ಬಹುನಿರೀಕ್ಷಿತ Xiaomi Watch 5 ಲಾಂಚ್: ಇಲ್ಲಿದೆ ಫುಲ್ ಡೀಟೇಲ್ಸ್!
ಶಿಯೋಮಿ ತನ್ನ ಹೊಸ ಪ್ರೀಮಿಯಂ ಸ್ಮಾರ್ಟ್‌ವಾಚ್ Xiaomi Watch 5 ಅನ್ನು ಗುರುವಾದಂದು(25, ಡಿಸೆಂಬರ್) ಚೀನಾದಲ್ಲಿ ಅಧಿಕೃತವಾಗಿ ಪರಿಚಯಿಸಿದೆ. Xiaomi 17 Ultra, Xiaomi 17 Ultra Leica Edition ಹಾಗೂ Buds 6 ಜೊತೆಗೆ ಬಿಡುಗಡೆಯಾದ ಈ ಹೊಸ ವಾಚ್, ಆರೋಗ್ಯ ತಂತ್ರಜ್ಞಾನ ಮತ್ತು ಸ್ಟೈಲಿಶ್ ವಿನ್ಯಾಸವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಗುರಿಯೊಂದಿಗೆ ಬಂದಿದೆ. ಹೊಸ ತಲೆಮಾರಿನ ಸೆನ್ಸರ್‌ಗಳು ಮತ್ತು ಶಕ್ತಿಶಾಲಿ ಬ್ಯಾಟರಿಯೊಂದಿಗೆ ಇದು ಫಿಟ್‌ನೆಸ್ ಮತ್ತು ವೆಲ್‌ನೆಸ್‌ಗೆ ಹೆಚ್ಚು ಒತ್ತು ನೀಡುವ ಬಳಕೆದಾರರನ್ನು ಆಕರ್ಷಿಸುವ ಸಾಧ್ಯತೆ ಇದೆ.
Xiaomi Watch 5: ಬೆಲೆ ಮತ್ತು ಲಭ್ಯತೆ
Xiaomi Watch 5 ಅನ್ನು ಚೀನಾದಲ್ಲಿ ಒಂದೇ ಗಾತ್ರದ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಸಾಮಾನ್ಯ ಆವೃತ್ತಿಯ ಬೆಲೆ CNY 1,999 (ಸುಮಾರು ₹15,000) ಆಗಿದ್ದು, eSIM ಬೆಂಬಲ ಹೊಂದಿರುವ ಮಾದರಿಯ ಬೆಲೆ CNY 2,299 (ಸುಮಾರು ₹29,000) ಆಗಿದೆ. ಸದ್ಯ ಈ ಸ್ಮಾರ್ಟ್‌ವಾಚ್ Xiaomi China ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಪ್ರೀ-ಆರ್ಡರ್‌ಗೆ ಲಭ್ಯವಿದೆ. ಬ್ಲಾಕ್ ಮತ್ತು ಖಾಕಿ ಗ್ರೀನ್ ಫ್ಲುರೋಎಲಾಸ್ಟೇನ್ ಸ್ಟ್ರ್ಯಾಪ್‌ಗಳು, ಜೊತೆಗೆ ಗೋಲ್ಡ್-ಬ್ರೌನ್ ಮತ್ತು ಸಾಫ್ಟ್ ಬ್ಲೂ ಜೆನ್ಯೂಯಿನ್ ಲೆದರ್ ಆಯ್ಕೆಗಳು ಲಭ್ಯವಿವೆ.
Xiaomi Watch 5: ಪ್ರಮುಖ ವೈಶಿಷ್ಟ್ಯಗಳು
ಈ ಹೊಸ Xiaomi Watch 5 ಸ್ಮಾರ್ಟ್‌ವಾಚ್‌ನಲ್ಲಿ 1.54 ಇಂಚಿನ AMOLED ಡಿಸ್ಪ್ಲೇ ನೀಡಲಾಗಿದೆ. ಇದು 480x480 ಪಿಕ್ಸೆಲ್ ರೆಸಲ್ಯೂಷನ್ ಮತ್ತು 312 ppi ಪಿಕ್ಸೆಲ್ ಡೆನ್ಸಿಟಿಯನ್ನು ಹೊಂದಿದೆ. ಗರಿಷ್ಠ 1,500 ನಿಟ್ಸ್ ಬ್ರೈಟ್‌ನೆಸ್ ಇರುವುದರಿಂದ ಬಿಸಿಲಿನಲ್ಲಿಯೂ ಪರದೆ ಸ್ಪಷ್ಟವಾಗಿ ಕಾಣುತ್ತದೆ. ವೃತ್ತಾಕಾರದ ಡಯಲ್, ಬದಿಯ ರೋಟರಿ ಕ್ರೌನ್ ಮತ್ತು ನ್ಯಾವಿಗೇಶನ್ ಬಟನ್‌ಗಳು ಇದಕ್ಕೆ ಪ್ರೀಮಿಯಂ ಹಾಗೂ ಆಧುನಿಕ ಲುಕ್ ನೀಡುತ್ತವೆ.

ಆರೋಗ್ಯ ಮೇಲ್ವಿಚಾರಣೆಯಲ್ಲಿ ಈ ವಾಚ್ ಹೊಸ ಮಾನದಂದಗಳನ್ನು ತಲುಪಿದೆ. ಹೃದಯ ಬಡಿತ, ರಕ್ತದ ಆಮ್ಲಜನಕ ಮಟ್ಟ (SpO2) ಮತ್ತು ECG ಟ್ರ್ಯಾಕಿಂಗ್‌ಗೆ ಜೊತೆಗೆ, ಈ ವಾಚ್‌ನಲ್ಲಿ EMG ಸೆನ್ಸರ್ ನೀಡಲಾಗಿದೆ. ಸ್ನಾಯುಗಳ ಆರೋಗ್ಯವನ್ನು ವಿಶ್ಲೇಷಿಸಲು ಸಹಾಯ ಮಾಡುವ ಈ ತಂತ್ರಜ್ಞಾನ, ಸ್ಮಾರ್ಟ್‌ವಾಚ್ ಕ್ಷೇತ್ರದಲ್ಲಿ ಶಿಯೋಮಿಗೆ ವಿಭಿನ್ನ ಸ್ಥಾನವನ್ನು ನೀಡುತ್ತದೆ. ಜೊತೆಗೆ ಅಕ್ಸಿಲರೋಮೀಟರ್, ಜೈರೋಸ್ಕೋಪ್, ಜಿಯೋಮ್ಯಾಗ್ನೆಟಿಕ್, ಬ್ಯಾರೋಮೆಟ್ರಿಕ್ ಪ್ರೆಶರ್ ಮತ್ತು ಆಂಬಿಯಂಟ್ ಲೈಟ್ ಸೆನ್ಸರ್‌ಗಳು ಸಹ ಒಳಗೊಂಡಿವೆ.
ಕನೆಕ್ಟಿವಿಟಿ ವಿಭಾಗದಲ್ಲಿ, Xiaomi Watch 5 ವಾಚ್ Wi-Fi, Bluetooth 5.4, NFC ಮತ್ತು ಬಹು ಉಪಗ್ರಹ ನ್ಯಾವಿಗೇಶನ್ ವ್ಯವಸ್ಥೆಗಳನ್ನು (GPS, GLONASS, Galileo, Beidou, QZSS) ಬೆಂಬಲಿಸುತ್ತದೆ. eSIM ಆವೃತ್ತಿಯಲ್ಲಿ ಫೋನ್ ಇಲ್ಲದೆ ಕರೆ ಮತ್ತು ಡೇಟಾ ಬಳಕೆಯ ಸೌಲಭ್ಯ ದೊರೆಯುತ್ತದೆ. ಜೊತೆಗೆ Android 8 ಮತ್ತು ಅದಕ್ಕಿಂತ ಮೇಲಿನ ಆವೃತ್ತಿಗಳು ಹಾಗೂ iOS 14 ಮತ್ತು ನಂತರದ ಆವೃತ್ತಿಗಳೊಂದಿಗೆ ಹೊಂದಾಣಿಕೆಯನ್ನು ಹೊಂದಿದೆ.
ಬ್ಯಾಟರಿ ವಿಬಾಗದಲ್ಲಿ, 930mAh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿರುವ Xiaomi Watch 5 ಅನ್ನು ದೀರ್ಘಕಾಲ ಬಳಕೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸುಮಾರು 56 ಗ್ರಾಂ ತೂಕ ಮತ್ತು 47x47x12.3 ಮಿಮೀ ಗಾತ್ರದೊಂದಿಗೆ ಇದು ಹಗುರವಾಗಿಯೂ ಇದೆ.
ಒಟ್ಟಾರೆಯಾಗಿ, Xiaomi Watch 5 ತನ್ನ ಸುಧಾರಿತ ಆರೋಗ್ಯ ವೈಶಿಷ್ಟ್ಯಗಳು, ಆಕರ್ಷಕ ವಿನ್ಯಾಸ ಮತ್ತು ಮುಂದಿನ ತಲೆಮಾರಿನ ತಂತ್ರಜ್ಞಾನಗಳೊಂದಿಗೆ ಚೀನಾದ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಗಮನಾರ್ಹ ಆಯ್ಕೆಯಾಗಿ ಹೊರಹೊಮ್ಮಿದೆ. ಭವಿಷ್ಯದಲ್ಲಿ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಬಿಡುಗಡೆಯಾದರೆ, ಇದು ಫಿಟ್‌ನೆಸ್ ಪ್ರಿಯರು ಮತ್ತು ಟೆಕ್ ಬಳಕೆದಾರರ ನಡುವೆ ದೊಡ್ಡ ಪ್ರತಿಕ್ರಿಯೆ ಪಡೆಯುವ ಸಾಧ್ಯತೆ ಇದೆ. ಏನಂತಿರಾ?


Click it and Unblock the Notifications








