Home
Gadgets

ಬರೋಬ್ಬರಿ 78,895 ಟನ್‌ ಗ್ಯಾಡ್ಜೆಟ್‌ನಿಂದ ತಯಾರಾಗಿವೆ ಒಲಂಪಿಕ್ಸ್‌ ಪದಕಗಳು..!

By Gizbot Bureau

ಟೋಕಿಯೋ ಒಲಂಪಿಕ್ಸ್‌ 2020 ಶುರುವಾಗಲು ಬರೋಬ್ಬರಿ 365 ದಿನ ಬಾಕಿಯಿದೆ. ಈಗಾಗಲೇ ಟೋಕಿಯೋ ಕ್ರೀಡಾಕೂಟ ಆಯೋಜನೆಯ ಅಂತಿಮ ಸಿದ್ಧತೆಯಲ್ಲಿ ತೊಡಗಿದೆ. ಸದ್ಯ, ಅಥ್ಲೀಟ್‌ಗಳಿಗೆ ನೀಡುವ ಪದಕಗಳ ಬಗ್ಗೆ ಮಾಹಿತಿಯನ್ನು ಆಯೋಜನಾ ಸಮಿತಿ ಬಹಿರಂಗಪಡಿಸಿದ್ದು, ಹಲವು ವಿಶೇಷ ಅಂಶಗಳನ್ನು ಒಳಗೊಂಡಿದೆ. ಟೋಕಿಯೋ ಒಲಂಪಿಕ್ಸ್‌ನಲ್ಲಿ ನೀಡುವ ಪದಕಗಳನ್ನು ಸಂಪೂರ್ಣವಾಗಿ ಹಳೇ ಗ್ಯಾಡ್ಜೆಟ್‌ಗಳಿಂದಲೇ ತಯಾರಿಸಲಾಗಿರುವುದು ವಿಶೇಷ.

78,895 ಟನ್‌ ಗ್ಯಾಡ್ಜೆಟ್‌

78,895 ಟನ್‌ ಗ್ಯಾಡ್ಜೆಟ್‌

ಟೋಕಿಯೋ ಒಲಂಪಿಕ್ಸ್‌ ಆಯೋಜನಾ ಸಮಿತಿಯ ಅಧಿಕೃತ ವೆಬ್‌ಸೈಟ್‌ ಪ್ರಕಾರ ಒಟ್ಟು 78,895 ಟನ್‌ಗಳಷ್ಟು ಗ್ಯಾಡ್ಜೆಟ್‌ ಸ್ವೀಕರಿಸಲಾಗಿದೆ. ಇದರಲ್ಲಿ 6.21 ಮಿಲಿಯನ್‌ ಮೊಬೈಲ್‌ ಫೋನ್‌ಗಳಿವೆ. ಈ ಎಲ್ಲಾ ಗ್ಯಾಡ್ಜೆಟ್‌ಗಳಿಂದ ಆಯೋಜನಾ ಸಮಿತಿ 32 ಕೆಜಿ ಚಿನ್ನ, 3,500 ಕೆಜಿ ಬೆಳ್ಳಿ, 2,200 ಕೆಜಿ ಕಂಚನ್ನು ಹೊರತೆಗೆದಿದೆ.

ಇದೇ ಮೊದಲಲ್ಲ

ಇದೇ ಮೊದಲಲ್ಲ

ಒಲಂಪಿಕ್ಸ್‌ ಪದಕಗಳನ್ನು ರಿಸೈಕಲ್‌ ಉತ್ಪನ್ನಗಳಿಂದ ತಯಾರಿಸುತ್ತಿರುವುದು ಇದೇ ಮೊದಲಲ್ಲ. ರಿಯೋ ಡಿ ಜನೈರೋದಲ್ಲಿ ನಡೆದ ಕಳೆದ ಒಲಂಪಿಕ್ಸ್‌ನಲ್ಲಿಯೂ ಈ ಪ್ರಯೋಗ ಮಾಡಲಾಗಿತ್ತು, ಆದರೆ, ಕೇವಲ ಶೇ.30ಕ್ಕಿಂತ ಕಡಿಮೆ ಚಿನ್ನ ಮತ್ತು ಬೆಳ್ಳಿ ಬಳಸಲಾಗಿತ್ತು. ಟೋಕಿಯೋ ಒಲಂಪಿಕ್ಸ್‌ ಇದನ್ನು ಮೀರಿದ್ದು, ಎಲ್ಲಾ ಪದಕಗಳನ್ನು ರಿಸೈಕಲ್‌ ಲೋಹಗಳಿಂದ ತಯಾರಿಸಲಾಗಿದೆ.

ಹೇಗೆ ಸಂಗ್ರಹ..?

ಹೇಗೆ ಸಂಗ್ರಹ..?

ಆಯೋಜನಾ ಸಮಿತಿಯ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದು, ಯಾವ ರೀತಿ ಗ್ಯಾಡ್ಜೆಟ್‌ಗಳನ್ನು ಸಂಗ್ರಹಿಸಲಾಯಿತು ಎಂಬುದನ್ನು ತಿಳಿಸಲಾಗಿದೆ. ಜಪಾನ್‌ನಾದ್ಯಂತ ಜನ ಸಣ್ಣ ಎಲೆಕ್ಟ್ರಾನಿಕ್‌ ಸಾಧನಗಳನ್ನು ದಾನ ಮಾಡಿದ್ದಾರೆ. ನಂತರ ಅವುಗಳನ್ನು ಸಣ್ಣ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ಮರುಬಳಕೆ ಉತ್ತೇಜಿಸುವ ಸರ್ಕಾರದ ಕಾಯ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ಗುತ್ತಿಗೆದಾರರಿಂದ ವರ್ಗಿಕರಿಸಲಾಯಿತು. ನಂತರ ಉತ್ಪನ್ನಗಳನ್ನು ಕರಗಿಸುವ ಗುತ್ತಿಗೆದಾರರಿಂದ ಹೊರತೆಗೆದ ಲೋಹದಿಂದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಉತ್ಪಾದಿಸಲಾಯಿತು.

48 ಸಾವಿರ ಟನ್‌ ಇ-ತ್ಯಾಜ್ಯ

48 ಸಾವಿರ ಟನ್‌ ಇ-ತ್ಯಾಜ್ಯ

ಆಯೋಜನಾ ಸಮಿತಿ ಹೇಳುವಂತೆ ಸುಮಾರು 48,000 ಟನ್ ಇ-ತ್ಯಾಜ್ಯ ಸಂಗ್ರಹಿಸಲಾಗಿದೆಯಂತೆ. 5 ಮಿಲಿಯನ್‌ಗಿಂತಲೂ ಹೆಚ್ಚು ತಿರಸ್ಕರಿಸಿದ ಅಥವಾ ಬೇಕಿಲ್ಲದ ಸಾಧನಗಳಿಂದ 3 ಮಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಲೋಹಗಳನ್ನು ಉತ್ಪಾದಿಸಲಾಗಿದೆ. ಸಂಗ್ರಹಿಸಿದ ಲೋಹಗಳ ವಿವರವಾದ ವರ್ಗೀಕರಣವನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಏಪ್ರಿಲ್‌ 2017ರಿಂದ ಅಭಿಯಾನ

ಏಪ್ರಿಲ್‌ 2017ರಿಂದ ಅಭಿಯಾನ

ಈ ಅಭಿಯಾನವನ್ನು ಏಪ್ರಿಲ್ 2017ರಿಂದ ಪ್ರಾರಂಭಿಸಲಾಗಿದೆ. ಕ್ರೀಡಾಪಟುಗಳು, ಪಾಲುದಾರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಸದಸ್ಯರು ಬಳಸಿದ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಗ್ರಹಿಸುವ ಮೂಲಕ ಅಭಿಯಾನಕ್ಕೆ ಸಹಕರಿಸುತ್ತಿದ್ದಾರೆ ಎಂದು ಸಮಿತಿ ಹೇಳಿದೆ. ಮಾರ್ಚ್‌ 2019ರಲ್ಲಿ ಅಭಿಯಾನ ಕೊನೆಗೊಂಡಿದ್ದು, ಜುಲೈ 24, 2020ರಂದು ಟೋಕಿಯೊ ಒಲಂಪಿಕ್ಸ್ ಪ್ರಾರಂಭವಾಗಿ ಆಗಸ್ಟ್ 2ರಂದು ಅಂತ್ಯವಾಗಲಿದೆ.

Best Mobiles in India

English summary
Tokyo 2020 Olympics Medals Are Made Using 62.1 Lakh Phones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+