Home
Gadgets

Smartwatches: 5000 ರೂ. ಗಳ ಒಳಗೆ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್‌ವಾಚ್‌ಗಳಿವು; ಫಿಚರ್ಸ್‌ ತಿಳಿಯಿರಿ

ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್‌ವಾಚ್‌ಗಳು (Smartwatches) ಪ್ರತಿಯೊಬ್ಬರೂ ಖರೀದಿಸುವ ಡಿವೈಸ್‌ಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಬಗೆಯ ಫೀಚರ್ಸ್ ಹೊಂದಿರುವ ಅನೇಕ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿವೆ. ಒಂದು ವೇಳೆ ನೀವೇನಾದರು 5,000 ರೂ.ಗಳಿಗಿಂತ ಕಡಿಮೆ ದರದಲ್ಲಿ ಸ್ಮಾರ್ಟ್ ವಾಚ್ ಖರೀದಿಸುವ ಯೋಜನೆ ಹೊಂದಿದ್ದರೆ. ಸ್ಮಾರ್ಟ್‌ವಾಚ್‌ನಲ್ಲಿ ಯಾವ ರೀತಿಯ ಫೀಚರ್ಸ್‌ ಇರಬೇಕು ಎಂಬ ಅಂಶಗಳನ್ನು ತಿಳಿದುಕೊಂಡಿರಬೇಕು, ಅದರಂತೆ ನಾವು ನಿಮಗೆ 5000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಉತ್ತಮ ಫೀಚರ್ಸ್ ಹೊಂದಿರುವ ಬೆಸ್ಟ್ ಸ್ಮಾರ್ಟ್‌ ವಾಚ್‌ಗಳ ಲಿಸ್ಟ್‌ ನೀಡಿದ್ದೇವೆ ಅವುಗಳ ಕುರಿತು ತಿಳಿಯಲು ಈ ಲೇಖನ ಓದಿರಿ.

1-ಸಿಎಂಎಫ್ ವಾಚ್ ಪ್ರೊ (CMF Watch Pro): ಪುರುಷ ಹಾಗೂ ಮಹಿಳೆ ಇಬ್ಬರೂ ಬಳಸಬಹುದಾದ ಈ ಸ್ಮಾರ್ಟ್‌ ವಾಚ್ ಆರೆಂಜ್, ಡಾರ್ಕ್ ಗ್ರೇ ಮತ್ತು ಆಶ್ ಗ್ರೇ ಬಣ್ಣಗಳಲ್ಲಿ ಲಭ್ಯವಿದ್ದು, ವಿಶಿಷ್ಟ ವಿನ್ಯಾಸದೊಂದಿಗೆ ಪ್ರೀಮಿಯಂ ಅನುಭವ ಒದಗಿಸುವ ಗುರಿ ಹೊಂದಿದೆ. ಹಗುರವಾದ ಗಡಿಯಾರ ಮತ್ತು ದಪ್ಪವಾದ ಬೆಜೆಲ್‌ಗಳ ಜೊತೆಗೆ ಬೆಸ್ಟ್‌ AMOLED ಡಿಸ್‌ಪ್ಲೇ ಹೊಂದಿದೆ. ಜೊತೆಗೆ ನೀರು ಹಾಗೂ ಧೂಳಿನಿಂದ ರಕ್ಷಣೆ ಪಡೆಯಲು IP68 ತಂತ್ರಜ್ಞಾನ ಹೊಂದಿದೆ. ಈ ವಾಚ್‌ ಫಿಟ್‌ನೆಸ್ ಡೇಟಾ ಮತ್ತು ಸ್ಪೋರ್ಟ್ಸ್ ಮೋಡ್‌ಗಳನ್ನು ಒದಗಿಸುತ್ತದೆ. ಈ ವಾಚ್ 14 ದಿನಗಳವರೆಗಿನ ಬಲಿಷ್ಟ ಬ್ಯಾಟರಿ ಸೌಲಭ್ಯ ಹೊಂದಿದ್ದು, 4,499 ರೂ. ಗಳಲ್ಲಿ ಗ್ರಾಹಕರ ಕೈ ಸೇರಲಿದೆ.

5000 ರೂ. ಗಳ ಒಳಗೆ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್‌ವಾಚ್‌ಗಳಿವು

2- ಜಸ್ಟ್ ಕಾರ್ಸೆಕಾ ರೇ ಕನಾಬಿಸ್ (Just Corseca Ray Kanabis): ಸ್ರೀ ಮತ್ತು ಪುರುಷ ಇಬ್ಬರೂ ಈ ಸಾಧನವನ್ನು ಬಳಸಬಹುದಾಗಿದ್ದು, ವಿಶಿಷ್ಟವಾದ ಮತ್ತು ಒರಟಾದ ವಿನ್ಯಾಸವನ್ನು ಹೊಂದಿದೆ, ಧೂಳು ಮತ್ತು ನೀರಿನ ರಕ್ಷಣೆಗೆ IP68 ರೇಟೆಡ್ ಹೊಂದಿದೆ. ಸ್ಮಾರ್ಟ್‌ವಾಚ್‌ನಲ್ಲಿ ಸ್ಪೀಕರ್ ಮತ್ತು ಮೈಕ್ರೊಫೋನ್‌ನೊಂದಿಗೆ ಅಂತರ್‌ನಿರ್ಮಿತ ಬ್ಲೂಟೂತ್ ಸ್ಪೀಕರ್‌ಫೋನ್ ಸಿಸ್ಟಮ್ ಹೊಂದಿದೆ. ಇದನ್ನು ಬ್ಲೂಟೂತ್ ಸ್ಪೀಕರ್‌ನಂತೆ ಸ್ಮಾರ್ಟ್‌ಫೋನ್‌ ಜೊತೆ ಜೋಡಿಸಬಹುದು ಮತ್ತು ಕರೆ ಬಂದಾಗ ಬಳಸಬಹುದು. ರೌಂಡ್ ಆಕಾರ ಹೊಂದಿರುವ ಈ ವಾಚ್‌ನ ಬೆಲೆ 4,650 ರೂ. ಗಳಾಗಿದ್ದು ನಿಮ್ಮ ಬೆಲೆಗೆ ಉತ್ತಮ ಮೌಲ್ಯದ್ದಾಗಿದೆ.

3 ಒನ್‌ಪ್ಲಸ್ ನಾರ್ಡ್‌ ವಾಚ್ (OnePlus Nord Watch): 4,998 ಮೌಲ್ಯದ ಈ ಸ್ಮಾರ್ಟ್‌ ವಾಚ್ ಅನ್ನು ಪುರುಷರು ಸೇರಿದಂತೆ ಮಹಿಳೆಯರು ಕೂಡ ಬಳಸಬಹುದಾಗಿದೆ. ಇದು ಡೀಪ್ ಬ್ಲೂ ಹಾಗೂ ಮಿಡ್‌ನೈಟ್ ಡಾರ್ಕ್ ಕಲರ್‌ಗಳಲ್ಲಿ ಲಭ್ಯವಿದ್ದು, 45mm ಡಿಸ್‌ಪ್ಲೇ ಹೊಂದಿದೆ. ಆಂಡ್ರಾಯ್ಡ್‌ 6, iOS 11 ಜೊತೆಗೆ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿದೆ. ಹಾಗೂ ಚೌಕಾಕಾರದ ಶೈಲಿಯಲ್ಲಿ ಗ್ರಾಹಕರಿಗೆ ಸಿಗಲಿದೆ.

4- ನಾಯ್ಸ್‌ ಕಲರ್ ಫಿಟ್ ವರ್ಷನ್ 3 (Noise ColorFit Vision 3): 4,999 ರೂ. ಮೌಲ್ಯದ ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ iOS, 49mm ಇಂಚಿನ ಚೌಕಾಕಾರದ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿದೆ. ಇದು ಜೆಟ್ ಬ್ಲಾಕ್, ಕ್ಲಾಸಿಕ್ ಬ್ರೌನ್, ಫಾರೆಸ್ಟ್‌ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ಖರೀದಿಸಬಹುದಾಗಿದೆ.

5- ರಿಯಲ್‌ಮಿ ವಾಚ್‌ S ಪ್ರೊ (Realme Watch S Pro): ಇದು ಸ್ರೀಯರು ಹಾಗೂ ಪುರುಷರು ಬಳಸಬಹುದಾದ ಸ್ಮಾರ್ಟ್‌ವಾಚ್ ಆಗಿದ್ದು, 4,999 ರೂ. ಬೆಲೆ ಹೊಂದಿದೆ. ಜೊತೆಗೆ ಇದು ಕಪ್ಪು, ನೀಲಿ, ಆರೆಂಜ್ ಹಾಗೂ ಹಸಿರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರು ಖರೀದಿಸಬುಹುದು. 33mm ಡಿಸ್‌ಪ್ಲೇ ಜೊತೆಗೆ ಆಂಡ್ರಾಯ್ಡ್‌ iOS ಹೊಂದಿದೆ. ಸಿಲಿಕಾನ್ ಬಾಡಿ ಹೊಂದಿರುವ ಈ ವಾಚ್ ರೌಂಡ್ ಶೇಪ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಇವುಗಳ ಜೊತೆಗೆ ಬೋಟ್, ಫಾಸ್ಟ್ರಾಕ್‌ನ ಕೆಲವು ವಾಚ್‌ಗಳು ಕೂಡ ನಿಮಗೆ 5000ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿವೆ.

Best Mobiles in India

English summary
We have given you a list of best Smartwatches with great features under 5000, read this article to know about them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+