Valentine's Day Gift: ಪ್ರೇಯಸಿಗೆ ವ್ಯಾಲೆಂಟೈನ್ಸ್ ಡೇ ಉಡುಗೊರೆ! ನಿಮ್ಮ ಸಂಗಾತಿ ಇಷ್ಟಪಡಬಹುದಾದ ಸ್ಮಾರ್ಟ್‌ಫೋನ್‌ಗಳು
ನಿಮ್ಮ ಪ್ರೇಯಸಿಯೊಂದಿಗೆ ಈ ವರ್ಷದ ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಆಚರಿಸಬೇಕು ಎಂದಿದ್ದರೆ ಈಗಲೇ ಪ್ಲಾನ್ ಮಾಡಿ. ಟ್ರಿಪ್ ಹೋಗಿ ಅಥವಾ ಇನ್ನೂ ಹಲವು ಚಟುವಟಿಕೆಗಳ ಮೂಲಕ ನಿಮ್ಮವಳ ವ್ಯಾಲೆಂಟೈನ್ಸ್ ಡೇ ಖುಷಿಯನ್ನು ಇಮ್ಮಡಿಗೊಳಿಸಿ. ಪ್ರೇಯಸಿ ಅಥವಾ ಪತ್ನಿಗೆ ಈ ವರ್ಷದ ವ್ಯಾಲೆಂಟೈನ್ಸ್ ಡೇಗೆ (Valentines Day) ಏನಾದರೂ ಉಡುಗೊರೆ ನೀಡಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದೀರಾ? ಹಾಗಿದ್ರೆ, ಕೊನೆಯ ಕ್ಷಣದಲ್ಲಿ ಏನೋ ಕೊಡುವ ಬದಲು ಈಗಲೇ ಪ್ಲಾನ್ ಮಾಡಿ. ಅದರಲ್ಲೂ ಪ್ರೇಯಸಿಗೆ ಉಡುಗೊರೆಯಾಗಿ ನೀಡಲು ಸ್ಮಾರ್ಟ್‌ಫೋನ್ (smartphones) ಹುಡುಕುತ್ತಿದ್ದರೆ, ಇಲ್ಲಿವೆ ನೋಡಿ ಬೆಸ್ಟ್ ಫೋನ್‌ಗಳು!
ಹೆಣ್ಣು ಮಕ್ಕಳಿಗೆ ಸ್ಮಾರ್ಟ್‌ಫೋನ್ ಅಂದರೆ ಬಹಳ ಅಚ್ಚುಮೆಚ್ಚು. ಪ್ರಸ್ತುತ ಫೋನ್ ಬಳಸದ ಹುಡುಗಿಯರಿಲ್ಲ. ಹಾಗಾಗಿ, ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಹುಡುಗಿಗೆ ಸೊಗಸಾದ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಿ. ಹೌದು, ಪ್ರೇಮಿಗಳ ದಿನದಂದು ನಿಮ್ಮ ಗೆಳತಿಗೆ ಉಡುಗೊರೆಯಾಗಿ ನೀಡಲು ಅತ್ಯುತ್ತಮ ಫೋನನ್ನು ಹುಡುಕುತಿದ್ದರೆ ಚಿಂತೆ ಬೇಡ. ಯಾಕಂದ್ರೆ, ನಿಮ್ಮ ಸಂಗಾತಿ ಮೆಚ್ಚುವಂತಹ ಕೆಲವು ಇತ್ತೀಚಿನ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿದ್ದೇವೆ. ಇವುಗಳನ್ನು ಖರೀದಿಸಿ ಪ್ರೇಯಸಿಗೆ ಉಡುಗೊರೆ ನೀಡುವ ಮೂಲಕ, ನಿಮ್ಮ ಸಂಗಾತಿಯಿಂದ ಪ್ರೀತಿ ಗಳಿಸಬಹುದಾಗಿದೆ.

ಪ್ರೇಯಸಿಗೆ ಗಿಫ್ಟ್ ನೀಡಲು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!
ಒನ್‌ಪ್ಲಸ್ ನಾರ್ಡ್ 4 5G: 29,999 ರೂ.
ನೀವು ಈ ಪ್ರೇಮಿಗಳ ದಿನದಂದು ಒನ್‌ಪ್ಲಸ್ ನಾರ್ಡ್ 4 5G (OnePlus Nord 4 5G) ಫೋನನ್ನು ಉಡುಗೊರೆಯಾಗಿ ನೀಡಬಹುದು. ಇದು 30,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 12GB RAM + 256GB ಸ್ಟೋರೇಜ್, 6.74 ಇಂಚಿನ ಡಿಸ್ಪ್ಲೇ, 5500mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು ಮರ್ಕ್ಯುರಿಯಲ್ ಸಿಲ್ವರ್, ಅಬ್ಸಿಡಿಯನ್ ಮಿಡ್‌ನೈಟ್ ಮತ್ತು ಓಯಸಿಸ್ ಗ್ರೀನ್ ಬಣ್ಣಗಳಲ್ಲಿ ಈ ಫೋನ್ ಖರೀದಿಸಬಹುದು.

ನಥಿಂಗ್ ಫೋನ್ (2a) 5G: 27,999 ರೂ.
ನಿಮ್ಮ ಸಂಗಾತಿಗೆ ಈ ವ್ಯಾಲೆಂಟೈನ್ಸ್ ಡೇ ದಿನದಂದು ನಥಿಂಗ್ ಫೋನ್ (2a) 5G (Nothing Phone (2a) 5G) ಫೋನನ್ನು ಗಿಫ್ಟ್ ನೀಡಬಹುದು. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್ ಹೊಂದಿದೆ. ಜೊತೆಗ 12GB + 256GB ಸ್ಟೋರೇಜ್, 6.7 ಅಮೋಲೆಡ್ ಡಿಸ್ಪ್ಲೇ, 5000mAh ಬ್ಯಾಟರಿ ಒಳಗೊಂಡಿದೆ. ಈ ಫೋನ್ ಬ್ಲ್ಯಾಕ್ ಹಾಗೂ ಗ್ರೇ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಒಪ್ಪೋ F27 ಪ್ರೊ+ 5G: 25,999 ರೂ.
ವ್ಯಾಲೆಂಟೈನ್ಸ್ ಡೇ ದಿನದಂದು ನಿಮ್ಮ ಪ್ರೇಯಸಿಗೆ ಉಡುಗೊರೆಯಾಗಿ ನೀಡಲು ಒಪ್ಪೋ F27 ಪ್ರೊ+ 5G (OPPO F27 Pro+ 5G) ಮೊಬೈಲ್ ಉತ್ತಮ ಆಯ್ಕೆಯಾಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 8GB + 256GB ಸ್ಟೋರೇಜ್, 6.7 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಡಸ್ಕ್ ಪಿಂಕ್ ಮತ್ತು ಮಿಡ್ನೈಟ್ ನೇವಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

CMF ಫೋನ್ 1: 15,499 ರೂ.
ನಿಮ್ಮ ಪ್ರೇಯಸಿ ಅಥವಾ ಪತ್ನಿಗೆ CMF ಫೋನ್ 1 ಅನ್ನು ಗಿಪ್ಟ್ ನೀಡಬಹುದು. ಗೇಮಿಂಗ್ ಪ್ರಿಯರಿಗೆ ಇದು ಇಷ್ಟವಾಗುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಜೊತೆಗೆ 8GB + 128GB ಸ್ಟೋರೇಜ್, 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ, 5000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೊಟೊ G64 5G: 13,999 ರೂ.
ಮೊಟೊ ಸ್ಮಾರ್ಟ್‌ಫೋನ್‌ಗಳು ಹೆಣ್ಣು ಮಕ್ಕಳಿಗೆ ಬಹಳ ಇಷ್ಟವಾಗುತ್ತವೆ. ಹೀಗಾಗಿ, ನೀವು ಮೊಟೊ G64 5G (Motorola G64 5G) ಫೋನನ್ನು ಉಡುಗೊರೆ ನೀಡಬಹುದು. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 12GB + 256GB ಸ್ಟೋರೇಜ್, 6.5 ಇಂಚಿನ ಡಿಸ್ಪ್ಲೇ ಮತ್ತು 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.



Click it and Unblock the Notifications








