ಮನೆಯಿಂದ ಕೆಲಸ ಮಾಡುತ್ತಿದ್ದೀರಾ? ಹಾಗಾದ್ರೆ ಅಮೆಜಾನ್ ನಲ್ಲಿ ಈ ಗೆಡ್ಜೆಟ್ಸ್ ಗಳನ್ನು ಖರೀದಿಸಿ
ಕೋವಿಡ್-19ನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಹಲವು ಕಂಪೆನಿಗಳು ಮುಂದಿನ ಕೆಲವು ತಿಂಗಳವರೆಗೆ ಮನೆಯಿಂದಲೆ ಕೆಲಸ ಮಾಡುವಂತೆ ತನ್ನ ಕಾರ್ಮಿಕರಿಗೆ ತಿಳಿಸಿದೆ. ಇದರ ಪರಿಣಾಮವಾಗಿ ಮನೆಯಿಂದಲೆ ಕೆಲಸ ಮಾಡಲು ಕೆಲವು ಗೆಡ್ಜೆಟ್ ಗಳ ಅಗತ್ಯತೆ ಬೀಳಲಿದೆ. ಉದಾಹರಣೆಗೆ ಲ್ಯಾಪ್ ಟಾಪ್ ಗಳು, ಡೆಸ್ಕ್ ಟಾಪ್ ಗಳು, ಹೆಡ್ ಫೋನ್ ಗಳು ಇತ್ಯಾದಿ.ಒಂದು ವೇಳೆ ಈ ಪ್ರೊಡಕ್ಟ್ ಗಳು ನಿಮ್ಮ ಬಳಿ ಇದ್ದಲ್ಲಿ ಅಥವಾ ನಿಮ್ಮ ಕಂಪೆನಿ ನಿಮಗೆ ಒದಗಿಸಿ ಕೊಟ್ಟಿದ್ದಲ್ಲಿ ಯಾವುದೇ ಸಮಸ್ಯೆ ಇಲ್ಲ.

ಆದರೆ ಒಂದು ವೇಳೆ ಯಾವುದೇ ಕಿರಿಕಿರಿಯಾಗದಂತೆ ನಿಮ್ಮ ಕೆಲಸ ಮುಂದುವರಿಸಲು ನಿಮ್ಮ ಬಳಿ ಈ ಡಿವೈಸ್ ಗಳು ಇಲ್ಲದೆ ಇದ್ದಲ್ಲಿ ಅಮೇಜಾನ್ ಪೋರ್ಟಲ್ ಮೂಲಕ ಖರೀದಿಸುವ ಅವಕಾಶವಿದೆ.
ಗ್ರೀನ್ ಝೋನ್ ಇರುವ ಕಡೆಗಳಲ್ಲಿ ಅಮೇಜಾನ್ ಮತ್ತು ಇತರೆ ಇ-ಕಾಮರ್ಸ್ ರೀಟೈಲರ್ ಗಳು ಶಿಪ್ಪಿಂಗ್ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಈ ಕೆಳಗಿನ ಮನೆಯಿಂದಲೆ ಕೆಲಸ ಮಾಡಲು ಬೇಕಾಗುವ ವಸ್ತುಗಳನ್ನು ನೀವು ಅಮೇಜಾನ್ ನಲ್ಲಿ ಖರೀದಿಸಬಹುದು. .

ಆರಂಭಿಕ ಬೆಲೆ 9,999 ರುಪಾಯಿಗೆ ಲ್ಯಾಪ್ ಟಾಪ್ ಗಳು ಮತ್ತು ಪ್ರಿಂಟರ್ ಗಳು.
ಮನೆಯಿಂದಲೇ ಕೆಲಸ ಮಾಡುವುದಾದರೆ ಪ್ರಮುಖವಾಗಿ ಬೇಕಾಗಿರುವ ಗೆಜೆಟ್ ಎಂದರೆ ಅದು ಲ್ಯಾಪ್ ಟಾಪ್.ಯಾವುದೇ ತೊಂದರೆ ಆಗದಂತೆ ಕೆಲಸ ಮಾಡಲು ಬೇಕಾಗಿರುವ ಇನ್ನೊಂದು ಪ್ರಮುಖ ಗೆಜೆಟ್ ಪ್ರಿಂಟರ್. ಅಮೇಜಾನ್ ಈ ನಿಟ್ಟಿನಲ್ಲಿ ನಿಮಗೆ ಸಹಕರಿಸುತ್ತಿದ್ದು ಉತ್ತಮ ಬ್ರ್ಯಾಂಡಿನ ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ಗಳು ಆರಂಭಿಕವಾಗಿ 9,999 ರುಪಾಯಿ ಬೆಲೆಗೆ ಲಭ್ಯವಿದೆ.

ಸ್ಟೊರೇಜ್ ಡಿವೈಸ್ ಗಳ ಆರಂಭಿಕ ಬೆಲೆ 299 ರುಪಾಯಿಗಳು
ಕೆಲವು ಪ್ರೊಫೆಷನ್ ನಲ್ಲಿ ತಮ್ಮ ಡಾಟಾ ಗಳನ್ನು ಅಥವಾ ಕೆಲಸಕ್ಕೆ ಸಂಬಂಧಿಸಿದ ಫೈಲ್ ಗಳನ್ನು ಸೇವ್ ಮಾಡಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇದು ಅವರಿಗೆ ಭವಿಷ್ಯದಲ್ಲಿ ಬೇಕಾಗುತ್ತದೆ. ಇದರ ಅಗತ್ಯತೆಯನ್ನು ಅರಿತು ಅಮೇಜಾನ್ ಸ್ಟೊರೇಜ್ ಡಿವೈಸ್ ಗಳನ್ನು ಆರಂಭಿಕ ಬೆಲೆ ರುಪಾಯಿ 299 ಕ್ಕೆ ಮಾರಾಟ ಮಾಡುವುದನ್ನು ಈ ಕೋವಿಡ್-19 ಲಾಕ್ ಡೌನ್ ಸಮಯದಲ್ಲೂ ಕೂಡ ಪ್ರಾರಂಭಿಸಿದೆ.

ಟ್ಯಾಬ್ಲೆಟ್ಸ್ ಮತ್ತು ಡೆಸ್ಕ್ ಟಾಪ್ ಗಳ ಆರಂಭಿಕ ಬೆಲೆ 4,999 ರುಪಾಯಿಗಳು
ಹೊಸ ಡೆಸ್ಕ್ ಟಾಪ್ ಅಥವಾ ಟ್ಯಾಬ್ಲೆಟ್ ನ್ನು ಖರೀದಿಸುವುದಕ್ಕೆ ನೀವು ಆಲೋಚಿಸುತ್ತಿದ್ದರೆ ಅಮೇಜಾನಿನಲ್ಲಿ ಅವಕಾಶವಿದೆ. ಕೊರೋನಾ ವೈರಸ್ ಲಾಕ್ ಡೌನ್‌ಸಮಯದಲ್ಲಿ ಇದು ನಿಮಗೆ 4,999 ರುಪಾಯಿ ಆರಂಭಿಕ ಬೆಲೆಯಲ್ಲಿ ಸಿಗಲಿದೆ.

ಲ್ಯಾಪ್ ಟಾಪ್ ಮತ್ತು ಗೇಮಿಂಗ್ ಆಕ್ಸಸರಿಗಳ ಆರಂಭಿಕ ಬೆಲೆ 249 ರುಪಾಯಿಗಳು
ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಲ್ಯಾಪ್ ಟಾಪ್ ಇದ್ದು ಅದರ ಆಕ್ಸಸರೀಗಳು ಬೇಕಿದ್ದಲ್ಲಿ ಅಮೇಜಾನಿನಲ್ಲಿ ಖರೀದಿಸಬಹುದು.ಲ್ಯಾಪ್ ಟಾಪ್ ಮತ್ತು ಗೇಮಿಂಗ್ ಆಕ್ಸಸರೀಗಳು 249 ರುಪಾಯಿಯ ಆರಂಭಿಕ ಬೆಲೆಯಲ್ಲಿ ಸಿಗಲಿದೆ.


Click it and Unblock the Notifications








