿರಿಯಿಂದ ಸ್ನ್ಯಾಪ್‌ಚಾಟ್ ಕನ್ನಡಕ ಹಲವರಿಗೆ ಕಿರಿಕಿರಿ ಉಂಟು ಮಾಡಿದೆ ಎನ್ನಲಾಗಿದೆ. ಮತ್ತು ಫೋಟೊ ತೆಗೆದುಕೊಳ್ಳುವ ಅವಕಾಶ ಇಲ್ಲದೇ ಇರುವುದರಿಂದ ಕನ್ನಡಕದ ಬಗ್ಗೆ ಇದ್ದ ಕುತೂಹಲ ಕಡಿಮೆಯಾಗಿದೆ.!!

4Oಮಿಲಿಯನ್ ಡಾಲರ್ ನಷ್ಟ!!
ಫೋಟೊ ತೆಗೆದುಕೊಳ್ಳುವ ಅವಕಾಶ ಇಲ್ಲದೇ ಇರಬಹುದು. ಹಾಗೂ ಬಳಕೆದಾರರಿಗೆ ಹೆಚ್ಚು ಕಿರಿಕಿರಿ ಎನಿಸಿದ್ದ ಕೆಲವು ಆಯ್ಕೆಗಳು ಸ್ನ್ಯಾಪ್‌ಚಾಟ್ ಕನ್ನಡಕದ ಮಾರಾಟಕ್ಕೆ ದೊಡ್ಡ ಹೊಡೆತ ತಂದಿಟ್ಟಿತು. ಇದರಿಂದ ಸ್ನ್ಯಾಪ್‌ಚಾಟ್ ಸಂಸ್ಥೆಗೆ 4O ಮಿಲಿಯನ್ ಡಾಲರ್ ಹಣ ನಷ್ಟವಾಗಿದೆ ಎಂದು ಹೇಳಲಾಗಿದೆ.!!

ಸ್ಟೈಲ್ ಮಾಡಲು ಸಾಧ್ಯವಿಲ್ಲ!!
ಹೆಚ್ಚು ಫೀಚರ್ಸ್ ಹೊಂದಿರದಿದ್ದರೆ ಏನಂತೆ, ಸ್ಟೈಲ್‌ಗಾಗಿ ಈ ಸ್ನ್ಯಾಪ್‌ಚಾಟ್ ಕನ್ನಡಕ ಹಾಕಬಹುದಲ್ಲವೇ ಎಂದು ನೀವು ಊಹೆ ಮಾಡಿದ್ದರೆ ಅದು ಖಂಡಿತಾ ತಪ್ಪು.!! ಏಕೆಂದರೆ, ಈ ಸ್ನ್ಯಾಪ್‌ಚಾಟ್ ಕನ್ನಡಕ ಬೆಲೆ ಭಾರತದಲ್ಲಿ 15,000 ರೂಪಾಯಿಗಳಾಗಿವೆ.!!


Click it and Unblock the Notifications








