Home
Gadgets

ಭಾರತದಲ್ಲಿ 2000 ರೂ.ಗಳಿಗಿಂತ ಕಡಿಮೆ ಬೆಲೆಯ ಇಯರ್‌ಬಡ್ಸ್‌: ಟಾಪ್- 10 ಆಯ್ಕೆಗಳು !

ಉತ್ತಮ ಧ್ವನಿ ಗುಣಮಟ್ಟ ನೀಡುವ ಕಡಿಮೆ ದರದ ಇಯರ್‌ಬಡ್ಸ್‌ಗಳನ್ನು ಕೊಳ್ಳಲು ಹುಡುಕುತ್ತಿರುವಿರಾ? ಹಾಗಾದ್ರೆ ಹಿಂದೆ ಮುಂದೆ ನೋಡಬೇಡಿ! ನಾವು ಭಾರತದಲ್ಲಿ 2000 ರೂ. ಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಟಾಪ್-10 ಅತ್ಯುತ್ತಮ ಇಯರ್‌ಬಡ್‌ಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ.

ನಿಮಗೆ ಸಂಗೀತದ ಕುರಿತು ಉತ್ಸಾಹವಿರಲಿ ಅಥವಾ ನಿಮ್ಮ ದೈನಂದಿನ ಬಳಕೆಗಾಗಲಿ ನಿಮಗೆ ಅತ್ಯಂತ ವಿಶ್ವಾಸಾರ್ಹವಾದ ಇಯರ್‌ಬಡ್‌ಗಳ ಕುರಿತು ಮಾಹಿತಿಯನ್ನು ನಾವು ನೀಡುತ್ತೇವೆ.

ನಮ್ಮ ಪಟ್ಟಿಯಲ್ಲಿ ಬೋಟ್ (boAt), ನಾಯ್ಸ್ (Noise), ರಿಯಲ್‌ಮಿ (realme), ಒನ್‌ಪ್ಲಸ್ (OnePlus), ಮಿವಿ (Mivi) ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಬ್ರಾಂಡ್‌ಗಳ ಆಯ್ಕೆಗಳು ಸೇರಿದಂತೆ, ನಿಮ್ಮ ಬಜೆಟ್‌ಗೆ ಸರಿ ಹೊಂದುವ ಮತ್ತು ಉತ್ತಮ ಫೀಚರ್‌ ಹೊಂದಿರುವ ಇಯರ್‌ಬಡ್‌ಗಳ ಮಾಹಿತಿ ನೀಡುತ್ತೇವೆ, ನೀವು ಈ ಲೇಖನ ಸಂಪೂರ್ಣ ಓದಿ.

ಭಾರತದಲ್ಲಿ 2000 ರೂ.ಗಿಂತ ಕಡಿಮೆ ಬೆಲೆಯ ಇಯರ್‌ಬಡ್ಸ್‌ಗಳು

1-ಬೋಟ್ ಏರ್ಡೋಪ್ಸ್141 ANC (boAt Airdopes 141 ANC): 1799 ರೂ. ಬೆಲೆಯ ಈ ಇಯರ್‌ಬಡ್‌ನಿಂದ ಮೆಲೋಡಿಸ್ ಸಂಗೀತದ ಅನುಭವ ಪಡೆಯಬಹುದಾಗಿದೆ. ಅನಗತ್ಯ ಶಬ್ದ ತಡೆಯುವುದು, 21 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯ, IPX4 ನೀರಿನ ಪ್ರತಿರೋಧ 5.1 ಬ್ಲೂಟೂತ್ ಸಂಪರ್ಕ ಸೇರಿದಂತೆ ಅನೇಕ ಗುಣಗಳನ್ನು ಹೊಂದಿದೆ.

2-ನಾಯ್ಸ್ ಟ್ಯೂನ್ ಚಾರ್ಜ್ (Noise Tune Charge): ಕೇವಲ 999 ರೂ. ಗಳಿಗೆ ದೊರೆಯುವ ಈ ಇಯರ್ ಬಡ್ಸ್‌ ಬರೋಬ್ಬರಿ 30 ಗಂಟೆಗಳ ಪ್ಲೇಬ್ಯಾಕ್ ಸಮಯ ಹೊಂದಿದೆ, ಟಚ್ ಕಂಟ್ರೋಲರ್ ಜೊತೆಗೆ ತ್ವರಿತ ಧ್ವನಿ ಸಹಾಯಕರ ಬೆಂಬಲ ಪಡೆಯಲಿದೆ, 5.0 ಬ್ಲೂಟೂತ್‌ ಕನೆಕ್ಟಿವಿಟಿ ಹೊಂದಿದೆ, IPX5 ನೀರಿನಿಂದ ರಕ್ಷಣೆ ಪಡೆಯಲಿದೆ.

3- ರಿಯಲ್‌ಮಿ ಬಡ್ಸ್ Q2 (Realme Buds Q2); 1499 ರೂ. ಬೆಲೆಯ ಬಡ್ಸ್‌ ಇದಾಗಿದ್ದು, 10mm ಬಾಸ್ ಬೂಸ್ಟ್‌ ಡ್ರೈವರ್, 20 ಗಂಟೆಗಳವರೆಗೆ ಪ್ಲೇಬ್ಯಾಕ್ ಸಂಗೀತ, 5.2 ಬ್ಲೂಟೂತ್ ಕನೆಕ್ಟಿವಿಟಿ, ಮಾತನಾಡುವಾಗ ಅನಗತ್ಯ ಶಬ್ಧ ತಡೆಹಿಡಿಯುವುದು ಸೇರಿ ಅನೇಕ ಅಂಶಗಳನ್ನು ಒಳಗೊಂಡಿದೆ.

4- ರಿಯಲ್‌ಮಿ ಬಡ್ಸ್ Q2 ನಿಯೋ (Realme Buds Q2 neo): 1499 ರೂ. ಬೆಲೆಯ ಬಡ್ಸ್‌ ಇದಾಗಿದ್ದು, ಅತೀ ಕಡಿಮೆ ತೂಕ ಹೊಂದಿದ್ದು, ಬರೋಬ್ಬರಿ 28 ಗಂಟೆಗಳ ಪ್ಲೇಬ್ಯಾಕ್ ಸಮಯ ಹೊಂದಿದೆ, IPX4 ನೀರಿನಿಂದ ರಕ್ಷಣೆ ಪಡಯುವುದು ಮತ್ತು 5.2 ಬ್ಲೂಟೂತ್ ಕನೆಕ್ಟಿವಿಟಿ ಸಾಮರ್ಥ್ಯ ಹೊಂದಿದೆ.

5-ಒನ್‌ಪ್ಲಸ್ ಬಡ್ಸ್‌ Z (OnePlus Buds Z): 1999 ರೂ ಮೌಲ್ಯದ ಬಡ್ಸ್‌ ಇದಾಗಿದ್ದು, ಡೀಪ್ ಬಾಸ್ ಮತ್ತು ಸ್ಪಷ್ಟವಾದ ಧ್ವನಿ ಪಡೆಯಲು ಡೈನಾಮಿಕ್ 10mm ಡ್ರೈವರ್‌ಗಳನ್ನು ಹೊಂದಿದೆ. 20 ಗಂಟೆಗಳ ಪ್ಲೇಬ್ಯಾಕ್ ಸಮಯ ಮತ್ತು ವೇಗದ ಚಾರ್ಜಿಂಗ್‌ ಹೊಂದಿದೆ, ಇದರ ಜೊತೆಗೆ 5.0 ಬ್ಲೂಟೂತ್ ಕನೆಕ್ಟಿವಿಟಿ ಪಡೆದುಕೊಂಡಿದೆ.
6- ಒನ್ ಪ್ಲಸ್ Z2 (OnePlus Buds Z2): 1999 ರೂ ಮೌಲ್ಯದ ಬಡ್ಸ್‌ ಇದಾಗಿದ್ದು,11mm ಡೈನಾಮಿಕ್ ಡ್ರೈವರ್‌ಗಳು ಮತ್ತು Dolby Atmos ಬೆಂಬಲದೊಂದಿಗೆ ತಲ್ಲೀನಗೊಳಿಸುವ ಧ್ವನಿಯನ್ನು ನೀಡುತ್ತದೆ. 38 ಗಂಟೆಗಳ ಪ್ಲೇಬ್ಯಾಕ್ ಸಮಯ ಮತ್ತು ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP55 ತಂತ್ರಾಜ್ಞಾನ ಪಡೆದುಕೊಂಡಿದೆ. ಈ ಇಯರ್‌ಬಡ್‌ಗಳು ಜಿಮ್ ಸಂದರ್ಭದಲ್ಲಿ ಬಳಸಬಹುದು. ಇದು 5.2 ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ.
7- ನಾಯ್ಸ್ ಎರ್ ಬಡ್ಸ್ (Noise Air Buds): 1499 ರೂ. ಬೆಲೆ ಹೊಂದಿದ್ದು, ತ್ವರಿತ ಚಾರ್ಜಿಂಗ್‌ಗಾಗಿ ನಾಯ್ಸ್ ಏರ್ ಬಡ್ಸ್ ಇನ್‌ಸ್ಟಾ ಚಾರ್ಜ್ ತಂತ್ರಜ್ಞಾನ ಹೊಂದಿದೆ. 20 ಗಂಟೆಗಳ ಪ್ಲೇಬ್ಯಾಕ್ ಸಮಯ ಮತ್ತು ಸಂಗೀತ ಪ್ರಿಯರಿಗೆ ಈ ಇಯರ್‌ಬಡ್‌ ಪರ್ಫೆಕ್ಟ್ ಎನಿಸಲಿದೆ. 5.0 ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ.

8- ಮಿವಿ ಡ್ಯುಯೂಪಾಡ್ಸ್ M80 (Mivi DuoPods M80): 1499 ರೂ. ಬೆಲೆ ಹೊಂದಿದ್ದು, ಇದು 10mm ಶಕ್ತಿಯುತ ಡ್ರೈವರ್‌ಗಳೊಂದಿಗೆ ಪ್ರೀಮಿಯಂ ಸೌಂಡ್‌ಸ್ಟೇಜ್ ನೀಡುತ್ತದೆ. 30 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಸಮಯ ಮತ್ತು ಸ್ಪರ್ಶದ ನಿಯಂತ್ರಣ ಹೊಂದಿದೆ, ಈ ಇಯರ್‌ಬಡ್‌ಗಳು ಸಂಗೀತ ಕೇಳುಗರಿಗೆ ಹೇಳಿ ಮಾಡಿಸಿದಂತಿದೆ. ಜೊತೆಗೆ 5.0 ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ.

9- ಪಿ ಟ್ರಾನ್ ಬಾಸ್‌ಬಡ್ಸ್ ಜೆನ್ (pTron Bassbuds Zen): ಕೇವಲ 999 ರೂಪಾಯಿ ಮೌಲ್ಯದ ಈ ಬಡ್ಸ್‌ ಆರಾಮದಾಯಕವಾದ ಫಿಟ್‌ ಮತ್ತು ಇರ್ಗೊನಾಮಿಕ್ ವಿನ್ಯಾಸ ಹೊಂದಿದೆ. 20 ಗಂಟೆಗಳವರೆಗೆ ಪ್ಲೇ ಬ್ಯಾಕ್ ಸಮಯ ಮತ್ತು ಟಚ್ ನಿಯಂತ್ರಣಗಳ ಫೀಚರ್ಸ್ ಹೊಂದಿದೆ. 5.1 ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.

10-ಬೋಲ್ಟ್‌ ಆಡಿಯೋ ಏರ್‌ಬಾಸ್ FX1(Boult Audio AirBass FX1): 1500ರೂ. ಬೆಲೆಯ ಈ ಇಯರ್ ಬಡ್ಸ್ ಸಂಗೀತ ಕೇಳುಗರಿಗೆ ಅನುಕೂಲಕರವಾಗಿದೆ, 24ಗಂಟೆಗಳ ಪ್ಲೇಬ್ಯಾಕ್ ಸಮಯ ಹಾಗೂ ನೀರಿನಿಂದ ರಕ್ಷಿಸಲು IPX5 ವ್ಯವಸ್ಥೆ ಹೊಂದಿರಲಿದೆ.

Best Mobiles in India

English summary
We have compiled a list of top-10 best earbuds under Rs 2000 in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+