Home
Gadgets

Wobble K ಮತ್ತು X ಸ್ಮಾರ್ಟ್‌ಟಿವಿಗಳು ಬಿಡುಗಡೆ: ಆರಂಭಿಕ ಬೆಲೆ 10,999 ರೂ.!

ಇಂಡ್ಕಾಲ್ ಟೆಕ್ನಾಲಜೀಸ್‌ಗೆ ಸೇರಿದ ಭಾರತೀಯ ಹೋಮ್‌ಗ್ರೋನ್ ಬ್ರ್ಯಾಂಡ್ Wobble (Wobble) ಭಾರತದಲ್ಲಿ ತನ್ನ ಹೊಸ Wobble X ಸರಣಿ ಮತ್ತು Wobble K ಸರಣಿ ಸ್ಮಾರ್ಟ್‌ಟಿವಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಗೇಮಿಂಗ್ ಪ್ರಿಯರು ಮತ್ತು ಸಾಮಾನ್ಯ ಮನರಂಜನಾ ಬಳಕೆದಾರರನ್ನು ಗುರಿಯಾಗಿಸಿಕೊಂಡು ರೂಪುಗೊಂಡಿರುವ ಈ ಟಿವಿಗಳು, ಆಧುನಿಕ ತಂತ್ರಜ್ಞಾನ, ಶಕ್ತಿಶಾಲಿ ಸೌಂಡ್ ಮತ್ತು ಆಕರ್ಷಕ ಬೆಲೆಗಳೊಂದಿಗೆ ಮಾರುಕಟ್ಟೆಗೆ ಬಂದಿವೆ. "ಮೇಕ್ ಇನ್ ಇಂಡಿಯಾ" ಭಾಗವಾಗಿ ಬಂದಿರುವ Wobble ಟಿವಿಗಳು ಸ್ಥಳೀಯ ಗ್ರಾಹಕರ ಗಮನ ಸೆಳೆಯುವಂತಹ ಬೆಲೆಗಳನ್ನು ಹೊಂದಿವೆ

ಭಾರತದಲ್ಲಿ Wobble X ಸರಣಿ, Wobble K ಸರಣಿ ಬೆಲೆ, ಲಭ್ಯತೆ
ಭಾರತದಲ್ಲಿ Wobble K ಸರಣಿಯ ಬೆಲೆ ರೂ. 10,999 ರಿಂದ ಪ್ರಾರಂಭವಾಗುತ್ತದೆ. ಗ್ರಾಹಕರು ಇದನ್ನು 32-ಇಂಚಿನ 43-ಇಂಚಿನ, 50-ಇಂಚಿನ, 55-ಇಂಚಿನ ಮತ್ತು 65-ಇಂಚಿನ ನಾಲ್ಕು ಗಾತ್ರದ ಮಾದರಿಗಳಲ್ಲಿ ಖರೀದಿಸಬಹುದು. ಇತ್ತ ಸ್ವಲ್ಪಿ ಪ್ರೀಮಿಯಂ ಎನಿಸುವ Wobble X ಸರಣಿಯ ಬೆಲೆ ರೂ. 23,999 ರಿಂದ ಪ್ರಾರಂಭವಾಗುತ್ತದೆ. ಇದು 43-ಇಂಚಿನ, 50-ಇಂಚಿನ ಮತ್ತು 55-ಇಂಚಿನ ಪರದೆಯ ಗಾತ್ರದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎರಡೂ ಸರಣಿಯ ಟಿವಿಗಳನ್ನು ಗ್ರಾಹಕರು ಫ್ಲಿಪ್‌ಕಾರ್ಟ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬಹುದು.

Wobble X ಸರಣಿ : ಪ್ರಮುಖ ವೈಶಿಷ್ಟ್ಯಗಳು
Wobble X ಸರಣಿ ಟಿವಿಗಳು ಗೇಮಿಂಗ್ ಕೇಂದ್ರಿತ ಪ್ರೀಮಿಯಂ ವಿಭಾಗಕ್ಕೆ ಸೇರಿವೆ. ಈ ಸರಣಿಯಲ್ಲಿ 43 ಇಂಚು, 50 ಇಂಚು ಮತ್ತು 55 ಇಂಚು ಡಿಸ್ಪ್ಲೇ ಆಯ್ಕೆಗಳು ಲಭ್ಯವಿದ್ದು, ಅಲ್ಟ್ರಾ QLED ತಂತ್ರಜ್ಞಾನವನ್ನು ಬಳಸಲಾಗಿದೆ. ಸುಮಾರು 1.07 ಬಿಲಿಯನ್ ಬಣ್ಣಗಳ ಪ್ರದರ್ಶನ ಸಾಮರ್ಥ್ಯದಿಂದ ಚಿತ್ರಗಳು ಹೆಚ್ಚು ನೈಜವಾಗಿಯೂ ಸ್ಪಷ್ಟವಾಗಿಯೂ ಕಾಣಿಸುತ್ತವೆ. ಫ್ರೇಮ್‌ಲೆಸ್ ವಿನ್ಯಾಸ ಮತ್ತು ಮೆಟಲ್ ಫಿನಿಷ್ ಈ ಟಿವಿಗಳಿಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಗೇಮಿಂಗ್ ಅನುಭವವನ್ನು ಇನ್ನಷ್ಟು ಸುಧಾರಿಸಲು X ಸರಣಿಯಲ್ಲಿ 120Hz ವೇರಿಯಬಲ್ ರಿಫ್ರೆಶ್ ರೇಟ್ (VRR), HDMI 2.1, ಆಟೋ ಲೋ ಲೇಟೆನ್ಸಿ ಮೋಡ್ (ALLM) ಮತ್ತು MEMC ತಂತ್ರಜ್ಞಾನವನ್ನು ನೀಡಲಾಗಿದೆ. ಇದರಿಂದ ಫಾಸ್ಟ್-ಆಕ್ಷನ್ ಗೇಮ್‌ಗಳಲ್ಲೂ ಸ್ಮೂತ್ ವಿಸುಯಲ್ಸ್ ಮತ್ತು ಕಡಿಮೆ ಲ್ಯಾಗ್ ಅನುಭವ ಸಾಧ್ಯವಾಗುತ್ತದೆ. ಜೊತೆಗೆ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲವು ಸಿನಿಮಾ ಮತ್ತು ಗೇಮಿಂಗ್ ಅನುಭವವನ್ನು ಇನ್ನಷ್ಟು ಎಮರ್ಸಿವ್ ಮಾಡುತ್ತದೆ.

Wobble X ಸರಣಿ ಟಿವಿಗಳು DynamIQ ಡ್ಯುಯಲ್ ಪ್ರೊಸೆಸರ್ (Arm Cortex-A75 ಮತ್ತು Cortex-A55) ಮೂಲಕ ಚಾಲಿತವಾಗಿವೆ. AI ಆಧಾರಿತ ಪಿಕ್ಚರ್ ಔಟ್‌ಪುಟ್ ಪ್ರೊಸೆಸಿಂಗ್ ಸಿಸ್ಟಮ್ ಉತ್ತಮ ಚಿತ್ರ ಗುಣಮಟ್ಟ ಮತ್ತು ಸ್ಥಿರ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. 80W ಶಕ್ತಿಯ ಸ್ಪೀಕರ್‌ಗಳು, ಡ್ಯುಯಲ್ ವೂಫರ್, ಆಂಪ್ಲಿಫೈಯರ್ ಮತ್ತು ಟ್ವೀಟರ್‌ಗಳೊಂದಿಗೆ ಈ ಟಿವಿಗಳು ಹೋಮ್ ಥಿಯೇಟರ್ ತರಹದ ಸೌಂಡ್ ಅನುಭವವನ್ನು ನೀಡುತ್ತವೆ.

Wobble K ಮತ್ತು X ಸ್ಮಾರ್ಟ್‌ಟಿವಿಗಳು ಬಿಡುಗಡೆ: ಆರಂಭಿಕ ಬೆಲೆ 10,999 ರೂ.!

Wobble X ಸರಣಿ : ಪ್ರಮುಖ ವೈಶಿಷ್ಟ್ಯಗಳು
ಇದರ ಜೊತೆಗೆ, Wobble K ಸರಣಿ ಟಿವಿಗಳು ಬಜೆಟ್ ಸ್ನೇಹಿ ವಿಭಾಗದಲ್ಲಿ ಲಭ್ಯವಿದ್ದು, ದಿನನಿತ್ಯದ ಮನರಂಜನೆಗಾಗಿ ಉತ್ತಮ ಆಯ್ಕೆಯಾಗಿ ಕಾಣಿಸುತ್ತವೆ. ಈ ಸರಣಿಯಲ್ಲಿ 32 ಇಂಚು, 43 ಇಂಚು, 50 ಇಂಚು, 55 ಇಂಚು ಮತ್ತು 65 ಇಂಚು ಡಿಸ್ಪ್ಲೇ ಗಾತ್ರಗಳು ದೊರೆಯುತ್ತವೆ. Google TV 5.0 ಪ್ಲಾಟ್‌ಫಾರ್ಮ್ ಮೇಲೆ ಕಾರ್ಯನಿರ್ವಹಿಸುವ ಈ ಟಿವಿಗಳಲ್ಲಿ ಜೆಮಿನಿ ಇಂಟಿಗ್ರೇಷನ್ ಕೂಡ ಇದೆ, ಇದರಿಂದ ಸ್ಮಾರ್ಟ್ ಫೀಚರ್‌ಗಳ ಬಳಕೆ ಇನ್ನಷ್ಟು ಸುಲಭವಾಗುತ್ತದೆ.

K ಸರಣಿಯ ಟಿವಿಗಳಲ್ಲಿ 32GB ಇನ್‌ಬಿಲ್ಟ್ ಸ್ಟೋರೇಜ್ ಇದ್ದು, ವಿವಿಧ ಆ್ಯಪ್‌ಗಳು ಮತ್ತು ಡಿಜಿಟಲ್ ಕಂಟೆಂಟ್‌ಗಾಗಿ ಸಾಕಷ್ಟು ಜಾಗ ಒದಗಿಸುತ್ತದೆ. MEMC ಮತ್ತು ALLM ವೈಶಿಷ್ಟ್ಯಗಳು ಇಲ್ಲಿಯೂ ಲಭ್ಯವಿದ್ದು, ಡ್ಯುಯಲ್ ಬ್ಯಾಂಡ್ ವೈ-ಫೈ, HDMI, eARC ಬೆಂಬಲವನ್ನು ನೀಡಲಾಗಿದೆ. ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ವಿಷನ್ ಸಹಿತ 40W ಸ್ಪೀಕರ್‌ಗಳು ಸ್ಪಷ್ಟ ಮತ್ತು ಶಕ್ತಿಶಾಲಿ ಧ್ವನಿಯನ್ನು ಒದಗಿಸುತ್ತವೆ.

ಒಟ್ಟಾರೆಯಾಗಿ, Wobble‌ನ ಹೊಸ X ಮತ್ತು K ಸರಣಿ ಸ್ಮಾರ್ಟ್ ಟಿವಿಗಳು ಭಾರತೀಯ ಗ್ರಾಹಕರಿಗೆ ಬಜೆಟ್‌ನಿಂದ ಪ್ರೀಮಿಯಂವರೆಗಿನ ಆಯ್ಕೆಗಳನ್ನು ಒದಗಿಸುತ್ತಿವೆ. ಗೇಮಿಂಗ್, ಸಿನಿಮಾ ವೀಕ್ಷಣೆ ಅಥವಾ ದಿನನಿತ್ಯದ ಮನರಂಜನೆ ಎಲ್ಲ ಅಗತ್ಯಗಳಿಗೂ ಹೊಂದಿಕೊಳ್ಳುವ ಈ ಟಿವಿಗಳು ಭಾರತೀಯ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ಸೃಷ್ಟಿಸುತ್ತಿವೆ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Indian homegrown brand Wobble, under Indkal Technologies, has launched its new X Series and K Series Smart TVs in India, targeting gamers and everyday entertainment users with modern features, powerful sound, and competitive Made-in-India pricing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+