20,000 ರುಪಾಯಿ ಒಳಗೆ 1ಟಿಬಿ ಸ್ಟೋರೇಜ್ ಜಾಗವಿರುವ ಲ್ಯಾಪ್ ಟಾಪ್ ಗಳು
ನೀವು ನಿಮ್ಮ ಲ್ಯಾಪ್ ಟಾಪ್ ನ್ನು ಅಪ್ ಗ್ರೇಡ್ ಮಾಡಲು ಬಯಸುತ್ತಿದ್ದೀರಾ? ದುಬಾರಿಯಲ್ಲದ ಮತ್ತು ನೂತನ ಮಾಡೆಲ್ ನ ಲ್ಯಾಪ್ ಟಾಪ್ ಬೇಕು ಎಂದುಕೊಳ್ಳುತ್ತಿದ್ದೀರಾ? ನಿಮ್ಮೆಲ್ಲಾ ವಯಕ್ತಿಕ ಕೆಲಸಗಳನ್ನು ಅಂದರೆ ಇಮೇಲ್ ಕಳಿಸುವಿಕೆ, ಇಂಟರ್ನೆಟ್ ಬ್ರೌಸ್ ಮಾಡುವುದು ಮತ್ತು ಇತ್ಯಾದಿ ಕೆಲಸಗಳನ್ನು ನಿರ್ವಹಿಸುವ ಲ್ಯಾಪ್ ಟಾಪ್ ನಿಮಗೆ ಬೇಕಾಗಿದ್ಯಾ?

ಬಜೆಟ್ ನ್ನು ಹೊರತು ಪಡಿಸಿ ಲ್ಯಾಪ್ ಟಾಪ್ ಖರೀದಿಸುವಾಗ ನೋಡುವ ಇನ್ನೊಂದು ಪ್ರಮುಖ ವಿಚಾರವಿದೆ.ಅದುವೇ ಸ್ಟೋರೇಜ್ ಜಾಗ. ಇತ್ತೀಚಿನ ದಿನಗಳಲ್ಲಿ ಲ್ಯಾಪ್ ಟಾಪ್ ಗಳಲ್ಲಿ 1ಟಿಬಿ ವರೆಗಿನ ಸ್ಟೋರೇಜ್ ಜಾಗವನ್ನು ನಿಗದಿಗೊಳಿಸಲಾಗಿದೆ.ನಾವಿಲ್ಲಿ 1ಟಿಬಿ ಸ್ಟೋರೇಜ್ ವ್ಯವಸ್ಥೆ ಇರುವ ಕೆಲವು ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ. ಹ್ಯಾವ್ ಎ ಲುಕ್. ಈ ಲ್ಯಾಪ್ ಟಾಪ್ ಗಳು 20,000 ರುಪಾಯಿ ಒಳಗಿನ ಬೆಲೆಯಲ್ಲಿ ಕೂಡ ನಿಮಗೆ ಲಭ್ಯವಾಗುತ್ತದೆ.

ಲೆನೋವಾ ಐಡಿಯಾಪ್ಯಾಡ್ ಎಸ್145 (81N30063IN)
ಲೆನೋವಾ ಐಡಿಯಾಪ್ಯಾಡ್ ಎಸ್ 145 (81N30063IN) ಲ್ಯಾಪ್ ಟಾಪ್ ನಲ್ಲಿ AMD ಡುಯಲ್ ಕೋರ್ ಎ6 ಪ್ರೊಸೆಸರ್, 4GB RAM, 1TB ಸ್ಟೋರೇಜ್ ಜಾಗ, ವಿಂಡೋಸ್ 10 OS, ಮತ್ತು 15.6-ಇಂಚಿನ ಡಿಸ್ಪ್ಲೇಯನ್ನು ಇದು ಹೊಂದಿದೆ. 2 ಸೆಲ್ ಲಿ-ಐಯಾನ್ ಬ್ಯಾಟರಿಯನ್ನು ಹೊಂದಿದೆ.

ಹೆಚ್ ಪಿ 245 G7 (7GZ75PA)
ಹೆಚ್ ಪಿ 245 G7 (7GZ75PA)ನಲ್ಲಿ 14-ಇಂಚಿನ ಡಿಸ್ಪ್ಲೇ, AMD ಡುಯಲ್ ಕೋರ್ ಎ6-9225 ಪ್ರೊಸೆಸರ್, 4GB RAM, 1TB HDD ಸ್ಟೋರೇಜ್,ಮತ್ತು DOS ನಲ್ಲಿ ರನ್ ಆಗುತ್ತದೆ. ಇದರಲ್ಲಿ AMD ರೇಡಿಯಾನ್ R4 GPU ಮತ್ತು 3 ಸೆಲ್ ಲಿ-ಐಯಾನ್ ಬ್ಯಾಟರಿ ವ್ಯವಸ್ಥೆ ಇರುತ್ತದೆ.

ಲೆನೋವಾ ಐಡಿಯಾಪ್ಯಾಡ್ 330-15AST (81D60079IN)
ಲೆನೋವಾ ಐಡಿಯಾಪ್ಯಾಡ್ 330-15AST (81D60079IN) ಕೈಗೆಟುಕುವ ಬೆಲೆಯ ಲ್ಯಾಪ್ ಟಾಪ್ ಆಗಿದ್ದು 15.6-ಇಂಚಿನ ಡಿಸ್ಪ್ಲೇ, ಡುಯಲ್ ಕೋರ್ AMD A6 ಪ್ರೊಸೆಸರ್ 4GB RAM, 1TB ಸ್ಟೋರೇಜ್ ಜಾಗ, DOS, AMD ರೇಡಿಯಾನ್ R4 GPU ಮತ್ತು 2 ಸೆಲ್ ಲಿ-ಐಯಾನ್ ಬ್ಯಾಟರಿಯನ್ನು ಹೊಂದಿದೆ.

ಏಸರ್ ಆಸ್ಪಿಯರ್ 3 A315-21 (UN.GNVSI.009)
ಏಸರ್ ಆಸ್ಪಿಯರ್ 3 A315-21 (UN.GNVSI.009) 15.6-ಇಂಚಿನ ಡಿಸ್ಪ್ಲೇ AMD ಡುಯಲ್ ಕೋರ್ A4-9125 ಪ್ರೊಸೆಸರ್, 4GB RAM, 1TB HDD ಸ್ಟೋರೇಜ್, ವಿಂಡೋಸ್ 10 ಹೋಮ್ ಬೇಸಿಕ್ಸ್, AMD ರೇಡಿಯಾನ್ ಆರ್ 3 GPU, ಮತ್ತು 2-ಸೆಲ್ ಲಿ-ಐಯಾನ್ ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ.

ಆಸೂಸ್ X540BA-GQ120T ಲ್ಯಾಪ್ ಟಾಪ್
ಆಸೂಸ್ X540BA-GQ120T ಲ್ಯಾಪ್ ಟಾಪ್ AMD ಗ್ಲೋಬಲ್ ಕೋರ್ ಎ9 ಪ್ರೊಸೆಸರ್, 4GB RAM, 1TB ಸ್ಟೋರೇಜ್ ಜಾಗ, ವಿಂಡೋಸ್ 10 10 OS, 15.6-ಇಂಚಿನ ಡಿಸ್ಪ್ಲೇ, AMD ರೇಡಿಯಾನ್ ಆರ್5 ಗ್ರಾಫಿಕ್ಸ್ ಕಾರ್ಡ್ ಮತ್ತು 3 ಸೆಲ್ ಲಿ-ಐಯಾನ್ ಬ್ಯಾಟರಿಯನ್ನು ಹೊಂದಿದೆ.

ಲೆನೋವಾ ವಿ110 (80TDA00HIN) ಲ್ಯಾಪ್ ಟಾಪ್
ಲೆನೋವಾ ವಿ110 (80TDA00HIN) ಲ್ಯಾಪ್ ಟಾಪ್ ಡುಯಲ್ ಕೋರ್ AMD A6-9210 ಪ್ರೊಸೆಸರ್, 4GB RAM, 1TB HDD, ಮತ್ತು 15.6-ಇಂಚಿನ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದರಲ್ಲಿ AMD ರೇಡಿಯಾನ್ ಆರ್5 ಗ್ರಾಫಿಕ್ಸ್ ಮತ್ತು 4ಸೆಲ್ ಲಿ-ಐಯಾನ್ ಬ್ಯಾಟರಿ ವ್ಯವಸ್ಥೆ ಇರುತ್ತದೆ.

ಲೆನೋವಾ ಐಡಿಯಾಪ್ಯಾಡ್ 130 (81H5003GIN)
ಲೆನೋವಾ ಐಡಿಯಾಪ್ಯಾಡ್ 130 (81H5003GIN) 15.6-ಇಂಚಿನ ಡಿಸ್ಪ್ಲೇ, ಡುಯಲ್-ಕೋರ್ AMD A6 ಪ್ರೊಸೆಸರ್, 4GB RAM, 1TB HDD, DOS, AMD ರೇಡಿಯಾನ್ ಆರ್ 4 GPU, ಮತ್ತು 2 ಸೆಲ್ ಲಿ-ಐಯಾನ್ ಬ್ಯಾಟರಿಯನ್ನು ಇದು ಹೊಂದಿದೆ.


Click it and Unblock the Notifications








