Home
Gadgets

ಈ ವಾಚ್ ಕಟ್ಟಿಕೊಂಡ್ರೆ ನಿಮ್ಮ ಕೈ ಆಗುತ್ತೆ ಟಚ್ ಸ್ಕ್ರಿನ್...!

By Srinidhi

ಸದ್ಯ ಮಾರುಕಟ್ಟೆಯಲ್ಲಿ ಹಲವು ಮಾದರಿಯಲ್ಲಿ ಸ್ಮಾರ್ಟ್‌ ವಸ್ತುಗಳು ಕಾಣಿಸಿಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಸ್ಮಾರ್ಟ್‌ ವಾಚ್‌ಗಳು ಭಾರೀ ಬೇಡಿಕೆಯನ್ನು ಗಳಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಮಿಲಾನ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವೊಂದು ನಿಮ್ಮ ಕೈ ಯನ್ನು ಟಚ್ ಸ್ಕ್ರಿನ್ ನಂತೆ ಕಾರ್ಯನಿರ್ವಹಿಸುವಂತೆ ಮಾಡುವ ಸ್ಮಾರ್ಟ್‌ ವಾಚ್ ವೊಂದನ್ನು ವಿನ್ಯಾಸ ಮಾಡಲು ಮುಂದಾಗಿದ್ದಾರೆ. ಇದು ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಅನೇಕ ವಿಷಯಗಳಿಗೆ ಸಹಾಯಕಾರಿಯಾಗಲಿದೆ.

ಈ ವಾಚ್ ಕಟ್ಟಿಕೊಂಡ್ರೆ ನಿಮ್ಮ ಕೈ ಆಗುತ್ತೆ ಟಚ್ ಸ್ಕ್ರಿನ್...!

ಈಗಾಗಲೇ ಹಲವು ಸ್ಮಾರ್ಟ್‌ ವಾಚ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ. ಇವುಗಳಿಂದ ಭಿನ್ನವಾಗಿ ನಿಮ್ಮ ಕೈ ಸನ್ನೆಗಳನ್ನು ಅರಿತು ಕೊಂಡು, ನಿಮ್ಮ ಕೈ ಅನ್ನು ಟಚ್ ಸ್ಕ್ರಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಸಂಶೋಧರಕರು ಯಶಸ್ವಿಯಾಗಿದ್ದಾರೆ. ಶೀಘ್ರವೇ ಮಾರುಕಟ್ಟೆಯಲ್ಲಿ ಈ ಮಾದರಿಯ ವಾಚ್‌ಗಳು ಕಾಣಿಸಿಕೊಳ್ಳಲಿದ್ದು, ಇದರಿಂದಾಗಿ ನೀವು ವಾಚ್ ಕಟ್ಟುವ ವಿಧಾನ ಬದಲಾಗಲಿದೆ.

ಸ್ಮಾರ್ಟ್‌ ವಾಚ್:

ಸ್ಮಾರ್ಟ್‌ ವಾಚ್:

ಹೊಸದಾಗಿ ನಿರ್ಮಾಣ ಮಾಡುತ್ತಿರುವ ಸ್ಮಾರ್ಟ್‌ ವಾಚ್‌ನಲ್ಲಿ ಟಚ್ ಸ್ಕ್ರಿನ್ ಇರಲಿದೆ. ಆದರೆ ನೀವು ಪ್ರತಿ ಬಾರಿ ಸ್ಮಾರ್ಟ್‌ ವಾಚಿನ ಮೇಲೆ ಕೈಯಾಡಿಸಬೇಕಾಗಿಲ್ಲ ಮತ್ತು ಸ್ಕ್ರಿನ್ ಚಿಕ್ಕದಾಯಿತು ಎಂದು ಕೊರಗ ಬೇಕಾಗಿಲ್ಲ. ಬದಲಿಗೆ ನಿಮ್ಮ ವಾಚ್ ಪಕ್ಕದ ಕೈ ಚರ್ಮದ ಮೇಲೆ ಟಚ್ ಮಾಡಿದರೆ ಸಾಕು ವಾಚ್ ವರ್ಕ್ ಆಗಲಿದೆ. ವಾಚ್ ಸುತ್ತ ಮುತ್ತಲಿನ ಕೈ ಚರ್ಮ್ ಸ್ಕ್ರಿನ್ ನಂತೆಯೇ ಕಾರ್ಯನಿರ್ವಹಿಸುವಂತೆ ಮಾಡಲಿದೆ ಈ ಸ್ಮಾರ್ಟ್‌ ವಾಚ್.

ಎಲೆಕ್ಟ್ರೋ ಮ್ಯಾಗ್ನೇಟಿಕ್:

ಎಲೆಕ್ಟ್ರೋ ಮ್ಯಾಗ್ನೇಟಿಕ್:

ಮ್ಮ ಕೈ ಅನ್ನು ಟಚ್ ಸ್ಕ್ರಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಮಾಡಲು ಸ್ಮಾರ್ಟ್‌ ವಾಚ್ ಎಲೆಕ್ಟ್ರೋ ಮ್ಯಾಗ್ನೇಟಿಕ್ ಫಿಲ್ಡ್‌ ಸಹಾಯವನ್ನು ಪಡೆಯಲಿದೆ. ಇದು ಹೆಚ್ಚಿನ ಶಕ್ತಿಯುವಾಗಿರುವುದಿಲ್ಲ. ಇದರಿಂದಾಗಿ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬಿರುವುದಿಲ್ಲ. ಈ ಫಿಲ್ಡ್‌ನಿಂದಾಗಿ ವಾಚಿನ ಸುತ್ತ-ಮುತ್ತ ನಡೆಯುವ ಚಲನ ವಲನಗಳನ್ನು ವಾಚ್ ಟ್ರಾಕ್ ಮಾಡಲಿದೆ.

ಸೆನ್ಸಾರ್‌:

ಸೆನ್ಸಾರ್‌:

ಇದರೊಂದಿಗೆ ವಾಚಿನ ಸುತ್ತಾ-ಮುತ್ತ ಸೆನ್ಸಾರ್ ಗಳನ್ನು ಅಳವಡಿಸಲಾಗಿದ್ದು, ಇದು ನಿಮ್ಮ ಕೈ ಯನ್ನು ಟಚ್ ಸ್ಕ್ರಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಿದೆ. ವಾಚಿನ ಟಚ್ ಸ್ಕ್ರಿನ್ ಸಣ್ಣದಾಗಿಯಿತು ಎನ್ನುವವರಿಗೆ ಇದು ಬಹಳ ಸಹಾಯವನ್ನು ಮಾಡಲಿದೆ. ನಿಮ್ಮ ಕೈ ಯನ್ನೇ ಸ್ಕ್ರಿನ್ ಮಾದರಿಯಲ್ಲಿ ಉಯೋಗಿಸಬಹುದು.

ಸ್ಕ್ರಿನ್ ಟ್ರಾಕ್:

ಸ್ಕ್ರಿನ್ ಟ್ರಾಕ್:

ಈ ಮಾದರಿಯಲ್ಲಿ ನಿಮ್ಮ ಕೈ ಯನ್ನು ಟಚ್ ಸ್ಕ್ರಿನ್ ನಂತೆ ಬಳಕೆ ಮಾಡಿಕೊಳ್ಳಲು ಸ್ಕ್ರಿನ್ ಟ್ರಾಕ್ ಟೆಕ್ನಾಲಜಿಯನ್ನು ಈ ಸ್ಮಾರ್ಟ್‌ ವಾಚಿನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ನಿಮ್ಮ ಸ್ಕಿನ್ ಮೇಲೆ ಕೈ ಆಡಿಸಿದಂತೆ ಅದನ್ನು ಟ್ರಾಕ್ ಮಾಡುವ ಸೆನ್ಸಾರ್‌ಗಳು ಅದಕ್ಕೆ ತಕ್ಕಂತೆ ಮಾಹಿತಿಯನ್ನು ಸಂಗ್ರಹಿಸಿ ಕಾರ್ಯನಿರ್ವಹಿಸುತ್ತವೆ.

Best Mobiles in India

English summary
This Smartwatch Turns Your Whole Arm Into a Touchscreen, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+