ನೂತನ ಲ್ಯಾಪ್‌ಟಾಪ್‌ನಲ್ಲಿ ಬಳಕೆದಾರರು ಈ ಕ್ರಮಗಳನ್ನು ಫಾಲೋ ಮಾಡಬೇಕು!
ಸದ್ಯ ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್‌ಗಳು ಎಷ್ಟು ಅಗತ್ಯವೋ, ಲ್ಯಾಪ್‌ಟಾಪ್‌ಗಳು ಸಹ ಅಷ್ಟೇ ಅಗತ್ಯ ಎಂದೇನಿಸಿಕೊಳ್ಳುತ್ತವೆ. ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಕೆಲಸಗಳನ್ನು ಲ್ಯಾಪ್‌ಟಾಪ್‌ಗಳಲ್ಲಿ ಕಂಫರ್ಟ್ ಆಗಿ ಮತ್ತು ವೇಗವಾಗಿ ಮಾಡಬಹುದಾಗಿದೆ. ಹೀಗಾಗಿ ಲ್ಯಾಪ್‌ಟಾಪ್ ಹತ್ತು ಹಲವು ಕಾರಣಗಳಿಂದ ಅತೀ ಉಪಯುಕ್ತ ಸಾಧನ ಎನಿಸಿದೆ. ಎಂಥಾ ದುಬಾರಿ ಫೋನ್ ಇದ್ದರೂ ಗ್ರಾಹಕರು ಲ್ಯಾಪ್‌ಟಾಪ್ ಖರೀದಿಸಲು ಮುಂದಾಗುತ್ತಾರೆ.

ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪನಿಗಳ ಲ್ಯಾಪ್‌ಟಾಪ್‌ಗಳು ಲಭ್ಯವಿದ್ದು, ಗ್ರಾಹಕರು ಅವುಗಳಲ್ಲಿ ಅತ್ಯುತ್ತಮ ಫೀಚರ್ಸ್‌ಗಳಿರುವ ಲ್ಯಾಪ್‌ಟಾಪ್‌ಗಳನ್ನು ಮೊದಲ ಆಯ್ಕೆ ಆಗಿರುತ್ತದೆ. ಲ್ಯಾಪ್‌ಟಾಪ್ ಖರೀದಿಯ ನಂತರ ನಿಮ್ಮ ಹೊಸ ಲ್ಯಾಪ್‌ಟಾಪ್‌ಗೆ ಅಗತ್ಯವಾಗಿ ಕೆಲವು ಆಪ್‌ಗಳನ್ನು ಮತ್ತು ಸಾಫ್ಟ್‌ವೇರಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಿರುತ್ತದೆ. ಹಾಗಾದರೇ ನೂತನ ಲ್ಯಾಪ್‌ಟಾಪ್‌ನಲ್ಲಿ ಬಳಕೆದಾರರು ಅನುಸರಿಸಬೇಕಾದ ಕೆಲವು ಹಂತಗಳ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಆಯಂಟಿ ವೈರಸ್ ಇನ್‌ಸ್ಟಾಲ್ ಮಾಡಿರಿ
ನಿಮ್ಮ ಹೊಸ ಲ್ಯಾಪ್‌ಟಾಪ್‌ಗೆ ಅತ್ಯುತ್ತಮ ಆಯಂಟಿ ವೈರಸ್ ಇನ್‌ಸ್ಟಾಲ್ ಮಾಡಿಕೊಳ್ಳುವುದನ್ನು ಮರೆಯದಿರಿ. ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಟ್ ಬಳಕೆಯ ವೇಳೆ ಆಯಂಟಿ ವೈರಸ್‌ಗಳು ರಕ್ಷಣೆ ಒದಗಿಸುವುದರ ಜೊತೆಗೆ ಒಟ್ಟಾರೆ ಸುರಕ್ಷತೆ ನೀಡುತ್ತದೆ. ಆನ್‌ಲೈನ್‌ನಲ್ಲಿ ಹಲವು ಉತ್ತಮ ಉಚಿತ ಆಯಂಟಿ ವೈರಸ್‌ಗಳು ಲಭ್ಯ ಇವೆ.

ಲಾಗಿನ್ ಸೆಕ್ಯುರಿಟಿ ಪಾಸ್‌ವರ್ಡ್
ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕಛೇರಿಗೆ ಸಂಭಂದಿಸಿದ ಮತ್ತು ವೈಯಕ್ತಿಕ ಮಾಹಿತಿಗಳನ್ನು ಶೇಖರಿಸಿರುತ್ತಿರಿ. ಹೀಗಾಗಿ ಲ್ಯಾಪ್‌ಟಾಪ್‌ಗೆ ಲಾಗಿನ್ ಭದ್ರತೆ ಒದಗಿಸುವುದು ಮುಖ್ಯವಾಗಿರುತ್ತದೆ. ಪ್ರಸ್ತುತ ಹೊಸ ಲ್ಯಾಪ್‌ಟಾಪ್ ಮಾದರಿಗಳು ಫೇಸ್ ಲಾಗಿನ್ ಆಯ್ಕೆ ಮತ್ತು ಫಿಂಗರ್‌ಪ್ರಿಂಟ್ ಅಥೇಟಿಕೇಶನ್ ಆಯ್ಕೆ ಒಳಗೊಂಡಿರುತ್ತವೆ. ಇಲ್ಲದಿದ್ದರೇ ಪಾಸ್‌ವರ್ಡ್ ಆದರೂ ಇಟ್ಟುಕೊಳ್ಳಿ.

ಬ್ರೌಸರ್ ಇನ್‌ಸ್ಟಾಲ್ ಮಾಡಿಕೊಳ್ಳಿ
ಲ್ಯಾಪ್‌ಟಾಪ್ ನಲ್ಲಿ ಇಂಟರ್ನೆಟ್ ಬಳಕೆ ಮಾಡಿಕೊಳ್ಳುವುದಕ್ಕಾಗಿ ಸೂಕ್ತ ಬ್ರೌಸರ್ ಅನ್ನು ಇನ್‌ಸ್ಟಾನ್ ಮಾಡಿಕೊಳ್ಳಿ. ಗೂಗಲ್ ಕ್ರೋಮ್ ಅಥವಾ ಫೈರ್‌ಬಾಕ್ಸ್ ಬ್ರೌಸರ್‌ಗಳಲ್ಲಿ ನೀವು ಖಾತೆಯನ್ನು ಹೊಂದಿದ್ದರೇ ಅವುಗಳನ್ನೇ ಬಳೆಸುವುದು ಉತ್ತಮ.

ಡಿಸ್‌ಪ್ಲೇ ಸೆಟ್ಟಿಂಗ್ ಮಾಡಿಕೊಳ್ಳಿ
ಬಹುತೇಕ ಲ್ಯಾಪ್‌ಟಾಪ್‌ಗಳು ಹೈ ರೆಸಲ್ಯೂಶನ್ ಸಾಮರ್ಥ್ಯದಲ್ಲಿರುವ ಜೊತೆಗ ಶಾರ್ಪ್ ಮತ್ತು ಕಲರ್‌ಫುಲ್ ಆಗಿರುತ್ತವೆ. ಹೀಗಾಗಿ ನಿಮ್ಮ ಅಗತ್ಯತೆಗೆ ಅನುಗುಣವಾಗಿ ಸೆಟ್ಟಿಂಗ್ ಮಾಡಿಕೊಳ್ಳಿ. ಇದರೊಂದಿಗೆ ಫಾಂಟ್, ವಾಲ್‌ಪೇಪರ್, ಇತರೆ ಡಿಸ್‌ಪ್ಲೇ ಸ್ಕೇಲಿಂಗ್ ಆಯ್ಕೆಗಳನ್ನು ಬದಲಾಯಿಸಿಕೊಳ್ಳಿರಿ.

ಡೇಟಾ ಟ್ರಾನ್ಸ್‌ಫರ್ ಮಾಡುವುದು ಮರೆಯದಿರಿ
ನಿಮ್ಮ ಫೋಟೊ, ವಿಡಿಯೊ, ಡಾಕ್ಯುಮೆಂಟ್, ಅಥವಾ ಇತರೆ ಯಾವುದೇ ಫೈಲ್‌ಗಳನ್ನು ಹೊಸ ಲ್ಯಾಪ್‌ಟಾಪ್‌ಗೆ ಟ್ರಾನ್ಸ್‌ಫರ್ ಮಾಡಿಕೊಳ್ಳಿರಿ. ಹಾಗೇ ಡ್ರಾಪ್‌ಬಾಕ್ಸ್ ಮತ್ತು ಗೂಗಲ್ ಡ್ರೈವ್ ಆನ್‌ಲೈನ್ ಸ್ಟೋರೆಜ್‌ಗಳಲ್ಲಿ ಸಂಗ್ರಹಿಸಿರುವ ನಿಮ್ಮ ಎಲ್ಲ ಬಗೆಯ ಡಾಕ್ಯುಮೆಂಟಗಳನ್ನು ಹೊಸ ಲ್ಯಾಪ್‌ಟಾಪ್‌ಗೆ ಕಾಪಿ ಮಾಡಿಕೊಳ್ಳಿ ಮತ್ತು ಸಿಂಕ್ ಮಾಡಿರಿ.


Click it and Unblock the Notifications








