Home
Gadgets

ಗೂಗಲ್ ಪಿಕ್ಸೆಲ್ ವಾಚ್ 4: ದಪ್ಪವಾದ ಡಯಲ್‌ನೊಂದಿಗೆ ಬರುವ ಸಾಧ್ಯತೆ!

ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಪಿಕ್ಸೆಲ್ 10 ಸರಣಿಯೊಂದಿಗೆ 'ಗೂಗಲ್ ಪಿಕ್ಸೆಲ್ ವಾಚ್ 4' (Pixel Watch 4) ಕೂಡ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಈ ಹೊಸ ಗೂಗಲ್ ಪಿಕ್ಸೆಲ್ ವಾಚ್‌ನ ಬಿಡುಗಡೆಗೆ ಇನ್ನೂ ಕೆಲವು ತಿಂಗಳುಗಳಿವೆ. ಆದರೂ ಈ ವಾಚ್ ಕುರಿತಂತೆ ಕುತೂಹಲ ಮತ್ತು ನಿರೀಕ್ಷೆಗಳು ಯಾವಾಗಲೂ ಇರುತ್ತವೆ. ಇತ್ತೀಚಿನ ಸೋರಿಕೆಗಳ ಪ್ರಕಾರ, ಈ ಹೊಸ 'ಪಿಕ್ಸೆಲ್ ವಾಚ್ 4' ಸ್ಮಾರ್ಟ್‌ವಾಚ್ ಗಮನಾರ್ಹ ವಿನ್ಯಾಸ ಬದಲಾವಣೆಯೊಂದಿಗೆ ಬರಲಿದ್ದು, ದಪ್ಪವಾದ ದೇಹವನ್ನು ಹೊಂದಿರಲಿದೆ. ಇದು ದೊಡ್ಡ ಬ್ಯಾಟರಿಯನ್ನು ಅಳವಡಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.

ಖ್ಯಾತ ಸೋರಿಕೆಯ ತಜ್ಞ ಸ್ಟೀವ್ ಹೆಮ್ಮರ್‌ಸ್ಟಾಫರ್ (OnLeaks) ಅವರು 91 ಮೊಬೈಲ್ಸ್‌ ಸಹಯೋಗದೊಂದಿಗೆ ಬಿಡುಗಡೆ ಮಾಡಿದ ರೆಂಡರ್‌ಗಳ ಪ್ರಕಾರ, ಪಿಕ್ಸೆಲ್ ವಾಚ್ 4 ಸುಮಾರು 14.3 ಮಿಮೀ ದಪ್ಪವನ್ನು ಹೊಂದಿರಬಹುದು. ಇದು ಹಿಂದಿನ ಪಿಕ್ಸೆಲ್ ವಾಚ್ 3 ರ 12.3 ಮಿಮೀ ದಪ್ಪಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ. ಈ ಬದಲಾವಣೆಯು ಗೂಗಲ್ ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್‌ವಾಚ್‌ನಲ್ಲಿ ಉತ್ತಮ ಬ್ಯಾಟರಿ ಬಾಳಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ, ಇದರಿಂದಾಗಿ ಅದು ಮಾರುಕಟ್ಟೆಯಲ್ಲಿನ ಇತರ ಸ್ಪರ್ಧಿಗಳಿಗೆ ಸಮನಾಗಿ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಸೋರಿಕೆಯ ಮಾಹಿತಿಯಂತೆ, ಪಿಕ್ಸೆಲ್ ವಾಚ್ 4 ತನ್ನ ಹಿಂದಿನ ಮಾದರಿಯಂತೆಯೇ ವೃತ್ತಾಕಾರದ ವಿನ್ಯಾಸವನ್ನು ಉಳಿಸಿಕೊಂಡಿದ್ದರೂ, ಅದು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರಬಹುದು. ಇದರಿಂದ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಅಳವಡಿಸಲು ಅವಕಾಶ ಮಾಡಿಕೊಡುತ್ತದೆ, ಇದು ಪಿಕ್ಸೆಲ್ ವಾಚ್ ಬಳಕೆದಾರರು ಈ ಹಿಂದೆ ವ್ಯಕ್ತಪಡಿಸಿದ ಪ್ರಮುಖ ಸಮಸ್ಯೆಯಲ್ಲಿ ಒಂದಾದ ಕಡಿಮೆ ಬ್ಯಾಟರಿ ಬಾಳಿಕೆಯ ಸಮಸ್ಯೆಯನ್ನು ಪರಿಹರಿಸುವ ನಿರೀಕ್ಷೆಯಿದೆ. ಉದಾಹರಣೆಗೆ, ಪಿಕ್ಸೆಲ್ ವಾಚ್ 3 ರ 41mm ಮಾದರಿಯು 307mAh ಬ್ಯಾಟರಿಯನ್ನು ಹೊಂದಿದ್ದರೆ, 45mm ಮಾದರಿಯು 420mAh ಬ್ಯಾಟರಿಯನ್ನು ಒಳಗೊಂಡಿದೆ.

ಗೂಗಲ್ ಪಿಕ್ಸೆಲ್ ವಾಚ್ 4: ದಪ್ಪವಾದ ಡಯಲ್‌ನೊಂದಿಗೆ ಬರುವ ಸಾಧ್ಯತೆ!

ನಾವು ಪಿಕ್ಸೆಲ್ ವಾಚ್ 3 ಅನ್ನು ಬಳಕೆದಾರರು ಪ್ರತಿದಿನ ತಮ್ಮ ಗಡಿಯಾರವನ್ನು ಚಾರ್ಜ್ ಮಾಡಬೇಕಾಗಿತ್ತು. ಈ ಹೊಸ ಪಿಕ್ಸೆಲ್ ವಾಚ್‌ನೊಂದಿಗೆ, ಗೂಗಲ್ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಹೊಸ ಪಿಕ್ಸೆಲ್ ವಾಚ್ 4 ನಲ್ಲಿ ಗ್ರಾಹಕರು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 6 (425mAh ಬ್ಯಾಟರಿ ಮತ್ತು 36 ಗಂಟೆಗಳ ಬಳಕೆಯೊಂದಿಗೆ) ಮತ್ತು ಆಪಲ್ ವಾಚ್ ಸರಣಿ 9 ರಂತಹ (ಸುಮಾರು 36 ಗಂಟೆಗಳ ಬಳಕೆಯೊಂದಿಗೆ) ಸ್ಪರ್ಧಿಗಳಿಗೆ ಸರಿಸಾಟಿಯಾಗುವ ಬ್ಯಾಟರಿ ಬಾಳಿಕೆಯನ್ನು ನಿರೀಕ್ಷಿಸಬಹುದು. ಈ ವರ್ಷ ಆಪಲ್ ಮತ್ತು ಸ್ಯಾಮ್‌ಸಂಗ್ ಕೂಡ ಮತ್ತಷ್ಟು ಸುಧಾರಣೆಗಳನ್ನು ತರುವ ನಿರೀಕ್ಷೆಯಿದೆ.

ಬ್ಯಾಟರಿಯ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯದ ಬಗ್ಗೆಯೂ ಸುಳಿವು ಸಿಕ್ಕಿದೆ. ಹಿಂಭಾಗದ ಚಿತ್ರಗಳಲ್ಲಿ ಯಾವುದೇ ಮ್ಯಾಗ್ನೆಟಿಕ್ ಚಾರ್ಜಿಂಗ್ ಪಿನ್‌ಗಳು ಕಾಣಿಸದ ಕಾರಣ, ಗೂಗಲ್ USB-C ಯಿಂದ Qi ವೈರ್‌ಲೆಸ್ ಚಾರ್ಜಿಂಗ್‌ಗೆ ಬದಲಾಗುವ ಸಾಧ್ಯತೆ ಇದೆ. ಡಿಸ್‌ಪ್ಲೇಗೆ ಸಂಬಂಧಿಸಿದಂತೆ, ಅದು ಅಂಚಿನಿಂದ ಅಂಚಿಗೆ ವಿಸ್ತರಿಸಿರುವಂತೆ ಕಾಣುತ್ತದೆ. ಇದು ಗಡಿಯಾರಕ್ಕೆ ಹೆಚ್ಚು ಆಧುನಿಕ ನೋಟವನ್ನು ನೀಡುತ್ತದೆ. ರೆಂಡರ್‌ನಲ್ಲಿ ಸ್ಪೀಕರ್‌ನ ಪಕ್ಕದಲ್ಲಿ ಎರಡು ಹೆಚ್ಚುವರಿ ಬಟನ್‌ಗಳನ್ನು ಸಹ ಕಾಣಬಹುದು, ಇವುಗಳನ್ನು ಬಹುಶಃ ತ್ವರಿತ ಶಾರ್ಟ್‌ಕಟ್‌ಗಳು ಅಥವಾ ಫಿಟ್‌ನೆಸ್ ನಿಯಂತ್ರಣಗಳಿಗಾಗಿ ನೀಡಲಾಗಿರಬಹುದು.

ಕಳೆದ ವರ್ಷ ಬಿಡುಗಡೆಯಾದ ಪಿಕ್ಸೆಲ್ ವಾಚ್ 3 ದೊಡ್ಡ 45mm ಡಯಲ್ ಗಾತ್ರದೊಂದಿಗೆ ಬಂದಿದ್ದು, ಇದು ಅನೇಕ ಪಿಕ್ಸೆಲ್ ಬಳಕೆದಾರರು ಬಹಳ ಸಮಯದಿಂದ ಕಾಯುತ್ತಿದ್ದ ವೈಶಿಷ್ಟ್ಯವಾಗಿತ್ತು.ಇದಲ್ಲದೆ, ಪಿಕ್ಸೆಲ್ ವಾಚ್ 3 ಆಕ್ಟುವಾ ಡಿಸ್ಪ್ಲೇಯನ್ನು ಹೊಂದಿತ್ತು, ಇದು 2000 ನಿಟ್ಸ್ ವರೆಗೆ ಹೊಳಪನ್ನು ನೀಡುತ್ತದೆ. ಪಿಕ್ಸೆಲ್ ವಾಚ್ 2 ಗೆ ಹೋಲಿಸಿದರೆ ಇದು ಸುಧಾರಿತ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿತ್ತು, ಆದರೂ ವೈರ್‌ಲೆಸ್ ಚಾರ್ಜಿಂಗ್‌ನ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಕಾರ್ಡಿಯೋ ಲೋಡ್ ಸೇರಿದಂತೆ ಸಾಕಷ್ಟು ಹೊಸ ಆರೋಗ್ಯ ಸಂಬಂಧಿತ ವೈಶಿಷ್ಟ್ಯಗಳನ್ನು ಸೇರಿಸಲಾಗಿತ್ತು.

ಪಿಕ್ಸೆಲ್ ವಾಚ್ 4 ಗೆ ಸಂಬಂಧಿಸಿದಂತೆ, ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬ್ಯಾಟರಿ ಬಾಳಿಕೆ, ಹೆಚ್ಚಿನ ವೈಶಿಷ್ಟ್ಯಗಳ ಲಭ್ಯತೆ (ಕಳೆದ ವರ್ಷ ಪರಿಚಯಿಸಲಾದ ಪಲ್ಸ್ ಡಿಟೆಕ್ಷನ್ ಇಲ್ಲಿ ಲಭ್ಯವಿರಲಿಲ್ಲ) ಮತ್ತು ECG ಯಂತಹ ವೈಶಿಷ್ಟ್ಯಗಳಲ್ಲಿನ ಸುಧಾರಣೆಗಳನ್ನು ನಾವು ನಿರೀಕ್ಷಿಸುತ್ತೇವೆ. ಗೂಗಲ್ ತನ್ನ ಹೊಸ ಸ್ಮಾರ್ಟ್‌ವಾಚ್‌ನೊಂದಿಗೆ ಬಳಕೆದಾರರ ನಿರೀಕ್ಷೆಗಳನ್ನು ಮೀರುತ್ತದೆಯೇ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?, ನೀವು ಕೂಡ 'ಗೂಗಲ್ ಪಿಕ್ಸೆಲ್ ವಾಚ್ 4' ಕುರಿತು ಕುತೂಹಲ ಹೊಂದಿದ್ದೀರಾ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Google Pixel Watch 4 is anticipated to be released alongside the Pixel 10 series later this year, boasting a thicker design to accommodate a larger battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+