ಪ್ರ್ಯಾಂಕ್‌ನಲ್ಲಿಯೂ ಅಚ್ಚರಿ ಮೂಡಿಸಿದ ಶಿಯೋಮಿಯ ನೈಜ ಡಿವೈಸ್‌ಗಳು!!
ಜನಪ್ರಿಯ ಮೊಬೈಲ್ ಕಂಪೆನಿ ಶಿಯೋಮಿ ಏಪ್ರಿಲ್ 1ರ ಪ್ರ್ಯಾಂಕ್‌ನಲ್ಲಿಯೂ ತನ್ನ ಮುಂದಿನ ಡಿವೈಸ್‌ಗಳ ಪ್ರಚಾರ ನಡೆಸಿದೆ. ಇದೇ ಸೋಮವಾರ ದೇಶದಲ್ಲಿ ಸ್ಮಾರ್ಟ್ ಇಂಡಕ್ಷನ್ ಕುಕ್ಕರ್ ಮತ್ತು ಸ್ಮಾರ್ಟ್ ರೈಸ್ ಕುಕ್ಕರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಶಿಯೋಮಿ, ತನ್ನ ವೆಬ್‌ಸೈಟ್‌ನಲ್ಲಿ ಅವುಗಳನ್ನು ಪ್ರೀ ಆರ್ಡರ್ ಮಾಡಲು ಅವಕಾಶ ನೀಡಿ ಗಮನ ಸೆಳೆದಿದೆ.
ಶಿಯೋಮಿ ಈ ಡಿವೈಸ್‌ಗಳನ್ನು ಘೋಷಿಸುತ್ತಿರುವಂತೆಯೇ ಸಾಮಾಜಿಕ ಜಾಲತಾಣದಲ್ಲಿ ಅದರ ವೈಶಿಷ್ಟ್ಯಗಳ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡಿದವು. ಸ್ಮಾರ್ಟ್‌ರೈಸ್ ಕುಕ್ಕರ್ ಹಾಗೂ ಇಂಡಕ್ಷನ್ ಕುಕ್ಕರ್ ದೇಶಕ್ಕೆ ಪರಿಚಯಿಸಲಾಗುತ್ತದೆ ಎಂದಿದ್ದ ಶಿಯೋಮಿ, ಪ್ರೀ-ಆರ್ಡರ್ ಮಾಡಲು ಲಿಂಕ್ ಕೊಟ್ಟ ನಂತರ ಏಪ್ರಿಲ್ ಫೂಲ್ ಮಾಡಿರುವುದು ಅರಿವಿಗೆ ಬಂದಿತ್ತು.

ಆದರೆ, ನಿಜ ಸಂಗತಿ ಏನೆಂದರೆ, ಸ್ಮಾರ್ಟ್ ಇಂಡಕ್ಷನ್ ಕುಕ್ಕರ್ ಮತ್ತು ಸ್ಮಾರ್ಟ್ ರೈಸ್ ಕುಕ್ಕರ್‌ಗಳನ್ನು ಪ್ರೀ-ಆರ್ಡರ್ ಮಾಡಲೆಂದು ಲಿಂಕ್ ಕ್ಲಿಕ್ ಮಾಡಿದರೆ ಏಪ್ರಿಲ್ ಫೂಲ್ ಎಂಬುದು ಗೊತ್ತಾಗುತ್ತದೆಯಾದರೂ, ಇವೆರಡು ಕೂಡ ನೈಜ ಉತ್ಪನ್ನಗಳೇ ಆಗಿವೆ.! ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆಗೆ ಮುನ್ನ ಶಿಯೋಮಿ ಪ್ರ್ಯಾಂಕ್‌ನಲ್ಲೂ ಮಾರ್ಕೆಟಿಂಗ್ ತಂತ್ರ ಅನುಸರಿಸಿದೆ.

ಶಿಯೋಮಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಶಿಯೋಮಿ ಹೊಸದಾಗಿ ತರುತ್ತಿರುವುದು ಸ್ಮಾರ್ಟ್‌ಫೋನ್‌ಗಳಲ್ಲ, ಬದಲಾಗಿ ಸ್ಮಾರ್ಟ್ರೈಸ್ ಕುಕ್ಕರ್ ಮತ್ತು ಇಂಡಕ್ಷನ್ ಕುಕ್ಕರ್‌ಗಳಾಗಿವೆ. ಈಗಾಗಲೇ ಚೀನಾದಲ್ಲಿ ಭರ್ಜರಿ ಮಾರಾಟವಾಗುತ್ತಿರುವ ಇವುಗಳು ಭಾರತಕ್ಕೂ ಶೀಘ್ರವೇ ಬರಲಿದ್ದು, ಇವುಗಳ ಪ್ರಚಾರಕ್ಕಾಗಿ ಶಿಯೋಮಿ ಈ ಪ್ರ್ಯಾಂಕ್ ಮಾಡಿದೆ.

ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಟೀಸರ್ ಪ್ರಕಾರ, ಭಾರತದ ಮೊಟ್ಟಮೊದಲ ಝೀರೋ ಕ್ಯಾಲರಿ ಸ್ಮಾರ್ಟ್ ಕುಕ್ಕರ್ ಮತ್ತು ಝೀರೋ ಕ್ಯಾಲರಿ ಬಿರಿಯಾನಿ, ಪಾಸ್ತಾ, ಪಿಜ್ಜಾ ಇತ್ಯಾದಿಗಳೆಲ್ಲವೂ ಒಂದು ಬಟನ್ ಕ್ಲಿಕ್ ಮಾಡಿದ ತಕ್ಷಣ ಲಭ್ಯ ಎಂದಿದ್ದರು. ಇದು ಗ್ಯಾಜೆಟ್ ಪ್ರಿಯರಲ್ಲಿ ಭಾರೀ ಕುತೋಹಲ ಮೂಡಿಸಿತ್ತು.


Click it and Unblock the Notifications








