Home
Gadgets

ಕೇವಲ ರೂ.6000ಕ್ಕೆ 4G ಸಿಮ್ ಹಾಕುವ ಶಿಯೋಮಿ ಸ್ಮಾರ್ಟ್ ವಾಚ್...!

By Srinidhi

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದ ಚೀನಾ ಮೂಲದ ಶಿಯೋಮಿ, ಸ್ಮಾರ್ಟ್ ವಾಚ್ ಮಾರುಕಟ್ಟೆಯಲ್ಲಿಯೂ ಹೊಸ ಮಾದರಿಯ ಪ್ರಯತ್ನಕ್ಕೆ ಮುಂದಾಗಿದೆ. ಆಪಲ್ ರೂ.40 ಸಾವಿರಕ್ಕೆ ಮಾರಾಟ ಮಾಡುತ್ತಿರುವ ಸ್ಮಾರ್ಟ್ ವಾಚ್ ಮಾದರಿಯಲ್ಲಿ ಕೇವಲ ರೂ.6000ಕ್ಕೆ ಸ್ಮಾರ್ಟ್ ವಾಚ್ ಅನ್ನು ಲಾಂಚ್ ಮಾಡಿದೆ. ಅದರಲ್ಲೂ ವಿಶೇಷವಾಗಿ ಇದನ್ನು ಮಕ್ಕಳ ಬಳಕೆಗೆಂದು ವಿನ್ಯಾಸ ಮಾಡಲಾಗಿದೆ.

ಕೇವಲ ರೂ.6000ಕ್ಕೆ 4G ಸಿಮ್ ಹಾಕುವ ಶಿಯೋಮಿ ಸ್ಮಾರ್ಟ್ ವಾಚ್...!

ನೋಡಲು ಸಹ ಆಪಲ್ ವಾಚ್ ಮಾದರಿಯಲ್ಲಿ ಕಾಣಿಸಿಕೊಂಡಿರುವ ಶಿಯೋಮಿ Mi ಬನ್ನಿ ಕಿಡ್ಸ್ 3 ಸ್ಮಾರ್ಟ್‌ ವಾಚ್ ಸದ್ಯ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಮೂಲಗಳು ತಿಳಿಸುವಂತೆ ಸ್ಮಾರ್ಟ್ ಟಿವಿ ಮಾದರಿಯಲ್ಲಿ ಸ್ಮಾರ್ಟ್ ವಾಚ್ ಸಹ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿದೆ ಎಂದು ಶಿಯೋಮಿ ಮೂಲಗಳು ತಿಳಿಸಿವೆ. ಸದ್ಯ ಮಕ್ಕಳ ವಾಚ್ ಬಿಡುಗಡೆ ಮಾಡಿರುವ ಶಿಯೋಮಿ, ಶೀಘ್ರವೇ ಸಾಮಾನ್ಯ ಸ್ಮಾರ್ಟ್ ವಾಚ್ ಗಳನ್ನು ನಮ್ಮ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ದಟ್ಟವಾಗಿದೆ.

ಉತ್ತಮ ಕ್ವಾಲಿಟಿ:

ಉತ್ತಮ ಕ್ವಾಲಿಟಿ:

ಶಿಯೋಮಿ Mi ಬನ್ನಿ ಕಿಡ್ಸ್ 3 ಸ್ಮಾರ್ಟ್‌ ವಾಚ್ ಉತ್ತಮ ಕ್ವಾಲಿಟಿಯದಾಗಿದ್ದು, ಫುಡ್ ಗ್ರೆಡ್ ಸಿಲಿಕಾನ್ ನಲ್ಲಿ ಮಾಡಲಾಗಿದೆ. ನೋಡಲು ಆಪಲ್ ವಾಚ್ ಮಾದರಿಯ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ಡಿಸ್‌ಪ್ಲೇ ಗುಣಮಟ್ಟವು ಉತ್ತಮವಾಗಿದೆ. ಇದನ್ನು ಮಕ್ಕಳ ಬಳಕೆಗೆ ಎಂದು ವಿನ್ಯಾಸ ಮಾಡಲಾಗಿದೆ. ಇದು 1.41 ಇಂಚಿನ ಅಮೊಲೈಟ್ ಡಿಸ್ ಪ್ಲೇಯನ್ನು ಒಳಗೊಂಡಿದ್ದು, 2.5D ಟೆಂಪರ್ಡ್ ಗ್ಲಾಸ್ ಹೊಂದಿದೆ.

ಸಿಮ್ ಹಾಕಬಹುದು:

ಸಿಮ್ ಹಾಕಬಹುದು:

ಶಿಯೋಮಿ Mi ಬನ್ನಿ ಕಿಡ್ಸ್ 3 ಸ್ಮಾರ್ಟ್‌ ವಾಚ್ ನಲ್ಲಿ ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಇದರಲ್ಲಿಯೇ ಬಳಕೆದಾರರು ವಿಡಿಯೋ ಕಾಲ್ ಸೇರಿದಂತೆ ಕರೆಗಳನ್ನು ಸ್ವೀಕರಿಸುವ ಮತ್ತು ಮಾಡುವ ಅವಕಾಶವು ಇದರಲ್ಲಿದೆ. ಇಂಟರ್ನೆಟ್ ಅನ್ನು ಸಿಮ್ ಕಾರ್ಡ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ.

GPS:

GPS:

ಶಿಯೋಮಿ Mi ಬನ್ನಿ ಕಿಡ್ಸ್ 3 ಸ್ಮಾರ್ಟ್‌ ವಾಚ್ ನಲ್ಲಿ GPS ಅಳವಡಿಸಲಾಗಿದ್ದು, ಇದು ಬಳಕೆದಾರರಿಗೆ ಮ್ಯಾಪ್ ನೋಡಿಕೊಳ್ಳಲು ಸಹಾಯವನ್ನು ಮಾಡಲಿದೆ. ಇದು ಆಪಲ್ ವಾಚಿನಲ್ಲಿ ಕಾಣಬಹುದಾಗಿದೆ.

ಕ್ಯಾಮೆರಾ-SOS:

ಕ್ಯಾಮೆರಾ-SOS:

ಮಕ್ಕಳಿಗಾಗಿ ವಿನ್ಯಾಸ ಮಾಡಿರುವ ಕಾರಣಕ್ಕಾಗಿ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ ಅಪಾಯದ ಸಂದರ್ಭದಲ್ಲಿ SOS ಬಟನ್ ಅನ್ನು ಬಳಕೆ ಮಾಡಿಕೊಳ್ಳಲು ನೀಡಲಾಗಿದೆ. ಇದಲ್ಲದೇ ಮೈಕ್ರೋ ಫೋನ್ ಅನ್ನ ಕಾಣಬಹುದು. ಅಲ್ಲದೇ ಇದು ವಾಟರ್ ಮತ್ತು ಡಸ್ಟ್ ಪ್ರೂಫ್ ಅನ್ನು ಹೊಂದಿದೆ.

ಕ್ವಿಕ್ ಚಾರ್ಜ್:

ಕ್ವಿಕ್ ಚಾರ್ಜ್:

ಶಿಯೋಮಿ Mi ಬನ್ನಿ ಕಿಡ್ಸ್ 3 ಸ್ಮಾರ್ಟ್‌ ವಾಚ್ ಕ್ವಿಕ್ ಚಾರ್ಜರ್ ಸಪೋರ್ಟ್ ಮಾಡಲಿದ್ದು, 10 ನಿಮಿಷ ಚಾರ್ಜ್ ಮಾಡಿದರೆ 11 ಗಂಟೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ WiFI ಸಹ ಸಪೋರ್ಟ್ ಮಾಡಲಿದೆ.

ಬೆಲೆ ರೂ.6೦೦೦

ಬೆಲೆ ರೂ.6೦೦೦

ಭಾರತೀಯ ಮಾರುಕಟ್ಟೆಗೆ ಕಾಲಿಡಲು ಇನ್ನು ಹಲವು ದಿನಗಳೇ ಬೇಕಾಗಬಹುದು ಎನ್ನಲಾಗಿರುವ ಶಿಯೋಮಿ Mi ಬನ್ನಿ ಕಿಡ್ಸ್ 3 ಸ್ಮಾರ್ಟ್‌ ವಾಚ್ ರೂ,.6000ಕ್ಕೆ ಸದ್ಯ ಮಾರಾಟವಾಗುತ್ತಿದೆ.

Best Mobiles in India

English summary
Xiaomi launches Mi Bunny 3 Kids smartwatch for children with LTE support. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+