ಈ ಗ್ಯಾಜೆಟ್‌ಗಳನ್ನು ಖರೀದಿಸಿ, ದೀಪಾವಳಿ ಸಂಭ್ರಮ ಇನ್ನಷ್ಟು ಹೆಚ್ಚಿಸಿ
ಭಾರತದ ದೊಡ್ಡ ಹಬ್ಬಗಳ ಕಾಲ ಆರಂಭವಾಗಿದ್ದು ಅದಕ್ಕಾಗಿ ತಯಾರಿ ನಡೆಸುವ ಸಮಯ ಶುರುವಾಗಿದೆ. ಈ ಸಮಯದಲ್ಲಿ ಪ್ರೀತಿಪಾತ್ರರಿಗಾಗಿ ಅವರು ಇಷ್ಟಪಡುವ ಏನನ್ನಾದರೂ ಖರೀದಿಸುವುದು ಮತ್ತು ಸಪ್ರೈಸ್ ಉಡುಗೊರೆ ಕೊಟ್ಟು ಅವರಿಗೆ ಖುಷಿಯಾಗುವಂತೆ ಮಾಡುವುದಕ್ಕಿಂತ ಹೆಚ್ಚು ಸಂತೋಷ ಮತ್ತಿನ್ಯಾವುದರಲ್ಲೂ ಸಿಕ್ಕುವುದಿಲ್ಲ.

ಈಗಿನ ಟೆಕ್ನಾಲಜಿ ಜಮಾನದಲ್ಲಿ ಪುರುಷರಿಂದ ಮಹಿಳೆಯರವರೆಗೂ, ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಇಷ್ಟ ಪಡುವುದು ಗೆಡ್ಜೆಟ್ ಗಳನ್ನು. ಹೌದು ಈ ಸೀಸನ್ ಗೆ ನಿಮ್ಮ ಪ್ರೀತಿಪಾತ್ರರಿಗೆ ಗೆಡ್ಜೆಟ್ ಉಡುಗೊರೆಯಾಗಿದ್ರೆ ಖಂಡಿತ ಉತ್ತಮ. ಆದರೆ ನಿಮ್ಮ ಬಜೆಟ್ ಕೇವಲ 2000 ರುಪಾಯಿ ಆಗಿದ್ದರೂ ಕೂಡ ಚಿಂತೆ ಮಾಡಬೇಡಿ. ಈ ಬಜೆಟ್ ಗೂ ಕೆಲವು ಅತ್ಯುನ್ನತ ಗೆಡ್ಜೆಟ್ ಗಳು ಲಭ್ಯವಾಗುತ್ತದೆ. ಹೌದು ನಾವಿಲ್ಲಿ ಕನಿಷ್ಟ 399 ರುಪಾಯಿಯಿಂದ ಹಿಡಿದು 2000 ರುಪಾಯಿ ವರೆಗೆ ಖರೀದಿಸಬಹುದಾದ ಕೆಲವು ಬೆಸ್ಟ್ ಗೆಡ್ಜೆಟ್ ಗಳ ಪಟ್ಟಿಯನ್ನು ಮಾಡಿದ್ದೇವೆ. ಹ್ಯಾವ್ ಎ ಲುಕ್..

ಎಂಐ ಬ್ಯಾಂಡ್ 3
ಕೇವಲ 1,999 ರುಪಾಯಿಗೆ ಲಭ್ಯ. ಈ ಫಿಟ್ ನೆಸ್ ಟ್ರ್ಯಾಕರ್ ಈ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಗೆಡ್ಜೆಟ್. ವಿಭಿನ್ನ ಸ್ಪೋರ್ಟ್ಸ್ ಆಕ್ಟಿವಿಟಿಗಳಿಗೆ ಈ ಶಿಯೋಮಿಯ ಧರಿಸಬಹುದಾದ ಸ್ಮಾರ್ಟ್ ಬ್ಯಾಂಡ್ ಸಹಾಯ ಮಾಡುತ್ತದೆ. ರಿಯಲ್ ಟೈಮ್ ಹಾರ್ಟ್ ಬೀಟ್ ಕ್ಯಾಲ್ಕುಲೇಷನ್ ಗೂ ಕೂಡ ಇದು ಸಹಕಾರಿ. ಇದರಲ್ಲಿ OLED ಟಚ್ ಸ್ಕ್ರೀನ್ ಡಿಸ್ಪ್ಲೇ ಇದ್ದು ನೀವಿದರಲ್ಲಿ ನೋಟಿಫಿಕೇಷನ್ ಗಳನ್ನು ಗಮನಿಸಬಹುದು. 20 ದಿನಗಳ ಬ್ಯಾಟರಿ ಬ್ಯಾಕ್ ಅಪ್ ನ್ನು ಇದು ನೀಡಲಿದೆ.

ಶಿಯೋಮಿ ಎಂಐ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ 2
ಹೊಸದಾಗಿ ಬಿಡುಗಡೆಗೊಂಡಿರುವ ಶಿಯೋಮಿ ಎಂಐ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ 2 ಕೇವಲ 799 ರುಪಾಯಿಗೆ ನಿಮಗೆ ಈ ಸೀಸನ್ ನಲ್ಲಿ ಲಭ್ಯವಾಗುತ್ತದೆ.ಹ್ಯಾಂಡ್ಸ್ ಫ್ರೀ ಆಗಿ ಕಾಲ್ ಗಳನ್ನು ರಿಸೀವ್ ಮಾಡಲು ಇದು ನೆರವಾಗುತ್ತದೆ. ಎಂಬೆಡೆಡ್ ಮೈಕ್ರೋಫೋನ್ ನ್ನು ಇದರಲ್ಲಿ ಅಳವಡಿಸಲಾಗಿರುತ್ತದೆ.

20,000mAh ಎಂಐ ಪವರ್ ಬ್ಯಾಂಕ್ 2I
ತಮ್ಮ ಫೋನಿನ ಬ್ಯಾಟರಿ ಬಗ್ಗೆ ಯಾವಾಗಲೂ ದೂರು ಹೇಳುತ್ತಲೇ ಇರುವವರಿಗೆ ನೀವು ಈ ದೀಪಾವಳಿಯಲ್ಲಿ ನೀಡಬಹುದಾದ ಬೆಸ್ಟ್ ಗಿಫ್ಟ್ ಅಂದರೆ ಇದೇ. ಎಂಐ 20,000mAh ಸಾಮರ್ಥ್ಯವನ್ನು ಹೊಂದಿದ್ದು ಕೇವಲ 1,499 ರುಪಾಯಿಗೆ ಲಭ್ಯವಾಗುತ್ತದೆ. ಕ್ವಾಲ್ಕಂ ಕ್ವಿಕ್ ಚಾರ್ಜ್ 3.0 ಸಪೋರ್ಟ್ ಜೊತೆಗೆ ಡುಯಲ್ ಯುಎಸ್ ಬಿ ಪೋರ್ಟ್ ನ್ನು ಇದು ಹೊಂದಿದೆ.

ಬೋಟ್ ಬ್ಲೂಟೂತ್ ವಯರ್ ಲೆಸ್ ಇಯರ್ ಫೋನ್
ವಯರ್ ಲೆಸ್ ಇಯರ್ ಫೋನ್ ಗಳಲ್ಲಿ ಟಾಪ್ ಲಿಸ್ಟ್ ನಲ್ಲಿ ಇರುವ ಗೆಡ್ಜೆಟ್ ಇದು. ಬೋಟ್ ರಾಕರ್ಜ್ 255 ಕೇವಲ 1,499 ರುಪಾಯಿಗೆ ಲಭ್ಯ. ಬ್ಲೂಟೂತ್ 4.1 CSR8635 ಚಿಪ್ ಸೆಟ್ ಇದ್ದು 10mm ಕ್ಲಿಯರ್ ವಯರ್ ಲೆಸ್ ಟ್ರಾನ್ಸ್ ಮಿಷನನ್ ನ್ನು ಹೆಚ್ ಸೌಂಡ್ ನಲ್ಲಿ ಇದು ಡೆಲಿವರ್ ಮಾಡುತ್ತದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ 6 ತಾಸುಗಳ ಕಾಲ ಹಾಡುಗಳನ್ನು ಕೇಳಬಹುದು.

ಶಿಯೋಮಿ ಎಂಐ ಪಾಕೆಟ್ ಸ್ಪೀಕರ್ 2
1,499 ರುಪಾಯಿಗೆ ಶಿಯೋಮಿ ಎಂಐ ಪಾಕೆಟ್ ಸ್ಪೀಕರ್ 2 ಲಭ್ಯವಾಗುತ್ತದೆ. ಇದರಲ್ಲಿ ಬ್ಲೂಟೂತ್ 4.1 ಕನೆಕ್ಟಿವಿಟಿಗೆ ಬೆಂಬಲವಿದೆ ಮತ್ತು 1,200mAh ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದೆ. ಎಂಐ ಸ್ಪೀಕರ್ ನಲ್ಲಿ 5W ಸೌಂಡ್ ಯುನಿಟ್ ಇದ್ದು 7 ತಾಸುಗಳ ಬ್ಯಾಟರಿ ಲೈಫ್ ನ್ನು ಹೊಂದಿದೆ. ಮ್ಯೂಸಿಕ್ ಕೇಳುವುದನ್ನು ಹೆಚ್ಚು ಪ್ರೀತಿಸುವವರಿಗೆ ಖಂಡಿತ ನೀವಿದನ್ನು ಗಿಫ್ಟ್ ಆಗಿ ಈ ದೀಪಾವಳಿ ಸೀಸನ್ ನಲ್ಲಿ ಕೊಡಬಹುದು.

ಯುಎಸ್ ಬಿ ಬೆಂಬಲಿತ ಮಗ್ ವಾರ್ಮರ್
ಯುಎಸ್ ಬಿ ಪವರ್ ಮಗ್ ವಾರ್ಮರ್ ಬಹಳ ಹ್ಯಾಂಡಿ ಆಗಿದೆ. ಸಣ್ಣದಾಗಿರುವ, ಎಲ್ಲಿಗೆ ಬೇಕಿದ್ದರೂ ಸುಲಭದಲ್ಲಿ ಕೊಂಡೊಯ್ಯಬಹುದಾದ, ಯಾವುದೇ ಪವರ್ ಇಲ್ಲದಿದ್ದರೂ ಕೂಡ ಯಾವುದೇ ಸ್ಥಳದಲ್ಲೂ ಬಳಸಬಹುದಾದ ಅಧ್ಬುತ ಗೆಡ್ಜೆಟ್ ಇದು. ಇದಕ್ಕೆ ಬೇಕಾಗಿರುವುದು ಕೇವಲ ಒಂದು ಯುಎಸ್ ಬಿ ಪಾಯಿಂಟ್, ಅಲ್ಲಿ ಮಗ್ ನ್ನು ಕನೆಕ್ಟ್ ಮಾಡಿಕೊಂಡರೆ ನೀವು ಕಾಫಿ ಅಥವಾ ಟೀಯನ್ನು ಬಿಸಿ ಮಾಡಬಹುದು. ಲ್ಯಾಪ್ ಟಾಪ್ ನಲ್ಲಿ ತಾಸುಗಟ್ಟಲೆ ಕೆಲಸ ಮಾಡುವವರು ಕಾಫಿ ಅಥವಾ ಟೀಯನ್ನು ಹೆಚ್ಚು ಪ್ರೀತಿಸುವವರಾಗಿದ್ದರೆ ಖಂಡಿತ ಈ ಗಿಫ್ಟ್ ನ್ನು ನೀವು ಕೊಡಬಹುದು.

ಶಿಯೋಮಿ ಎಂಐ ವಿಆರ್ ಪ್ಲೇ 2
1,299 ರುಪಾಯಿಗೆ ಈ ಶಿಯೋಮಿ ಎಂಐ ವಿಆರ್ ಪ್ಲೇ 2 ಲಭ್ಯವಾಗುತ್ತಿದ್ದು 1,500 ರುಪಾಯಿ ಒಳಗೆ ಲಭ್ಯವಾಗುವ ಬೆಸ್ಟ್ ವಿಆರ್ ಹ್ಯಾಂಡ್ ಸೆಟ್ ಇದು.ಕೇವಲ 183 ಗ್ರಾಂ ತೂಕವಿರುವ ಇದು ಚಲನಚಿತ್ರ ನೋಡುವುದನ್ನು ಇಷ್ಟಪಡುವವರಿಗೆ ಮತ್ತು ಗೇಮ್ ಗಳನ್ನು ಪ್ಲೇ ಮಾಡುವವರಿಗೆ ಹೇಳಿ ಮಾಡಿಸಿದ ಗೆಡ್ಜೆಟ್ ಆಗಿದೆ. ಇದು ಸ್ಟ್ಯಾಂಡರ್ಡ್ ವರ್ಚುವಲ್ ರಿಯಾಲಿಟಿ ಅನುಭವವನ್ನು ನೀಡುತ್ತದೆ.

ಸೋನಿ MDR-XB450ಹೆಡ್ ಫೋನ್
ಸೋನಿ MDR-XB450 ಆಪ್ಟಿಮಮ್ ಬೇಸ್ ಡೆಲಿವರಿಯೊಂದಿಗೆ ಹೆಚ್ಚು ಆರಾಮದಾಯಕವಾಗಿರುವ ಡಿಸೈನ್ ಹೊಂದಿರುವ ಈ ಹೆಡ್ ಫೋನ್ 2000 ರುಪಾಯಿ ಒಳಗೆ ಲಭ್ಯವಾಗುತ್ತದೆ. ಇದರಲ್ಲಿ ದೊಡ್ಡದಾಗಿರುವ 12mm ನಿಯೋಡೈಮಿಯಮ್ ಮ್ಯಾಗ್ನೆಟ್ ಡ್ರೈವ್ ಗಳಿದ್ದು ಇದರ ಜೊತೆಗೆ ಪವರ್ಡ್ ಬಾಸ್ ಡಕ್ಟ್ ನ್ನು ಹೊಂದಿದೆ. ಮ್ಯೂಸಿಕ್ ಪ್ರಿಯರಿಗೆ ಅತ್ಯುತ್ತಮ ಗಿಫ್ಟ್ ಆಗಿದೆ.

ಜೆಬಿಎಲ್ ಗೋ ಪೋರ್ಟೇಬಲ್ ವಯರ್ ಲೆಸ್ ಬ್ಲೂಟೂತ್ ಸ್ಪೀಕರ್
ಜೆಬಿಎಲ್ ಗೋ ಪೊರ್ಟೇಬಲ್ ಸ್ಪೀಕರ್ 7 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ. ಹೆಚ್ ಡಿ ಸೌಂಡ್ ಗುಣಮಟ್ಟದಲ್ಲಿ 5 ತಾಸುಗಳವರೆಗೆ ಕೆಲಸ ಮಾಡುತ್ತದೆ. ಈ ಜೆಬಿಎಲ್ ಪಾಕೆಟ್ ಸ್ಪೀಕರ್ 3.5ಎಂಎಂ ನ ಇನ್ ಪುಟ್ ಜ್ಯಾಕ್ , ಮೈಕ್ರೋ ಯುಎಸ್ ಬಿ ಪೋರ್ಟ್ ಇದೆ. ಜೊತೆಗೆ ಮೈಕ್ರೋಫೋನ್ ಇದ್ದು ಹ್ಯಾಂಡ್ಸ್ ಫ್ರೀ ಕಾಲ್ ಗೆ ಸಹಾಯ ಮಾಡುತ್ತದೆ. ಸ್ವಲ್ಪ ಹಳೆಯದಾಗಿರುವ ಗೆಡ್ಜೆಟ್ ಆಗಿದ್ದರೂ ಕೂಡ ಈಗಲೂ 2,000 ರುಪಾಯಿ ಒಳಗೆ ಸಿಗುವ ಬೆಸ್ಟ್ ಸ್ಪೀಕರ್ ಆಗಿದೆ.

ಡೀಪ್ ಪೂಲ್ ಲ್ಯಾಪ್ ಟಾಪ್ ಕೂಲಿಂಗ್ ಪ್ಯಾಡ್
ಡೀಪ್ ಪೂಲ್ ಯು-ಪಾಲ್ ಲ್ಯಾಪ್ ಟಾಪ್ ಕೂಲಿಂಗ್ ಪ್ಯಾಡ್ ತಾಸುಗಟ್ಟಲೆ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರಿಗೆ ನೀಡಬಹುದಾದ ಬೆಸ್ಟ್ ಆಯ್ಕೆ ಆಗಿದೆ. ಈ ಕೂಲಿಂಗ್ ಪ್ಯಾಡ್ ನ ಸೈಜ್ ನ್ನು ಹೊಂದಾಣಿಕೆ ಮಾಡುವಂತಿರುತ್ತದೆ. ಎರಡು ಯುಎಸ್ ಬಿ ಪೋರ್ಟ್ ಇರುತ್ತದೆ. ಒಂದು USB 3.0 ಮತ್ತೊಂದು USB 2.0. ಅಷ್ಟೇ ಅಲ್ಲದೆ ಇದರಲ್ಲಿ ಪ್ರೀ ಇನ್ಸ್ಟಾಲ್ಡ್ ಬ್ಲೂ ಎಲ್ ಇಡಿ ಫ್ಯಾನ್ಸ್ ಗಳಿದ್ದು ಇವು ಮುಂಭಾಗದ ಪೆನಲ್ ಪೆರಿಮೀಟರ್ ಜೊತೆಗೆ ಸರಿಯಾದ ಪ್ರಮಾಣದಲ್ಲಿ ಕೂಲಿಂಗ್ ತಂತ್ರಗಾರಿಕೆಯನ್ನು ಸಪ್ಲೈ ಮಾಡಲು ನೆರವಾಗುತ್ತದೆ.


Click it and Unblock the Notifications








