ಪ್ರಪಂಚವೇ ನಿಬ್ಬೆರಗಾದ ''ಅಮೆಜಾನ್ ಎಕೊ'' ಸ್ಪೀಕರ್ ಭಾರತಕ್ಕೆ!..ತಂತ್ರಜ್ಞಾನ ಎಂದರೆ ಇದು!!

Written By:

    ಅಮೇಜ಼ಾನ್‍ನ ವರ್ಚುವಲ್ ಅಸಿಸ್ಟಂಟ್ 'ಅಲೆಕ್ಸಾ'ವನ್ನು ಹೊಂದಿರುವ ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಹಲವು ದೇಶಗಳಲ್ಲಿ ಸದ್ದು ಮಾಡುತ್ತಿರುವ ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗಳು ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿವೆ ಎನ್ನಲಾಗಿದೆ.

    ವಿಶ್ವದ ಪ್ರಮುಖ ಆನ್‌ಲೈನ್ ಶಾಪಿಂಗ್ ತಾಣ ಅಮೇಜ಼ಾನ್ ಬಿಡುಗಡೆ ಮಾಡಿರತುವ ಈ ಸ್ಪೀಕರ್‌ಗಳು ವಿಶ್ವದೆಲ್ಲೆಡೆ ಕುತೋಹಲ ಮೂಡಿಸಿದ್ದು, ಸಾಮಾನ್ಯ ಜನರು ನಿಬ್ಬೆರಗಾಗುವಷ್ಟು ಸೇವೆಗಳನ್ನು ಈ ಸ್ಪೀಕರ್‌ಗಳು ನೀಡಲಿವೆ. ಸ್ಪೀಕರ್‌ಅನ್ನು ಸ್ಪರ್ಶಿಸದೇ ಕೇವಲ "ಅಲೆಕ್ಸಾ" ಎಂದು ಹೇಳುವುದರ ಮೂಲಕ ಸ್ಪೀಕರ್‌ಗಳನ್ನು ನೀವು ಆಕ್ಟಿವೇಟ್ ಮಾಡಬಹುದಾಗಿದೆ.!!

    ಹಾಗಾದರೆ, ಅಮೆಜಾನ್ ಹೊರತಂದಿರುವ ನೂತನ ಎಕೊ ಸ್ಪೀಕರ್‌ ಏನೆಲ್ಲಾ ತಂತ್ರಜ್ಞಾನವನ್ನು ಹೊಂದಿದೆ.? ಜನರು ಈ ಸ್ಪೀಕರ್‌ಗೆ ನಿಬ್ಬೆರಗಾಗಿರುವುದು ಏಕೆ? ಈ ಸ್ಪೀಕರ್‌ ಫೀಚರ್ಸ್ ಏನು? ಮತ್ತು ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    ಧ್ವನಿ-ಸಕ್ರಿಯ ಸ್ಮಾರ್ಟ್ ಅಸಿಸ್ಟಂಟ್!!

    ಅಮೇಜ಼ಾನ್ ಎಕೊ ಒಂದು ಧ್ವನಿ-ಸಕ್ರಿಯ ಸ್ಮಾರ್ಟ್ ಅಸಿಸ್ಟಂಟ್ ಆಗಿದೆ. ಅಲೆಕ್ಸಾ ಸಹಾಯದಿಂದ ಎಕೊ ಸ್ಪೀಕರ್‌ಗಳು ಬಹಳಷ್ಟು ಕೆಲಸಗಳನ್ನು ಸರಾಗವಾಗಿ ನಡೆಸುತ್ತವೆ.!! ಆಂಡ್ರಾಯ್ಡ್‌ನ 'ಗೂಗಲ್ ನೌ' ಮತ್ತು ಐಫೋನಿನ 'ಸಿರಿ' ಮತ್ತು ವಿಂಡೋಸಿನ 'ಕೊರ್ಟಾನಾ' ಇದ್ದಂತೆ. ಅಮೇಜ಼ಾನ್ ಅಲೆಕ್ಸಾ ಹಲವು ಕೆಲಸಗಳನ್ನು ಮಾಡಬಲ್ಲದು.

    ಸುದ್ದಿ ಓದುತ್ತದೆ, ಕಾಲ್ ಮಾಡುತ್ತದೆ.!!

    ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗಳು ಭಿವಿಷ್ಯದ ಟೆಕ್ನಾಲಿಜಿಯನ್ನು ಹೊಂದಿದ್ದು, ಒಂದೇ ಸ್ಪೀಕರ್‌ನಲ್ಲಿ ಹಲವು ಕಾರ್ಯಗಳನ್ನು ನಡೆಸಬಹುದಾಗಿದೆ. ಸ್ಪೀಕರ್‌ಗಳು ಸುದ್ದಿ ಓದುತ್ತದೆ, ಕಾಲ್ ಮಾಡುತ್ತದೆ, ಸಂಚಾರ ಮತ್ತು ಹವಾಮಾನ ವರದಿ ಮಾಡುತ್ತವೆ, ಕ್ರೀಡಾ ಸ್ಕೋರ್‌ ಮತ್ತು ವೇಳಾಪಟ್ಟಿಗಳನ್ನು ಒದಗಿಸುತ್ತದೆ ಜೊತೆಗೆ ಫೈರ್ ಟಿವಿಯಲ್ಲಿ ಅಮೆಜಾನ್ ವೀಡಿಯೊವನ್ನು ಸಹ ನಿಯಂತ್ರಿಸುತ್ತದೆ.!!

    ಸ್ಪೀಕರ್‌ಗಳಿಗೆ ನಿಬ್ಬೆರಗಾಗಿದ್ದಾರೆ ಎಲ್ಲರೂ!!

    ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗಳು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಎಲ್ಲರೂ ನಿಬ್ಬರಗಾಗಿರುವುದಕ್ಕೆ ಹಲವು ಕಾರಣಗಳಿವೆ. 360 ಡಿಗ್ರಿಯಲ್ಲಿ ಶಬ್ದ ಹೊರಡಿಸುವ ಎಕೊ ಸ್ಪೀಕರ್ ವೂಫರ್ ಅನ್ನು ಹೊಂದಿದೆ.ಬ್ಲೂಟೂತ್ ಮತ್ತು ವೈಫೈಗೆ ಕನೆಕ್ಟ್ ಆಗುವ ಈ ಸ್ಪೀಕರ್ ಅಲೆಕ್ಸಾ ಮೂಲಕ ಕಾಯನಿರ್ವಹಣೆ ನೀಡಲಿದೆ.!!

    ಟಿವಿ, ಬಾಗಿಲು ಎಲ್ಲವೂ ಕಂಟ್ರೂಲ್!!

    ಟಿವಿಗಳು, ಸ್ವಿಚ್‌ಗಳು, ಥರ್ಮೋಸ್ಟಾರ್ಟ್‌ಗಳು, ಗ್ಯಾರೇಜ್ ಬಾಗಿಲುಗಳು, ಬೀಗ ಎಲ್ಲವನ್ನು ನಿಯಂತ್ರಿಸಲು ತಂತ್ರಜ್ಞಾನ ಒಂದೆ ಸ್ಪೀಕರ್‌ನಲ್ಲಿ ಅಡಕವಾಗಿದೆ. ಹೆಚ್ಚಿನವುಗಳನ್ನು ಈಗಾಗಲೇ ಅಮೇಜ಼ಾನ್ ಭಾರತದ ಕೆಲವು ನೌಕರರು ಎಕೊ ಮತ್ತು ಅಲೆಕ್ಸಾವನ್ನು ಭಾರತದಲ್ಲಿ ಪರೀಕ್ಷಿಸುತ್ತಿದ್ದಾರೆ.!!

    ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಕಾರ್ಯನಿರ್ವಹಣೆ?

    ಎಕೊ ಸ್ಪೀಕರ್‌ನಲ್ಲಿ ಅಡಕವಾಗಿರುವ ಅಲೆಕ್ಸಾ ಸದ್ಯಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಹಿಂದಿ ಮತ್ತಿತರ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ತಜ್ನರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಯಾವ ಯಾವ ಭಾಷೆಗಳಿಗೆ ಭವಿಷ್ಯದಲ್ಲಿ ಅಲೆಕ್ಸಾ ಸಪೋರ್ಟ್ ಆಗಲಿದೆ ಎಂದು ಹೇಳಲು ಸಾಧ್ಯವಿಲ್ಲ.!!

    ಇದು ಗ್ರೇಟ್ ಇಂಡಿಯನ್‌ ಅಮೇಜಾನ್ ಸೇಲ್!!..ಏನೆಲ್ಲಾ ಆಫರ್?
    ಅಮೆಜಾನ್ ಇಕೊ ಬೆಲೆ ಎಷ್ಟು?

    ಅಮೆಜಾನ್ ಇಕೊ ಬೆಲೆ ಎಷ್ಟು?

    ಪ್ರಪಂಚದ ಬಹುತೇಕ ದೇಶಗಳಲ್ಲಿ ಆಗಲೇ ಮಾರಟಕ್ಕಿರುವ ಅಮೆಜಾನ್ ಇಕೊ ಬೆಲೆ 150 ಡಾಲರ್‌ಗಳಷ್ಟು ಇದೆ. ಇದನ್ನು ಭಾರತದ ರೂಪಾಯಿಗಳಿಗೆ ರೂಪಾಂತರ ಮಾಡಿದರೆ ಹತ್ತಿರ ಹತ್ತಿರ 8 ರಿಂದ 9 ಸಾವಿರ ರೂಪಾಯಿಗಳಿಗೆ ಫೋನ್ ಭಾರತದಲ್ಲಿ ಮಾರಾಟಕ್ಕಿರಬಹುದು.

    ಓದಿರಿ:ಭಾರತದಲ್ಲಿ ಬಹುನಿರೀಕ್ಷಿತ 'ನೋಕಿಯಾ 130' ಫೋನ್ ಖರೀದಿಸಲು ಲಭ್ಯ!..ಸಂಗೀತ ಪ್ರಿಯರಿಗೆ ಬೆಸ್ಟ್!!

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    English summary
    Online retail giant Amazon introduced Echo.to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more