Home
Gadgets

ಇವು ಮೋಸ್ಟ್ ಪವರ್​ಫುಲ್! ಶೀಘ್ರದಲ್ಲೇ ಈ 8 ಫೋನ್‌ಗಳು ಭಾರತದಲ್ಲಿ ಬಿಡುಗಡೆ; ಯಾವ ಪ್ರೊಸೆಸರ್‌?

ಕ್ವಾಲ್ಕಾಮ್ (Qualcomm) ಇತ್ತೀಚೆಗೆ ತನ್ನ ಹೊಸ ಮೊಬೈಲ್ ಪ್ರೊಸೆಸರ್ ಸ್ನಾಪ್‌ಡ್ರಾಗನ್ 8 ಎಲೈಟ್ ಅನ್ನು ಪರಿಚಯಿಸಿದೆ. ಇದು ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಆಗಿದೆ. ಈ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಅಂತುಟುನಲ್ಲಿ 29 ಲಕ್ಷಕ್ಕೂ ಹೆಚ್ಚು ಸ್ಕೋರ್ ಮಾಡಿದೆ. ಇತ್ತ, ಈ ಪ್ರೊಸೆಸರ್‌ನಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಲು ದೊಡ್ಡ ರೇಸ್ ಶುರುವಾಗಿದೆ. ಆಂಡ್ರಾಯ್ಡ್ ಫೋನ್‌ಗಳನ್ನು ತಯಾರಿಸುವ ಬಹುತೇಕ ಎಲ್ಲಾ ದೊಡ್ಡ ಕಂಪನಿಗಳು ತಮ್ಮ ಫೋನ್‌ಗಳನ್ನು 8 ಎಲೈಟ್ ಪ್ರೊಸೆಸರ್‌ನಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿವೆ.

ಹೌದು, ಕಂಪನಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ (Qualcomm Snapdragon 8 Elite) ಘೋಷಿಸಿದ ತಕ್ಷಣ, ಒಂದರ ಹಿಂದೆ ಒಂದರಂತೆ ಫೋನ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಎಂಟಕ್ಕೂ ಹೆಚ್ಚು ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ನಾವು ಈ ಲೇಖನದಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ಪಟ್ಟಿಯನ್ನು ನೀಡಿದ್ದೇವೆ. ಇವುಗಳು ಮುಂದಿನ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿವೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್

ಸ್ನಾಪ್‌ಡ್ರಾಗನ್ 8 ಎಲೈಟ್‌ನಲ್ಲಿ ಬಿಡುಗಡೆಯಾಗುವ ಫೋನ್‌ಗಳು

ರಿಯಲ್‌ಮಿ GT 7 ಪ್ರೊ

ರಿಯಲ್‌ಮಿ GT 7 ಪ್ರೊ (Realme GT7 Pro) ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಫೋನ್ ಆಗಿದೆ. ಇದು ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದೆ. ಈ ಫೋನ್ 6.78 ಇಂಚಿನ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. 24GB RAM, 50 ಮೆಗಾಪಿಕ್ಸೆಲ್ ಮುಖ್ಯ ಮೆಗಾಪಿಕ್ಸೆಲ್, 50 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಜೊತೆಗೆ, 6500mAh ಬ್ಯಾಟರಿ ಮತ್ತು 120W ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್

ಐಕ್ಯೂ 13

ಕಳೆದ ವರ್ಷ ಐಕ್ಯೂ ಮೊದಲು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಐಕ್ಯೂ 12 ಫೋನನ್ನು ಬಿಡುಗಡೆ ಮಾಡಿತು. ಇದೀಗ, ಐಕ್ಯೂ 13 (iQoo 13) ಮೊಬೈಲ್ ಬಿಡುಗಡೆಗೆ ಸಿದ್ಧವಾಗಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಮೊದಲ ಫೋನ್ ಪ್ರಾರಂಭಿಸಲು ರಿಯಲ್‌ಮಿ ಮತ್ತು ಐಕ್ಯೂ ಸ್ಪರ್ಧಿಸುತ್ತಿವೆ. ಈ ಫೋನ್ ಚೀನಾದಲ್ಲಿ ಬಿಡುಗಡೆಯಾಗಿದೆ. ಇದು ನವೆಂಬರ್ ಕೊನೆಯ ತಿಂಗಳೊಳಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

ವರದಿಯ ಪ್ರಕಾರ, ಐಕ್ಯೂ 13 ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಜೊತೆಗೆ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಇದು 6.82 ಇಂಚಿನ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ 16GB RAM, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 64 ಪೆರಿಸ್ಕೋಪ್ ಮೆಗಾಪಿಕ್ಸೆಲ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. 6150 mAh ಬ್ಯಾಟರಿ ಮತ್ತು 120W ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್

ಒಪ್ಪೋ ಫೈಂಡ್ X8 ಪ್ರೊ

ಒಪ್ಪೋ (Oppo) ತನ್ನ ಫೈಂಡ್ ಸರಣಿಯನ್ನು ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಒಪ್ಪೋ ಫೈಂಡ್ X8 ಪ್ರೊ (Oppo Find X8 Pro) ಪೋನಿನೊಂದಿಗೆ ಒನ್‌ಪ್ಲಸ್ ಮತ್ತು ವಿವೋ ಫೋನ್‌ಗಳೊಂದಿಗೆ ಸ್ಪರ್ಧಿಸಲು ಸಜ್ಜಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಒಪ್ಪೋ ಫೈಂಡ್ X8 ಪ್ರೊ ಲಾಂಚ್ ಆಗಲಿದೆ. ಇದು ಅತ್ಯುತ್ತಮ ಕ್ಯಾಮೆರಾ ಸಾಮರ್ಥ್ಯ ಮತ್ತು ವಿನ್ಯಾಸದೊಂದಿಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಸಹ ಹೊಂದಿದೆ.

ಇದು 6.78 ಇಂಚಿನ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 16GB RAM, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 50 ಮೆಗಾಪಿಕ್ಸೆಲ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಜೊತೆಗೆ 5190mAh ಬ್ಯಾಟರಿ ಮತ್ತು 80W ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್

ಒನ್‌ಪ್ಲಸ್ 13

ಒನ್‌ಪ್ಲಸ್ (OnePlus) ಕಂಪನಿಯು ಸದಾ ಕ್ವಾಲ್ಕಾಮ್‌ನ ಪವರ್‌ಫುಲ್ ಪ್ರೊಸೆಸರ್‌ನಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದೀಗ, ಒನ್‌ಪ್ಲಸ್ 13 (OnePlus 13) ಫೋನನ್ನು ಅಕ್ಟೋಬರ್ 31 ರಂದು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು ನವೆಂಬರ್ ಅಥವಾ ಡಿಸೆಂಬರ್ ಕೊನೆಯ ವಾರದಲ್ಲಿ ಭಾರತಕ್ಕೂ ಬರಲಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರಲಿದೆ.

ಒನ್‌ಪ್ಲಸ್ 13 ಫೊನ್ 6.82 ಇಂಚಿನ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 16GB RAM, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರಲಿದೆ. ಜೊತೆಗೆ 6000mAh ಬ್ಯಾಟರಿ ಮತ್ತು 100W ಚಾರ್ಜಿಂಗ್ ಸೌಲಭ್ಯ ಇರಲಿದೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್

ವಿವೋ X200 ಅಲ್ಟ್ರಾ

ವಿವೋ ತನ್ನ ಹೊಸ ವಿವೋ X200 ಅಲ್ಟ್ರಾ ಫೋನನ್ನು ಸ್ನಾಪ್‌ಡ್ರಾಗನ್ 8 ಎಲೈಟ್‌ನೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು X ಸರಣಿಯಲ್ಲಿ 200 ಅಲ್ಟ್ರಾ ಫೋನ್‌ಗಳನ್ನು ಪರಿಚಯಿಸಲಿದೆ. ಇದನ್ನು ನವೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಿದೆ. ಇದು ಡಿಸೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ.

ಈ ಫೋನ್ 6.78 ಇಂಚಿನ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 16GB RAM, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 50 ಮೆಗಾಪಿಕ್ಸೆಲ್, 50 ಮೆಗಾಪಿಕ್ಸೆಲ್ ಮತ್ತು 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ. ಇದರೊಂದಿಗೆ 6000mAh ಬ್ಯಾಟರಿ ಮತ್ತು 90W ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ

ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯು, ಹೊಸ ಫೋನನ್ನು ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ನಲ್ಲಿ ಪರಿಚಯಿಸಲಿದೆ. ಇದು ಅದ್ಭುತ ಕ್ಯಾಮೆರಾ ಜೊತೆಗೆ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ.

ಮುಂಬರುವ ಈ ಫೋನ್ 6.8 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 16GB RAM, 200 ಮೆಗಾಪಿಕ್ಸೆಲ್ + 10 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಮತ್ತು 45W ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಶಿಯೋಮಿ 15

ಶಿಯೋಮಿ (Xiaomi) ತನ್ನ ಹೊಸ 15 ಸರಣಿಯ ಫೋನ್‌ಗಳ ಬಿಡುಗಡೆಗೆ ಸಜ್ಜಾಗಿದೆ. ಈ ಸರಣಿಯ ಎರಡು ಫೋನ್‌ಗಳು ಚೀನಾದಲ್ಲಿ ಬಿಡುಗಡೆಯಾಗಿವೆ. ಶೀಘ್ರವೇ ಭಾರತಕ್ಕೂ ಬರಲಿವೆ. ಕಂಪನಿಯು ಜನವರಿಯಲ್ಲಿ ಶಿಯೋಮಿ 15 () ಮತ್ತು ಶಿಯೋಮಿ 15 ಪ್ರೊ (Xiaomi 15 Pro) ಪೋನನ್ನು ಬಿಡುಗಡೆ ಮಾಡಲಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ.

ಹೊಸ ಫೋನ್‌ 6.73 ಇಂಚಿನ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 16GB RAM, 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್, 6100mAh ಬ್ಯಾಟರಿ ಮತ್ತು 90W ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್

ಹಾನರ್ ಮ್ಯಾಜಿಕ್ 7 ಪ್ರೊ

ಹಾನರ್ ಕಂಪನಿಯು ಹಾನರ್ ಮ್ಯಾಜಿಕ್ 6 ಪ್ರೊ (Honor Magic 6 Pro) ಫೋನನ್ನು ಬಿಡುಗಡೆ ಮಾಡಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಇದೀಗ, ಹಾನರ್ ಮ್ಯಾಜಿಕ್ 7 ಪ್ರೊ (Honor Magic 7 Pro) ಅನ್ನು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಲಾಂಚ್ ಮಾಡಲು ಸಜ್ಜಾಗಿದೆ. ಇದು 6.82 ಇಂಚಿನ LTPO ಅಮೋಲೆಡ್ ಡಿಸ್ಪ್ಲೇ ಹೊಂದಿದೆ.

ಹಾನರ್ ಮ್ಯಾಜಿಕ್ 7 ಪ್ರೊ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಜೊತೆಗೆ 16GB RAM, 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಪಪ್ ಹೊಂದಿರಲಿದೆ. ಜೊತೆಗೆ 5800mAh ಬ್ಯಾಟರಿ ಮತ್ತು 100W ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ.

ಶೀಘ್ರದಲ್ಲೇ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಈ 8 ಫೋನ್‌ಗಳು ಲಾಂಚ್
Best Mobiles in India

English summary
Upcoming Qualcomm Snapdragon 8 Elite phones in India; OnePlus 13, iQOO 13, Realme GT 7 Pro and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+