ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್ 5 ಬೆಸ್ಟ್ '5G ಸ್ಮಾರ್ಟ್‌ಫೋನ್‌ಗಳು'
5G ನೆಟ್‌ವರ್ಕ್ ಜೊತೆ 5G ಸ್ಮಾರ್ಟ್‌ಫೋನ್ ಇದ್ದರೆ ಎಷ್ಟು ಚೆಂದ ಅಲ್ವಾ? ಈಗಾಗಲೇ ವೆರೈಟಿ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೀಗಾಗಿ, 4G ಸ್ಮಾರ್ಟ್‌ಫೋನ್‌ನಿಂದ 5G ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗಲು ಇದು ಬೆಸ್ಟ್ ಟೈಮ್!
ಬಹುತೇಕ ಎಲ್ಲಾ ನೆಟ್‌ವರ್ಕ್ ಕಂಪನಿಗಳು 5Gಯನ್ನು ಪ್ರಾರಂಭಿಸಿವೆ. ಏರ್‌ಟೆಲ್ ಮತ್ತು ಜಿಯೋ ಕೂಡ ಅನ್ಲಿಮಿಡೆಟ್ 5G ನೆಟ್‌ವರ್ಕ್‌ಗಳನ್ನು ಒದಗಿಸುತ್ತಿವೆ. ಮುಂದಿನ ದಿನಗಳಲ್ಲಿ ಈ 5G ದೇಶದ ಎಲ್ಲಾ ಭಾಗಗಳಲ್ಲಿ ವಿಸ್ತರಿಸಲಿದೆ. 5G ಸ್ಮಾರ್ಟ್‌ಫೋನ್‌ಗಳು ಇದಕ್ಕೆ ಹೊರತಾಗಿಲ್ಲ. ಹೀಗಾಗಿ, ನೀವು 4G ಸ್ಮಾರ್ಟ್‌ಫೋನ್‌ನಿಂದ 5G ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗುವುದು ಸೂಕ್ತ.

ಬಜೆಟ್ ಫ್ರೆಂಡ್ಲಿ ಮೊಬೈಲ್ ನಿಮಗೆ ಬೇಕಾ? ನೀವು ಹೊಸ 5G ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ಅದ್ಭುತ ಫೀಚರ್ ಹಾಗೂ ವೈಶಿಷ್ಟ್ಯಗಳೊಂದಿಗೆ ನಿಮಗೆ ಕೈಗೆಟುಕುವ ದರದಲ್ಲಿ (ಬಜೆಟ್ ಫ್ರೆಂಡ್ಲಿ) ಸಿಗುವ 'ಟಾಪ್ 5' ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ.
ಐಕ್ಯೂ Z9x 5G : ಐಕ್ಯೂ Z9x 5G (IQOO Z9x 5G) ಫೋನ್ ಸ್ನಾಪ್‌ಡ್ರಾಗನ್ ಪ್ರೊಸೆಸರ್, 6.72-ಇಂಚಿನ ಫುಲ್‌ಹೆಚ್‌ಡಿ+, 120Hz ರಿಫ್ರೆಶ್ ರೇಟ್ ಹೊಂದಿದೆ. 4GB/128GB ವೇರಿಯಂಟ್ ಹಾಗೂ ಇದರ ಬೆಲೆ 12,999 ರೂ.ನಿಂದ ಪ್ರಾರಂಭವಾಗುತ್ತದೆ. 6,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾವನ್ನು ಹೊಂದಿದೆ.
POCO M6 Pro 5G : ಪೊಕೊ M6 ಪ್ರೊ 5G ಕೈಗೆಟುಕುವ ದರದಲ್ಲಿ ಸಿಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನಿನ 4GB RAM + 128GB ವೇರಿಯಂಟ್ ಕೇವಲ 9,249ರೂ.ಗೆ ಖರೀದಿಸಬಹುದು. ಈ ಮೊಬೈಲ್ 6.74 ಇಂಚಿನ HD ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದ್ದು, 600nits ಗರಿಷ್ಠ ಬ್ರೈಟ್‌ನೆಸ್ ಒದಗಿಸಲಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಒಳಗೊಂಡಿದೆ.
ಲಾವಾ ಸ್ಟಾರ್ಮ್ 5G : ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್ 11,999 ರೂ. ದರ ಹೊಂದಿದೆ. 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಇದೆ. ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ. 6.78 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.
ನೋಕಿಯಾ G42 5G : ನೋಕಿಯಾ G42 5G ಸ್ಮಾರ್ಟ್‌ಪೋನ್ ಕೈಗೆಟುಕುವ ದರದಲ್ಲಿ ನಿಮಗೆ ಸಿಗುತ್ತದೆ. 9,999 ರೂ. ಬೆಲೆಗೆ ನೀವು ಖರೀದಿಸಬಹುದು. ನೋಕಿಯಾ G42 5G ಸ್ಮಾರ್ಟ್‌ಫೋನ್ 6.56 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 4GB RAM (2GB ವರ್ಚುವಲ್ RAM) ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ. Nokia G42 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G : ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಸ್ಮಾರ್ಟ್‌ಪೋನ್ ಅನ್ನು 17,990ರೂ. ಗಳ ಬದಲಿಗೆ 13,990 ರೂ. ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು. 4GB RAM + 128 GB ಸ್ಟೋರೇಜ್, ಎಕ್ಸಿನೋಸ್ 1330 ಆಕ್ಟಾ ಕೋರ್ SoC ಪ್ರೊಸೆಸರ್ ಹೊಂದಿದೆ. 6000 mAh ಬ್ಯಾಟರಿ ಬ್ಯಾಕ್‌ಅಪ್ ಬ್ಯಾಕ್‌ಅಪ್ ಹಾಗೂ 4GB RAM + 128 GB ವೇರಿಯಂಟ್ ಜೊತೆಗೆ 6GB RAM ಮತ್ತು 128 GB ಸ್ಟೋರೇಜ್ ಹೊಂದಿದೆ. 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಯನ್ನು ಹೊಂದಿದೆ.
ನೀವು ಮೊಬೈಲ್ ಖರೀದಿಸುವ ಮುನ್ನ ಕೆಲವು ವಿಷಯಗಳನ್ನು ಪರಿಗಣಿಸುವುದು ಸೂಕ್ತ. 5G ನೆಟ್‌ವರ್ಕ್ ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಖರೀದಿಸಿ. ನೀವು ಖರೀದಿಸುವ ಮೊಬೈಲ್ ಕನಿಷ್ಠ 128 ಜಿಬಿ ಕ್ಲೌಡ್ ಸ್ಟೋರೇಜ್ ಹೊಂದಿರಬೇಕು. ಕನಿಷ್ಠ 5,000 mAh ಬ್ಯಾಟರಿ ಬ್ಯಾಕಪ್ ಹೊಂದಿರುವ ಮೊಬೈಲ್ ಖರೀದಿಸುವುದು ಸೂಕ್ತ.


Click it and Unblock the Notifications








