Home
Gadgets

ನೀವಿನ್ನು ‘ಟೈಪ್ ಸಿ’ ಸ್ಮಾರ್ಟ್‌ ಚಾರ್ಜಿಂಗ್ ಪೋರ್ಟ್‌ ಖರೀದಿಸಿಲ್ವಾ?..ಹಾಗಿದ್ರೆ, ಈಗಲೇ ಖರೀದಿಸಿ!!

ಮೊಬೈಲ್ ತಂತ್ರಜ್ಞಾನ ಎಷ್ಟು ಬೇಗ ಬದಲಾವಣೆಯಾಗುತ್ತಿದೆ ಎನ್ನುವುದಕ್ಕೆ ನೂತನವಾಗಿ ಅಭಿವೃದ್ದಿಯಾಗಿರುವ ಈ ‘ಟೈಪ್ ಸಿ’ ಯುಎಸ್‌ಬಿ ಪೋರ್ಟ್‌ಗಳೇ ಸಾಕ್ಷಿಯಾಗಿವೆ.!!

By Bhaskar N J

ಗ್ಯಾಜೆಟ್ ಬಳಕೆದಾರರ ಹಲವಾರು ಸಮಸ್ಯೆಗಳನ್ನು ಏಕಕಾಲದಲ್ಲಿ ಬಗೆಹರಿಸುವ ನೂತನ 'ಟೈಪ್ ಸಿ' ಯುಎಸ್‌ಬಿ ಪೋರ್ಟ್‌ ಇದೀಗ ಮಾರುಕಟ್ಟೆಯಲ್ಲಿ ಎಬ್ಬಿಸಿದೆ.! ಮೊಬೈಲ್ ತಂತ್ರಜ್ಞಾನ ಎಷ್ಟು ಬೇಗ ಬದಲಾವಣೆಯಾಗುತ್ತಿದೆ ಎನ್ನುವುದಕ್ಕೆ ನೂತನವಾಗಿ ಅಭಿವೃದ್ದಿಯಾಗಿರುವ ಈ 'ಟೈಪ್ ಸಿ' ಯುಎಸ್‌ಬಿ ಪೋರ್ಟ್‌ಗಳೇ ಸಾಕ್ಷಿಯಾಗಿವೆ.!!

ಹೌದು, ಮೊಬೈಲ್, ಲ್ಯಾಪ್‌ಟಾಪ್‌ಗಳ ಬ್ಯಾಟರಿ ಬೇಗ ಚಾರ್ಜ್ ಆಗುತ್ತಿಲ್ಲ, ಹೆಡ್‌ಫೋನ್ ಮತ್ತು ಚಾರ್ಜಿಂಗ್‌ಗೆ ಪ್ರತ್ಯೇಕ ಪೋರ್ಟ್ ಬೇಡವಾಗಿತ್ತು ಎಂಬ ಗ್ಯಾಜೆಟ್ ಬಳಕೆದಾರರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲು'ಟೈಪ್ ಸಿ' ಯುಎಸ್‌ಬಿ ಪೋರ್ಟ್‌ ಕಾಲಿಟ್ಟಿದ್ದು, ಹಾಗಾದರೆ, ಈ ನೂತನ ಯುಎಸ್‌ಬಿ ಪೋರ್ಟ್‌ ತಂತ್ರಜ್ಞಾನ ಏನು? ಖರೀದಿಸಲು ಅತ್ಯುತ್ತಮ ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ‘ಟೈಪ್ ಸಿ’ ಪೋರ್ಟ್?

ಏನಿದು ‘ಟೈಪ್ ಸಿ’ ಪೋರ್ಟ್?

24 ಮೈಕ್ರೊ ಪಿನ್‌ ಒಳಗೊಂಡಂತೆ ಎಲ್ಲಾ ಡಿವೈಸ್‌ಗಳನ್ನೂ ಸಂಪರ್ಕಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುವ ನೂತನ ಯುಎಸ್‌ಬಿ ಪೋರ್ಟ್‌ ಈ ‘ಟೈಪ್ ಸಿ' ಪೋರ್ಟ್!! ಮೊದಲಿದ್ದ ‘ಟೈಪ್ ಬಿ' ಪೋರ್ಟ್‌ನ ಸುಧಾರಿತ ಆವೃತ್ತಿ ಇದದಾಗಿದ್ದು, ಈ ಪೋರ್ಟ್ ಬಳಕೆದಾರರ ಹಲವು ಸಮಸ್ಯೆಗಳಿಗೆ ಮುಕ್ತಿ ತಂದಿದೆ.!!

ಸ್ಪೀಡ್ ಚಾರ್ಜಿಂಗ್ ಮತ್ತು ಡೇಟಾ ವಿನಿಮಯ!!

ಸ್ಪೀಡ್ ಚಾರ್ಜಿಂಗ್ ಮತ್ತು ಡೇಟಾ ವಿನಿಮಯ!!

ನೂತನ ‘ಟೈಪ್ ಸಿ' ಪೋರ್ಟ್‌ನಿಂದ ಚಾರ್ಜಿಂಗ್ ಮತ್ತು ಡೇಟಾ ವಿನಿಮಯವನ್ನು ಏಕಕಾಲದಲ್ಲಿ ಮಾಡಬಹುದು. ಡಿವೈಸ್‌ಗಳು ಬಹುಬೇಗ ಚಾರ್ಜ್ ಆಗುವಂತೆ ಈ ಪೋರ್ಟ್‌ ವಿನ್ಯಾಸ ಮಾಡಲಾಗಿದ್ದು, ಇವುಗನಳಿಮದ ಪ್ರತಿ ಸೆಕೆಂಡಿಗೆ 10 ಜಿ.ಬಿಯಷ್ಟು ಡೇಟಾ ವರ್ಗಾಯಿಸಬಹುದು ಎಂದರೆ ನೀವು ನಂಬಲೇಬೇಕು.!!

ಹೆಡ್‌ಫೋನ್ ಮತ್ತು ಚಾರ್ಜರ್ ಒಂದೇ !!

ಹೆಡ್‌ಫೋನ್ ಮತ್ತು ಚಾರ್ಜರ್ ಒಂದೇ !!

ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಹೆಡ್‌ಫೋನ್ ಮತ್ತು ಚಾರ್ಜರ್ ವೈರ್‌ಗಳನ್ನು ಎಲ್ಲೆಡೆ ಒಯ್ಯುವುದು.!! ಹಾಗಾಗಿ, ಇದಕ್ಕೆ ಪರಿಹಾರವನ್ನು ‘ಟೈಪ್ ಸಿ' ಪೋರ್ಟ್‌ ನೀಡಿದ್ದು, ಈ ಒಂದೇ ಪೋರ್ಟ್ ಮೂಲಕ ರಿವರ್ಸಬೆಲ್ ಆಗಿ ಹೆಡ್‌ಫೋನ್ ಮತ್ತು ಚಾರ್ಜಿಂಗ್ ಆಗಿ ಸಂಪರ್ಕಿಸುವಂತೆ ವಿನ್ಯಾಸ ಮಾಡಲಾಗಿದೆ.!!

ಚಾರ್ಜಿಂಗ್ ಪಿನ್ ಸಮಸ್ಯೆಗೆ ಕೊನೆ!!

ಚಾರ್ಜಿಂಗ್ ಪಿನ್ ಸಮಸ್ಯೆಗೆ ಕೊನೆ!!

ಸದಾ ಚಾರ್ಜರ್‌ಗಳನ್ನು ಹೊತ್ತು ತಿರುಗಲು ಆಗಲ್ಲ; ಅನೇಕ ಬಾರಿ ಸರಿಯಾದ ಚಾರ್ಜಿಂಗ್ ಪಿನ್ ಸಿಗಲ್ಲ ಎಂಬ ಸಮಸ್ಯೆಗೆ ಕೊನೆ ಹಾಡಲು ಬಂದಿರುವುದೆ ಈ ಹೊಸ ಚಾರ್ಜಿಂಗ್ ಪೋರ್ಟ್. ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹೊಸ ಗ್ಯಾಜೆಟ್‌ಗಳೆಲ್ಲವೂ ಇದೇ ಮಾದರಿ ಅನುಸರಿಸುತ್ತಿರುವುದರಿಂದ ಈ ಗ್ಯಾಜೆಟ್ ಗ್ರಾಹಕಸ್ನೇಹಿಯಾಗಿದೆ.!!

ಹೆಚ್ಚುವರಿ ಮಾನಿಟರ್ ಜೋಡಿಸಬಹುದು!!

ಹೆಚ್ಚುವರಿ ಮಾನಿಟರ್ ಜೋಡಿಸಬಹುದು!!

ಲ್ಯಾಪ್‌ಟಾಪ್‌ಗೆ ಹೆಚ್ಚುವರಿ ಮಾನಿಟರ್ ಜೋಡಿಸಬೇಕಿದ್ದರೆ ಮೊದಲೆಲ್ಲಾ ವಿಜಿಐ, ಡಿವಿಐ, ಎಚ್‌ಡಿಎಂಐ ಕನೆಕ್ಟರ್ ಅಗತ್ಯವಿತ್ತು. ಆದರೆ ಈ ‘ಟೈಪ್ ಸಿ' ಮಾದರಿಯಲ್ಲಿ ಕನೆಕ್ಟರ್‌ಗಳ ಅವಶ್ಯಕತೆ ಇಲ್ಲದೇ ಸಂಪರ್ಕಿಸಿ ಉಪಯೋಗಿಸಬಹುದು!!

Best Mobiles in India

English summary
USB-C is the emerging standard for charging and transferring data. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+