ಶಿಯೋಮಿ ಬಿಡುಗಡೆ ಮಾಡಿದೆ ಸ್ಮಾರ್ಟ್ ಕಸದ ಬುಟ್ಟಿ..!
ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಫ್ರಿಡ್ಜ್ ಹೀಗೆ ಹಲವಾರು ಸ್ಮಾರ್ಟ್ ವಸ್ತುಗಳನ್ನು ನೀವು ಇದುವರೆಗೂ ಕೇಳಿರುತ್ತೀರಿ, ನೋಡಿರುತ್ತೀರಿ. ಈಗ ಸ್ಮಾರ್ಟ್ ಕಸದ ಬುಟ್ಟಿಯ ಸಮಯ. ಹೌದು ಕಸದ ಸಮಸ್ಯೆಗೆ ತಿಲಾಂಜಲಿ ಹಾಡಲು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕಸದ ಬುಟ್ಟಿಗಳು ನೆರವಿಗೆ ಬರುವ ಸಾಧ್ಯತೆಗಳಿದೆ. ಯಾಕೆಂದರೆ ಈಗಾಗಲೇ ಶಿಯೋಮಿ ಸಂಸ್ಥೆ ಸ್ಮಾರ್ಟ್ ಕಸದ ಬುಟ್ಟಿಯನ್ನು ತಯಾರಿ ಮಾಡಿದೆ.
ಹೌದು,ಶಿಯೋಮಿ ನೂತನ ಸ್ಮಾರ್ಟ್ ಕಸದ ಬುಟ್ಟಿಯನ್ನು ತನ್ನ ಚೀನಾದಲ್ಲಿರುವ ಯುಪಿನ್ ಕ್ರೌಡ್ ಫೈಂಡಿಂಗ್ ಮಳಿಗೆಯಲ್ಲಿ ಬಿಡುಗಡೆಗೊಳಿಸಿದೆ. ಇದು ರೋಬೋಟಿಕ್ ಆಗಿಲ್ಲ ಆದರೆ ಕೆಲವು ನಿಫ್ಟಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು ತ್ಯಾಜ್ಯ ನಿರ್ವಹಣೆಗೆ ಸಹಕಾರಿಯಾಗಿದೆ. ಆರಂಭಿಕರಿಗಾಗಿ ಬಿನ್ನಿನ ಲಿಡ್ಡನ್ನು ಪ್ರಾಕ್ಸಿಮಿಟಿ ಸೆನ್ಸರ್ ನೊಂದಿಗೆ ಅಳವಡಿಸಲಾಗಿರುತ್ತದೆ.

ಇದು ಕೆಲವು ಸೆಂಟೀಮೀಟರ್ ಗೂ ಮುನ್ನವೇ ನಿಮ್ಮ ಕೈಗಳನ್ನು ಗುರುತಿಸುತ್ತದೆ ಮತ್ತು ಕಸವನ್ನು ಎಸೆಯಲು ತನ್ನನ್ನು ತಾನು ತೆರೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಗಾಳಿ ನುಸುಳದಂತ ಲಿಡ್ಡನ್ನು ಗಟ್ಟಿಗೊಳಿಸಲಾಗಿರುತ್ತದೆ ಮತ್ತು ಇದು ವಾಸನೆಯು ಹರಡದಂತೆ ನೋಡಿಕೊಳ್ಳುತ್ತದೆ.
ಯುಪಿನ್ ನ ಈ ಕಾರ್ಯಾಚರಣೆಯು ಸುಮಾರು 19,000 ಸಾವಿರ ಬೆಂಬಲಿಗರ ಸಹಾಯದಿಂದ ಒಟ್ಟು 3.7 ಮಿಲಿಯನ್ CNY (ಅಂದಾಜು Rs. 3.7 ಕೋಟಿ) ಅಧಿಕಗೊಂಡಿದೆ.ಸದ್ಯ ಈ ಸ್ಮಾರ್ಟ್ ಕಸದ ಬುಟ್ಟಿಯ ಬೆಲೆ ಚೀನಾದಲ್ಲಿ CNY 199 ಆಗಿದೆ ಅಂದರೆ ಭಾರತೀಯ ಅಂದಾಜು ಬೆಲೆ 2,000 ರುಪಾಯಿ ಸೆಪ್ಟೆಂಬರ್ 11,2018 ರಿಂದ ಇದರ ಮಾರಾಟ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದೆ.
ಶಿಯೋಮಿಯ ಈ ಕಸದ ಬುಟ್ಟಿಗೆ ಅದು ತುಂಬಿದ ಕೂಡಲೇ ಪ್ಯಾಕ್ ಮಾಡುವ ಸಾಮರ್ಥ್ಯವೂ ಇದೆ. ಕಸದ ಬುಟ್ಟಿಯನ್ನು ಮುಟ್ಟದೆ ಆ ಬ್ಯಾಗ್ ನ್ನು ಸುಲಭದಲ್ಲಿ ಹೊರ ತೆಗೆಯುವ ಅವಕಾಶವು ಬಳಕೆದಾರರಿಗೆ ಇರುತ್ತದೆ ಮತ್ತು ಹೊಸ ಖಾಲಿ ಸ್ಟೋರೇಜ್ ಬ್ಯಾಗ್ ನ್ನು ಅದರೊಳಗೆ ಸ್ವಯಂಚಾಲಿತವಾಗಿ ಸೇರಿಸಲು ಕೂಡ ಈ ಸ್ಮಾರ್ಟ್ ಕಸದ ಬುಟ್ಟಿ ಅವಕಾಶ ನೀಡುತ್ತದೆ.
ಶಿಯೋಮಿ ಸ್ಮಾರ್ಟ್ ಕಸದ ಬುಟ್ಟಿಯ ಸುತ್ತಳತೆ 240x310x402mm ಆಗಿದ್ದು ಇದು 3.5kg ತೂಕವಿದೆ. ಇದಕ್ಕೆ ಬೇಕಾಗುವ ಪವರ್ ಔಟ್ ಪುಟ್ 12V 2.2H, ಮತ್ತು ಗಂಧಧ ಬಣ್ಣದ ಆಯ್ಕೆಯಲ್ಲಿ ಕಸದ ಬುಟ್ಟಿ ಲಭ್ಯವಿದೆ.
ವಿಶ್ವ ಮಾರುಕಟ್ಟೆಗೆ ಶಿಯೋಮಿ ಸಂಸ್ಥೆ ಕಳೆದ ವಾರ ಎಂಐ ಎಲೆಕ್ಟ್ರಾನಿಕ್ ಟೂತ್ ಬ್ರಷ್ ಮತ್ತು ಎಂಐ ರೋಬೋಟ್ ಬಿಲ್ಡರ್ ನ್ನು ಪರಿಚಯಿಸಿತ್ತು. ಇನ್ನು ಮಕ್ಕಳಿಗೆ ಅನುಕೂಲಕರವಾಗಿರುವಂತ ಸ್ಮಾರ್ಟ್ ವಾಚ್ ಕೂಡ ಬಿಡುಗಡೆಗೊಳಿಸಲಾಗಿತ್ತು.ಈಗ ಕಸದ ಬುಟ್ಟಿಯ ಸಮಯ ಬಂದಿದೆ. ಆದರೆ ಕಸದ ಸಮಸ್ಯೆ ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದ್ದು ಅದರ ನಿವಾರಣೆಗೆ ಹೇಗೆ ಈ ಸ್ಮಾರ್ಟ್ ಕಸದ ಬುಟ್ಟಿ ಕೆಲಸ ಮಾಡುತ್ತೋ ಅಥವಾ ಅದಕ್ಕೆ ಗ್ರಾಹಕ ಎಷ್ಟರ ಮಟ್ಟಿಗೆ ಮನ್ನಣೆ ನೀಡುತ್ತಾನೋ ತಿಳಿಯದು. ಕಸದ ಬುಟ್ಟಿನೂ ಹೀಗೆ ಸ್ಮಾರ್ಟ್ ಆಗಿದೆ. ಇನ್ನು ಏನೇನು ತಂತ್ರಜ್ಞಾನ ಬರುತ್ತೋ ಆ ದೇವರೇ ಬಲ್ಲ!


Click it and Unblock the Notifications








