Home
Gadgets

ಮಾರುಕಟ್ಟೆಗೆ ಶಿಯೋಮಿ ಮೂರನೇ ಸ್ಮಾರ್ಟ್‌TV: ಕಿಲ್ಲರ್ ಫೀಚರ್ಸ್...! ಕಡಿಮೆ ಬೆಲೆ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌TVಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ಅಲೆಯನ್ನು ಹುಟ್ಟಿ ಹಾಕಿದ್ದ ಚೀನಾ ಮೂಲದ ಶಿಯೋಮಿ, ಚೀನಾ ಮಾರುಕಟ್ಟೆಯಲ್ಲಿ ಮತ್ತೊಂದು ಅದ್ಬುತವಾದ ಸ್ಮಾರ್ಟ್‌TVಯೊಂದನ್ನು ಲಾಂಚ್ ಮಾಡಿದ್ದು, ಶೀಘ್ರವೇ ಈ ಸ್ಮಾರ್ಟ್‌TV ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶಿಯೋಮಿ ಸದ್ಯ ಚೀನಾದಲ್ಲಿ ಮಾತ್ರವೇ Mi TV 4S ಅನ್ನು ಬಿಡುಗಡೆ ಮಾಡಿದೆ.

ಮಾರುಕಟ್ಟೆಗೆ ಶಿಯೋಮಿ ಮೂರನೇ ಸ್ಮಾರ್ಟ್‌TV: ಕಿಲ್ಲರ್ ಫೀಚರ್ಸ್...! ಕಡಿಮೆ ಬೆಲೆ..

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ Mi TV 4 ಮುಂದುವರೆದ ಆವೃತ್ತಿಯಾಗಿರುವ Mi TV 4S 4K HDR ಗುಣಮಟ್ಟದ 55 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಚೀನಾ ಮಾರುಕಟ್ಟೆಯಲ್ಲಿ ರೂ.31000ಕ್ಕೆ ಲಾಂಚ್ ಆಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿಯೂ ಇದೇ ಬೆಲೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

Mi TV 4S ಸ್ಮಾರ್ಟ್‌TVಯಲ್ಲಿ 4K HDR ಗುಣಮಟ್ಟದ 55 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದ್ದು, 178 ಡಿಗ್ರಿ ಆಂಗಲ್ ನಲ್ಲಿಯೂ ನೋಡಬಹುದಾಗಿದೆ. ಅಲ್ಲದೇ ಇದು ಸ್ಮಾರ್ಟ್TVಯಾಗಿರುವ ಕಾರಣದಿಂದಾಗಿ 1.5GHz ವೇಗದ ಕ್ವಾಡ್ ಕೋರ್ ಅಮ್ಲೋಗಿಕ್ T962 ಕ್ರಾಟಿಕ್ಸ್-A53 ಪ್ರೋಸೆಸರ್ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಇದರೊಂದಿಗೆ ಮಾಲಿ-T450 GPU ಸಹ ಇದರಲ್ಲಿದೆ. ಅಲ್ಲದೇ 2GB RAM ಮತ್ತು 8GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ.

ಮಾರುಕಟ್ಟೆಗೆ ಶಿಯೋಮಿ ಮೂರನೇ ಸ್ಮಾರ್ಟ್‌TV: ಕಿಲ್ಲರ್ ಫೀಚರ್ಸ್...! ಕಡಿಮೆ ಬೆಲೆ..

ಆಂಡ್ರಾಯ್ಡ್‌ನಲ್ಲಿ ರನ್‌ ಆಗುವ ಈ Mi TV 4S ಸ್ಮಾರ್ಟ್‌TVಯಲ್ಲಿ ವೈ-ಫೈ ಕನೆಕ್ಷನ್ ಅನ್ನು ಕಾಣಬಹುದಾಗಿದ್ದು, ಎರಡು 8W ಸ್ಪೀಕರ್ ಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಶಿಯೋಮಿ ಪ್ಯಾಚ್ ವಾಲ್ ಅನ್ನು ಇದರಲ್ಲೂ ನೀಡಲಾಗಿದೆ. ಇದಲ್ಲದೇ Mi TV 4S ಸ್ಮಾರ್ಟ್‌TVಯೊಂದಿಗೆ ನೀಡಿರುವ ರೀಮೊಟ್ ನಲ್ಲಿ ವಾಯ್ಸ್ ಕಮೆಂಡಿಗ್ ಅನ್ನು ಪಾಲಿಸಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ Mi TV 4 ಸ್ಮಾರ್ಟ್‌TV ಹಾಗೂ Mi TV 4A ಸ್ಮಾರ್ಟ್‌TVಯನ್ನು ಲಾಂಚ್ ಮಾಡಿರುವ ಶಿಯೋಮಿ ಮತ್ತೊಂದು Mi TV 4S ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ನಿರೀಕ್ಷೆ ಇದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌TVಯ ಬೆಲೆ ಕಡಿಮೆಯೇ ಇರುವ ಸಾಧ್ಯತೆ ಹೆಚ್ಚು.

Best Mobiles in India

English summary
Xiaomi 55-inch Mi TV 4S launched with 4K HDR display, voice control and a killer price. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+