Home
Gadgets

12,999 ರೂ.ಗೆ ಲಾಂಚ್ ಆಯ್ತು ಶಿಯೋಮಿಯ ಹೊಸ ಸ್ಮಾರ್ಟ್‌ಟಿವಿ!..ಹೇಗಿದೆ ಗೊತ್ತಾ?

ಇಂದು ರೆಡ್‌ಮಿ ನೋಟ್ 7 ನಿರಿಕ್ಷೆಯಲ್ಲಿದ್ದ ಭಾರತೀಯರಿಗೆ ಶಿಯೋಮಿ ಕಂಪೆನಿ ನೀಡಿರುವ ಬಿಗ್ ಸರ್‌ಪ್ರೈಸ್ ಎಂದರೆ 'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಎಂದರೆ ತಪ್ಪಾಗಲಾರದು. ಭಾರತದ ಮೊಬೈಲ್ ಮಾರುಕಟ್ಟೆಯಷ್ಟೇ ಅಲ್ಲದೆ ಸ್ಮಾರ್ಟ್‌ ಟಿವಿ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿರುವ ಶಿಯೋಮಿ, ಇಂದು ಕೇವಲ 12,999 ರೂಪಾಯಿಗಳಿಗೆ 32 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿ ಒಂದನ್ನು ಪರಿಚಯಿಸಿ ದೇಶದ ಗಮನವನ್ನು ಮತ್ತೊಮ್ಮೆ ಸೆಳೆದಿದೆ.

ಹೌದು, ಶಿಯೋಮಿ ಹೇಳಿದಂತೆ ದೇಶಕ್ಕೆ ಇಂದು 5 ಬಿಗ್ ಸರ್‌ಪ್ರೈಸ್‌ಗಳು ದೊರೆತಿದ್ದು, ಅಲ್ಟ್ರಾ ಬ್ರೈಟ್ ಹೆಚ್‌ಡಿ ರೆಡಿ ಟಿವಿಯಾಗಿರುವ 'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಸ್ಮಾರ್ಟ್‌ಟಿವಿ ಅವುಗಳಲ್ಲಿ ಮೊದಲ ಸ್ಥಾನದಲ್ಲಿದೆ. ಒನ್ ರಿಮೋಟ್, 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್, 20 ವ್ಯಾಟ್ ಪವರ್‌ಫುಲ್ ಪ್ರೊಸೆಸರ್ ಸೇರಿದಂತೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ 'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಸ್ಮಾರ್ಟ್‌ಟಿವಿ ಕೇವಲ 12,999 ರೂ.ಗಳಿಗೆ ಲಾಂಚ್ ಆಗಿ ಆಶ್ಚರ್ಯ ಮೂಡಿಸಿದೆ.

12,999 ರೂ.ಗೆ ಲಾಂಚ್ ಆಯ್ತು ಶಿಯೋಮಿಯ ಹೊಸ ಸ್ಮಾರ್ಟ್‌ಟಿವಿ!..ಹೇಗಿದೆ ಗೊತ್ತಾ?

1366 x 768 ರೆಸಲ್ಯೂಶನ್ ಸಾಮರ್ಥ್ಯದಲ್ಲಿ 180 ಡಿಗ್ರಿ ವ್ಯೂವಿಂಗ್ ಆಂಗಲ್ ಹೊಂದಿರುವ ಸ್ಮಾರ್ಟ್‌ಟಿವಿ 'ಮಿ ಎಲ್‌ಇಡಿ ಟಿವಿ 4ಎ ಪ್ರೊ' 60Hz ರಿಫ್ರೆಶ್ ರೇಡ್ ಹೊಂದಿದೆ. ಹಾಗಾದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಭಾರತದ ಟಿವಿ ಮಾರುಕಟ್ಟೆಗೆ ಕಾಲಿಟ್ಟಿರುವ ಶಿಯೋಮಿಯ ನೂತನ 'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಸ್ಮಾರ್ಟ್‌ಟಿವಿ ಹೇಗಿದೆ?, ಈ ಸ್ಮಾರ್ಟ್‌ಟಿವಿಯ ವಿಶೇಷತೆಗಳು ಯಾವುವು? ಈ ಸ್ಮಾರ್ಟ್‌ಟಿವಿ ಖರೀದಿಸಲು ಇರುವ ಕಾರಣಗಳು ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಡಿಸ್‌ಪ್ಲೇ ಹೇಗಿದೆ?

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಡಿಸ್‌ಪ್ಲೇ ಹೇಗಿದೆ?

ಶಿಯೋಮಿ 'ಮಿ ಎಲ್‌ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿ '1366 x 768 ರೆಸಲ್ಯೂಶನ್ ಸಾಮರ್ಥ್ಯದಲ್ಲಿ 180 ಡಿಗ್ರಿ ವ್ಯೂವಿಂಗ್ ಆಂಗಲ್ ಹೊಂದಿದೆ. 32 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಟಿವಿಯ ಡಿಸ್‌ಪ್ಲೇ ಅಲ್ಟ್ರಾ ಬ್ರೈಟ್ ಹೆಚ್‌ಡಿ ರೆಡಿ ಡಿಸ್‌ಪ್ಲೇಯಾಗಿದೆ. ಇನ್ನು 435mm ಎತ್ತರದ (478mm ಬೇಸ್ ಎತ್ತರ) ಈ ಟಿವಿ 3.9 ಕೆಜಿ ತೂಗುತ್ತಿದ್ದು, ಟಿವಿಯು 732mm ನಷ್ಟು ಅಗಲವಾಗಿದೆ.

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಪ್ರೊಸೆಸರ್!

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಪ್ರೊಸೆಸರ್!

7ನೇ ತಲೆಮಾರಿನ ಇಮೇಜಿಂಗ್ ಎಂಜಿನ್ ಹೊಂದಿರುವ ಅಮ್ಲಾಜಿಕ್ 64-ಬಿಟ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ಟಿವಿ 8.1 ಮೂಲಕ 'ಮಿ ಎಲ್‌ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿ ಕಾರ್ಯನಿರ್ವಹಣೆ ನೀಡಲಿದೆ. ಹಾಗೆಯೇ, ಹಿಂದಿನ ಮಿ ಸ್ಮಾರ್ಟ್‌ಟಿವಿಗಳಂತೆ ಈ 32 ಇಂಚಿನ ಹೊಸ ಮಿ ಎಲ್ಇಡಿ ಟಿವಿ 4ಎ ಪ್ರೊ ನಲ್ಲೂ ಬ್ಲೂಟೂತ್ ರಿಮೋಟ್ ಅನ್ನು ನೀಡಲಾಗಿದೆ.

'ಮಿ ಎಲ್‌ಇಡಿ ಟಿವಿ 4ಎ ಪ್ರೊ' RAM!

'ಮಿ ಎಲ್‌ಇಡಿ ಟಿವಿ 4ಎ ಪ್ರೊ' RAM!

ಮಿ ಎಲ್‌ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿಯು 1ಜಿಬಿ RAM ಮತ್ತು 8 ಜಿಬಿ ಇಎಮ್ಎಂಸಿ ಆಂತರಿಕ ಸ್ಟೋರೇಜ್ ಅನ್ನು ಹೊಂದಿದೆ. ಆಂಡ್ರಾಯ್ಡ್ 8.1 ಓರಿಯೊದಲ್ಲಿ ರನ್ ಆಗುವ ಈ ಟಿವಿಯು ಪ್ಲೇ ಸ್ಟೋರ್ ಜೊತೆಗೆ ಕ್ರೋಮೊಕಾಸ್ಟ್ ಬೆಂಬಲದೊಂದಿಗೆ ಬಂದಿದೆ. ಮತ್ತೊಂದು ಖಿಷಿಯ ವಿಚಾರ ಎಂದರೆ ವಿವಿಧ ಪಾಲುದಾರರಿಂದ ಆಂತರಿಕ ಕಂಟೆಂಟ್‌ಗಳನ್ನು ಟಿವಿ ಹೊಂದಿದೆ.

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಮಲ್ಟಿಪಲ್ ಪೋರ್ಟ್ಸ್

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಮಲ್ಟಿಪಲ್ ಪೋರ್ಟ್ಸ್

'ಮಿ ಎಲ್‌ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿಯಲ್ಲಿ ಮೂರು ಹೆಚ್‌ಡಿಎಂಐ ಪೋರ್ಟ್‌ಗಳನ್ನು ನೀಡಲಾಗಿದೆ. 2 x 2.0 ಯುಎಸ್‌ಬಿ, ಒಂದು ಇಯರ್‌ಫೋನ್ ಔಟ್, ಒಂದು ಎತರ್‌ನೆಟ್ ಹಾಗೂ ಒಂದು ಎವಿ ಕನೆಕ್ಷನ್‌ ಅನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿಯಲ್ಲಿ 2.4GHz 802.11 ಬಿ / ಜಿ/ ಎನ್ ಸಾಮರ್ಥ್ಯದ ವೈಫೈ ಆಯ್ಕೆಯನ್ನು ನೀಡಿರುವುದನ್ನು ನೋಡಬಹುದು.

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಸ್ಪೀಕರ್ಸ್!

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಸ್ಪೀಕರ್ಸ್!

'ಮಿ ಎಲ್‌ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿ MPEG1 / 2/4, REAL, H.265, H.264 ಆಡಿಯೊ ಪ್ರೊಫೈಲ್ ಅನ್ನು ಬೆಂಬಲಿಸಲಿದ್ದು, 10W ಸಾಮರ್ಥ್ಯದ ಎರಡು ಡಿಟಿಎಸ್ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಜೊತೆಗೆ ಈ ಟಿವಿ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದ್ದು, ಗೂಗಲ್ ವಾಯ್ಸ್ ಸರ್ಚ್ ಜೊತೆಗೆ ಸುಲಭ ನಿಯಂತ್ರಣಕ್ಕಾಗಿ ಬಳಕೆದಾರರಿಗೆ ಅವಕಾಶ ನೀಡುತ್ತದೆ.

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಲಭ್ಯತೆ

'ಮಿ ಎಲ್‌ಇಡಿ ಟಿವಿ 4ಎ ಪ್ರೊ' ಲಭ್ಯತೆ

32 ಇಂಚಿನ 'ಮಿ ಎಲ್‌ಇಡಿ ಟಿವಿ 4ಎ ಪ್ರೊ ಸ್ಮಾರ್ಟ್ ಟಿವಿ ಭಾರತದಲ್ಲಿ 12,999 ರೂ.ಗಳಿಗೆ ಬಿಡುಗಡೆಯಾಗಿದ್ದು, ಫ್ಲಿಪ್‌ಕಾರ್ಟ್, ಮೈ.ಕಾಂ, ಮಿ ಹೋಮ್ ಮತ್ತು ಶಿಯೋಮಿಯ ಮಳಿಗೆಗಳಲ್ಲಿ ಮಾರ್ಚ್ 7, 2019 ರಿಂದ ಗ್ರಾಹಕರಿಗೆ ಲಭ್ಯವಿದೆ. 12,999 ರೂ.ಗಳಷ್ಟು ಬೆಲೆಯಲ್ಲಿ ಮಿ ಎಲ್‌ಇಡಿ ಟಿವಿ 4ಎ ಪ್ರೊ ಒಂದು ಅತ್ಯುತ್ತಮ ಸ್ಮಾರ್ಟ್‌ಟಿವಿ ಎಂದು ಹೇಳಬಹುದು.

Best Mobiles in India

English summary
Xiaomi just launched the Xiaomi Redmi Note 7 and the Redmi Note 7 Pro in the Indian market. Along with the two smartphones, Xiaomi also launched the Mi LED TV 4A Pro 32-inch Smart version model.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+