Redmi: ಶೀಘ್ರದಲ್ಲೇ ರೆಡ್‌ಮಿ ಪ್ಯಾಡ್ ಪ್ರೋ 5G ಬಿಡುಗಡೆ; ಸಂಸ್ಥೆಯ ಸಿಇಓ ನೀಡಿದ ಹಿಂಟ್ ಏನು?
ರೆಡ್‌ಮಿ (Redmi) ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದು, ತಮ್ಮದೇ ಆದ ವಿಭಿನ್ನ ಫೀಚರ್ಸ್‌ನೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ, ಈ ನಡುವೆ ಭಾರತದಲ್ಲಿ ರೆಡ್‌ಮಿ ಪ್ಯಾಡ್ ಪ್ರೊ 5G (Redmi Pad Pro 5G) ಹೆಸರಿನ ನೂತನ ಪ್ಯಾಡ್ ಒಂದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಂಸ್ಥೆ ಸಿದ್ಧವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಹೌದು, ರೆಡ್‌ಮಿ ಪ್ಯಾಡ್ ಪ್ರೊ ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಸ್ನಾಪ್‌ಡ್ರಾಗನ್ 7s ಜೆನ್ 2 SoC ಜೊತೆಗೆ ವೇಗದ ಚಾರ್ಜರ್ ಜೊತೆಗೆ 10,000mAh ಬ್ಯಾಟರಿ ಮತ್ತು 12.1 ಇಂಚಿನ 2.5K LCD ಸ್ಕ್ರೀನ್ ಅನ್ನು ಹೊಂದಿದೆ. ಇದನ್ನು ಮೂರು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳು ಮತ್ತು ವೈ-ಫೈ ಸಂಪರ್ಕ ಹೊಂದಿರುವ ಕುರಿತು ಲಿಸ್ಟ್ ಮಾಡಲಾಗಿದೆ.

ಈ ಟ್ಯಾಬ್ಲೆಟ್ ಇನ್ನೂ ಭಾರತಕ್ಕೆ ಬಂದಿಲ್ಲ, ಆದರೆ ಟ್ಯಾಬ್ಲೆಟ್ ಅನ್ನು ಗೂಗಲ್ ಪ್ಲೇ ಕನ್ಸೋಲ್ ಗುರುತಿಸಿರುವುದರಿಂದ ಭಾರತದಲ್ಲಿ ಬಿಡುಗಡೆ ಸನ್ನಿಹಿತವಾಗಿದೆ ಎಂದು ಅಂದಾಜಿಸಬಹುದಾಗಿದೆ. ಇದೀಗ ಈ ಟ್ಯಾಬ್ಲೆಟ್ ಅನ್ನು 5G ವೇರಿಯಂಟ್‌ನಲ್ಲಿ ಪರಿಚಯಿಸಲಾಗುವುದು ಎಂದು ಸಂಸ್ಥೆಯ ಸಿಇಒ ದೃಢಪಡಿಸಿದ್ದಾರೆ.
ರೆಡ್‌ಮಿ ಪ್ಯಾಡ್ Pro 5G ಬಿಡುಗಡೆ:
ರೆಡ್‌ಮಿ ಪ್ಯಾಡ್ Pro 5G ಬಿಡುಗಡೆಗೆ ಸಂಬಂಧಿಸಿದಂತೆ ಶಿಯೋಮಿ ಸಿಇಒ ಲೇ ಜುನ್ (Lei Jun) ತಮ್ಮ ಎಕ್ಸ್ ( X) ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು ರೆಡ್‌ಮಿ ಪ್ಯಾಡ್ ಪ್ರೊ 5G ಈ ಟ್ಯಾಬ್ಲೆಟ್ ಅನ್ನು 5G ಸಿಮ್ ಕಾರ್ಡ್ ಜೊತೆಗೆ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಕುರಿತು ನಿಖರವಾದ ಬಿಡುಗಡೆ ದಿನಾಂಕ ಅಥವಾ ಸಮಯದ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.
ಮುಂದೆ ಬಿಡುಗಡೆಯಾಗಲಿರುವ 5G ವೇರಿಯಂಟ್ ನೆಟ್‌ವರ್ಕ್ ಸಿಂಕ್ ವೈಶಿಷ್ಟ್ಯವನ್ನು ಸಹ ಹೊಂದಿರಲಿದೆ ಎಂದು ಸಿಇಒ ಜುನ್ ಅವರು ಮಾಹಿತಿ ನೀಡಿದ್ದು, ಇದರಿಂದಾಗಿ ಗ್ರಾಹಕರು ತಮ್ಮ ಫೋನ್‌ನ ಹಾಟ್‌ಸ್ಪಾಟ್ ಅನ್ನು ಟ್ಯಾಬ್ಲೆಟ್‌ಗೆ ಒಂದೇ ಟ್ಯಾಪ್‌ನಲ್ಲಿ ಸುಲಭವಾಗಿ ಕನೆಕ್ಟ್ ಮಾಡಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಎಕ್ಸ್ ಪೋಸ್ಟರ್‌ನಲ್ಲಿ ಕಂಡುಬಂದಿರುವ ಟೀಸರ್ ಗಮನಿಸಿದೆ ಮುಂಬರಲಿರುವ ರೆಡ್‌ಮಿ ಪ್ಯಾಡ್ ಪ್ರೋ 5G ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರೆಡ್‌ಮಿ ಪ್ಯಾಡ್ ಪ್ರೊ ವಿನ್ಯಾಸವನ್ನು ಹೋಲುತ್ತದೆ ಎಂದು ತಿಳಿದು ಬಂದಿದೆ. ಜೊತೆಗ ಇದರ ಡಿಸೈನ್, ಕೀ ಬೋರ್ಡ್ ಮತ್ತು ಕವರ್ ಕೇಸ್ ಸಹ ಒಂದೇ ರೀತಿ ಕಂಡು ಬಂದಿದೆ. ಇನ್ನು ಈ ಪ್ಯಾಡ್ ಡಾರ್ಕ್ ಗ್ರೇ ಮತ್ತು ಶಾಲೋ ಬ್ಲೂ ಬೇ ಬಣ್ಣಗಳಲ್ಲಿ ಕಂಡು ಬಂದಿದೆ. ಹೆಚ್ಚುವರಿ 5G ಸಂಪರ್ಕದ ಹೊರತಾಗಿ ರೆಡ್‌ಮಿ ಪ್ಯಾಡ್ ಪ್ರೊ 5G ಹಳೆಯ ವೈ-ಫೈ ವೇರಿಯಟ್‌ನಂತೆ ಇರಲಿದೆ ಎಂದು ಎಕ್ಸ್ ಪೋಸ್ಟ್ ತಿಳಿಸಿದೆ.
ರೆಡ್‌ಮಿ ಪ್ಯಾಡ್ ಪ್ರೊ 5G ಯ ನಿರೀಕ್ಷಿತ ಫೀಚರ್ಸ್‌ಗಳು:
ಈಗಾಗಲೆ ಅಸ್ತಿತ್ವದಲ್ಲಿರುವ ರೆಡ್‌ಮಿ ಪ್ಯಾಡ್ ಪ್ರೊ ನಂತೆ ಮುಂಬರಲಿರುವ ರೆಡ್‌ಮಿ ಪ್ಯಾಡ್ ಪ್ರೊ 5G ಕೂಡ 12.1 ಇಂಚಿನ 2.5K (2,560 x 1,600 ಪಿಕ್ಸೆಲ್‌ಗಳು) ರೆಸಲ್ಯೂಶನ್ LCD ಪ್ಯಾನೆಲ್, 120Hz ರಿಫ್ರೆಶ್ ರೇಟ್‌ನೊಂದಿಗೆ 180Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್ ಹಾಗೂ 600nits ವರೆಗಿನ ಗರಿಷ್ಟ ಬ್ರೈಟ್‌ನೆಸ್ ಮಟ್ಟವನ್ನು ಹೊಂದಿರುವ ಸಾಧ್ಯತೆ ಇದೆ. ಜೊತೆಗೆ 3 ರಕ್ಷಣೆಯ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿರಬಹುದು ಎಂದು ಊಹಿಸಲಾಗಿದೆ.


Click it and Unblock the Notifications








