Subscribe to Gizbot

ಈ ಮಷಿನ್‌ನಿಂದ ಮನೆಯಲ್ಲೇ ಬಿಯರ್‌ ತಯಾರಿಸಬಹುದು

Written By:

ರಿಯಲ್‌ ಟ್ರೆಂಡ್‌ ಸೆಟ್ಟರ್‌ಗಳು ಕೇವಲ ಯಾವಾಗಲು ಹಳೆ ಉತ್ಪನ್ನಗಳ ಮೇಲೆ ಆಧಾರಿತವಾಗಿರುವುದಿಲ್ಲ. ದಾಕ್ಷಾರಸದಿಂದ ಮಾಡಿದ ಬಿಯರ್‌ ಅನ್ನೇ ಕುಡಿಯುವುದು ಟ್ರೆಂಡ್ ಅಲ್ಲ. ಯಾಕಂದ್ರೆ ಹಿಂದಿನಿಂದಲೂ ಸಹ ದ್ರಾಕ್ಷಾರಸದಿಂದಲೇ ಬಿಯರ್‌ ತಯಾರಿ ಮಾಡುತ್ತಾರೆ.

ಆದ್ರೆ ಈಗ ರಿಯಲ್‌ ಟ್ರೆಂಡ್‌ ಸೆಟ್ಟರ್‌ಗಳು ಬಿಯರ್‌ ತಯಾರಿಸಲು ಟೆಕ್ನಾಲಜಿ ಬಳಸಿಕೊಂಡು ಹೊಸ ವಿಧಾನವನ್ನೇ ಕಂಡುಹಿಡಿದಿದ್ದಾರೆ. ಇಸ್ರೇಲ್‌ ಮೂಲದ 'ಸೋಡಾಸ್ಟ್ರೀಮ್‌ ಇಂಟರ್‌ನ್ಯಾಷನಲ್‌' ಕಂಪನಿ ತಯಾರಿಸಿರುವ ಡಿವೈಸ್‌ ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿ ಮಾಡಿಕೊಡುತ್ತದೆ. ಅದ್‌ ಹೇಗೆ ಎಂಬ ವಿಶೇಷ ಮಾಹಿತಿಯನ್ನು ಸ್ಲೈಡರ್‌ನಲ್ಲಿ ಓದಿ. ಹಾಗೆ ವೀಡಿಯೊವನ್ನು ನೋಡಿ.

Read:ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಡಾಸ್ಟ್ರೀಮ್‌

ಸೋಡಾಸ್ಟ್ರೀಮ್‌

ಇಸ್ರೇಲ್‌ ಮೂಲದ ಸೋಡಾಸ್ಟ್ರೀಮ್ ಇಂಟರ್‌ನ್ಯಾಷನಲ್‌ ಅಭಿವೃದ್ದಿಪಡಿಸಿರುವ ಡಿವೈಸ್ ಹೆಸರು 'ಸೋಡಾಸ್ಟ್ರೀಮ್'. ಈ ಡಿವೈಸ್‌ ಮನೆಯಲ್ಲೇ ವಿಶೇಷ ಬಿಯರ್‌ ತಯಾರಿಸಿಕೊಡುತ್ತದೆ. ಆದರೆ ಮನೆಯಲ್ಲಿನ ಸ್ಪಾರ್ಕ್ಲಿಂಗ್‌ ನೀರನ್ನು ಕಾಂಕ್ರೀಟ್‌ ಫಾರ್ಮುಲಾ 'ಬ್ಲಾಂಡೀ (Blondi)' ಸೇರಿಸಬೇಕಾಗುತ್ತದೆ. ಫೋಟೋ ಕೃಪೆ: cPRESS ASSOCIATION VIA AP IMAGES

ಬಾರ್‌ ಬಿಯರ್

ಬಾರ್‌ ಬಿಯರ್

ಸೋಡಾಸ್ಟ್ರೀಮ್'ನಲ್ಲಿ ತಯಾರಿಸಿದ ಬಿಯರ್‌ ಶೇಕಡ 4.5 ರಷ್ಟು ಆಲ್ಕೋಹಾಲ್‌ ಕಂಟೆಂಟ್‌ ಹೊಂದಿರುತ್ತದೆ. ಅಲ್ಲದೇ ನೋಡಲು ಮತ್ತು ಟೇಸ್ಟ್‌ ಬಾರ್‌ನಲ್ಲಿ ಕೊಳ್ಳವ ಬಿಯರ್‌ನಂತೆ ಇರುತ್ತದೆ. ಫೋಟೋ ಕೃಪೆ:SODASTREAM INTERNATIONAL

ಸೋಡಾಸ್ಟ್ರೀಮ್‌ ಸಿಇಓ

ಸೋಡಾಸ್ಟ್ರೀಮ್‌ ಸಿಇಓ

"ಕೋರ್‌ ಕಾರ್ಬೋನೇಷನ್‌ ಟೆಕ್ನಾಲಜಿ ಮತ್ತು ಡಿಸ್ಟ್ರಿಬ್ಯೂಷನ್‌ ಇನ್ಫ್ರಾಸ್ಟ್ರಕ್ಚರ್‌ ಉತ್ತಮ ವೇದಿಕೆಯನ್ನು ಬ್ಯುಸಿನೆಸ್‌ ಬೆಳವಣಿಗೆಗೆ ನೀಡಿರುವುದರಿಂದ ಬೀರ್‌ ಬ್ರಾಂಡ್‌ ಅನ್ನು ಆಯ್ಕೆ ಮಾಡಿ ಡಿವೈಸ್‌ ಅಭಿವೃದ್ದಿಪಡಿಸಲಾಗಿದೆ" ಎಂದು ಸೋಡಾಸ್ಟ್ರೀಮ್‌ ಸಿಇಓ 'ಡೇನಿಯಲ್‌ ಬರ್ನ್‌ಬಾಮ್‌' ಕಂಪನಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕಂಪನಿ ಹೇಳಿದ್ದೇನು?

ಕಂಪನಿ ಹೇಳಿದ್ದೇನು?

ಮನೆಯಲ್ಲೇ ಬಿಯರ್‌ ತಯಾರಿಸುವುದು ಹೇಗೆ ಎಂದು ತಿಳಿಯಲು, ಸ್ಪಾರ್ಕ್ಲಿಂಗ್ ನೀರನ್ನು ಕಾರ್ಬೋನೇಟೆಡ್‌ ನೀರಾಗಿ ಡಿವೈಸ್‌ ಹೇಗೆ ಮಾಡುತ್ತದೆ ಎಂಬುದನ್ನು ತಿಳಿಯಲು ಕಂಪನಿ ನೀಡಿರುವ ವೀಡಿಯೊವನ್ನು ಎಚ್ಚರದಿಂದ ನೋಡಿದರೆ ಸಾಕು ಎಂದು ಕಂಪನಿ ಹೇಳಿದೆ.

ಜರ್ಮನಿ ವೆಬ್‌ಸೈಟ್‌ನಲ್ಲಿ ಲಭ್ಯ

ಜರ್ಮನಿ ವೆಬ್‌ಸೈಟ್‌ನಲ್ಲಿ ಲಭ್ಯ

ಸೋಡಾಸ್ಟ್ರೀಮ್‌ ತಯಾರಿಸಿರುವ ಬಿಯರ್‌ ತಯಾರಿಕೆಯ ಡಿವೈಸ್‌ ಪ್ರಸ್ತುತದಲ್ಲಿ ಕೇವಲ ಕಂಪನಿಯ ಜರ್ಮನಿ ವೆಬ್‌ಸೈಟ್ www.sodastream.de ನಲ್ಲಿ ಲಭ್ಯವಿದೆ. ಸ್ವಿಟ್ಜರ್ಲ್ಯಾಂಡ್‌ನಲ್ಲೂ ಲಭ್ಯವಿದೆ.

ಬಿಯರ್‌ ಫ್ಯಾನ್ಸ್

ಬಿಯರ್‌ ಫ್ಯಾನ್ಸ್

ಬಿಯರ್‌ ಫ್ಯಾನ್ಸ್‌ಗಳಿಗೆ ಶೀಘ್ರದಲ್ಲಿ ಬೀರ್‌ ಬಾರ್‌ ಗ್ಯಾಜೆಟ್‌ ಇತರ ಮಾರುಕಟ್ಟೆಗಳಿಗೂ ಬರಲಿದೆಯಂತೆ. ಬಿಯರ್‌ ಅನ್ನು ಮನೆಯಲ್ಲೇ ತಯಾರಿಕೊಳ್ಳುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ನಲ್ಲಿ ವೀಡಿಯೊ ನೋಡಿ.

ವೀಡಿಯೋ

ಸೋಡಾಸ್ಟ್ರೀಮ್ ಬಿಯರ್‌ ತಯಾರಿಸುವ ಡಿವೈಸ್‌.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ!

ಯೂಟ್ಯೂಬ್‌ ಬಗ್ಗೆ ತಿಳಿಯಲೇಬೇಕಾದ 5 ಸತ್ಯಾಂಶಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Turn water into beer at home By This Machine. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot