ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಗ್ಯಾಜೆಟ್..! ಬೆಲೆ ಕಡಿಮೆ, ಉಪಯೋಗ ಜಾಸ್ತಿ..!
ಭಾರತೀಯ ಮಾರುಕಟ್ಟೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ ಚೀನಾ ಮೂಲದ ಶಿಯೋಮಿ, ಕೇಲವ ಸ್ಮಾರ್ಟ್ ಫೋನ್ ಗಳನ್ನು ಮಾತ್ರವಲ್ಲದೇ, ಸ್ಮಾರ್ಟ್ ಟಿವಿ ಸೇರಿದಂತೆ ಹಲವು ಸ್ಮಾರ್ಟ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದೇ ಮಾದರಿಯಲ್ಲಿ ಸಾಧ್ಯ ಮಾರುಕಟ್ಟೆಗೆ ಪಾಕೆಟ್ ಸ್ಪೀಕರ್ ವೊಂದನ್ನು ಲಾಂಚ್ ಮಾಡಿದ್ದು, ಅತೀ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುವನ್ನು ಗ್ರಾಹಕರ ಕೈಗೆ ನೀಡುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಬಳಕೆದಾರರ ನಂಬಿಕೆಯನ್ನು ಗಳಿಸಿಕೊಂಡಿರುವ ಶಿಯೋಮಿ, ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುವನ್ನು ಮಾರಾಟ ಮಾಡುತ್ತಲೇ ಬಂದಿದೆ. ಇದೇ ಮಾದರಿಯಲ್ಲಿ ಸದ್ಯ ಶಿಯೋಮಿ Mi ಪಾಕೆಟ್ ಸ್ಪೀಕರ್ 2 ವನ್ನು ಪರಿಚಯ ಮಾಡಿದೆ. ಈ ಸ್ಪೀಕರ್ ಗಾತ್ರದಲ್ಲಿ ಚಿಕ್ಕದಾರರು ಸಹ ಉತ್ತಮ ಸೌಂಡ್ ಕ್ವಾಲಿಟಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಶಿಯೋಮಿ Mi ಪಾಕೆಟ್ ಸ್ಪೀಕರ್ 2 ಕುರಿತ ಪರಿಚಯವು ಇಲ್ಲಿದೆ.

ಬ್ಲೂಟೂತ್ ಸ್ಪೀಕರ್:
ಶಿಯೋಮಿ Mi ಪಾಕೆಟ್ ಸ್ಪೀಕರ್ 2 ಬ್ಲೂಟೂತ್ 4.1 ನಲ್ಲಿ ಕಾರ್ಯನಿರ್ವಹಿಸುವ ಮೊದಲ ಪಾಕೆಟ್ ಸರಣಿಯ ಸ್ಪೀಕರ್ ಆಗಿದ್ದು, ಮಿ. ಕಾಮ್ ನಲ್ಲಿ ಮಾತ್ರವೇ ಇಂದಿನಿಂದ ಎಕ್ಸ್ ಕ್ಲೂಸಿವ್ ಆಗಿ ಬಿಡುಗಡೆಯಾಗಲಿದೆ. ಈ ಸ್ಪೀಕರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಸ್ಪೀಕರ್ ಗಳಿಗೆ ಸೆಡ್ಡು ಹೊಡೆಯಲಿದೆ.

7 ಗಂಟೆಗಳ ಬ್ಯಾಟರಿ;
ಶಿಯೋಮಿ Mi ಪಾಕೆಟ್ ಸ್ಪೀಕರ್ 2ನಲ್ಲಿ ಗುಣಮಟ್ಟದ 1200mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಬಳಕೆದಾರರಿಗೆ 7 ಗಂಟೆಗಳ ಕಾಲ ಬ್ಯಾಕಪ್ ನೀಡಲಿದೆ. ಒಮ್ಮೆ ಚಾರ್ಜ್ ಮಾಡಿದರೆ ಸತತ 7 ಗಂಟೆಗಳ ಕಾಲ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಆಯ್ಕೆಯೇ ಶಿಯೋಮಿ Mi ಪಾಕೆಟ್ ಸ್ಪೀಕರ್ 2ನ ಯುಎಸ್ ಪಿ ಎಂದರೆ ತಪ್ಪಾಗುವುದಿಲ್ಲ.

ಮೈಕ್ರೋ ಫೋನ್ ಇದೆ;
ಇದಲ್ಲದೇ ಶಿಯೋಮಿ Mi ಪಾಕೆಟ್ ಸ್ಪೀಕರ್ 2 ನಲ್ಲಿ ಬಿಲ್ಟ್ ಇನ್ ಮೈಕ್ರೋ ಫೋನ್ ಅನ್ನು ಕಾಣಬಹುದಾಗಿದೆ. ಇದರಿಂದಾಗಿ ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಿದ ಸಂದರ್ಭದಲ್ಲಿ ಸ್ಪೀಕರ್ ಸಹಾಯದಿಂದಲೇ ಮಾತನಾಡಬಹುದಾಗಿದೆ.

ಎರಡು ಬಣ್ಣಗಳಲ್ಲಿ ಲಭ್ಯ:
ಮಾರುಕಟ್ಟೆಯಲ್ಲಿ ಬ್ಲೂಟೂತ್ ಪಾಕೆಟ್ ಸ್ಪೀಕರ್ ಗಳ ಬೇಡಿಕೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಿಯೋಮಿ Mi ಪಾಕೆಟ್ ಸ್ಪೀಕರ್ 2 ಅನ್ನು ಲಾಂಚ್ ಮಾಡಿದ್ದು, ಇದು ಎರಡು ಬಣ್ಣಗಳಲ್ಲಿ ದೊರೆಯುತ್ತಿದೆ. ಬ್ಲಾಕ್ ಮತ್ತು ವೈಟ್ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ.

ಬೆಲೆ:
ನೋಡಲು ಉತ್ತಮ ವಿನ್ಯಾಸವನ್ನ ಹೊಂದಿರುವ ಶಿಯೋಮಿ Mi ಪಾಕೆಟ್ ಸ್ಪೀಕರ್ 2 ಅಲ್ಯೂಮಿನಿಯಮ್ ನಿಂದ ಮಾಡಲ್ಪಟ್ಟಿದೆ. ಇದು ಮಾರುಕಟ್ಟೆಯಲ್ಲಿ ರೂ.1499ಕ್ಕೆ ಮಾರಾಟವಾಗುತ್ತಿದೆ. ಬೇರೆ ಕಂಪನಿಗಳ ಸ್ಪೀಕರ್ ಗಳಿಗೆ ಹೋಲಿಸಿಕೊಂಡರೆ ಇದು ಅತ್ಯಂತ ಕಡಿಮೆ ಬೆಲೆ ಎಂದೇ ಹೇಳಬಹುದಾಗಿದೆ.


Click it and Unblock the Notifications








