Home
Gadgets

Sony: ULT ಸರಣಿಯ ಸ್ಪೀಕರ್‌ಗಳು, ವೈಯರ್‌ಲೆಸ್ ಹೆಡ್‌ಫೋನ್ ಲಾಂಚ್ ಮಾಡಿದ ಸೋನಿ; ಫೀಚರ್ಸ್ ಏನಿರಲಿವೆ?, ಬೆಲೆ ಎಷ್ಟು?

ಸೋನಿ ( Sony ) ಕಂಪನಿ ಭಾರತದಲ್ಲಿ ತನ್ನ ULT ಪವರ್ ಸೌಂಡ್ ಸರಣಿಯನ್ನು ಲಾಂಚ್ ಮಾಡಿದೆ. ಈ ನೂತನ ಸರಣಿಯು ಬ್ಲೂಟೂತ್ ಕನೆಕ್ಟಿವಿಟಿ ಪಡೆಯುವ ಸ್ಪೀಕರ್‌ಗಳನ್ನು ಒಳಗೊಂಡಿವೆ. ಸೋನಿ ULT ಟವರ್ 10, ULT ಫೀಲ್ಡ್ 7, ULT ಫೀಲ್ಡ್ 1 ಮತ್ತು ಸೋನಿ ULT ವೇರ್ ಹೆಸರಿನ ವೈರ್‌ಲೆಸ್ ಹೆಡ್‌ಫೋನ್ ನೂತನ ಡಿವೈಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಎಲ್ಲಾ ಹೊಸ ಮಾದರಿಗಳು ULT ಬಟನ್ ಅನ್ನು ಒಳಗೊಂಡಿದ್ದು, ಅದು ಬಳಕೆದಾರರಿಗೆ ವಿಭಿನ್ನ ಧ್ವನಿ ವಿಧಾನಗಳನ್ನು ಆಯ್ಕೆ ಮಾಡಲು ಸಹಕರಿಸುತ್ತದೆ. ಸೋನಿ ಯುಎಲ್‌ಟಿ ವೇರ್-40 ಎಂಎಂ ಡ್ರೈವರ್‌ಗಳನ್ನು ಹೊಂದಿದ್ದು, 110 ಡಿಬಿ ಸೆನ್ಸಿಟಿವಿಟಿ ರೇಟಿಂಗ್ ಹೊಂದಿದೆ. ಸೋನಿ ULT ಫೀಲ್ಡ್ 7 ಮತ್ತು ULT ಫೀಲ್ಡ್ 1 ವೈರ್‌ಲೆಸ್ ಪೋರ್ಟಬಲ್ ಸ್ಪೀಕರ್‌ಗಳು ಮತ್ತು IP67 ರೇಟೆಡ್ ಬಿಲ್ಡ್ ಅನ್ನು ಹೊಂದಿವೆ.

Sony: ULT ಸರಣಿಯ ಸ್ಪೀಕರ್‌ಗಳು, ವೈಯರ್‌ಲೆಸ್ ಹೆಡ್‌ಫೋನ್ ಲಾಂಚ್ ಮಾಡಿದ ಸೋನಿ

ಭಾರತದಲ್ಲಿ ಸೋನಿ ULT ಟವರ್ 10, ULT ಫೀಲ್ಡ್ 7, ULT ಫೀಲ್ಡ್ 1, ULT ಹೆಡ್‌ಫೋನ್‌ಗಳ ಬೆಲೆ, ಲಭ್ಯತೆ:

ಸೋನಿ ULT ಟವರ್ 10 ಮತ್ತು ULT ಫೀಲ್ಡ್ 7 ಇವುಗಳ ಬೆಲೆ ಕ್ರಮವಾಗಿ 89,990 ರೂ. ಮತ್ತು 39,990 ರೂ. ಗಳಾಗಿದೆ. ಇವುಗಳು ಕಪ್ಪು ಬಣ್ಣದಲ್ಲಿ ಮಾತ್ರ ಗ್ರಾಹಕರಿಗೆ ಲಭ್ಯವಿರಲಿವೆ. ಸೋನಿ ULT ಫೀಲ್ಡ್-1 ಬೆಲೆ 10,990 ರೂ.ಗಳಾಗಿದ್ದು ಇದು ಕಪ್ಪು, ಫಾರೆಸ್ಟ್ ಗ್ರೆ, ಆರೆಂಜ್ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಕೊನೆಯದಾಗಿ ಸೋನಿ ULT ವೇರ್ ಹೆಡ್‌ಫೋನ್‌ಗಳ ಬೆಲೆ 16,990 ರೂ. ಗಳಾಗಿದ್ದು ಇದು ಕಪ್ಪು, ಫಾರೆಸ್ಟ್ ಗ್ರೇ ಮತ್ತು ಬಿಳಿ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಎಲ್ಲಾ ಮಾದರಿಗಳು ಕೂಡ ಮೇ. 27ರಿಂದಲೇ ಮಾರಾಟ ಆರಂಭಿಸಿವೆ.
ಸೋನಿ ULT ವೇರ್ ಹೆಡ್‌ಫೋನ್ ಫೀಚರ್ಸ್:

ಹೊಸದಾಗಿ ಬಿಡುಗಡೆಯಾಗಿರುವ ಸೋನಿ ULT ವೇರ್ ಹೆಡ್‌ಫೋನ್‌ 40mm ಡೈನಾಮಿಕ್ ಡ್ರೈವರ್‌ಗಳಿಂದ 5Hz-20,000Hz ಆವರ್ತನ ಪ್ರತಿಕ್ರಿಯೆ ಶ್ರೇಣಿ ಮತ್ತು 110dBಯ ಸೆನ್ಸಿಟಿವಿಟಿ ರೇಟಿಂಗ್ ಹೊಂದಿವೆ. ಈ ಹೆಡ್‌ಫೋನ್‌ ಸೋನಿಯ ಇಂಟಿಗ್ರೇಟೆಡ್ ಪ್ರೊಸೆಸರ್ V1 ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ULT ಬಟನ್ ಅನ್ನು ಒಳಗೊಂಡಿದೆ ಜೊತೆಗೆ ಶಬ್ದ ರದ್ದತಿಗಾಗಿ ಡ್ಯುಯಲ್ ಶಬ್ದ ಸಂವೇದಕ ತಂತ್ರಜ್ಞಾನ ಹೊಂದಿವೆ. ಮೃದುವಾದ ಇಯರ್ ಕುಶನ್‌ಗಳೊಂದಿಗೆ ಮಡಚಬಹುದಾದ ವಿನ್ಯಾಸ ಹೊಂದಿವೆ.

ಸೋನಿ ULT ವೇರ್ ಹೆಡ್‌ಫೋನ್‌ಗಳು ಸೆನ್ಸಾರ್ ಸೌಲಭ್ಯ ಹೊಂದಿದ್ದು, ಅದನ್ನು ಧರಿಸಿದವರು ತೆಗೆದಾಗ ಸಂಗೀತವನ್ನು ಆಫ್‌ ಆಗುವ ಹಾಗೂ ಮತ್ತೆ ಹಾಕಿದಾಗ ಆನ್‌ ಆಗುವ ಸೌಲಭ್ಯ ಹೊಂದಿದೆ. ಹೆಡ್‌ಫೋನ್‌ಗಳು ಬ್ಲೂಟೂತ್ 5.2 ಕನೆಕ್ಟಿವಿಟಿ ಹೊಂದಿವೆ. ಮತ್ತು ಅವು ಒಂದಕ್ಕಿಂತ ಹೆಚ್ಚಿನ ಡಿವೈಸ್‌ಗಳನ್ನು ಕನೆಕ್ಟ್‌ ಮಾಡುವ ವ್ಯವಸ್ಥೆ ಹೊಂದಿವೆ.

ಈ ಹೆಡ್‌ಫೋನ್‌ 30 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗಿದೆ, ಜೊತೆಗೆ 3 ನಿಮಿಷಗಳ ಚಾರ್ಜ್ ಮಾಡುವುದರಿಂದ 90 ನಿಮಿಷಗಳವರೆಗೆ ಪ್ಲೇಟೈಮ್ ಪಡೆಯಬಹುದಾಗಿದೆ. ಇದು 225 ಗ್ರಾಂ ತೂಕ ಹೊಂದಿವೆ.

ಸೋನಿ ULT ಟವರ್ 10, ULT ಫೀಲ್ಡ್ 7, ULT ಫೀಲ್ಡ್ 1 ಫೀಚರ್ಸ್:

ಸೋನಿ ULT ಟವರ್-10: ಇದು ULT ಬಟನ್ ಮತ್ತು ಕರೋಕೆ ಸೆಷನ್‌ಗಳಿಗಾಗಿ ವೈರ್‌ಲೆಸ್ ಮೈಕ್ ಹೊಂದಿದ್ದು ಇದೊಂದು ಪಾರ್ಟಿ ಸ್ಪೀಕರ್ ಆಗಿದೆ. ಬಾಕ್ಸ್ ಶೈಲಿಯ ಸ್ಪೀಕರ್ ಮೇಲಿನ ಪ್ಯಾನೆಲ್‌ನಲ್ಲಿ ಎಕೋ ಮತ್ತು ಕೀ ನಿಯಂತ್ರಣಗಳನ್ನು ಹೊಂದಿದೆ. ಇದು ಬ್ಲೂಟೂತ್ 5.2 ಸಂಪರ್ಕವನ್ನು ಹೊಂದಿದೆ ಮತ್ತು SBC, AAC ಮತ್ತು LDAC ಕೋಡೆಕ್‌ಗಳನ್ನು ಬೆಂಬಲಿಸುತ್ತದೆ. ಇದು 20kHz ನಿಂದ 20,000Hz ಆವರ್ತನ ಶ್ರೇಣಿಯನ್ನು ಹೊಂದಿದೆ.

ಸೋನಿ ULT ಫೀಲ್ಡ್-7: ಇದು ವೈಯರ್ ಲೆಸ್ ಪೋರ್ಟಬಲ್ ಸ್ಪೀಕರ್ ಆಗಿದ್ದು, ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP67 ತಂತ್ರಜ್ಞಾನ ಹೊಂದಿದೆ. ಜೊತೆಗೆ 5.2 ಬ್ಲೂಟೂತ್‌ ಕನೆಕ್ಟಿವಿಟಿ, SBC, AAC ಮತ್ತು LDAC ಕೊಡೆಕ್ ಬೆಂಬಲ ಹೊಂದಿದೆ, 20kHz ನಿಂದ 20,000Hz ಆವರ್ತನ ಶ್ರೇಣಿ ಮತ್ತು ಒಂದು ಬಾರಿ ಚಾರ್ಜ್‌ ಮಾಡಿದಾಗ 30 ಗಂಟೆಗಳವರೆಗೆ ಬ್ಯಾಟರಿ ಅವಧಿ ನೀಡುತ್ತದೆ ಎಂದು ಹೇಳಲಾಗಿದೆ. ಇದನ್ನು ಗಿಟಾರ್‌ಗೆ ಆಂಪ್ಲಿಫೈಯರ್ ಆಗಿಯೂ ಬಳಸಬಹುದು.

ಸೋನಿ ULT ಫೀಲ್ಡ್ 1 ವೈರ್‌ಲೆಸ್ ಪೋರ್ಟಬಲ್ ಸ್ಪೀಕರ್: ಇದು 12 ಗಂಟೆಗಳ ಬ್ಯಾಟರಿ ಅವಧಿ ನೀಡಲಿದ್ದು ಮತ್ತು IP67 ರೇಟೆಡ್ ಬಿಲ್ಡ್‌ನೊಂದಿಗೆ ಬರುತ್ತದೆ ಜೊತೆಗೆ 5.3 ಬ್ಲೂಟೂತ್ ಸಂಪರ್ಕ ಮತ್ತು AAC ಮತ್ತು SBC ಕೋಡೆಕ್‌ಗಳನ್ನು ಬೆಂಬಲಿಸುತ್ತದೆ.

Best Mobiles in India

English summary
Sony Company has launched its ULT Power Sound series in India. This new series includes speakers that get Bluetooth connectivity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+