Home
Gadgets

ಆಪಲ್ ವಾಚ್ ಮೀರಿಸುವ ಶಿಯೋಮಿ ಸ್ಮಾರ್ಟ್‌ವಾಚ್..! ಬೆಲೆ ಕೇಳಿದ್ರೆ ಎರಡು ಬುಕ್ ಮಾಡ್ತೀರ..!

By Srinidhi

ಇನ್ನು ಮುಂದೆ ಎಲ್ಲರ ಕೈನಲ್ಲೂ ಸ್ಮಾರ್ಟ್‌ ವಾಚ್ ನೋಡುವ ದಿನಗಳು ತುಂಬ ದೂರ ಉಳಿದಿಲ್ಲ ಎನ್ನಲಾಗಿದೆ. ಸಾಮಾನ್ಯರ ಜನರ ಕೈಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ನೀಡಿದ್ದ ಚೀನಾ ಮೂಲದ ಶಿಯೋಮಿ, ಈ ಬಾರಿ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಳ್ಳುತ್ತಿರುವ ಸ್ಮಾರ್ಟ್ ವಾಚ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಆಪಲ್ ವಾಚ್ ಮೀರಿಸುವ ಶಿಯೋಮಿ ಸ್ಮಾರ್ಟ್‌ವಾಚ್..!

ಸ್ಮಾರ್ಟ್ ವೆರಬಲ್ಸ್ ಅನ್ನು ಬಿಡುಗಡೆ ಮಾಡುತ್ತಿರುವ ಶಿಯೋಮಿ, ಇದಕ್ಕಾಗಿಯೇ ಹುವಾಮಿ ಎನ್ನುವ ಬ್ರಾಂಡ್ ವೊಂದನ್ನು ಹೊಂದಿದೆ. ಈ ಬ್ರಾಂಡ್ ಮೂಲಕವೇ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಲಿದೆ. ಒಂದೇ ಬಾರಿಗೆ ಒಟ್ಟು ಎರಡು ಮಾದರಿಯ ಸ್ಮಾರ್ಟ್ ವಾಚ್‌ಗಳು ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದ್ದು, ಅಮೆಜ್‌ಫಿಟ್ ಬಿಪ್ ಮತ್ತು ಅಮೆಜ್‌ಫಿಟ್ ಸ್ಟ್ರಾಟೋಸ್ ಗಳು ಮುಂದಿನ ವಾರ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಜುಲೈ 24ಕ್ಕೆ ಲಾಂಚ್:

ಜುಲೈ 24ಕ್ಕೆ ಲಾಂಚ್:

ಇದೇ ಜುಲೈ 24 ರಂದು ಹುವಾಮಿ ತನ್ನ ಎರಡು ಸ್ಮಾರ್ಟ್‌ವಾಚ್ ಆಗಳಾದ ಅಮೆಜ್‌ಫಿಟ್ ಬಿಪ್ ಮತ್ತು ಅಮೆಜ್‌ಫಿಟ್ ಸ್ಟ್ರಾಟೋಸ್ ಗಳನ್ನು ಭಾರತೀಯ ಮಾರಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದ್ದು, ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿಯನ್ನು ನೀಡಲಾಗಿದೆ,. ಅಲ್ಲದೇ ಈ ಸ್ಮಾರ್ಟ್‌ವಾಚ್ ಗಳು ಬಜೆಟ್ ಬೆಲೆಯಲ್ಲಿ ದೊರೆಯಲಿದೆ.

ಅಮೆಜ್‌ಫಿಟ್ ಬಿಪ್:

ಅಮೆಜ್‌ಫಿಟ್ ಬಿಪ್:

ಅಮೆಜ್‌ಫಿಟ್ ಬಿಪ್ ಸ್ಮಾರ್ಟ್‌ವಾಚಿನಲ್ಲಿ 1.28 ಇಂಚಿನ ಚೌಕಕಾರದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 176 X 178 ಪಿಕ್ಸಲ್ ಗುಣಮಟ್ಟದಿಂದ ಕೂಡಿದ್ದು, ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯನ್ನು ನೀಡಲಾಗಿದೆ. ಆಂಡ್ರಾಯ್ಡ್ ಮತ್ತು iOS ಸಫೋರ್ಟ್ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಬ್ಲೂಟೂತ್ 4.0 ದಲ್ಲಿ ಕಾರ್ಯನಿರ್ವಹಿಸಲಿದೆ. ಬ್ಯಾಂಡ್ ಗಳನ್ನು ಚೇಂಜ್ ಮಾಡಬಹುದಾಗಿದ್ದು, 190mAh ಬ್ಯಾಟರಿ ಇದರಲ್ಲಿದೆ.

ಅಮೆಜ್‌ಫಿಟ್ ಸ್ಟ್ರಾಟೋಸ್:

ಅಮೆಜ್‌ಫಿಟ್ ಸ್ಟ್ರಾಟೋಸ್:

1.34 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 1.2GHz ವೇಗದ ಡ್ಯುಯಲ್ ಕೋರ್ ಪ್ರೋಸೆಸರ್ ನೊಂದಿಗೆ 512MB RAMನಲ್ಲಿ ಕಾರ್ಯನಿರ್ವಹಿಸಲಿದ್ದು, 4GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದು ನಿಮ್ಮ ಸ್ಮಾರ್ಟ್ ಫೋನ್ ನೋಟಿಫಿಕೇಷನ್ ಗಳನ್ನು ಮಿರರ್ ಮಾಡಲಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಉಪಯೋಗವಾಗಲಿದೆ. 290mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ.

ಬೆಲೆ:

ಬೆಲೆ:

ಹುವಾಮಿ ಭಾರತೀಯ ಮಾರುಕಟ್ಟೆ ಪರಿಚಯ ಮಾಡಲು ಹೊರಟಿರುವ ಅಮೆಜ್‌ಫಿಟ್ ಬಿಪ್ ಮತ್ತು ಅಮೆಜ್‌ಫಿಟ್ ಸ್ಟ್ರಾಟೋಸ್ ಸ್ಮಾರ್ಟ್ ವಾಚ್ ಗಳು ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಕ್ರಮವಾಗಿ ರೂ.7000 ಮತ್ತು ರೂ.13,500ಕ್ಕೆ ಮಾರಾಟವಾಗಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬೇಡಿಕೆಯನ್ನು ನಿರ್ಮಿಸಿಕೊಳ್ಳಲಿದೆ.

ಶಿಯೋಮಿ-ಗೂಗಲ್ ಜೋಡಿಯ ಸ್ಮಾರ್ಟ್ ಫೋನ್:

ಶಿಯೋಮಿ-ಗೂಗಲ್ ಜೋಡಿಯ ಸ್ಮಾರ್ಟ್ ಫೋನ್:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಎಚ್ಚಾಗಿದೆ ಎಂದು ಹೇಳಬಹುದಾಗಿದೆ. ರೆಡ್ ಮಿ ನೋಟ್ 5 ಪ್ರೋ ಈಗಲೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿ ಇರುವುದು ಇದಕ್ಕೇ ಸಾಕ್ಷಿಯಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದ Mi A1 ಸ್ಮಾರ್ಟ್ ಫೋನ್ ಮುಂದುವರೆದ ಭಾಗವನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಶಿಯೋಮಿ ಮುಂದಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಸಾಧ್ಯತೆ ಇದೆ.

ಮಾರುಕಟ್ಟೆಯಲ್ಲಿ ಇದೇ ಬೆಸ್ಟ್

ಮಾರುಕಟ್ಟೆಯಲ್ಲಿ ಇದೇ ಬೆಸ್ಟ್

ಈಗಾಗಲೇ ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯುನಿರ್ವಹಿಸುವ Mi A1 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆದಿತ್ತು, ಈ ಸ್ಮಾರ್ಟ್ ಫೋನ್ ಯಶಸ್ಸಿನ ಹಿನ್ನಲೆಯಲ್ಲಿ ಶಿಯೋಮಿ ಗೂಗಲ್ ಜೊತೆಗೆ ಸೇರಿ Mi A2 ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇದನ್ನು Mi 6X ಸ್ಮಾರ್ಟ್ ಫೋನ್ ಎಂದು ಪರಿಚಯಿಸುವ ಸಾಧ್ಯತೆ ಇದ್ದು, ಈ ಸ್ಮಾರ್ಟ್ ಫೋನ್ ಕುರಿತ ಸಂಪೂರ್ಣ ಮಾಹಿತಿಯೂ ಲೀಕ್ ಆಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಇಲ್ಲಿದೆ.

ಎರಡು ಮಾದರಿಯಲ್ಲಿ ಲಭ್ಯ

ಎರಡು ಮಾದರಿಯಲ್ಲಿ ಲಭ್ಯ

ಶಿಯೋಮಿ Mi A2 ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ದೊರೆಯುವ ಸಾಧ್ಯತೆ ಇದೆ. 32 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್ ಫೋನ್ ರೂ.19000ದ ಅಸುಪಾಸಿನಲ್ಲಿ ದೊರೆಯಲಿದ್ದು, ಇದೇ ಮಾದರಿಯಲ್ಲಿ 128 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್ ಫೋನ್ ರೂ. 25,000ಕ್ಕೆ ಮಾರಾಟವಾಗಲಿದೆ.

ಆಂಡ್ರಾಯ್ಡ್ ಓರಿಯೊ

ಆಂಡ್ರಾಯ್ಡ್ ಓರಿಯೊ

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಶುರು ಮಾಡಿರುವ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲು ಶಿಯೋಮಿ Mi A2 ಸ್ಮಾರ್ಟ್ ಫೋನ್ ಶಕ್ತವಾಗಿರಲಿದ್ದು, ಆಂಡ್ರಾಯ್ಡ್ ಓನ್ ಕಾರ್ಯಚರಣೆಯನ್ನು ಹೊಂದಿರಲಿದೆ. ಇದಲ್ಲದೇ ಆಂಡ್ರಾಯ್ಡ್ ಪಿ ಗೂ ಸಹ ಆಪ್ ಡೇಟ್ ಆಗಲಿದೆ.

ಫುಲ್ ಸ್ಕ್ರಿನ್ ಡಿಸ್ ಪ್ಲೇ

ಫುಲ್ ಸ್ಕ್ರಿನ್ ಡಿಸ್ ಪ್ಲೇ

ಇದಲ್ಲದೇ ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್ ಪ್ಲೇ ಯಲ್ಲಿ ವಿಡಿಯೋ ಮತ್ತು ಗೇಮ್ ಆಡುವ ಅನುಭವನ್ನು ಉತ್ತಮವಾಗಿರಲಿದೆ ಎನ್ನಲಾಗಿದೆ. ಅಲ್ಲದೇ ಇದು FHD+ ಗುಣಮಟ್ಟದಿಂದ ಕೂಡಿದೆ.

4GB RAM

4GB RAM

ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 4GB RAM ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರಿಂದಾಗಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಶಿಯೋಮಿ Mi A2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಇದು ಉತ್ತಮ ಚಿತ್ರಗಳನ್ನು ಸೆರೆ ಹಿರಿಯಲು ಸಹಾಯ ಮಾಡಲಿದೆ. ಟಾಪ್ ಎಂಡ್ ಸ್ಮಾರ್ಟ್ ಫೋನಿನಲ್ಲಿ ಕ್ಲಿಕ್ ಮಾಡಿದ ಕ್ವಾಲಿಟಿಯನ್ನು ಕಾಣಬಹುದಾಗಿದೆ.

Read more at: https://kannada.gizbot.com/mobile/xiaomi-mi-a2-android-one-smartphone/articlecontent-pf94532-017388.html

3100mAh ಬ್ಯಾಟರಿ

3100mAh ಬ್ಯಾಟರಿ

ಶಿಯೋಮಿ Mi A2 ಸ್ಮಾರ್ಟ್ ಫೋನಿನಲ್ಲಿ 3100mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದರೊಂದಿಗೆ ವೇಗವಾಗಿ ಚಾರ್ಜ್ ಮಾಡುವ ಸಲುವಾಗಿ ಕ್ವಿಕ್ ಚಾರ್ಜರ್ 3.0ವನ್ನು ನೀಡಲಾಗಿದೆ. ಇದರಿಂದಾಗಿ ವೇಗವಾಗಿ ಶಿಯೋಮಿ Mi A2 ಸ್ಮಾರ್ಟ್ ಫೋನ್ ಚಾರ್ಜ್ ಆಗಲಿದೆ.

Best Mobiles in India

English summary
Xiaomi Huami set to launch two new smartwatch in India on July 24, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+