ಶಿಯೋಮಿಯಿಂದ ಬ್ಲೂಟೂತ್ ಸ್ಪೀಕರ್ ಲಾಂಚ್: ದೀಪಾವಳಿ ಆಫರ್ ಬೆಲೆಯಲ್ಲಿ ಲಭ್ಯ
ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಮಿ ಬ್ಲೂಟೂತ್ ಸ್ಪೀಕರ್ ಬೆಸಿಕ್ 2 ಬೆಲೆ ರೂ. 2,500 ಆಗಿದ್ದು, ಆದರೆ ಮಿ ಸ್ಟೋರ್ ನಲ್ಲಿ ದೀಪಾವಳಿ ಅಂಗವಾಗಿ ರೂ. 1799ಕ್ಕೆ ಮಾರಾಟ ಮಾಡುತ್ತಿದೆ.
ಚೀನಾ ಮೂಲದ ಶಿಯೋಮಿ ಕಂಪನಿಯೂ ಹೊಸ ಮಾದರಿಯ ಬ್ಲೂಟೂತ್ ಸ್ಪೀಕರ್ ಅನ್ನು ಲಾಂಚ್ ಮಾಡಿದೆ. ಇದಕ್ಕೆ ಮಿ ಬ್ಲೂಟೂತ್ ಸ್ಪೀಕರ್ ಬೆಸಿಕ್ 2 ಎಂದು ನಾಮಕರಣವನ್ನು ಮಾಡಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಮಿ ಬ್ಲೂಟೂತ್ ಸ್ಪೀಕರ್ ಬೆಸಿಕ್ 2 ಬೆಲೆ ರೂ. 2,500 ಆಗಿದ್ದು, ಆದರೆ ಮಿ ಸ್ಟೋರ್ ನಲ್ಲಿ ದೀಪಾವಳಿ ಅಂಗವಾಗಿ ರೂ. 1799ಕ್ಕೆ ಮಾರಾಟ ಮಾಡುತ್ತಿದೆ.

ಉತ್ತಮ ಸ್ಪೀಕರ್:
ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಖ್ಯೆಯ ಬ್ಲೂಟೂತ್ ಸ್ಪೀಕರ್ ಗಳು ಲಭ್ಯವಿದ್ದು, ಇವುಗಳ ಮಧ್ಯ ಮಿ ಬ್ಲೂಟೂತ್ ಸ್ಪೀಕರ್ ಬೆಸಿಕ್ 2 154.5mm X 60mm X 25.5mm ನಷ್ಟು ದೊಡ್ಡದಾಗಿದ್ದು, 10 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ಮೈಕ್ರೋ ಫೋನ್ ಇದೆ:
ನಿಮ್ಮ ಫೋನಿನೊಂದಿಗೆ ಈ ಮಿ ಬ್ಲೂಟೂತ್ ಸ್ಪೀಕರ್ ಬೆಸಿಕ್ 2 ಕನೆಕ್ಟ್ ಮಾಡಿಕೊಂಡಿದ್ದ ಸಂದರ್ಭದಲ್ಲಿ ಕರೆಗಳಲ್ಲಿ ಮಾತನಾಡುವ ಸಲುವಾಗಿ ಮೈಕ್ರೋ ಫೋನ್ ಅಳವಡಿಸಲಾಗಿದ್ದು, ನಾಯ್ಸ್ ರಿಡೆಕ್ಷನ್ ಟೆಕ್ನಾಲಜಿಯನ್ನು ಹೊಂದಿದೆ.

10 ಗಂಟೆಗಳ ಪ್ಲೇ ಬ್ಯಾಕ್:
ಇದಲ್ಲದೇ ಮಿ ಬ್ಲೂಟೂತ್ ಸ್ಪೀಕರ್ ಬೆಸಿಕ್ 2 ನಲ್ಲಿ 1200 mAh ಬ್ಯಾಟರಿಯನ್ನು ನೀಡಲಾಗಿದ್ದು, 10 ಗಂಟೆಗಳ ಪ್ಲೇ ಬ್ಯಾಕ್ ಹೊಂದಿದ್ದು, HD ಆಡಿಯೋ ಕ್ವಾಲಿಟಿಯನ್ನು ಒಳಗೊಂಡಿದೆ.

ಬ್ಲೂಟೂತ್ 4.0:
ಮಿ ಬ್ಲೂಟೂತ್ ಸ್ಪೀಕರ್ ಬೆಸಿಕ್ 2 ಬ್ಲೂಟೂತ್ 4.0ದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಗ್ರೇ ಮತ್ತು ಗೋಲ್ಡ್ ಬಣ್ಣದಲ್ಲಿ ಇದು ದೊರೆಯಲಿದೆ. 200 ಗ್ರಾಮ್ ತೂಕವನ್ನು ಹೊಂದಿದೆ ಎನ್ನಲಾಗಿದೆ.


Click it and Unblock the Notifications








