Home
Gadgets

₹1,999 ಬೆಲೆಗೆ Truke TruClips ಓಪನ್-ಇಯರ್ ಇಯರ್‌ಬಡ್ಸ್ ಬಿಡುಗಡೆ!

ಭಾರತೀಯ ಆಡಿಯೋ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳು ನಿರಂತರವಾಗಿ ಪರಿಚಯವಾಗುತ್ತಿವೆ. ಈ ಬಾರಿ Truke ಕಂಪನಿ ತನ್ನ ಹೊಸ ಓಪನ್ ವೈರ್‌ಲೆಸ್ ಸ್ಟೀರಿಯೋ (OWS) ಇಯರ್‌ಬಡ್ಸ್ 'Truke TruClips' ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸಾಧನವು ವಿಶಿಷ್ಟವಾದ ಓಪನ್-ಇಯರ್ ಕ್ಲಿಪ್ ವಿನ್ಯಾಸವನ್ನು ಹೊಂದಿದ್ದು, ಸಂಗೀತ ಕೇಳುವಾಗಲೂ ಬಳಕೆದಾರರು ಸುತ್ತಮುತ್ತಲಿನ ಪರಿಸರದ ಧ್ವನಿಯನ್ನು ಗಮನಿಸಲು ಸಾಧ್ಯವಾಗುವಂತೆ ರೂಪಿಸಲಾಗಿದೆ.

ಈ ಹೊಸ Truke TruClips ಇಯರ್‌ಬಡ್ಸ್ ಸಾಮಾನ್ಯ ಇಯರ್‌ಬಡ್ಸ್‌ಗಳಂತೆ ಕಿವಿಯ ಕಾಲುವೆಯನ್ನು ಸಂಪೂರ್ಣ ಮುಚ್ಚದೆ ಧ್ವನಿಯನ್ನು ನೀಡುವ ಈ ವಿನ್ಯಾಸವು ಪ್ರಯಾಣ, ಕಚೇರಿ ಕೆಲಸ, ವರ್ಕೌಟ್ ಹಾಗೂ ಗೇಮಿಂಗ್ ವೇಳೆ ಸಹ ಅನುಕೂಲಕರ ಅನುಭವ ನೀಡುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಕಂಪನಿಯ ಮಾಹಿತಿ ಪ್ರಕಾರ, ಈ ಹೆಡ್‌ಸೆಟ್ ಭಾರತದಲ್ಲೇ ತಯಾರಿಸಲ್ಪಟ್ಟಿದ್ದು, ಸ್ಪೇಷಲ್ ಆಡಿಯೋ ಬೆಂಬಲದೊಂದಿಗೆ ಉತ್ತಮ ಆಡಿಯೋ ಅನುಭವ ನೀಡಲು ರೂಪಿಸಲಾಗಿದೆ.

Truke TruClips: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Truke TruClips ಇಯರ್‌ಬಡ್ಸ್ ಬೆಲೆ ರೂ. 1,999 ಎಂದು ನಿಗದಿಪಡಿಸಲಾಗಿದೆ. ಈ ಸಾಧನವು Onyx Blue ಮತ್ತು Mint Mist ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಗ್ರಾಹಕರು ಇದನ್ನು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು ಎಂದು Truke ತಿಳಿಸಿದೆ. ಹಾಗಾದರೆ, ಈ ಹೊಸ Truke TruClips ಇಯರ್‌ಬಡ್ಸ್ ಹೊಂದಿರುವ ಸಂಪೂರ್ಣ ಯಾವುವು ಎಂಬುದನ್ನು ಸಹ ನೋಡೋಣ ಬನ್ನಿ.

Truke TruClips: ಪ್ರಮುಖ ವೈಶಿಷ್ಟ್ಯಗಳು
ಹೊಸ Truke TruClips ಇಯರ್‌ಬಡ್ಸ್‌ಗಳಲ್ಲಿ 12mm ಕಸ್ಟಮೈಸ್ ಮಾಡಿದ ಟೈಟಾನಿಯಂ ಡ್ರೈವರ್‌ಗಳನ್ನು ನೀಡಲಾಗಿದೆ. ಕಂಪನಿಯ ಪ್ರಕಾರ, ಇದು 24-bit ಸ್ಪೇಷಲ್ ಆಡಿಯೋ ಬೆಂಬಲ ಹೊಂದಿದ್ದು, ಸಂಗೀತ, ವಿಡಿಯೋ ಮತ್ತು ಗೇಮಿಂಗ್ ವೇಳೆ ಹೆಚ್ಚು ಆಳವಾದ ಧ್ವನಿ ಅನುಭವ ನೀಡುತ್ತದೆ. ಓಪನ್-ಇಯರ್ ಕ್ಲಿಪ್ ವಿನ್ಯಾಸದಿಂದ ಬಳಕೆದಾರರು ಆಡಿಯೋ ಕೇಳುತ್ತಿದ್ದರೂ ಹೊರಗಿನ ಧ್ವನಿಗಳನ್ನು ಸಹ ಸುಲಭವಾಗಿ ಗಮನಿಸಬಹುದು.

ಗೇಮಿಂಗ್ ಪ್ರಿಯರಿಗಾಗಿ ವಿಶೇಷವಾಗಿ ಕಡಿಮೆ ಲ್ಯಾಟೆನ್ಸಿಯ ಗೇಮಿಂಗ್ ಮೋಡ್ ನೀಡಲಾಗಿದೆ. ಕಂಪನಿಯ ಪ್ರಕಾರ, ಇದರ ಲ್ಯಾಟೆನ್ಸಿ ಸುಮಾರು 40 ಮಿಲಿಸೆಕೆಂಡ್ ಆಗಿದ್ದು, ಗೇಮಿಂಗ್ ವೇಳೆ ಧ್ವನಿ ಮತ್ತು ದೃಶ್ಯಗಳ ಮಧ್ಯೆ ವಿಳಂಬ ಕಡಿಮೆ ಆಗಲು ಸಹಾಯ ಮಾಡುತ್ತದೆ. ಸಂಪರ್ಕಕ್ಕಾಗಿ Bluetooth 5.4 ಬೆಂಬಲ ನೀಡಲಾಗಿದೆ. ಜೊತೆಗೆ ಡ್ಯುಯಲ್ ಡಿವೈಸ್ ಪೇರಿಂಗ್ ಸೌಲಭ್ಯ ಇರುವುದರಿಂದ ಒಂದೇ ಸಮಯದಲ್ಲಿ ಎರಡು ಸಾಧನಗಳಿಗೆ ಸಂಪರ್ಕಿಸಬಹುದು. ಟಚ್ ಕಂಟ್ರೋಲ್ ಮೂಲಕ ಸಂಗೀತ ಪ್ಲೇಬ್ಯಾಕ್, ಕರೆ ನಿರ್ವಹಣೆ ಮತ್ತು ವಾಯ್ಸ್ ಅಸಿಸ್ಟೆಂಟ್ ಬಳಸುವ ವ್ಯವಸ್ಥೆಯೂ ಇದೆ.

₹1,999 ಬೆಲೆಗೆ Truke TruClips ಓಪನ್-ಇಯರ್ ಇಯರ್‌ಬಡ್ಸ್ ಬಿಡುಗಡೆ!

ಕಾಲ್ ಗುಣಮಟ್ಟವನ್ನು ಹೆಚ್ಚಿಸಲು ಈ ವೈರ್‌ಲೆಸ್ ಹೆಡ್‌ಸೆಟ್‌ನಲ್ಲಿ ಕ್ವಾಡ್ ಮೈಕ್ರೋಫೋನ್ ವ್ಯವಸ್ಥೆ ನೀಡಲಾಗಿದೆ. ಜೊತೆಗೆ PureVoice Environmental Noise Cancellation (ENC) ತಂತ್ರಜ್ಞಾನ ಬಳಸಲಾಗಿದೆ. ಇದರ ಸಹಾಯದಿಂದ ಹೊರಗಿನ ಶಬ್ದವನ್ನು ಕಡಿಮೆ ಮಾಡಿ, ಕರೆಗಳ ವೇಳೆ ಧ್ವನಿ ಹೆಚ್ಚು ಸ್ಪಷ್ಟವಾಗುವಂತೆ ಮಾಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಕಂಪನಿಯ ಮಾಹಿತಿ ಪ್ರಕಾರ, ಚಾರ್ಜಿಂಗ್ ಕೇಸ್ ಜೊತೆ ಬಳಸಿದಾಗ Truke TruClips ಒಟ್ಟು 55 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯ ನೀಡುತ್ತದೆ. ಚಾರ್ಜಿಂಗ್ ಕೇಸ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ USB Type-C ಪೋರ್ಟ್ ನೀಡಲಾಗಿದೆ.

ಇಯರ್‌ಬಡ್ಸ್‌ಗಳು ಸಿಲಿಕೋನ್ ಕ್ಲಿಪ್-ಆನ್ ವಿನ್ಯಾಸ ಹೊಂದಿದ್ದು, ದೀರ್ಘಕಾಲ ಧರಿಸಿದರೂ ಆರಾಮಕರ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಚಾರ್ಜಿಂಗ್ ಕೇಸ್ ಪ್ರೀಮಿಯಂ ಡ್ಯುಯಲ್-ಫಾರ್ಮ್ ವಿನ್ಯಾಸ ಮತ್ತು ಲೆದರ್ ಫಿನಿಷ್ ಹೊಂದಿದ್ದು, ಸಾಧನಕ್ಕೆ ಸ್ಟೈಲಿಶ್ ಲುಕ್ ನೀಡುತ್ತದೆ. ಜೊತೆಗೆ ಈ ಇಯರ್‌ಬಡ್ಸ್‌ಗಳಿಗೆ IPX5 ರೇಟಿಂಗ್ ನೀಡಲಾಗಿದ್ದು, ಬೆವರು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆ ನೀಡುತ್ತದೆ.

ಕಂಪನಿಯ ಪ್ರಕಾರ, ಈ ಉತ್ಪನ್ನಕ್ಕೆ ಒಂದು ವರ್ಷದ ವಾರಂಟಿ ಲಭ್ಯವಿದೆ. ಜೊತೆಗೆ ಭಾರತದೆಲ್ಲೆಡೆ 400ಕ್ಕೂ ಹೆಚ್ಚು ಸರ್ವಿಸ್ ಸೆಂಟರ್‌ಗಳ ಮೂಲಕ ಸೇವಾ ಬೆಂಬಲವೂ ದೊರೆಯುತ್ತದೆ. ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ನೀಡುವ ಈ ಹೊಸ ಓಪನ್-ಇಯರ್ ವೈರ್‌ಲೆಸ್ ಇಯರ್‌ಬಡ್ಸ್ ಭಾರತೀಯ ಗ್ರಾಹಕರ ಗಮನ ಸೆಳೆಯುವ ಸಾಧ್ಯತೆ ಇದೆ.

Best Mobiles in India

English summary
Truke has launched its new TruClips open-ear wireless stereo (OWS) earbuds in India at a price of ₹1,999. Featuring a unique clip-on open-ear design and spatial audio support, the earbuds allow users to enjoy music while staying aware of their surroundings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+