Home
Gadgets

ಗ್ರೇಟ್ ಫ್ರೀಡಂ ಫೆಸ್ಟಿವಲ್ 2025: TWS ಇಯರ್‌ಬಡ್ಸ್ ಮೇಲೆ ಭಾರೀ ಡಿಸ್ಕೌಂಟ್!

ಟೆಕ್ ದೈತ್ಯ ಅಮೆಜಾನ್ ಆಯೋಜಿಸಿರುವ ಗ್ರೇಟ್ ಫ್ರೀಡಂ ಫೆಸ್ಟಿವಲ್ 2025 ಆರಂಭವಾಗಿದ್ದು, ಭಾರತೀಯ ಶಾಪಿಂಗ್ ಪ್ರಿಯರಿಗೆ ಸಂತಸ ತಂದಿದೆ. ಜುಲೈ 31 ರಂದು ಮಧ್ಯಾಹ್ನ ಈ ವಿಶೇಷ ಮಾರಾಟವು ಪ್ರಾರಂಭವಾಗಿದ್ದು, ಅಮೆಜಾನ್ ಪ್ರೈಮ್ ಸದಸ್ಯರು ಎಂದಿನಂತೆ ಜುಲೈ 30ರ ಮಧ್ಯರಾತ್ರಿಯಿಂದಲೇ ಡೀಲ್‌ಗಳಿಗೆ ವಿಶೇಷ ಪ್ರವೇಶ ಪಡೆದರು. ಈ ಸೇಲ್‌ನಲ್ಲಿ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವೈಯಕ್ತಿಕ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.

ಒನ್‌ಪ್ಲಸ್, ಬೋಟ್, ಜೆಬಿಎಲ್, ಶಿಯೋಮಿ, ಮತ್ತು ರಿಯಲ್‌ಮಿ ಯಂತಹ ಉನ್ನತ ಬ್ರ್ಯಾಂಡ್‌ಗಳ ಸ್ಮಾರ್ಟ್ ವೇರಬಲ್‌ಗಳನ್ನು ಅವುಗಳ ಮೂಲ ಬೆಲೆಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ವೈರ್‌ಲೆಸ್ ಇಯರ್‌ಬಡ್‌ಗಳು ಮತ್ತು ನೆಕ್‌ಬ್ಯಾಂಡ್‌ಗಳಂತಹ ಆಡಿಯೋ ಪರಿಕರಗಳ ಮೇಲೆ ಹೆಚ್ಚಿನ ರಿಯಾಯಿತಿಗಳು ಲಭ್ಯವಿದ್ದು, ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ, ನೀವು ಇತ್ತೀಚಿನ TWS ಇಯರ್‌ಬಡ್ಸ್ ಮೇಲೆ ಅತ್ಯುತ್ತಮ ಡೀಲ್‌ಗಳನ್ನು ಸಹ ಪಡೆಯಬಹುದು.

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ 2025: TWS ಇಯರ್‌ಬಡ್ಸ್ ಮೇಲಿನ ಅತ್ಯುತ್ತಮ ಡೀಲ್‌ಗಳು!

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ 2025 ಸೇಲ್‌ನಲ್ಲಿ ನೀವು ಜೆಬಿಎಲ್ ಟ್ಯೂನ್ ಬೀಮ್ 2 (JBL Tune Beam 2) ಇಯರ್‌ಬಡ್ಸ್ ಖರೀದಿಸಲು ಅತ್ಯುತ್ತಮ ಸಮಯವಾಗಿದೆ. ಇದರ MRP ಬೆಲೆ ರೂ. 11,999 ಇದ್ದು, ಇದನ್ನು ಕೇವಲ ರೂ. 5,499 ಕ್ಕೆ ಪಡೆಯಬಹುದಾಗಿದೆ. ಇದರ ಜೊತೆಗೆ, ಒನ್‌ಪ್ಲಸ್ ಬಡ್ಸ್ 4(OnePlus Buds 4), ಇದರ MRP ರೂ. 6,499 ಇದ್ದು, ಇದು ಕೇವಲ ರೂ. 5,399 ಕ್ಕೆ ಲಭ್ಯವಿದೆ. ರಿಯಲ್‌ಮಿ ಬಡ್ಸ್ ಏರ್ 7 ಪ್ರೊ(Realme Buds Air 7 Pro), ಇದರ ಬೆಲೆ ರೂ. 7,999 ಆಗಿದ್ದು, ಕೇವಲ ರೂ. 4,499 ಕ್ಕೆ ನಿಮ್ಮದಾಗಿಸಿಕೊಳ್ಳಬಹುದು.

ಇದರಷ್ಟೇ ಉತ್ತಮವಾದ ಮತ್ತೊಂದು ಡೀಲ್ ಎಂದರೆ ಬೋಟ್ ನಿರ್ವಾಣ ಕ್ರಿಸ್ಟಲ್(boAt Nirvana Crystl ), ಇದರ ಮೂಲ ಬೆಲೆ ರೂ. 10,990 ಇದ್ದರೂ, ಕೇವಲ ರೂ. 2,199 ಕ್ಕೆ ಸಿಗುತ್ತಿದೆ. ಇನ್ನು, ಕಡಿಮೆ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟದ ಆಡಿಯೋ ಪರಿಕರಗಳನ್ನು ಹುಡುಕುತ್ತಿರುವವರಿಗೆ ಕೂಡ ಹಲವಾರು ಆಯ್ಕೆಗಳಿವೆ. ರೆಡ್‌ಮಿ ಬಡ್ಸ್ 5, ಇದರ MRP ಬೆಲೆ ರೂ. 4,999 ಇದ್ದು, ಇದನ್ನು ಕೇವಲ ರೂ. 1,799 ಕ್ಕೆ ಖರೀದಿಸಬಹುದಾಗಿದೆ. ಹ್ಯಾಮರ್ ಸ್ಕ್ರೀನ್ (Hammer Screen) ಇದರ ಬೆಲೆ ರೂ. 8,999 ಇದ್ದು, ಇದು ಕೇವಲ ರೂ. 1,349 ಕ್ಕೆ ಲಭ್ಯವಿದೆ.

 ಗ್ರೇಟ್ ಫ್ರೀಡಂ ಫೆಸ್ಟಿವಲ್ 2025: TWS ಇಯರ್‌ಬಡ್ಸ್ ಮೇಲೆ ಭಾರೀ ಡಿಸ್ಕೌಂಟ್!

ಇನ್ನೂ ಕಡಿಮೆ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟದ ಆಡಿಯೋ ಪರಿಕರಗಳನ್ನು ಹುಡುಕುತ್ತಿರುವವರಿಗೆ ಕೂಡ ಹಲವಾರು ಆಯ್ಕೆಗಳಿವೆ. (Redmi Buds 5), ಇದರ MRP ಬೆಲೆ ರೂ. 4,999 ಇದ್ದು, ಇದನ್ನು ಕೇವಲ ರೂ. 1,799 ಕ್ಕೆ ಖರೀದಿಸಬಹುದಾಗಿದೆ. ಹ್ಯಾಮರ್ ಸ್ಕ್ರೀನ್ (Hammer Screen) ಇದರ ಬೆಲೆ ರೂ. 8,999 ಇದ್ದು, ಇದು ಕೇವಲ ರೂ. 1,349 ಕ್ಕೆ ಲಭ್ಯವಿದೆ. ಟ್ರುಕ್ ಮೆಗಾ 9 (Truke Mega 9) ಇದರ ಬೆಲೆ ರೂ. 3,999 ಆಗಿದ್ದು, ಇದನ್ನು ಕೇವಲ ರೂ. 1,149 ಕ್ಕೆ ಖರೀದಿಸಬಹುದಾಗಿದೆ.

ನೀವು ಅತ್ಯಂತ ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಆಡಿಯೋ ಪರಿಕರಗಳನ್ನು ಹುಡುಕುತ್ತಿದ್ದರೆ, ಬೋಟ್ ಏರ್‌ಡೋಪ್ಸ್ ಜಾಯ್ (boAt Airdopes Joy) ನಿಮ್ಮ ಆಯ್ಕೆಯಾಗಬಹುದು. ಇದರ MRP ಬೆಲೆ ರೂ. 3,490 ಆಗಿದ್ದರೂ, ಎಲ್ಲಾ ಆಫರ್‌ಗಳ ನಂತರ ಕೇವಲ ರೂ. 699 ಕ್ಕೆ ಲಭ್ಯವಿದೆ.!

ಈ ರಿಯಾಯಿತಿ ದರಗಳ ಜೊತೆಗೆ, ಖರೀದಿದಾರರು ಬ್ಯಾಂಕ್ ಆಫರ್‌ಗಳ ಮೂಲಕ ಮತ್ತಷ್ಟು ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ ಮತ್ತು ಇಎಂಐ ಮೂಲಕ ಪಾವತಿಸುವವರಿಗೆ ಹೆಚ್ಚುವರಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ದೊರೆಯುತ್ತದೆ. ಇನ್ನು, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ರೂ. 2,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ ಮತ್ತು ಕೆಲವು ಖರೀದಿಗಳ ಮೇಲೆ ರೂ. 500 ವರೆಗಿನ ಕೂಪನ್ ರಿಯಾಯಿತಿಯೂ ಲಭ್ಯವಿದೆ. ಈ ಕೊಡುಗೆಗಳಿಂದಾಗಿ ಉತ್ಪನ್ನಗಳ ಅಂತಿಮ ಪರಿಣಾಮಕಾರಿ ಬೆಲೆಗಳು ಬಹಳ ಕಡಿಮೆಯಾಗಿವೆ.

ಈ ಡೀಲ್‌ಗಳು ಹೈ-ಎಂಡ್ ಆಡಿಯೋ ಪರಿಕರಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶವನ್ನು ಒದಗಿಸಿವೆ. ಅಂದರೆ, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ 2025 ಗ್ರಾಹಕರಿಗೆ ಉತ್ತಮ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಒಂದು ಸುವರ್ಣಾವಕಾಶವನ್ನು ನೀಡಿದೆ. ಈ ಸೇಲ್ ಯಾವಾಗ ಮುಗಿಯುತ್ತದೆ ಎಂಬ ಮಾಹಿತಿ ಪ್ರಕಟಣೆಯಲ್ಲಿಲ್ಲ, ಆದ್ದರಿಂದ ಆಸಕ್ತರು ಆದಷ್ಟು ಬೇಗನೆ ಈ ಕೊಡುಗೆಗಳನ್ನು ಸದುಪಯೋಗಪಡಿಸಿಕೊಳ್ಳುವುದು ಉತ್ತಮ. ಈ ಮೇಲಿನ ಡೀಲ್‌ಗಳಲ್ಲಿ ನಿಮ್ಮ ಗಮನಸೆಳೆದ ಆಡಿಯೊ ಡಿವೈಸ್ ಯಾವುದು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
JBL Tune Beam 2 is available for purchase at a price of Rs. 5,499, reduced from its maximum retail price of Rs. 11,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+