ಕ್ರೆಡಿಟ್‌ಕಾರ್ಡ್ ಸೈಜ್ ಪ್ಯಾಡ್‌ನಿಂದ ಎಲ್ಲಿಯಾದರೂ ಅಂಟಿಸಿ ನಿಮ್ಮ ಫೋನ್!!
ನಮಗೆ ಫೋನ್ ಅನ್ನು ಎಲ್ಲಾದರೂ ಇಡುವುದಕ್ಕೆ ಭಯವಾಗುತ್ತದೆ. ಸ್ಕ್ರೀನ್ ಎಲ್ಲಾದರೂ ಹೊಡೆದುಹೋದರೆ, ಫೋನ್ ಸ್ಕ್ರಾಚ್ ಆದರೆ ಎಂಬ ಭಯ ನಮ್ಮನ್ನು ಯಾವಾಗಲೂ ಕಾಡುತ್ತಿರುತ್ತದೆ.ಇದರ ಜೊತೆಗೆ ಸಿನಿಮಾ ನೋಡುವಾಗಲೂ ಮೊಬೈಲ್ ಹಿಡಿದೇ ಇರಬೇಕಾದ ಕಿರಿಕಿರಿ!!
ಸ್ಮಾರ್ಟ್‌ಫೋನ್ ಅನ್ನು ಉಪಯೋಗಿಸುವುದಕ್ಕಿಂತ ಅದನ್ನು ನಿರ್ವಹಣೆ ಮಾಡುವುದೇ ತಲೆನೊವು ಎನ್ನಬಹುದು.! ಹೌದು, ಬಹುತೇಕರ ಸ್ಮಾರ್ಟ್‌ಫೋನ್ ನೋಡಿದರೆ ಅವರ ಫೋನ್ ಸ್ವಲ್ಪವಾದರೂ ಹೊಡೆದುಹೋಗಿರುತ್ತದೆ. ಕೈ ಜಾರಿ ಅಥವಾ ಇನ್ನೇನೊ ಸಣ್ಣ ಸಣ್ಣ ಘಟನೆಗಳನ್ನು ನಿಮ್ಮ ಸ್ಮಾರ್ಟ್‌ಫೋನ್ ಹೊಡೆಯಲು ಕಾರಣವಾಗುತ್ತವೆ.!!
ಇನ್ನು ಯಾವಾಗಲೂ ಸ್ಮಾರ್ಟ್‌ಫೋನ್ ಬಳಸುವ ನಮಗೆ ಫೋನ್ ಅನ್ನು ಎಲ್ಲಾದರೂ ಇಡುವುದಕ್ಕೆ ಭಯವಾಗುತ್ತದೆ. ಸ್ಕ್ರೀನ್ ಎಲ್ಲಾದರೂ ಹೊಡೆದುಹೋದರೆ, ಫೋನ್ ಸ್ಕ್ರಾಚ್ ಆದರೆ ಎಂಬ ಭಯ ನಮ್ಮನ್ನು ಯಾವಾಗಲೂ ಕಾಡುತ್ತಿರುತ್ತದೆ.! ಇದರ ಜೊತೆಗೆ ಸಿನಿಮಾ ನೋಡುವಾಗಲೂ ಮೊಬೈಲ್ ಹಿಡಿದೇ ಇರಬೇಕಾದ ಕಿರಿಕಿರಿ. ಅಲ್ಲವೇ?
ಹಾಗಾಗಿಯೇ, ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ನಿಮಗೆ ಮ್ಯಾಗ್‌ನಟ್ ಪ್ಯಾಡ್ ಒಂದು ಹುಟ್ಟಿಕೊಂಡಿದೆ.!! ಈ ಪ್ಯಾಡ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ನಿರ್ವಹಣೆ ಸುಲಭವಾಗಬಹುದು.!! ಹಾಗಾದರೆ, ಏನಿದು ಮ್ಯಾಗ್‌ನಟ್ ಪ್ಯಾಡ್? ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇದು 'ನ್ಯಾನೊಪ್ಯಾಡ್'!!
ಗ್ಲಾಸ್, ಮಿರರ್, ವುಡ್, ಕಬ್ಬಿಣ ಅಥವಾ ಸೆರಾಮಿಕ್ ಟೈಲ್ಸ್ ಯಾವುದಕ್ಕೆ ಆದರೂ ಈ ನ್ಯಾನೊಪ್ಯಾಡ್ ಸಹಾಯದಿಂದ ಸ್ಮಾರ್ಟ್‌ಫೋನ್ ಅನ್ನು ಅಂಟಿಸಬಹುದು.!! ಹೀಗೆ ನ್ಯಾನೊಪ್ಯಾಡ್ ಬಳಸಿ ಸ್ಮಾರ್ಟ್‌ಫೋನ್ ಅನ್ನು ಎಲ್ಲೆಲ್ಲೊ ಇಟ್ಟು ಹಾಳುಮಾಡಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.!!

ಹಲವು ಕೆಲಸಕ್ಕೆ ಒಂದೇ ಪ್ಯಾಡ್!!
ಸಿನಿಮಾ ನೂಡುವಾಗ ಯಾವಾಗಲು ಸ್ಮಾರ್ಟ್‌ಪೊನ್ ಕೈನಲ್ಲಿಯೇ ಹಿಡಿದು ಕೂರಲು ಸಾಧ್ಯವಿಲ್ಲಾ. ಪ್ರಯಾಣಿಸುವಾಗಲೂ ಸಹ ಇದೇ ಪರಿಸ್ಥಿತಿ ಇರುತ್ತದೆ.! ಅಂತಹ ಸಮಯದಲ್ಲಿ ಈ 'ನ್ಯಾನೊಪ್ಯಾಡ್' ಬಳಕೆ ಮಾಡಿದರೆ ಯಾವುದೇ ಅಡೆತಡೆ ಇಲ್ಲದೇ ಸುರಕ್ಷಿತವಾಗಿ ನೀವು ಸ್ಮಾರ್ಟ್‌ಫೋನ್ ಬಳಕೆ ಮಾಡಬಹುದು.!!

ನೀರು ನಿರೋಧಕ ಈ ನ್ಯಾನೊಪ್ಯಾಡ್!!
'ನ್ಯಾನೊಪ್ಯಾಡ್' ತಾಪಮಾನ ಮತ್ತು ನೀರಿನ ಪ್ರಭಾವಕ್ಕೆ ನಿರೋಧಕವಾಗಿದೆ. ವಾಮಾನದ ಪರಿಸ್ಥಿತಿ ಪ್ಯಾಡ್ ಮೇಲೆ ಪರಿಣಾಮ ಬೀರದೇ ಇರುವುದರಿಂದ ಸ್ಮಾರ್ಟ್‌ಫೋನ್ ಹಿಡಿದುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುವುದಿಲ್ಲ.!! ಹಾಗಾಗಿ, ನ್ಯಾನೊಪ್ಯಾಡ್ನಿಂದ ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಸುರಕ್ಷಿತವಾಗಿರುತ್ತದೆ ಎನ್ನಬಹುದು.!!


ಕ್ರೆಡಿಟ್ ಕಾರ್ಡ್ ದಪ್ಪವಿದೆ ನ್ಯಾನೊಪ್ಯಾಡ್!!
ನಿಖರವಾದ ವಿನ್ಯಾಸ ಮತ್ತು ಹೊಂದಿಕೊಳ್ಳುವ ಆಕಾರವನ್ನು ಈ ನ್ಯಾನೊಪ್ಯಾಡ್ಗಳು ಹೊಂದಿವೆ. ನ್ಯಾನೊಪ್ಯಾಡ್ ಕ್ರೆಡಿಟ್ ಕಾರ್ಡ್ (2.2 x 3.4 ಇಂಚುಗಳು) ನಷ್ಟು ದಪ್ಪವಿರಲಿದ್ದು, ನಿಮ್ಮಸ್ಮಾರ್ಟ್‌ಫೋನ್ ಅಂದವನ್ನು ಸಹ ಕೆಡಿಸುವುದಿಲ್ಲ.!! ಇದನ್ನು ನಿಮ್ಮ ಮೊಬೈಲ್ ಕವರ್ ಆಗಿ ಯೂಸ್ ಮಾಡಬಹುದು.!!


Click it and Unblock the Notifications








