Home
Gadgets

ಸೋನಿ WF-1000XM3 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ!

ಗುಣಮಟ್ಟದ ಆಡಿಯೊ ಉತ್ಪನ್ನಗಳನ್ನು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ 'ಸೋನಿ' ಇದೀಗ ಹೈ ಎಂಡ್ ವೈರ್‌ಲೆಸ್ ಇಯರ್‌ಬಡ್ಸ್ ಒಂದನ್ನು ಪರಿಚಯಿಸಿದೆ. ಡ್ಯುಯಲ್ ಶಬ್ದ ಸಂವೇದಕ ತಂತ್ರಜ್ಞಾನ, ವೇಗದ ಚಾರ್ಜಿಂಗ್ ಬೆಂಬಲ ಮತ್ತು ಬ್ಲೂಟೂತ್ ಚಿಪ್ನಂತಹ ಗಮನಾರ್ಹವಾದ ಅಂಶಗಳನ್ನು ಒಳಗೊಂಡಿರುವ ಹೈ ಎಂಡ್ ಇಯರ್‌ಬಡ್ಸ್ ಇದೀಗ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಸೋನಿ WF-1000XM3 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ!

ಹೌದು, ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಕಾಣದ ಯಶಸ್ಸನ್ನು ಪಡೆಯುವ ಸಲುವಾಗಿ ಇತ್ತೀಚಿನ ತಂತ್ರಜ್ಞಾನದ ಮೊಬೈಲ್ ಪರಿಕರಗಳನ್ನು ತಯಾರಿಸಲು ಸೋನಿ ಮುಂದಾಗಿದೆ. ಹಾಗಾಗಿ, ನೂತನವಾಗಿ 'ಡಬ್ಲ್ಯುಎಫ್ -1000 ಎಕ್ಸ್‌ಎಂ3' ಹೆಸರಿನಲ್ಲಿ ಸುಧಾರಿತ ಎನ್‌ಎಫ್‌ಸಿ ಮತ್ತು ದೀರ್ಘಕಾಲೀನ ಬ್ಯಾಟರಿ ಅವಧಿಯ ಸಾಮರ್ಥ್ಯದಇಯರ್‌ಬಡ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಸೋನಿ ಇಯರ್‌ಬಡ್ಸ್ ಏರ್‌ಫೋನ್ 17 ಗ್ರಾಂ ತೂಗುತ್ತಿದ್ದು, ಸುರಕ್ಷಿತ ಫಿಟ್ ನೀಡಲು ಟ್ರೈ-ಹೋಲ್ಡ್ ರಚನೆಯನ್ನು ಹೊಂದಿದೆ. ರಬ್ಬರ್ ಮೇಲ್ಮೈಯನ್ನು ಹೊಂದಿರುವ ಇಯರ್‌ಬಡ್‌ಗಳನ್ನು ಧರಿಸುವಾಗ ಹಿತಕರವಾದ ಫಿಟ್ ಅನ್ನು ಖಾತ್ರಿಗೊಳಿಸಲಿದೆ ಎಂದು ಕಂಪೆನಿ ತಿಳಿಸಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜಿಂಗ್ ಮಾಡಬಹುದಾದ ಸೌಲಭ್ಯವನ್ನು ನೀಡಲಾಗಿದೆ.

ಸೋನಿ WF-1000XM3 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ!

ಇನ್ನು 6 ಎಂಎಂ ಚಾಲಕ ಘಟಕ ಮತ್ತು ಡಿಜಿಟಲ್ ಸೌಂಡ್ ವರ್ಧಕ ಎಂಜಿನ್ ಎಚ್‌ಎಕ್ಸ್ ಮಾತ್ರವಲ್ಲದೇ, ಸೋನಿಯ ಹೊಸ ಮತ್ತು ಸುಧಾರಿತ ಬ್ಲೂಟೂತ್ ಚಿಪ್ ಅನ್ನು ಸಹ ಸೇರಿಸಿದೆ, ಇದು ಏಕಕಾಲದಲ್ಲಿ ಎಡ ಮತ್ತು ಬಲ ಕಿವಿಗಳಿಗೆ ಧ್ವನಿಯನ್ನು ರವಾನಿಸುತ್ತದೆ. ವ್ಯಾಪಕ ಆಂಟೆನಾವನ್ನು ವ್ಯಾಪ್ತಿಯನ್ನು ಹೊಂದುವಂತೆ ಮಾಡಲಾಗಿರುವುದು ಈ ಇಯರ್‌ಬಡ್ಸ್‌ನ ಮತ್ತೊಂದು ವೈಶಿಷ್ಟ್ಯ.

ಕ್ಯೂಎನ್ 1ಇ ಪ್ರೊಸೆಸರ್ ಹೊಂದಿರುವ ಈ ಇಯರ್‌ಬಡ್ಸ್, ಡ್ಯುಯಲ್ ಶಬ್ದ ಸಂವೇದಕದೊಂದಿಗೆ ಸಕ್ರಿಯ ಶಬ್ದ ರದ್ದತಿಯೊಂದಿಗೆ ಆಗಮಿಸಿದ್ದು, ಆಗಸ್ಟ್ ಮಧ್ಯದಲ್ಲಿ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಇನ್ನು ಇದರ ಬೆಲೆ ಜಿಬಿಪಿ 220 (ಅಂದಾಜು ರೂ.19,000)ಗಳಾಗಿದ್ದು, 32 ಗಂಟೆಗಳ ಅವಧಿಯ ಬ್ಯಾಟರಿ ಸಾಮರ್ಥ್ಯದ ಈ ಡಿವೈಸ್ ಮ್ಯೂಸಿಕ್ ಪ್ರಿಯರನ್ನು ಸೆಳೆದಿದೆ.

Best Mobiles in India

English summary
Sony WF-1000XM3 Truly Wireless Earbuds Launched With Active Noise Cancellation. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+