Xiaomi ಕಂಪೆನಿಯ ಪ್ರೀಮಿಯಂ Buds 5 Pro TWS ಇಯರ್‌ಫೋನ್ ಬಿಡುಗಡೆ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Xiaomi ಕಂಪನಿಯು ಇಂದು Xiaomi 15 Ultra ಸ್ಮಾರ್ಟ್‌ಫೋನಿನ ಜೊತೆಗೆ ಪ್ರೀಮಿಯಂ ಗುಣಮಟ್ಟದ Xiaomi Buds 5 Pro TWS ಇಯರ್‌ಫೋನ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಡ್ಯುಯಲ್ ಆಂಪ್ಲಿಫೈಯರ್ ಮತ್ತು ಟ್ರಿಪಲ್ ಡ್ರೈವರ್ ಸಿಸ್ಟಮ್ ಹಾಗೂ 55dB ವರೆಗಿನ ಸಕ್ರಿಯ ಶಬ್ದ ರದ್ದತಿ (ANC), ಕರೆ ಶಬ್ದ ಕಡಿತ ವೈಶಿಷ್ಟ್ಯಗಳು, ಪ್ರಾದೇಶಿಕ ಆಡಿಯೊ ಮತ್ತು aptX ಅಡಾಪ್ಟಿವ್ ಕೋಡೆಕ್ ವೈಶಿಷ್ಟ್ಯಗಳ ಜೊತೆಗೆ ಹರ್ಮನ್‌ನಿಂದ ಟ್ಯೂನ್ ಮಾಡಲಾದ ಆಡಿಯೊದೊಂದಿಗೆ ಈ ಹೊಸ Xiaomi Buds 5 Pro TWS ಸಾಧನವು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ಹೊಸ Xiaomi Buds 5 Pro TWS ಇಯರ್‌ಫೋನ್‌ಗಳು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿವೆ ಮತ್ತು ಬೆಲೆ ಎಷ್ಟು ಎಂಬೆಲ್ಲಾ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ
Xiaomi Buds 5 Pro ವೈಶಿಷ್ಟ್ಯಗಳು
ನೂತನ Xiaomi Buds 5 Pro ಸಾಧನವು ಸಾಂಪ್ರದಾಯಿಕ ಇನ್-ಇಯರ್ ವಿನ್ಯಾಸದೊಂದಿಗೆ ಬಂದಿದೆ. ಇದು 10mm ಸೆರಾಮಿಕ್ ಟ್ವೀಟರ್‌ಗಳ ಜೊತೆಗೆ 11mm ಟೈಟಾನಿಯಂ-ಲೇಪಿತ ವೂಫರ್‌ಗಳನ್ನು ಒಳಗೊಂಡಂತೆ ಡ್ಯುಯಲ್ ಆಂಪ್ಲಿಫೈಯರ್ ಮತ್ತು ಟ್ರಿಪಲ್ ಡ್ರೈವರ್ ಸಿಸ್ಟಮ್ ಅನ್ನು ಹೊಂದಿದೆ. ಈ ಇಯರ್‌ಫೋನ್‌ಗಳು Harman AudioEFX ನಿಂದ ಟ್ಯೂನ್ ಮಾಡಲಾದ ಆಡಿಯೊವನ್ನು ಬೆಂಬಲಿಸುತ್ತವೆ ಮತ್ತು ಡೈನಾಮಿಕ್ ಹೆಡ್ ಟ್ರ್ಯಾಕಿಂಗ್‌ಆಡಿಯೊ ಅನುಭವವನ್ನು ನೀಡುತ್ತವೆ. ಇಷ್ಟೇ ಅಲ್ಲದೆ, ಈ TWS ಇಯರ್‌ಫೋನ್‌ಗಳು 55dB ANC ಮತ್ತು 100dB ವರೆಗಿನ ಕರೆ ಶಬ್ದ ಕಡಿತವನ್ನು ಬೆಂಬಲಿಸುತ್ತವೆ ಎಂದು ಹೇಳಲಾಗಿದೆ.

ಸಂಪರ್ಕ ಆಯ್ಕೆಗಳಲ್ಲಿ, Xiaomi Buds 5 Pro ಬ್ಲೂಟೂತ್ ಮತ್ತು ವೈ-ಫೈ ಎರಡೂ ಮಾದರಿಗಳಲ್ಲಿ ಬಂದಿದೆ. ಬ್ಲೂಟೂತ್ 5.4 ಸಂಪರ್ಕವನ್ನು ಬೆಂಬಲಿಸುತ್ತವೆ ಮತ್ತು AAC, SBC, aptX ಲಾಸ್‌ಲೆಸ್ ಮತ್ತು aptX ಅಡಾಪ್ಟಿವ್ LC3 ಆಡಿಯೊ ಕೊಡೆಕ್ ಬೆಂಬಲವನ್ನು ನೀಡುತ್ತವೆ ಎಂದು ಕಂಪೆನಿಯು ದೃಢಪಡಿಸಿದೆ. ಇದರ ವೈ-ಫೈ ಮಾದರಿಯು aptX ಅಡಾಪ್ಟಿವ್ 4.2M ಕೊಡೆಕ್ ಅನ್ನು ಬೆಂಬಲಿಸುತ್ತದೆ, ಇದು 4.2Mbps ಆಡಿಯೊ ಒದಗಿಸುತ್ತದೆ ಎಂದು ಹೇಳಲಾಗಿದೆ. ಹಾಗೆಯೇ, ಇನ್-ಇಯರ್ ಪತ್ತೆ ವೈಶಿಷ್ಟ್ಯಗಳು ಮತ್ತು ಸ್ಪರ್ಶ ನಿಯಂತ್ರಣಗಳನ್ನು ಹೊಂದಿವೆ. ಮತ್ತು ಇಯರ್‌ಫೋನ್‌ಗಳು IP54 ರೇಟ್ ಮಾಡಲ್ಟ್ಟಿರುವ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕವನ್ನು ಹೊಂದಿವೆ.
ಬ್ಯಾಟರಿ ಬಾಳಿಕೆಯಲ್ಲಿ, Xiaomi Buds 5 Pro ನ ಬ್ಲೂಟೂತ್ ಮತ್ತು ವೈ-ಫೈ ಎರಡೂ ಮಾದರಿಗಳು ಕೇಸ್ ಸೇರಿದಂತೆ ಒಟ್ಟು 40 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ ಎಂದು ಕಂಪೆನಿ ಹೇಳಿಕೊಮಡಿದೆ. ಈ ಇಯರ್‌ಫೋನ್‌ಗಳು ಒಂದೇ ಚಾರ್ಜ್‌ನಲ್ಲಿ ಬ್ಲೂಟೂತ್ ಆವೃತ್ತಿಯಲ್ಲಿ 8 ಗಂಟೆಗಳವರೆಗೆ ಮತ್ತು ವೈ-ಫೈ ಆವೃತ್ತಿಯಲ್ಲಿ 10 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಪ್ರತಿ ಇಯರ್‌ಫೋನ್‌ಗಳು ತಲಾ 64mAh ಸೆಲ್ ಅನ್ನು ಹೊಂದಿರುತ್ತವೆ, ಆದರೆ USB ಟೈಪ್-ಸಿ ಪೋರ್ಟ್‌ನೊಂದಿಗೆ ಚಾರ್ಜಿಂಗ್ ಕೇಸ್ 570mAh ಬ್ಯಾಟರಿಯನ್ನು ಹೊಂದಿದೆ. ಪ್ರತಿ ಇಯರ್‌ಬಡ್ 5.6 ಗ್ರಾಂ ತೂಗುತ್ತದೆ ಮತ್ತು ಇಯರ್‌ಫೋನ್‌ಗಳ ಜೊತೆಗೆ ಕೇಸ್ 53 ಗ್ರಾಂ ತೂಗುತ್ತದೆ.
Xiaomi Buds 5 Pro ಇಯರ್‌ಫೋನ್‌ಗಳು ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬ್ಲೂಟೂತ್ ಮಾದರಿಯ ಬೆಲೆ CNY 1,299 (ಸುಮಾರು ರೂ. 15,600) ಮತ್ತು Wi-Fi ಮಾದರಿಯ ಬೆಲೆ CNY 1,499 (ಸುಮಾರು ರೂ. 18,000) ಆಗಿದೆ. Wi-Fi ಆವೃತ್ತಿ ಮಿರಾಜ್ ಕಪ್ಪು ಬಣ್ಣದಲ್ಲಿ ಹಾಗೂ ಬ್ಲೂಟೂತ್ ಆವೃತ್ತಿಯು ಸ್ನೋ ಮೌಂಟೇನ್ ವೈಟ್ ಮತ್ತು ಟೈಟಾನಿಯಂ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಈ ಇಯರ್‌ಫೋನ್‌ಗಳು ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆ ಇದೆ.


Click it and Unblock the Notifications








